ಸುದ್ದಿ

ಮೊಮ್ಮಕ್ಕಳನ್ನು ಆಡಿಸುವ 74ರ ಅಜ್ಜಿಯೊಬ್ಬರು ಪವಾಡವೆಂಬಂತೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ..!

78

ಹೈದರಾಬಾದ್, ಮಕ್ಕಳು ಪಡೆಯಬೇಕೆಂಬ ಬಯಕೆ ಸಾಮಾನ್ಯವಾಗಿ ಎಲ್ಲಾ ತಾಯಿಯರಿಗೂ ಇರುತ್ತದೆ. ಆದರೆ ಒಂದು ವಯಸ್ಸಿನ ಮಿತಿಯಿರುತ್ತದೆ. ಸಾಮಾನ್ಯವಾಗಿ 50 ವಯಸ್ಸಿನ ನಂತರ ಮೆನೋಪಾಸ್​ ಹಂತ ತಲುಪಿದ ಬಳಿಕ ಮಹಿಳೆಯರಿಗೆ ಗರ್ಭ ಧರಿಸುವುದು ಸಾಧ್ಯವಾಗುವುದಿಲ್ಲ. ಮೊಮ್ಮಕ್ಕಳು, ಮುಮ್ಮಕ್ಕಳನ್ನು ಆಡಿಸುವ 74ರ ಅಜ್ಜಿಯೊಬ್ಬರು ಪವಾಡವೆಂಬಂತೆ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ದ್ರಾಕ್ಷಾರಾಮಮ್​ ಬ್ಲಾಕ್​ನ ನೆಲಪಾರ್ತಿಪಾಡು ಗ್ರಾಮದ ಈರಮಟ್ಟಿ ಮಂಗಯಮ್ಮ ಎಂಬ 74ರ ಅಜ್ಜಿ ಮದುವೆಯಾದ 54 ವರ್ಷಗಳ ನಂತರ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇದರೊಂದಿಗೆ ಅತೀ ಹಿರಿಯ ವಯಸ್ಸಿನಲ್ಲಿ ಮಕ್ಕಳನ್ನು ಹಡೆದರೆಂಬ ಖ್ಯಾತಿಗೆ ಈ ಅಜ್ಜಿ ಪಾತ್ರರಾಗಿದ್ದಾರೆ. ಈ ಮೊದಲು ಪಂಜಾಬಿನ ಅಮೃತ್ ಸರದ 72ರ ವಯಸ್ಸಿನ ದಾಲ್ಜಿಂದರ್ ಕೌರ್ ಎಂಬುವವರು ಮಗುವಿಗೆ ಜನ್ಮ ನೀಡಿದ್ದರು. ಈರಮಟ್ಟಿ ಮಂಗಯಮ್ಮ ಆ ದಾಖಲೆಯನ್ನು ಮುರಿದಿದ್ದಾರೆ.ಇ. ರಾಜಾರಾವ್​ (80) ಜತೆ 57 ವರ್ಷಗಳ ಹಿಂದೆ ಮಂಗಮ್ಮ ಮದುವೆಯಾಗಿದ್ದರು. ಅಂದಿನಿಂದ ಇವರಿಗೆ ಮಕ್ಕಳನ್ನು ಹೊಂದಲು ಸಾಧ್ಯವಾಗಿರಲಿಲ್ಲ. ಇದಕ್ಕಾಗಿ ಹಲವು ವರ್ಷಗಳಿಂದ ಈ ದಂಪತಿ ಹರಕೆ ಹೊರದ ದೇವರಿಲ್ಲ, ಹೋಗದ ಆಸ್ಪತ್ರೆಗಳಿಲ್ಲ. ಏನೆ ಮಾಡಿದರೂ ಮಕ್ಕಳನ್ನು ಪಡೆಯಲು ಸಾಧ್ಯವಾಗಿರಲಿಲ್ಲ.

