ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೆಂಗಳೂರಿನ ಹೆಚ್’ಬಿಆರ್ ಬಡಾವಣೆಯ ಕಾಚರಕನಹಳ್ಳಿಯ ಶ್ರೀ ಕೋದಂಡರಾಮಸ್ವಾಮಿ ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪನೆಗಾಗಿ ಸಿದ್ದವಾಗಿದ್ದ 62 ಅಡಿ ಎತ್ತರದ, 750 ಟನ್ ತೂಕದ ವೀರಾಂಜನೇಯ ಸ್ವಾಮಿಯ ವಿಗ್ರಹವನ್ನು, 300 ಚಕ್ರಗಳ ಬೃಹತ್ ವಾಹನದಲ್ಲಿ ಸ್ಥಳಕ್ಕೆ ಈಗಾಗಲೇ ಸಾಗಿಸಲಾಗಿದೆ.

ಆದರೆ ವಿಪರ್ಯಾಸ ಎಂದರೆ, ಅಂದು ಪರ್ವತವನ್ನೇ ಹೊತ್ತು ತಂದು ಲಕ್ಷ್ಮಣನನ ಜೀವ ಉಳಿಸಿದ, ರಾಮ ಭಕ್ತ ಹನುಮಂತನ ಪ್ರತಿಷ್ಟಾಪನೆಗೆ ವಿಘ್ನದ ಮೇಲೆ ವಿಘ್ನ ಶುರುವಾಗಿದೆ. ಕೋಲಾರದಿಂದ ಬೆಂಗಳೂರಿನ ಹೆಚ್’ಬಿಆರ್ ಬಡಾವಣೆಯ ಕಾಚರಕನಹಳ್ಳಿಗೆ ಹೊರಟಿದ್ದ ಬೃಹತ್ ಆಂಜನೇಯನ ವಿಗ್ರಹಕ್ಕೆ ಮಾರ್ಗ ಮಧ್ಯದಲ್ಲೇ ತೊಂದರೆ ಎದುರಾಗಿತ್ತು.
ಟ್ರಕ್ ಮೂಲಕ ತರುತ್ತಿದ್ದ 750 ಟನ್ ತೂಕದ ವೀರಾಂಜನೇಯ ಮೂರ್ತಿಗೆ ಹೊಸಕೋಟೆಯ ದಂಡುಪಾಳ್ಯದಲ್ಲಿ, ಚುನಾವಣಾ ನೀತಿ ಸಂಹಿತೆ ಹೆಸರಲ್ಲಿ ಪೊಲೀಸರು ದಿಗ್ಬಂಧನ ಹೇರಿದ್ದರು.ನಂತರ ಈ ವಿಘ್ನಗಳನ್ನು ದೂರ ಮಾಡಿಕೊಂಡು ಕಾಚರಕನಹಳ್ಳಿಯ ಶ್ರೀ ಕೋದಂಡರಾಮಸ್ವಾಮಿ ದೇವಾಲಯದ ಹತ್ತಿರಕ್ಕೆ ಸಾಗಿಸಲಾಗಿದೆ.ಆದರೆ ಅಲ್ಲಿಯೂ ಮತ್ತೊಂದು ವಿವಾದ ಶುರುವಾಗಿದೆ.

ಈಗಾಗಲೇ ಬೆಂಗಳೂರಿನ ಎಚ್‍ಬಿಆರ್ ಬಡಾವಣೆಯ ಕಾಚರಕನಹಳ್ಳಿಯ ಕೋದಂಡರಾಮಸ್ವಾಮಿ ದೇಗುಲದ ಪ್ರಾಂಗಣದಲ್ಲಿ 62 ಅಡಿ ಎತ್ತರದ ಬೃಹತ್ ಆಂಜನೇಯ ವಿಗೃಹವನ್ನು ಪ್ರತಿಷ್ಠಾಪನೆ ಮಾಡಲು ಶ್ರೀರಾಮ ದೇಗುಲದ ಟ್ರಸ್ಟಿಗಳ ನಿರ್ಧರಿಸಿದ್ದಾರೆ.
ಆದರೆ ಕೋದಂಡ ರಾಮ ದೇಗುಲಕ್ಕೆ ಸಂಭಂದಪಟ್ಟಂತೆ ಕೇಸ್ ನ್ಯಾಯಾಲಯದಲ್ಲಿ ಇರುವುದರಿಂದ ಬೃಹತ್ ಆಂಜನೇಯನ ವಿಗ್ರಹವನ್ನು, ದೇವಸ್ಥಾನದ ಆವರಣದ ಒಳಗಡೆ ಆಂಜನೇಯನ ಮೂರ್ತಿಯನ್ನು ತರದಂತೆ ತಹಶೀಲ್ದಾರ್ ತಡೆಯೊಡ್ಡಿದ್ದಾರೆ.

