ವಿಚಿತ್ರ ಆದರೂ ಸತ್ಯ

10 ವರ್ಷಗಳ ಹಿಂದೆ 16 ಕೆಜಿ ತೂಕವಿದ್ದ ಈ ಯುವತಿ ಈಗ ಹೇಗಿದ್ದಾಳೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

95

ಅಜ್ಜನೇ ಉಪವಾಸದಿಂದ ನರಳುವಂತೆ ಮಾಡಿ ತನಗೆ ಹಿಂಸೆ ನೀಡಿದ್ದ ಬಗ್ಗೆ ಜಪಾನಿನ ಯುವತಿಯೊಬ್ಬಳು ಹೇಳಿಕೊಂಡಿದ್ದು ಈಗ ಫೋಟೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾಳೆ.

ತಿನ್ನಲು ಊಟ ನೀಡದ್ದರಿಂದ 16 ಕೆಜಿ ತೂಕಕ್ಕೆ ಇಳಿದಿದ್ದ ಆ ಯುವತಿ ಈಗ ಚೇತರಿಸಿಕೊಂಡಿದ್ದು, ಈಗಿನ ಫೋಟೋಗಳನ್ನೂ ಕೂಡ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದಾಳೆ. ಆಕೆ ಈಗ ಸಂಪೂರ್ಣ ಬದಲಾಗಿದ್ದು, ಹಳೇ ಫೋಟೋದಲ್ಲಿದ್ದಿದ್ದು ಈಕೆನಾ ಎಂದು ಆಶ್ಚರ್ಯವಾಗುತ್ತದೆ.

10 ವರ್ಷಗಳ ಹಿಂದೆ ಆಸ್ಪತ್ರೆಗೆ ದಾಖಲಿಸುವ ಮುನ್ನ ಯುವತಿ ಸಾಕಷ್ಟು ಸೆಲ್ಫೀಗಳನ್ನ ತೆಗೆದುಕೊಂಡಿದ್ದು, ಈಗ ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿ ತನಗಾದ ದುಸ್ಥಿತಿ ಬಗ್ಗೆ ಹೇಳಿಕೊಂಡಿದ್ದಾಳೆ. ಹಳೇ ಫೋಟೋಗಳಲ್ಲಿ ಯುವತಿ ಸಣಕಲು ದೇಹ ಹೊಂದಿದ್ದು, ಮೂಳೆಗಳು ಕಾಣುವಂತೆ ಸೊರಗಿದ್ದಾಳೆ. 10 ವರ್ಷಗಳ ಹಿಂದೆ ಈಕೆ ತನ್ನ ಅಜ್ಜನ ಮನೆಯಲ್ಲಿ ವಾಸವಾಗಿದ್ದು, ಪ್ರತಿದಿನ ಉಪವಾಸದಿಂದಲೇ ಇರಬೇಕಿತ್ತು ಎಂದಿದ್ದಾಳೆ.

ಈಗ 20 ವರ್ಷ ವಯಸ್ಸಿನವಳಾದ ಈ ಯುವತಿ ಸಂಪೂರ್ಣ ಗುಣಮುಖಳಾಗಿದ್ದು, ಮುದ್ದು ಗೊಂಬೆಯಂತೆ ಕಾಣುತ್ತಾಳೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