74ರಲ್ಲಿ ಕನಸು ನನಸಾಯ್ತು
ವಯಸ್ಸು 70 ದಾಟಿದರೂ ಮಕ್ಕಳನ್ನು ಪಡೆಯುವ ಆಸೆ ಕೈಬಿಟ್ಟಿರಲಿಲ್ಲ.ಇದೇ ಕೊರಗಿನಲ್ಲಿರುವಾಗ ತಮ್ಮ ಮನೆಯ ಬಳಿಯ ಮಹಿಳೆಯೊಬ್ಬರು ಇನ್​ವರ್ಟೋ ಫರ್ಟಿಲೈಷೇಷನ್​ (ಐವಿಎಫ್​) ಮೂಲಕ ಮಗು ಪಡೆದ ಸುದ್ದಿ ಕೇಳಿದ ಮಂಗಯಮ್ಮ ಇದೇ ಪದ್ಧತಿಯಲ್ಲಿ ಮಗುವನ್ನು ಹೊಂದಲು ಆಸೆ ಚಿಗುರೊಡೆಸಿಕೊಂಡಿದ್ದಾರೆ.ಈಗಿನ ಆಧುನಿಕ ತಂತ್ರಜ್ಞಾನವಿರುವ ವಿಟ್ರೊ ಫಲೀಕರಣ (ಐವಿಎಫ್), ಇಂಟ್ರಾಸೈಟೋಪ್ಲಾಸ್ಮಿಕ್ ವೀರ್ಯಾಣು ಇಂಜೆಕ್ಷನ್ (ಐಸಿಎಸ್ಐ), ಕ್ರಯೋಪ್ರೆಸರ್ವೇಶನ್ ಚಿಕಿತ್ಸೆಯ ಮೂಲಕ ಅವಧಿ ಮೀರಿದ ನಂತರವು ಮಕ್ಕಳನ್ನು ಪಡೆಯಬಹುದು ಎಂದು ಹೈದರಾಬಾದ್​ನ ಕೊತ್ತಾಪೇಟ್​ನ ಅಹಲ್ಯಾ ಹಾಸ್ಪಿಟಲ್​ನ ನಿರ್ದೇಶಕ ಡಾ. ಸನಕಯ್ಯಾಲ ಉಮಾಶಂಕರ್​ ಮಾಹಿತಿ ನೀಡಿದ್ದಾರೆ.

ವೈದ್ಯರ ಸಲಹೆ ಮೆರೆಗೆ ಮಗು ಪಡೆಯಲು ನಿರ್ಧರಿಸಿದ್ದಾರೆ. ಆದರೆ 50 ವರ್ಷದ ನಂತರ ಮಹಿಳೆಯರಲ್ಲಿ ಮುಟ್ಟಿನ ಋತುಚಕ್ರವು ಕೊನೆಗೊಳ್ಳುತ್ತದೆ.ಆಗ ಬೇರೊಬ್ಬರ ಅಂಡಾಣು ಪಡೆದು, ಪತಿ ರಾಜಾರಾವ್​ ಅವರ ವೀರ್ಯದೊಂದಿಗೆ ಸಮ್ಮಿಳನಗೊಳಿಸಲಾಯಿತು. ಇದಾದ ನಂತರ ಮಂಗಮ್ಮ ಮೊದಲ ತಿಂಗಳಲ್ಲೇ ಗರ್ಭಧರಿಸಿದರು.ಗರ್ಭ ಧರಿಸಿದ ನಂತರದಲ್ಲಿ ಹೃದ್ರೋಗ, ಶ್ವಾಸಕೋಶ, ಹೆರಿಗೆ ಮತ್ತು ಸ್ತ್ರೀರೋಗ ಹಾಗೂ ಪೋಷಣ ತಜ್ಞರನ್ನು ಒಳಗೊಂಡ ವೈದ್ಯರ ತಂಡ ಈರಾಮತ್ತಿ ಅವರ ಆರೋಗ್ಯವನ್ನು ಗಮನಿಸಲಾರಂಭಿಸಿತು. ಅವರಿಗೆ 74 ವರ್ಷವಾದ್ದರಿಂದ ಸಹಜ ಹೆರಿಗೆ ಸಾಧ್ಯವಿಲ್ಲದ ಕಾರಣ ಸಿಸೇರಿಯನ್​ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಯಿತು.

