ಗ್ಯಾಜೆಟ್

“4G ಜಿಯೋ” ಸಿಮ್ಅನ್ನು “3G ಮೊಬೈಲ್” ನಲ್ಲಿ ಉಪಯೋಗಿಸುವುದು ಹೇಗೆಂದು ತಿಳಿಯಬೇಕೇ??? ಹಾಗಾದರೆ ಈ ಲೇಖನವನ್ನು ಓದಿ

929

ಈಗ ಎಲ್ಲರಲ್ಲಿಯೂ 4G ಮೊಬೈಲ್ ಹಾಗೂ  jio sim ಇದ್ದೆ ಇರುತ್ತದೆ.ಆದರೆ 3G  ಮೊಬೈಲ್ ಇದ್ದವರು ಜಿಯೋ ಸಿಮ್ ಉಪಯೋಗಿಸುವುದು ಹೇಗೆ?

ಇಲ್ಲಿದೆ ನೋಡಿ ಟ್ರಿಕ್ಸ್:-      ಈಗ 3ಜಿ ಫೋನ್ ಇರುವವರು ಈ ಕೆಳಗೆ ನೀಡಿದ ಟ್ರಿಕ್ಸ್ ಬಳಿಸಿ ಜಿಯೋ ಸಿಮ್ ನಿಮ್ಮ ಫೋನ್’ನಲ್ಲಿ ಆಕ್ಟಿವೇಟ್ ಮಾಡಿಕೊಳ್ಳಬಹುದು.

 

4G ಜಿಯೋ ಸಿಮ್ಅನ್ನು 3ಜಿ ಫೋನ್ಗೆ ಆಕ್ತಿವೇಟ  ಮಾಡುವ ವಿಧಾನಗಳು:- 

  1. ಎಲ್ಲಕ್ಕೂ ಮೊದಲು ನಿಮ್ಮ ಮೊಬೈಲ್’ನಿಂದ 1800-200-200-2 ನಂಬರ್’ಗೆ ಕರೆ ಮಾಡಿ
  2. ಈ ನಂಬರ್’ಗೆ ಕರೆ ಮಾಡಿದ ಬಳಿಕ ನಿಮ್ಮ ಮೊಬೈಲ್’ಗೆ ಲಿಂಕ್ ಹೊಂದಿರುವ ಸಂದೇಶವೊಂದು ಬರುತ್ತದೆ. ಈ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಪ್ಲೇ ಸ್ಟೋರ್ ಅಪ್ಲಿಕೇಶನ್ ಗೆ ರೀ ಡೈರೆಕ್ಟ್ ಆಗುತ್ತದೆ.
  3. ಇಲ್ಲಿ ನೀವು ‘ಮೈ ಜಿಯೋ ಅಪ್ಲಿಕೇಶನ್’ ಡೌನ್ ಲೋಡ್ ಮಾಡಿ ಮೊಬೈಲ್’ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಿ.
  4. ಈ ಅಪ್ಲಿಕೇಶನ್ ಇನ್ಸ್ಟಾಲ್ ಆದ ಬಳಿಕ ಓಪನ್ ಮಾಡಿ ‘ಗೆಟ್ ಜಿಯೋ ಸಿಮ್'(Get Jio Sim) ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಬಳಿಕ ‘ಅಗ್ರಿ'(agree) ಎಂಬ ಆಯ್ಕೆ ಒತ್ತಿ. ತದ ನಂತರ ‘ಗೆಟ್ ಜಿಯೋ ಸಿಮ್ ಆಫರ್'(Get Jio Sim Offer) ಎಂಬುವುದನ್ನು ಕ್ಲಿಕ್ ಮಾಡಿ.
  5. ಬಳಿಕ ನೀವು ನಿಮ್ಮ ‘ಲೊಕೇಷನ್'(Location) ಸೆಟ್ ಮಾಡಿಕೊಂಡು, ‘ನೆಕ್ಸ್ಟ್'(Next) ಎಂಬುವುದನ್ನು ಆಯ್ಕೆ ಮಾಡಿಕೊಳ್ಳಿ.ಇಲ್ಲಿ ಓದಿ :-ಏನಿದು “JIO 100GB” ಬಂಫರ್ ಆಫರ್ !!!

