ಆರೋಗ್ಯ, ಜೀವನಶೈಲಿ

ಫುಡ್ ಪಾಯಿಸನ್’ಗೆ ಇಲ್ಲಿದೆ ಸುಲಭ ಪರಿಹಾರ..!ತಿಳಿಯಲು ಈ ಲೇಖನ ಓದಿ…

541

ತಿಂದ ಆಹಾರ ಸರಿಯಾಗ ಜೀರ್ಣವಾಗದೇ ವಿಷಮಯವಾಗುವುದನ್ನು ಫುಡ್ ಪಾಯಿಸನ್ ಎಂದು  ಕರೆಯಲಾಗುತ್ತದೆ.  ರಾಸಾಯನಿಕಗಳು, ಬ್ಯಾಕ್ಟೀರಿಯಾಗಳು, ಕೀಟಾಣುಗಳು ಸೇರಿಕೊಂಡಿರುವ ಆಹಾರವನ್ನು ತಿಂದ್ರೆ ಅದು ಜೀರ್ಣವಾಗದೇ ಫುಡ್ ಪಾಯಿಸನ್ ಉಂಟಾಗುತ್ತದೆ.

 

ಫುಡ್ ಪಾಯಿಸನ್ ಉಂಟು ಮಾಡುವ ತೊಂದರೆಗಳು:-

ವಾಂತಿ, ಭೇದಿ, ಹೊಟ್ಟೆ ನೋವು ಉಂಟಾಗಿ, ದೇಹದಲ್ಲಿ ನೀರಿನ ಅಂಶ ಕಡಿಮೆ ಆಗುತ್ತದೆ.

ಕಾರಣಗಳು:-

  • ನಮ್ಮ ಜೀವನ ಶೈಲಿಯೇ, ನಮ್ಮ ಈ ಅನಾರೋಗ್ಯಕ್ಕೆ ಪ್ರಮುಖ ಕಾರಣವಾಗಿದೆ.
  • ಅನಿಯಮಿತವಾಗಿ ಆಹಾರ ಸೇವಿಸುವುದು.
  • ರಸ್ತೆ ಬದಿಯ ತಿಂಡಿಗಳನ್ನು ತಿನ್ನುವುದು.
  • ಕುರುಕಲು ಪದಾರ್ಥಗಳನ್ನು ಮಿತಿಮೀರಿ ಸೇವಿಸುವುದು.

ಫುಡ್ ಪಾಯಿಸನ್ ಆಗದಂತೆ ತಡೆಯಲು ಈ ಕೆಳಗಿನ ಸಲಹೆಗಳನ್ನು ಪಾಲಿಸಿ…

  • ಅಡುಗೆ ಮಾಡುವ ಮುನ್ನ ಕೈಗಳನ್ನು ಚೆನ್ನಾಗಿ ತೊಳೆಯಿರಿ.
  • ಮಾಂಸದ ಅಡುಗೆಯನ್ನು ಮಾಡುವಾಗ ಶುಚಿತ್ವದ ಕಡೆ ಗಮನ ಕೊಡಿ.
  • ಅಡುಗೆ ಮನೆಯನ್ನು ಕ್ಲೀನಾಗಿ ಇಟ್ಟುಕೊಳ್ಳಿ. ಅಡುಗೆ ಮನೆಯಲ್ಲಿ ಕಿಟಾಣುಗಳು ಇರದಂತೆ ನೋಡಿಕೊಳ್ಳಿ.
  • ತರಕಾರಿ ಮತ್ತು ಹಣ್ಣುಗಳನ್ನು ಚೆನ್ನಾಗಿ ತೊಳೆದು ತಿನ್ನಿ.
  • ಅಡುಗೆಗೆ ಬಳಸುವ ತರಕಾರಿಗಳನ್ನು ಚೆನ್ನಾಗಿ ಬೇಯಿಸಿ ತಿನ್ನಿರಿ.
  • ಭೇದಿ, ಹೊಟ್ಟೆ ನೋವಿನ ಸಮಸ್ಯೆ ಉಂಟಾದರೆ ಆಹಾರವನ್ನು ತಿನ್ನುವಾಗ ಸ್ಪೂನನ್ನು ಬಳಸಿ .
  • ಶೌಚಾಲಯಕ್ಕೆ ಹೋಗಿ ಬಂದ ನಂತರ ಕೈಗಳನ್ನು ಸೋಪು ಹಾಕಿ ತೊಳೆಯಿರಿ.
  •  ಆಹಾರವನ್ನು ಸಂಗ್ರಹಿಸಿಡುವ ಸ್ಥಳವನ್ನು ಶುಚಿಯಾಗಿಟ್ಟುಕೊಳ್ಳಿ.
  • ಅಡುಗೆ ಉಳಿದಿದ್ದರೆ ಕೂಡಲೇ ಅದನ್ನು ಫ್ರಿಜ್‌ನಲ್ಲಿಡಿ, ಇಲ್ಲದಿದ್ದರೆ ಚೆನ್ನಾಗಿ ಬಿಸಿ ಮಾಡಿ.
  •  ಕಾಲಾವಧಿ ಮುಗಿದಿರುವ ಆಹಾರ ಪದಾರ್ಥಗಳ ಪ್ಯಾಕೆಟ್‌ಗಳನ್ನು ಬಳಸಬೇಡಿ.
  • ಹಳಸಿದ ಆಹಾರವನ್ನು ತಿನ್ನಲೇಬೇಡಿ.