ಪ್ರಸವದ ನಂತರದಲ್ಲಿ ಗುರುತರವಾದ ಆರೋಗ್ಯ ಸಮಸ್ಯೆಗಳಿರುವಂತೆ ಕಾಣುತ್ತಿಲ್ಲ. ಆದರೆ ಇಳಿವಯಸ್ಸು ಆಗಿರುವುದರಿಂದ ಅವರಿಗೆ ಸ್ತನ್ಯಪಾನ ಮಾಡಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ, ನಾವು ಹಾಲಿನ ಬ್ಯಾಂಕ್​ನಿಂದ ಮಕ್ಕಳಿಗೆ ಹಾಲನ್ನು ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.‘ನನಗೆ ತುಂಬ ಖುಷಿಯಾಗಿದೆ. ಪತ್ನಿ ಗರ್ಭ ಧರಿಸಿದ ನಂತರ 9 ತಿಂಗಳು ಆಸ್ಪತ್ರೆಯಲ್ಲೇ ಇದ್ದೆವು.ಹಿಂದೆಯಲ್ಲ ಮಕ್ಕಳಿಗಾಗಿ ಪಟ್ಟ ಕಷ್ಟಕ್ಕೆ ಈಗ ಪ್ರತಿಫಲ ದೊರಕಿದೆ. ಇಬ್ಬರು ಮಕ್ಕಳನ್ನು ತುಂಬ ಚೆನ್ನಾಗಿ ನೋಡಿಕೊಳ್ಳುತ್ತೇವೆ’ ಎಂದು ಪತಿ ರಾಜಾರಾವ್ ತಿಳಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಿನಿಮಾ

    ಸುಮಲತಾ ಪರ ನಿಂತ ಡಿಬಾಸ್ ಮತ್ತು ಯಶ್..ರಾಕಿಂಗ್ ಸ್ಟಾರ್ ಹೇಳಿದ್ದೇನು ಗೊತ್ತಾ?

    ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಮುಂದಾಗಿರುವ ಸುಮಲತಾ ಅಂಬರೀಶ್ ಅವರಿಗೆ ಸ್ಯಾಂಡಲ್ ವುಡ್ ಖ್ಯಾತ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಇಂದು ಬಹಿರಂಗವಾಗಿಯೇ ಬೆಂಬಲ ಘೋಷಿಸಿದ್ದು, ಸುಮಲತಾ ಅಂಬರೀಶ್ ಅವರೊಂದಿಗೆ ಪತ್ರಿಕಾಗೋಷ್ಟಿಯಲ್ಲಿ ಪಾಲ್ಗೊಂಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಮಾತನಾಡಿ, ನಾವು ಸುಮಲತಾ ಅವರ ಜೊತೆ ಕಲಾವಿದರಾಗಿ ಕೂತಿಲ್ಲ. ಮನೆ ಮಕ್ಕಳಾಗಿ ಕುಳಿತ್ತಿದ್ದೇವೆ. ಮನೆ ತಾಯಿಯ ನಿರ್ಧಾರಕ್ಕೆ ಮಕ್ಕಳಾದ ನಾವು ಜೊತೆ ಇರುತ್ತೇವೆ ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ. ಖಾಸಗಿ ಹೋಟೆಲ್…

  • ಸುದ್ದಿ

    ಅಂತಿಮವಾಗಿ ಚೈತ್ರಾ ಕೊಟ್ಟೂರು ಮನೆಯಿಂದ ಹೊರಗೆ ಬರುವಾಗ ಸಿನಿಮಾ ಶಾಕ್ ಕೊಟ್ಟೆ ಬಂದ್ರು!ಏನದು ಗೊತ್ತಾ.?

    ಬಿಗ್ ಬಾಸ್ ಮನೆಯಲ್ಲಿ ಸಂಡೇ ಪಂಚಾಯಿತಿ ನಡೆದಿದೆ. ಅಂತಿಮವಾಗಿ ಮನೆಯಿಂದ ಚೈತ್ರಾ ಕೊಟ್ಟೂರು ಹೊರಗೆ ಬಂದಿದ್ದಾರೆ. ನಾಲ್ಕನೇ ವಾರ ಎಲಿಮಿನೇಶನ್ ನಲ್ಲಿ ಚೈತ್ರಾ ಹೊರಗೆ ಬಂದಿದ್ದಾರೆ. ಯಸ್ ಮತ್ತು ನೋ ಪ್ರಶ್ನೆಗಳ ಮೂಲಕ ಅನೇಕ ವಿಚಾರಗಳನ್ನು ಸುದೀಪ್  ಕೆಣಕಿದರು. ಮೊದಲನೇ ವಾರ ಗುರುಲಿಂಗ ಸ್ವಾಮೀಜಿ, ಎರಡನೇ ವಾರ ಚೈತ್ರಾ ವಾಸುದೇವನ್ ಮತ್ತು ಮೂರನೇ ವಾರ ದುನಿಯಾ ರಶ್ಮಿ ಹೊರಗೆ ಬಂದಿದ್ದಾರೆ. ರಾಜು. ತಾಳಿಕೋಟೆ ಅಂತಿಮ ಘಟ್ಟದವರೆಗೆ ಬಂದು ಸೇಫ್ ಆಗಿದ್ದಾರೆ. ಎರಡು ತಿಂಗಳು ಆದ ಮೇಲೆ ನಾನೊಂದು…

  • ಸುದ್ದಿ

    ಹೇರ್ ಫಾಲ್ ಟೆನ್ಶನ್ ಇಲ್ಲಿಗೆ ಬಿಡಿ, ಇನ್ಮುಂದೆ ನ್ಯಾಚುರಲ್ ಪರಿಹಾರ ಟ್ರೈ ಮಾಡಿ,..!