ಈ ಪ್ರಕ್ರಿಯೆಯ ಬಳಿಕ ನಿಮ್ಮ ಮೊಬೈಲ್ ಸ್ಕ್ರೀನ್ ಮೇಲೆ ಒಂದು ಕೋಟ್ ಕಾಣಿಸಿಕೊಳ್ಳುತ್ತದೆ. ಈ ಆಫರ್ ಕೋಡ್’ನ್ನು ಬರೆದಿಟ್ಟುಕೊಳ್ಳಿ. ಆಫರ್ ಕೋಡ್ ಪಡೆದ ಬಳಿಕ ಏನು ಮಾಡಬೇಕು? 3ಜಿ ಫೋನ್’ನಲ್ಲಿ, 4ಜಿ ಬಳಸುವುದು ಹೇಗೆ? 3ಜಿ ಫೋನ್’ನಲ್ಲಿ ಜಿಯೋ ಸಿಮ್ ಬಳಸುವುದಕ್ಕೂ ಮೊದಲು ಇದನ್ನು ಆಕ್ತಿವೇಟ ಮಾಡಿಕೊಳ್ಳುವುದು ಅತ್ಯವಶ್ಯಕ.

ಒಂದು ವೇಳೆ ಈ ಕೆಳಗೆ ನೀಡಿದ ವಿಧಾನ ಬಳಸಿಯೂ ನಿಮ್ಮ ಫೋನ್’ನಲ್ಲಿ ಜಿಯೋ ಕಾರ್ಯ ನಿರ್ವಹಿಸುತ್ತಿಲ್ಲವೆಂದಾದಲ್ಲಿ ನೀವು ಹೊಸ Volte ನ ಮೊಬೈಲ್ ಖರೀದಿಸಬೇಕಾಗುತ್ತದೆ.

ಮೊದಲ ವಿಧಾನ: MTK Engineering App :-

  1. 1. ಫ್ಲೇ ಸ್ಟೋರ್’ನಲ್ಲಿ ಲಭ್ಯವಿರುವ MTK Engineering App ನ್ನು ಡೌನ್’ಲೋಡ್ ಮಾಡಿಕೊಳ್ಳಿ.
  2. ಬಳಿಕ ಇದನ್ನು ಓಪನ್ ಮಾಡಿ ನಿಮ್ಮ ಮೊಬೈಲ್’ನ ಕೋಡ್ ನಮೂದಿಸಿ.
  3. ಬಳಿಕ MTK ಸೆಟ್ಟಿಂಗ್ಸ್ ಓಪನ್ ಮಾಡಿ, Preffered Network select ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  4. ನೆಟ್ವರ್ಕ್ ಮೋಡ್ LTE , WCDMA ಇಲ್ಲವೇ GSM ಮೋಡ್ ಆಯ್ಕೆ ಮಾಡಿ ಸೆಟ್ಟಿಂಗ್’ನ್ನು ಸೇವ್ ಮಾಡಿ.
  5. ಇದಾದ ಬಳಿಕ ಕೊನೆಯದಾಗಿ ನಿಮ್ಮ ಮೊಬೈಲ್’ನ್ನು ರೀಸ್ಟಾರ್ಟ್ ಮಾಡಿಕೊಳ್ಳಿ. ಇದನ್ನು ಅನುಸರಿಸುವುದರಿಂದ ನೀವು 4ಜಿ ಸಿಮ್ ಬಳಸಬಹುದಾಗಿದೆ