ಇದರಿಂದ ಕೋಪಗೊಂಡಿರುವ ಭಕ್ತರು ಮತ್ತು ಅಧಿಕಾರಿಳ ನಡುವೆ ವಾಗ್ವಾದ ಏರ್ಪಟ್ಟಿದೆ.ಇದು ರಾಜಕೀಯ ಪ್ರೇರಿತವಾಗಿದ್ದು, ಇದಕ್ಕೆ ಯಾರೋ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿ ಭಕ್ತರು ಪ್ರತಿಭಟನೆಯೊಂದಿಗೆ ರಸ್ತೆ ತಡೆ ಕೂಡ ನಡೆಸಿದ್ದಾರೆ.
ಹನುಮಂತನ ವಿಗ್ರಹವನ್ನು ಸಾಗಿಸುವಾಗ ಅಡ್ಡ ಬಂದ ರಸ್ತೆಯ ಡಿವೈಡರ್’ಗಳನ್ನೂ ಕೆಡವಿದ್ದಾರೆ.ಎಷ್ಟೇ ಗಲಾಟೆ ಆದರೂ ನಾವು ದೇವಸ್ಥಾನದ ಒಳಗಡೆ ವಿಗ್ರಹ ಪ್ರವೇಶಕ್ಕೆ ಅನುಮತಿ ನೀಡುವುದಿಲ್ಲ ಎಂದು ಡಿಸಿಯವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಟೆಕ್ ದೈತ್ಯ ಕಂಪನಿ ಆಪಲ್, ಅದರ ಕೀಬೋರ್ಡ್ ಆಪರೇಟಿಂಗ್ ಸಿಸ್ಟಮ್, ಐಒಎಸ್ 2ರ ಇತ್ತೀಚಿನ ಆವೃತ್ತಿಯಲ್ಲಿ ಕನ್ನಡ
ಯೆಮೆನ್ ನಲ್ಲಿ ಮದುವೆಯಾದ ಮೊದಲ ರಾತ್ರಿಯೇ 8 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ವಿಶ್ವದಾದ್ಯಂತ ಮಹಿಳಾ ಸಂಘಟನೆಗಳು ಇದರ ವಿರುದ್ಧ ತಿರುಗಿ ಬಿದ್ದಿವೆ. ಯೆಮೆನ್ ಕೆಟ್ಟ ಪದ್ಧತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿವೆ.
ಪೈಲಟ್ ಇಲ್ಲದ ವಿಮಾನ ತಯಾರಿಸಲು ಬೋಯಿಂಗ್ ಕಂಪನಿ ಮುಂದೆ ಬಂದಿದೆ. ವಿಮಾನ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಬೋಯಿಂಗ್ ಕಂಪನಿ ಮುಂದಿನ ವರ್ಷದ ವೇಳೆಗೆ ಪೈಲಟ್ ಇಲ್ಲದ ವಿಮಾನ ನಿರ್ಮಾಣದ ಕನಸು ನನಸಾಗಿರುವ ಗುರಿ ಹೊಂದಿದೆ.
ಚೀನಾ ಹ್ಯಾಂಡ್ಸೆಟ್ ತಯಾರಿಕಾ ಕಂಪನಿ ಒಪೋ ತನ್ನ ಹೊಸ ಸ್ಮಾರ್ಟ್ಫೋನ್ ಗೆ ಭರ್ಜರಿ ಆಫರ್ ನೀಡ್ತಿದೆ. ಕಂಪನಿ ಇದಕ್ಕಾಗಿ ತನ್ನ ಪಾಲುದಾರ ಕಂಪನಿ ರಿಲಾಯನ್ಸ್ ಜಿಯೋ ಜೊತೆ ಕೈಜೋಡಿಸಿದೆ.
ಚಿಲ್ಲಿ ಚಿಕನ್ ಹೆಸರು ಕೇಳದವರೇ ಇಲ್ಲ. ಹೆಸರು ಕೇಳಿದ ಕೂಡಲೇ ಬಾಯಲ್ಲಿ ನೀರೂರಿಸುವ ಚಿಲ್ಲಿ ಚಿಕನ್ ಕಣ್ಣ ಮುಂದೆ ಬರುತ್ತದೆ. ನಿಮಗಾಗಿ ಬಾಯಿಲ್ಲಿ ನೀರಿರುವ, ಮೈಸೂರು ಶೈಲಿಯ ಚಿಲ್ಲಿ ಚಿಕನ್ ರೆಸಿಪಿ …
ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ (ಏಪ್ರಿಲ್ 14, 2026) ದೇಶದಾದ್ಯಂತ ಭಕ್ತಿಭಾವದಿಂದ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು. ಈ ದಿನವು ಭಾರತದಲ್ಲಿ ರಾಷ್ಟ್ರೀಯ ಹಬ್ಬವಾಗಿದ್ದು, ಸರ್ಕಾರಿ ಕಚೇರಿಗಳು, ಶಾಲೆಗಳು, ಬ್ಯಾಂಕ್ಗಳು ಹಲವೆಡೆ ಮುಚ್ಚಲಾಗಿತ್ತು. ಕೋಲಾರ ಜಿಲ್ಲೆಯ, ಮಾಲೂರು ತಾಲೂಕಿನ, ಹುಂಗೇನಹಳ್ಳಿ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ 135ನೇ ಜಯಂತಿ ಅಂಗವಾಗಿ ನಿವೃತ್ತ ಸೈನಿಕ: ಹರೀಶ್ ಕುಮಾರ್ ಎಚ್.ಎಸ್. ಅವರಿಗೆ ಭವ್ಯ ಸನ್ಮಾನ ಗ್ರಾಮದಲ್ಲಿ Dr. B. R. Ambedkar Jayanti 135ನೇ ಜಯಂತಿಯನ್ನು ಅತ್ಯಂತ ಅದ್ದೂರಿಯಾಗಿ…