    ತುಂಬಾ ಕೂದಲು ಉದುರುತ್ತಿದೆ ಅಂತ ಚಿಂತೆ ಶುರುವಾಗಿದ್ಯಾ? ಕೂದಲು ಯಾಕೆ ಉದುರುತ್ತೆ? ಈ ಸಮಸ್ಯೆಗೆ ನೈಸರ್ಗಿಕ ಮದ್ದು ಏನು? ಯಾವೆಲ್ಲಾ ಆಹಾರವನ್ನೂ ಸೇವಿಸಬೇಕು? ಹೇಗೆ ಕೂದಲಿನ ರಕ್ಷಣೆ ಮಾಡಬೇಕು ಎನ್ನುವ ಚಿಂತೆಯಲ್ಲಿದ್ದೀರಾ? ಏನಪ್ಪಾ ಮಾಡೋದು ಈ ಸಮಸ್ಯೆಗೆ ಅಂತ ಯೋಚನೆ ಮಾಡೋದನ್ನ ಬಿಡಿ. ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಸಮಸ್ಯೆ ಅಂದ್ರೆ ಅದು ಹೇರ್ ಫಾಲ್. ದೇಹಕ್ಕೆ ಆರೋಗ್ಯಕರ, ಪೌಷ್ಠಿಕಾಂಶವುಳ್ಳ ಆಹಾರ ಸೇವಿಸದಿದ್ದರೆ ಈ ಹೇರ್ ಫಾಲ್ ಸಮಸ್ಯೆ ಬರುತ್ತದೆ. ಅಲ್ಲದೆ ಅತಿಯಾದ ಯೋಚನೆ, ನಿದ್ರಾಹೀನತೆ ಹಾಗೂ ಟೆನ್ಶನ್‍ನಿಂದ…

  • ಸುದ್ದಿ

    ಮಂಗಳಮುಖಿಯರಿಗೆ ಮನೆ ಕಟ್ಟಿಕೊಳ್ಳಲು ಅಕ್ಷಯ್ ಕುಮಾರ್ ಕೊಟ್ಟಿದ್ದು ಎಷ್ಟು ಕೋಟಿ ಗೊತ್ತಾ.

    ಮಂಗಳಮುಖಿಯರಿಗೆ ಸೂಕ್ತ ನೆಲೆ ಕಲ್ಪಿಸಲು, ವಿಶೇಷ ಸ್ಥಾನಮಾನ ನೀಡಲು ಅನೇಕ ವರ್ಷಗಳಿಂದ ಹೋರಾಟ ನಡೆಯುತ್ತಲೇ ಇದೆ. ಕೆಲವೊಂದು ರಾಜ್ಯಗಳಲ್ಲಿ ಈಗಾಗಲೇ ಮಂಗಳಮುಖಿಯರಿಗೆ ಹೊಟೇಲ್, ಆಸ್ಪತ್ರೆ ಹಾಗೂ ಇನ್ನಿತರ ಕಡೆಗಳಲ್ಲಿ ಕೆಲಸ ನೀಡಲಾಗಿದ್ದು, ತಮಗೆ ದೊರೆತ ಕೆಲಸವನ್ನು ಮಂಗಳಮುಖಿಯರು ಕೂಡಾ ನಿಷ್ಠೆಯಿಂದ ಮಾಡುತ್ತಿದ್ದಾರೆ. ಇನ್ನು ಎಷ್ಟೋ ಕಡೆಗಳಲ್ಲಿ ಮಂಗಳಮುಖಿಯರು ಎಂಬ ಕಾರಣಕ್ಕೆ ಕೆಲಸ ನೀಡಲು ಹಿಂಜರಿಯುತ್ತಿದ್ದಾರೆ. ಸರ್ಕಾರದಿಂದ ನೆರವು ದೊರೆಯದೆ ಮಂಗಳಮುಖಿಯರು ಕೂಡಾ ಬೇಸರಗೊಂಡಿದ್ದಾರೆ. ಇದೀಗ ಬಾಲಿವುಡ್ ನಟ ಅಕ್ಷಯ್ ಕುಮಾರ್ ಇಂತವರ ಸಹಾಯಕ್ಕೆ ಮುಂದಾಗಿದ್ದಾರೆ. ಮಂಗಳಮುಖಿಯರಿಗೆ ನೆಲೆ…

  • ಸುದ್ದಿ

    ಅಮ್ಮನಿಗೆ ಪತ್ರವನ್ನು ಬರೆದು ಮನೆ ಬಿಟ್ಟು ಹೋದಂತಹ ಬಾಲಕಿಯ ಬಣ್ಣವನ್ನು ಬಯಲು ಮಾಡಿದ ಪೊಲೀಸರು…!