ಎರಡನೇ ವಿಧಾನ: Xorware 2G/3g/4g App :-

  1. ಮೊದಲ ಹಂತವಾಗಿ ನೀವು ಇಲ್ಲಿ ನೀಡಿದ ಆಯಪ್ ಲಿಂಕ್ ಕ್ಲಿಕ್ ಮಾಡಿ ಡೌನ್’ಲೋಡ್ ಮಾಡಿಕೊಳ್ಳಿ. ಮೊದಲ ಲಿಂಕ್ ಡೌನ್’ಲೋಡ್ ಮಾಡಲು ಸಾಧ್ಯವಿಲ್ಲವೆಂದಾದಲ್ಲಿ ಎರಡನೇ ಲಿಂಕ್ ಮಾಡಲು ಪ್ರಯತ್ನಿಸಿ.//play.google.com/store/apps/details?id=com.xorware.network.s2g3g.xposed.switcher&pageId=111263776649969870001
  2. //play.google.com/store/apps/details?id=com.xorware.network.s2g3g.settings&pageId=111263776649969870001
  3. ಈ ಮೇಲಿನ ಯಾವುದಾದರೂ ಲಿಂಕ್’ನ್ನು ಇನ್ಸ್ಟಾಲ್ ಮಾಡಿಕೊಳ್ಳಿ. ಬಳಿಕ Network Mode Selection ಲ್ಲಿ 4ಜಿ ಆಯ್ಕೆ ಸೆಲೆಕ್ಟ್ ಮಾಡಿಕೊಳ್ಳಿ.
  4. ಈ ಸೆಟ್ಟಿಂಗ್ಸ್’ನ್ನು ಸೇವ್ ಮಾಡಿಕೊಂಡ ಬಳಿಕ ಮೊಬೈಲ್’ನ್ನು ರೀಬೂಟ್ ಮಾಡಿ 10 ನಿಮಿಷ ಕಾಯಿರಿ.
  5. ಬಳಿಕ ನಿಮ್ಮ ಫೋನ್’ಗೆ ಜಿಯೋ ಸಿಮ್ ಅಳವಡಿಸಿ 10-20 ನಿಮಿಷ ಕಾಯಿರಿ. ಬಳಿಕ ನಿಮ್ಮ ಫೋನ್’ನಿಂದ ಜಿಯೋ ಬಳಸಬಹುದಾಗಿದೆ. ಈ ಕ್ರಮಗಳನ್ನು ಅನುಸರಿಸುವ ಮೂಲಕ ನಿಮ್ಮ 3ಜಿ ಫೋನ್’ನಲ್ಲಿ ಕೇವಲ ಜಿಯೋ ಡೇಟಾವನ್ನಷ್ಟೇ ಆಯಕ್ಟಿವೇಟ್ ಮಾಡಿಕೊಳ್ಳಬಹುದು. ಕರೆಯನ್ನಲ್ಲ. ಉಚಿತ ಕರೆಯ ಸೇವೆಯನ್ನು ಪಡೆದುಕೊಳ್ಳಲು Jio 4G Voice Appಡೌನ್’ಲೋಡ್ ಮಾಡಿಕೊಂಡು ಪ್ರಯತ್ನಿಸಬಹುದು

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ದೇಶ-ವಿದೇಶ

    ಇದು ಜಗತ್ತಿನ ಅತ್ಯಂತ ಸೋಮಾರಿ ರಾಷ್ಟ್ರ..! ಆ ರಾಷ್ಟ್ರ ಯಾವುದು ಗೊತ್ತಾ?