ಫುಡ್ ಪಾಯಿಸನ್’ಗೆ ಪರಿಹಾರಗಳು:-

  • ಅತಿ ಹೆಚ್ಚು ನೀರನ್ನು ಸೇವಿಸಿ.
  • ಕೊಬ್ಬಿನಂಶ ಇರುವ ಆಹಾರ ಪದಾರ್ಥಗಳನ್ನು ಸೇವಿಸಬೇಡಿ.
  • ಒಂದು ಲೋಟ ನೀರಿಗೆ ಒಂದು ಚಮಚ ಸಕ್ಕರೆ, ಸ್ವಲ್ಪ ಉಪ್ಪನ್ನು ಹಾಕಿ ಕುಡಿಯಿರಿ.
  • ಘನ ಆಹಾರವನ್ನು ಸೇವಿಸಬೇಡಿ.
  • ಆದಷ್ಟೂ ಗಂಜಿ ಮತ್ತು ಹಣ್ಣಿನ ರಸವನ್ನು ಸೇವಿಸಿ.ಇದರಿಂದ ನಿಮ್ಮ ದೇಹದಲ್ಲಿ ನೀರಿನಾಂಶ  ಜಾಸ್ತಿಯಾಗುತ್ತದೆ.
  • ಬ್ಲಾಕ್ ಟೀ ಕುಡಿಯಿರಿ.
  • ಒಂದು ಚಮಚ ಮೆಂತೆ ಪುಡಿಯನ್ನು ಒಂದು ಲೋಟ ನೀರು ಅಥವಾ ಮೊಸರಲ್ಲಿ ಮಿಕ್ಸ್ ಮಾಡಿ ಕುಡಿಯಿರಿ.
  • ದಾಳಿಂಬೆ ಸಿಪ್ಪೆಯ ಕಷಾಯ ಕುಡಿಯಿರಿ.
  • ದೇಹಕ್ಕೆ ನಿಶ್ಯಕ್ತಿ ಬರದಂತೆ ನೋಡಿಕೊಳ್ಳಿ. ಬೇಗನೆ ಕಡಿಮೆಯಾಗದಿದ್ದರೆ, ಡಾಕ್ಟರ್ ಅನ್ನು ಕಾಣವುದೇ ಉತ್ತಮ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • Law

    ಡೇರಾ ಸಚ್ಛಾ ಸೌಧ ಮುಖ್ಯಸ್ಥ ಬಾಬಾ ರಾಮ್ ರಹೀಂಗೆ 10 ವರ್ಷ ಜೈಲು ಶಿಕ್ಷೆ..!

    ಅತ್ಯಾಚಾರ ಪ್ರಕರಣದಲ್ಲಿ ದೋಷಿಯಾಗಿರುವ ರೇಪಿಸ್ಟ್, ಡೇರಾ ಸಚ್ಛಾ ಸೌಧ ಮುಖ್ಯಸ್ಥ ಬಾಬಾ ರಾಮ್ ರಹೀಂಗೆ ಸಿಬಿಐ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆಯಾಗಿದೆ.

  • ಜೀವನಶೈಲಿ

    ನಿಮ್ಮ ದೇಹದ ಶಾಖವನ್ನು ಕಡಿಮೆ ಮಾಡಲು ಈ ಆಹಾರ ಕ್ರಮಗಳನ್ನು ಅನುಸರಿಸಿ…ತಿಳಿಯಲು ಈ ಲೇಖನ ಓದಿ…

    ದೇಹದಲ್ಲಿ ಬಿಸಿಯಾಗಲು ಮತ್ತು ಶರೀರ ತಾಪಮಾನ ಏರಿಕೆಗೆ ಹಲವು ಕಾರಣಗಳಿವೆ. ನಿಮ್ಮ ಸುತ್ತಲಿನ ಪರಿಸರದ ಕಾರಣದಿಂದಾಗಿ ನಿಮ್ಮ ದೇಹದಲ್ಲಿನ ಶಾಖಕ್ಕೆ ಕಾರಣ.

  • ಸಿನಿಮಾ

    ಯಾರಿದು ಧ್ರುವ ಸರ್ಜಾ ಮದುವೆಯಾಗುತ್ತಿರುವ ಪ್ರೇರಣಾ!ಯಾವ ಲವ್ ಸ್ಟೋರಿಗೂ ಕಡಿಮೆ ಇಲ್ಲ ಇವರ 16ವರ್ಷದ ಪ್ರೇಮ್ ಕಹಾನಿ..

    ಡಲ್ ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ತಮ್ಮ ಬಹುದಿನದ ಗೆಳತಿ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಇದೇ ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಅವರು ತಮ್ಮ ಬಹುಕಾಲದ ಗೆಳತಿ ಪ್ರೇರಣಾ ಶಂಕರ್ ಜೊತೆ ಮದುವೆಯಾಗಲು ಸಿದ್ಧರಾಗಿದ್ದಾರೆ. ಧ್ರುವ ಸರ್ಜಾ ಹಾಗೂ ಪ್ರೇರಣಾ ಅವರು ಅಕ್ಕಪಕ್ಕದ ಮನೆಯವರಾಗಿದ್ದಾರೆ. ಬನಶಂಕರಿಯ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಿಶ್ಚಿತಾರ್ಥ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಧ್ರುವ ಹುಟ್ಟುಹಬ್ಬದ…

  • ಸ್ಪೂರ್ತಿ

    ತನ್ನ ತಂದೆಯ ಜೀವ ಉಳಿಸಲು ತನ್ನ ಲೀವರ್ ಅನ್ನೇ ದಾನ ಮಾಡಿದ 19ವರ್ಷದ ಮಗಳು..!

    19 ವರ್ಷದ ಚಿಕ್ಕ ವಯಸ್ಸಿನ ಮಗಳೊಬ್ಬಳು ತಂದೆಯ ಜೀವ ಉಳಿಸಲು ತನ್ನ ಲಿವರ್ ದಾನ ಮಾಡಿ ಆದರ್ಶ ಮಗಳೆನಿಸಿಕೊಂಡಿದ್ದಾಳೆ. ರಾಖಿ ದತ್ತ ತಂದೆಗಾಗಿ ತನ್ನ ಲಿವರ್ ದಾನ ಮಾಡಿದ್ದಾಳೆ. ದೇಹದ ಮೇಲೆ ಲಿವರ್ ಶಸ್ತ್ರಚಿಕಿತ್ಸೆಯ ಕಲೆ ಹಾಗೆ ಉಳಿದುಕೊಳ್ಳುತ್ತದೆ, ತನ್ನ ಮುಂದಿನ ಜೀವನದಲ್ಲಿ ಇದರಿಂದ ತೊಂದರೆಯಾತ್ತದೆ ಎನ್ನುವುದನ್ನೂ ಲೆಕ್ಕಿಸದೇ ಈ ಯುವತಿ ತನ್ನ ತಂದೆಯ ಜೀವ ಉಳಿಸಲು ತನ್ನ 65% ಲಿವರ್‍ನನ್ನು ದಾನ ಮಾಡಿ, ತಂದೆಗೆ ಪುನರ್ಜನ್ಮ ನೀಡಿದ್ದಾಳೆ. ಈ ಬಗ್ಗೆ ವಾಣಿಜ್ಯೋದ್ಯಮಿ ಹರ್ಷ ಗೋಯೆಂಕಾ ಅವರು…

  • ಸುದ್ದಿ

    ಮಹಾಮಳೆಯ ಆರ್ಭಟಕ್ಕೆ ಉತ್ತರ ತತ್ತರ ..!

