ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಘಟಬಂಧನ್ ನಾಯಕರು ಅವರ ಕ್ಷೇತ್ರದಲ್ಲಿ ಈ ಬಾರಿ ಅಡ್ರೆಸ್‌ಗೆ ರ‍್ತಾರಾ-ಚಿಂತನೆ ಮಾಡಲಿ
ಕೋಲಾರ:- ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ರವರನ್ನು ಕೋಲಾರ ವಿಧಾನ ಸಭಾ ಕ್ಷೇತ್ರಕ್ಕೆ ಕರೆತರುವ ಮುನ್ನ ಮಾಜಿ ಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್‌ರ ಘಟಬಂಧನ್ ತಂಡ ಕೋಲಾರದಲ್ಲಿ ಐದು ಸಾವಿರ ಜನರನ್ನು ಸೇರಿಸಿ ಸಮಾವೇಶ ಮಾಡಿ ತೋರಿಸಲಿ, ಅವರ ಕ್ಷೇತ್ರಗಳಲ್ಲಿ ಅವರು ಅಡ್ರೆಸ್‌ಗೆ ರ‍್ತಾರ ಆಲೋಚಿಸಲಿ ಎಂದು ಮಾಜಿ ಸಚಿವ ಆರ್.ವರ್ತೂರ್ ಪ್ರಕಾಶ್ ಸವಾಲು ಹಾಕಿದರು.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಇತ್ತೀಚೆಗೆ ಶಾಸಕ ರಮೇಶ್‌ಕುಮಾರ್ ಹೇಳಿಕೆ ನೀಡಿ, ಸಿದ್ದರಾಮಯ್ಯ ಕೋಲಾರಕ್ಕೆ ಬಂದರೆ ವರ್ತೂರು ಪ್ರಕಾಶ್ ಅಡ್ರೆಸ್‌ಗೆ ಇರಲ್ಲ ಎಂದು ಹೇಳಿದ್ದರ ವಿರುದ್ದ ಮಾತನಾಡಿ, ಶ್ರೀನಿವಾಸಪುರ,ಬಂಗಾರಪೇಟೆಯವರನ್ನಲ್ಲ, ಕೋಲಾರಕ್ಷೇತ್ರದ 5 ಸಾವಿರ ಜನಸೇರಿಸಿ ಸಮಾವೇಶ ಮಾಡಿ ತೋರಿಸಿ, ಎಂದು ಸವಾಲೆಸೆದರು.
ಕೋಲಾರ ಕ್ಷೇತ್ರದ ಚಿಂತೆಯನ್ನು ಘಟಬಂಧನ್ ನಾಯಕರು ಬಿಟ್ಟು ಅವರವರ ಕ್ಷೇತ್ರಗಳಲ್ಲಿ ಅವರುಗಳು ಮೊದಲು ಗೆಲ್ಲುತ್ತಾರಾ ಎಂಬುದರ ಬಗ್ಗೆ ಚಿಂತನೆ ಮಾಡಲಿ ಎಂದು ಛೇಡಿಸಿ, ಈಗಾಗಲೇ ಕೆ.ವೈ.ನಂಜೇಗೌಡ ಒಂದು ಹೆಜ್ಜೆ ಹೊರಗಿಟ್ಟಿದ್ದಾರೆ, ಬಂಗಾರಪೇಟೆಯಲ್ಲಿ ಎಸ್.ಎನ್.ನಾರಾಯಣಸ್ವಾಮಿ, ಶ್ರೀನಿವಾಸಪುರದಲ್ಲಿ ರಮೇಶ್‌ಕುಮಾರ್‌ಗೆ ಸೋಲು ಕಟ್ಟಿಟ್ಟ ಬುತ್ತಿ ಎಂದರು.
ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಕೆಲಸ ಮಾಡುವವರೇ ಇಲ್ಲ,ಹಳ್ಳಿಗಳಿಗೆ ಪ್ರವಾಸ ಮಾಡಲು ಘಟಬಂಧನ್ ನಾಯಕರಿಗೆ ಸಮಯ ಇಲ್ಲದಿರುವಾಗ ಸಿದ್ದರಾಮಯ್ಯ ಪರ ಕೆಲಸ ಮಾಡುವವರು ಯಾರು ಎಂದು ಪ್ರಶ್ನಿಸಿದರು.