    ನಾವು ಮನೆಗಳಲ್ಲಿ ಕೆಲಸ ಮಾಡದ, ಉದ್ಯೋಗ ಮಾಡದೆ ತಿಂದು ಕೆಲಸವಿಲ್ಲದೇ ತಿರುಗುವವರನ್ನು, ಸೋಮಾರಿ ಎಂದು ಮನೆಗಳಲ್ಲಿ ಹಾಸ್ಯ ಮಾಡುವುದುಂಟು. ಹೀಗೆ ಸೋಮಾರಿತನದಿಂದ ಇರುವವರು ಎಲ್ಲಾ ಕಡೆ ಸಿಗುತ್ತಾರೆ. ಅದಕ್ಕಾಗಿಯೇ ವಿಶ್ವವಿದ್ಯಾನಿಲಯವೊಂದು ವಿಶ್ವದ ಸೋಮಾರಿಗಳ ಬಗ್ಗೆ ಅಧ್ಯಯನ ನಡೆಸಿದ್ದು ಅದರ ವಿವರಣೆಯನ್ನು ಕೊಟ್ಟಿದೆ.

  • ಆರೋಗ್ಯ

    ಈ ಉಂಡೆ ಮಾಡ್ಕೊಂಡು ತಿಂದರೆ ಕೆಮ್ಮು ಕಫ ಸಮಸ್ಯೆ ಮಾಯ.

    ಈ ಉಂಡೆಗಳನ್ನು ತಿನ್ನುವುದರಿಂದ ಕೆಮ್ಮು ಕಫ ಶೀತದಂತಹ ಹಲವಾರು ಕಾಯಿಲೆಗಳು ದೂರವಾಗುತ್ತವೆ. ಸಣ್ಣ ಪುಟ್ಟ ಕಾಯಿಲೆಗಳಿಗೆ ಆಸ್ಪತ್ರೆಗೆ ಹೋಗುವ ಬದಲು ಈ ಉಂಡೆ ಮೂಲಕ ನಿವಾರಿಸಬಹುದು ಸಿಹಿಯಾದ ಉಂಡೆ ಮಾಡಿಕೊಡುವ ಮೂಲಕ ನೀವು ನಿಮ್ಮ ಮಕ್ಕಳಲ್ಲಿ ಇರುವ ಅನಾರೋಗ್ಯವನ್ನು ನಿಯಂತ್ರಿಸಬಹುದು . ಒಣ ಪಧಾರ್ಥಗಳ ಅಥವಾ ಒಣ ಹಣ್ಣುಗಳ ಲಡ್ಡು ಇದನ್ನು ಮಾಡಲು ಈಗ ಎಂಟು ಒಣ ಖರ್ಜುರ ಅಥವಾ ಉತ್ತತ್ತಿ ನಂತರ 10 ರಿಂದ 12 ಒಣದ್ರಾಕ್ಷಿ ಇದರ ಜೊತೆಗೆ ಎಂಟು ಬಾದಾಮಿ ತೆಗೆದುಕೊಂಡಿದ್ದೇವೆ ಮೊದಲು…

  • ಕರ್ನಾಟಕ

    ರಾಷ್ಟ್ರಕವಿ ಕುವೆಂಪುರವರಿಗೆ ಗೂಗಲ್‌ ಡೂಡಲ್‌ ಗೌರವ…ಗೂಗಲ್‌ ಮುಖಪುಟದಲ್ಲಿ ರಾರಾಜಿಸುತ್ತಿರುವ ಕನ್ನಡದ ಕಂಪು…

    ಇಂದು ಡಿಸೆಂಬರ್‌ 29 ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರ 113 ನೇ ಜನ್ಮದಿನ. ವಿಶೇಷ ಸಂದರ್ಭದಲ್ಲಿ ವಿಶ್ವಮಾನವ ಸಂದೇಶ ಸಾರಿದ ಮಹಾನ್‌ ಕವಿಗೆ ಗೂಗಲ್‌ ವಿಶೇಷ ಡೂಡಲ್‌ ಮೂಲಕ ಗೌರವ ಸಲ್ಲಿಸಿದೆ.

  • ಸುದ್ದಿ

    ಸರ್ಕಾರಿ ನೌಕರರಿಗೊಂದು ಬಂಪರ್ ಆಪರ್ ,5 ದಿನ ಮೊದಲೇ ಸಿಗಲಿದೆ ಸಂಬಳ….!