    ಅಪ್ಪನ ವರ್ತನೆಯಿಂದ ಬೇಸರಗೊಂಡು ಮನೆ ಬಿಟ್ಟು ಹೋಗ್ತಿದ್ದೇನೆ ಅಂತಾ ಅಮ್ಮನಿಗೆ ಪತ್ರ ಬರೆದು ಹೋದ ಮಗಳ ನಿಜವಾದ ಬಣ್ಣವನ್ನು ಪೊಲೀಸರು ಬಯಲು ಮಾಡಿದ್ದಾರೆ. ಮುಂಬೈನಲ್ಲಿ 14 ವರ್ಷದ ಬಾಲಕಿಯೊಬ್ಬಳು ತನ್ನ ಅಮ್ಮನಿಗೆ ಈ ರೀತಿ ಪತ್ರ ಬರೆದಿದ್ದಾಳೆ. “ಅಮ್ಮಾ ನಾನು ಅಪ್ಪನ ವರ್ತನೆಯಿಂದ ಬೇಸರಗೊಂಡು ಮನೆ ಬಿಟ್ಟು ಹೋಗುತ್ತಿದ್ದೇನೆ. ನನ್ನ ಬಗ್ಗೆ ಯೋಚನೆ ಮಾಡಬೇಡಿ. ಹಾಗಂತ ನಾನು ಯಾವುದೋ ಹುಡುಗನೊಂದಿಗೆ ಓಡಿ ಹೋಗುತ್ತಿಲ್ಲ. ನೀವು ಆತ್ಮಹತ್ಯೆ ಮಾಡಿಕೊಳ್ಳಲ್ಲ ಅಂತಾ ದೇವರ ಮೇಲೆ ಆಣೆ ಮಾಡು” ಎಂದು ಪತ್ರದಲ್ಲಿ…

  • ಸುದ್ದಿ

    ಕೇವಲ 48 ಸೆಕೆಂಡ್ ಗಳಲ್ಲಿ ‌ʼಗಿನ್ನಿಸ್ʼ ದಾಖಲೆ ಪಡೆದ ಮುಂಬೈಕರ್

    ಈಜುಕೊಳಗಳ ರೂಬಿಕ್ ಕ್ಯೂಬ್ ಗಳಲ್ಲಿ ಕಂಡು ಬರುವ ಸಮಸ್ಯೆಯನ್ನು ಬರೀ 48 ಸೆಕೆಂಡ್ ಗಳಲ್ಲಿ ಪರಿಹಾರ ಹುಡುಕಿದ ಮುಂಬೈಕರ್ ಒಬ್ಬರು ಗಿನ್ನಿಸ್ ದಾಖಲೆ ಬರೆದಿದ್ದಾನೆ. ಮುಂಬೈನ 19 ವರ್ಷದ ಚಿನ್ಮಯಿ ಪ್ರಭು, ಈಜುಕೊಳದ ನೀರಿನ ಒಳಗಡೆ ಕೂತು 9 ರೂಬಿಕ್ ಕ್ಯೂಬ್ ಸಮಸ್ಯೆ ಗಳನ್ನು ಬರೀ 48 ಸೆಕೆಂಡ್ ಗಳಲ್ಲಿ ಬಗೆಹರಿಸಿರೋದು ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗಿದೆ. ಪಿರಮಿಡ್ ಮಾದರಿಯಲ್ಲಿರುವ ರೂಬಿಕ್ ಕ್ಯೂಬ್ ಗಳಲ್ಲಿ ಸಮಸ್ಯೆಗಳು ಕಾಣಿಸಿಕೊಂಡ್ರೆ ಒಂದೆರಡು ದಿನ ಸಮಯ ಬೇಕಾಗುತ್ತದೆ. ಈ ಹಿಂದೆ ಜಾರ್ಜಿಯಾದಲ್ಲಿ 18…