ಶಾಸಕ ರಮೇಶ್‌ಕುಮಾರ್‌ಗೆ ಬಾಯಿ ಹಿಡಿತವಿಲ್ಲ, ಸಿದ್ದರಾಮಯ್ಯ ರವರು ಕೋಲಾರದಲ್ಲಿ ಸ್ಪರ್ಧೆ ಮಾಡಿದರೆ ನಾನು ಅಡ್ರೆಸ್ ಗೆ ಇರುವುದಿಲ್ಲ ಎಂದಿದ್ದಾರೆ ಅದು ಅವರ ಘನತೆಗೆ ತಕ್ಕ ಮಾತಲ್ಲ ವಾಸ್ತವವಾಗಿ ಸಿದ್ದರಾಮಯ್ಯ ನವರನ್ನು ಕೋಲಾರಕ್ಕೆ ಕರೆತರುವುದರಿಂದ ಅದು ನನ್ನ ಗೆಲುವಿನ ಮೊದಲ ಮೆಟ್ಟಿಲಾಗಲಿದೆ, ಅದಕ್ಕೆ ರಮೇಶ್‌ಕುಮಾರ್‌ಗೆ ಮಾಧ್ಯಮದ ಮೂಲಕ ಧನ್ಯವಾದ ತಿಳಿಸುವೆ ಎಂದರು.
ರಾಜಕೀಯ ಲೆಕ್ಕಾಚಾರದ ಪ್ರಕಾರ ಕ್ಷೇತ್ರದ ಮತದಾರರ ಸಂಖ್ಯೆ 2 ಲಕ್ಷ 30 ಸಾವಿರ ಇದ್ದು, ಅಲ್ಪಸಂಖ್ಯಾತರ ಮತಗಳು 50 ಸಾವಿರ, ,ಹಿಂದೂಗಳ ಮತ 1 ಲಕ್ಷ 80 ಸಾವಿರ ಇದರಲ್ಲಿ ಕನಿಷ್ಟ ಐದು ಸಾವಿರ ಜನರನ್ನು ಕಾಸು ನೀಡದೆ, ಬೇರೆ ಕ್ಷೇತ್ರದ ಜನರನ್ನು ಸೇರಿಸದೆ ಕೇವಲ ಕೋಲಾರ ವಿಧಾನ ಸಭಾಕ್ಷೇತ್ರದ ಜನರನ್ನು ಮಾತ್ರ ಸೇರಿಸಿ ಸಮಾವೇಶ ನಡೆಸಿದರೆ ಆಗ ಘಟಬಂಧನ್ ನಾಯಕರುನ್ನು ಒಪುö್ಪತ್ತೇನೆ ಎಂದರು.