    ನೌಕರರು, ಉದ್ಯೋಗಿಗಳ ವಲಯಕ್ಕೆ ಶುಭ ಸುದ್ದಿ ಇಲ್ಲಿದೆ. ಸೆಪ್ಟಂಬರ್ 26, 27 ರಂದು ಬ್ಯಾಂಕ್  ಮುಷ್ಕರವಿದ್ದು, ಸತತವಾಗಿ 5 ದಿನ ರಜೆ ಇರುವುದರಿಂದ 5 ದಿನ ಮೊದಲೇ ವೇತನ ನೀಡಲು ಹಣಕಾಸು ಸಚಿವಾಲಯ ಸುತ್ತೋಲೆ ಹೊರಡಿಸಿದೆ. ಸೆಪ್ಟೆಂಬರ್ 26, 27 ರಂದು ಬ್ಯಾಂಕ್ ವಿಲೀನ ವಿರೋಧಿಸಿ ಮುಷ್ಕರ ನಡೆಯಲಿದೆ. 28 ರಂದು 4ನೇ ಶನಿವಾರ ಬ್ಯಾಂಕುಗಳಿಗೆ ರಜೆ ಇರುತ್ತದೆ. 29 ರಂದು ಭಾನುವಾರ ಕೂಡ ರಜೆ ಇರುತ್ತದೆ. ಸೆಪ್ಟೆಂಬರ್ 30 ರಂದು ಬ್ಯಾಂಕುಗಳ ಅರ್ಧ ವಾರ್ಷಿಕ ವಹಿವಾಟು…

  • Health

    ರೋಗಗಳನ್ನು ನಿವಾರಿಸುವ ಜೊತೆಗೆ, ದೇಹಕ್ಕೆ ತಂಪು ನೀಡುವ ಕರಬೂಜ ಹಣ್ಣಿನ ಉಪಯೋಗ ತಿಳಿಯಿರಿ .

    ಕರಬೂಜ ಹಣ್ಣು ಸಾಮಾನ್ಯವಾಗಿ ಎಲ್ಲರಿಗೂ ಕೂಡ ಚಿರಪರಿಚಿತವಾಗಿರುವಂತ ಹಣ್ಣಾಗಿದೆ, ನೋಡಲು ಹೊರಮುಖವಾಗಿ ಒರಟಾಗಿದ್ದರು ಕೂಡ ಈ ಹಣ್ಣು ಮನುಷ್ಯನ ದೇಹಕ್ಕೆ ಉತ್ತಮ ಆರೋಗ್ಯವನ್ನು ವೃದ್ಧಿಸುವಂತ ಗುಣಗಳನ್ನು ಹೇರಳವಾಗಿ ಹೊಂದಿದೆ. ಬೇಸಿಗೆಯಲ್ಲಿ ಕರಬೂಜ ಹಣ್ಣಿನ ಸೇವನೆ ಅತಿಹೆಚ್ಚಿನದಾಗಿ ಮಾಡಲಾಗುತ್ತದೆ, ಈ ಹಣ್ಣಿನ ಸೇವನೆ ಅಷ್ಟೇ ಅಲ್ದೆ ಇದರ ಪಾನಕ ಜ್ಯುಸ್ ಇವುಗಳನ್ನು ಮಾಡಿ ಕೂಡ ಸೇವನೆ ಮಾಡಲಾಗುತ್ತದೆ. ದೇಹಕ್ಕೆ ಉತ್ತಮ ಆರೋಗ್ಯವನ್ನು ಒದಗಿಸುವಂತ ಹಣ್ಣುಗಳಲ್ಲಿ ಈ ಕರಬೂಜ ಹಣ್ಣು ಕೂಡ ಒಂದಾಗಿದೆ. ಈ ಹಣ್ಣಿನಲ್ಲಿರುವಂತ ಪೋಷಕಾಂಶಗಳು ಹಾಗೂ ಐರನ್…