ಬಿ.ಜೆ.ಪಿ ಸರ್ಕಾರದ ಅಭಿವೃದ್ಧಿ ಕೆಲಸಗಳು,ಸ್ಥಳೀಯ ಶಾಸಕರ ವಿಫಲತೆ,ಸದಾ ಸಂಘಟನೆಯಲ್ಲಿ ತೊಡಗಿರುವ ತಮಗೆ ಕನಿಷ್ಠ 50 ಸಾವಿರ ಮತಗಳ ಅಂತರದಲ್ಲಿ ಗೆಲವು ಶತಸಿದ್ಧವೆಂದರು. ಒಂದು ವೇಳೆ ಜನವರಿ 9 ರಂದು ಸಿದ್ದರಾಮಯ್ಯ ನವರು ಕೋಲಾರಕ್ಕೆ ಬರುವುದು ನಿಶ್ಚಿತವಾದರೆ ಅಂದೇ ತಾವು ನನ್ನ ಬಲ ಪ್ರದರ್ಶನ ಮಾಡುವುದಾಗಿ ಘೋಷಿಸಿದರು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹಣಗಳಿಸುವುದಕ್ಕೆ ಶಕ್ತಿಯೊಂದಿದ್ದರೆ ಸಾಕಾಗುವುದಿಲ್ಲ, ಯುಕ್ತಿಯೂ ಇರಬೇಕು. ತಮ್ಮ ಕಠಿಣ ಪರಿಶ್ರಮದೊಂದಿಗೆ ಚಾಣುಕ್ಯ ತನವಿದ್ದರೆ, ಹಣಗಳಿಸುವುದರ ಜೊತೆ ಹೆಸರನ್ನು ಕೂಡ ಸಂಪಾದಿಸಬಹುದು! ಹೀಗೆ ಒಬ್ಬ ವ್ಯಕ್ತಿ ಹಳ್ಳಿಯ ಜನರ ಮನಸ್ಥಿತಿಯನ್ನು ಅರಿತು ಅವರಿಂದ ಹೇಗೆ ಹಣವನ್ನು ಸಂಪಾದಿಸುತ್ತಾನೆ ಎಂಬುದನ್ನು ತಿಳಿದುಕೊಳ್ಳಲು ಮುಂದೇ ಓದಿ.. ಇದನ್ನು ಮೋಸ ಎನ್ನಬೇಕಾ? ಅಥವಾ ಅವನ ಚಾಣಕ್ಷತನ ಎನ್ನಬೇಕಾ? ನೀವೇ ನಿರ್ಧರಿಸಿ ! ಚಿಕ್ಕದೊಂದು ಹಳ್ಳಿ, ಅಲ್ಲಿಯ ಜನತೆಗೆ ಕೃಷಿಯೆ ಬಂಡವಾಳ, ಬಾಳೆ, ತೆಂಗು, ಮಾವು ಸೇರಿದಂತೆ ಅನೇಕ ಬೆಳೆಗಳನ್ನು ಬೆಳೆದು ಜೀವನ ಸಾಗಿಸುತ್ತಿರುತ್ತಾರೆ,…
ಪತಂಜಲಿ ಸಂಸ್ಥೆ 5 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಯೋಗ ಗುರು ಬಾಬಾ ರಾಮ್ದೇವ್ ಹೇಳಿದ್ದಾರೆ. ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಡಲು ಮತ್ತು ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುರ್ವೇದ ಅತ್ಯುತ್ತಮ ಮಾರ್ಗ. ಕಳೆದ 40 ವರ್ಷಗಳಿಂದ ನಾನು ಬೆಳಗ್ಗೆ 4 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ಚಟುವಟಿಕೆಯಿಂದ ಜೀವನ ನಡೆಸುತ್ತಿದ್ದೇನೆ ಎಂದು ಯೋಗ ಗುರು ಬಾಬಾ ರಾಮ್ದೇವ್ ಹೇಳಿದ್ದಾರೆ. ಮಾಧ್ಯವೊಂದರ ಜೊತೆ ಬಾಬಾ ರಾಮ್ದೇವ್ ಮಾತನಾಡಿ ಸ್ವಾವಲಂಬಿ (ಆತ್ಮನಿರ್ಭರ್) ಭಾರತಕ್ಕಾಗಿ ಅಳವಡಿಸಿಕೊಳ್ಳಬಹುದಾದ…
2019 ರ ಜನವರಿಯಿಂದ ಮಾರ್ಚ್ ವೇಳೆ ವಿವಾಹವಾಗಬೇಕೆಂದು ಪ್ಲಾನ್ ಮಾಡಿದ್ದ ಉತ್ತರ ಪ್ರದೇಶದ ಪ್ರಯಾಗ್ ರಾಜ್ ಜನತೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಶಾಕ್ ನೀಡಿದೆ. ಕುಂಭ ಮೇಳದ ಹಿನ್ನೆಲೆಯಲ್ಲಿ ಈ ಅವಧಿಯಲ್ಲಿ ವಿವಾಹದ ದಿನಾಂಕ ನಿಗದಿಯಾಗಿದ್ದರೆ ಅದನ್ನು ಮುಂದೂಡಿ ಇಲ್ಲವೇ ಸ್ಥಳ ಬದಲಾಯಿಸಿಕೊಳ್ಳಿ ಎಂದು ಸೂಚಿಸಿದೆ. ಜನವರಿ ತಿಂಗಳಿನಲ್ಲಿ ಮಕರ ಸಂಕ್ರಾಂತಿಯ ಹಾಗೂ ಪುಷ್ಯ ಪೂರ್ಣಿಮಾದಂದು ಪ್ರಯಾಗ್ ರಾಜ್ ನಲ್ಲಿ ಪುಣ್ಯ ಸ್ನಾನ ಮಾಡಲಾಗುತ್ತದೆ. ಹಾಗೆಯೇ ಫೆಬ್ರವರಿಯಲ್ಲಿ ಮೌನಿ ಅಮಾವಾಸ್ಯೆ, ಬಸಂತ ಪಂಚಮಿ ಹಾಗೂ…
ಮೈ ನವಿರೇಳಿಸುವ ಅತ್ಯದ್ಭುತ ಆಲ್ಬಂ ಒಂದನ್ನು ರೋರಿಂಗ್ ಸ್ಟಾರ್ ಶ್ರೀ ಮುರುಳಿ ರವರು ಬಿಡುಗಡೆ ಮಾಡಿದ್ದಾರೆ.. ಅದೇ “ತಾಯಿ ಕನ್ನಡ”.. ಹೆಣ್ಣನ್ನು ಪ್ರಧಾನವಾಗಿಟ್ಟುಕೊಂಡು ಮಾಡಿರುವ ಈ ಕನ್ನಡದ ಆಲ್ಬಂಗೆ ಬಿಡುಗಡೆಯಾದ ಕೆಲವೇ ಘಂಟೆಗಳಲ್ಲಿ ಎಲ್ಲಾ ಕಡೆಯಿಂದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ..
ಮಕ್ಕಳು ಸತತವಾಗಿ ಸ್ಮಾರ್ಟ್ ಫೋನ್ ಮತ್ತು ಟಿವಿ ವೀಕ್ಷಿಸುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ನಿಮಗೆ ಅರಿವಿದೆಯೇ…
ಅಚಾನಕ್ಕಾಗಿ ಯಾರಾದರೂ ದುಡ್ ಸಿಕ್ರೆ ಏನ್ ಮಾಡ್ತಾರೆ? ಕಿಸೆಗೆ ಹಾಕಿಕೊಂಡು ನಡೆದೇ ಬಿಡ್ತಾರೆ. ಆದರೆ ಇಲ್ಲೊಬ್ಬ ಕಂಡಕ್ಟರ್ ತನ್ನ ಬಸ್ ನಲ್ಲಿ ಸಿಕ್ಕ ಒಂದು ಲಕ್ಷ ರೂ. ಹಣವನ್ನು ಸಂಬಂಧಪಟ್ಟವರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಸುಭದ್ರ ಎಂಬ ಪ್ರಯಾಣಿಕರು ಎಸ್ಟೀಂ ಮಾಲ್ ಬಳಿ ಬಸ್ ಇಳಿಯುವಾಗ ಹಣದ ಬ್ಯಾಗ್ ಮರೆತು ಬಸ್ ನಲ್ಲಿ ಬಿಟ್ಟು ಇಳಿದಿದ್ದರು.ಅನಾಥವಾಗಿ ಬಿದ್ದಿದ್ದ ಬ್ಯಾಗನ್ನು ಪರಿಶೀಲಿಸಿದ ಕಂಡಕ್ಟರ್ ಯಲ್ಲಪ್ಪ ಬೆಟಗೇರಿ, ಪರಿಶೀಲನೆ ನಡೆಸಿದಾಗ ಅದರಲ್ಲಿ ಹಣ ಇರುವುದು ಕಂಡುಬಂದಿದೆ. ಅಷ್ಟರಲ್ಲಾಗಲೇ ಆತಂಕಗೊಂಡಿದ್ದ ಸುಭದ್ರ…