    ಅನೇಕ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನರು ಜೀವನ ಅಸ್ತವ್ಯಸ್ತವಾಗಿದೆ. ಇನ್ನೊಂದೆಡೆ ಪ್ರಳಯ ಮಳೆ, ಡ್ಯಾಂಗಳಿಂದ ಮುನ್ನುಗ್ಗಿ ಬರುತ್ತಿರುವ ಜಲರಾಶಿಯ ನಡುವೆ ತೇವಾಂಶದಿಂದ ಮಣ್ಣು ಸಡಿಲುಗೊಂಡು ಬಹುತೇಕ ಕಡೆಗಳಲ್ಲಿ ಭೂಕುಸಿತವಾಗುತ್ತಿದೆ. ಅತಿಯಾದ ಮಳೆಯಿಂದಾಗಿ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಫೋಷಣೆ ಮಾಡಲಾಗಿದೆ. ಮನೆ, ಕಟ್ಟಡಗಳು ನೋಡನೋಡುತ್ತಿದ್ದಂತೆ ನೆಲಕ್ಕುರುಳುತ್ತಿವೆ. ರಸ್ತೆಗಳು ಬಿರುಕು ಬಿಡುತ್ತಿದ್ದು, ಗುಡ್ಡಗಳು ಹೊರಳಿ ಬೀಳುತ್ತಿವೆ. ಕಣ್ಣ ಮುಂದೆಯೇ ಎಲ್ಲವನ್ನೂ ಕಳೆದುಕೊಂಡು ಸಂತ್ರಸ್ತರಾಗಿರುವವರ ಕಣ್ಣೀರು, ಗೋಳಾಟ ಕೇಳಿದರೆ ಹೊಟ್ಟೆ ಉರಿಯುತ್ತದೆ. ಪ್ರವಾಹದ ಎದುರು ಈಜಲಾಗದು,…

  • ಮನರಂಜನೆ

    ಮಾತಿನ ಮಧ್ಯೆ ತಮ್ಮ ಒಳ ಸಂಚನ್ನು ಹೇಳಿ ಬಿಗ್ ಬಾಸಿಗೆ ಸಿಕ್ಕಿಬಿದ್ದ ಭೂಮಿ ಶೆಟ್ಟಿ..! ಅಷ್ಟಕ್ಕೂ ಅವರು ಹೇಳಿದ್ದೇನು ಗೊತ್ತಾ?ತಿಳಿದರೆ ಶಾಕ್ ಆಗ್ತೀರಾ…

    ಬಿಗ್ ಬಾಸಿಗೆ ಮೋಸ ಮಾಡಲು ಹೋಗಿ ಭೂಮಿ ಶೆಟ್ಟಿ ಅವರು ಸಿಕ್ಕಿಬಿದ್ದಿದ್ದಾರೆ.. ಹೌದು ಈ ವಾರ ಲಕ್ಸುರಿ ಬಡ್ಜೆಟ್ ಗಾಗಿ ಕಳ್ಳ ಪೊಲೀಸ್ ಟಾಸ್ಕ್ ಒಂದನ್ನು ನೀಡಲಾಗಿತ್ತು.. ಅದರಂತೆ ಶೈನ್ ರಾಜು ತಾಳಿಕೋಟೆ ಚಂದನ್ ಪ್ರಿಯಾಂಕ ಪೊಲೀಸರಾದರೆ ಇತ್ತ ವಾಸುಕಿ ದೀಪಿಕಾ ಕುರಿ ಕಳ್ಳರಾಗಿದ್ದರು‌. ಸುಜಾತ ಪತ್ರಕರ್ತೆಯಾಗಿ ಕಾಣಿಸಿಕೊಂಡರು.. ಇನ್ನುಳಿದಂತೆ ಭೂಮಿ ಪೃಥ್ವಿ ಕಿಶನ್ ಚಂದನ ಹರೀಶ್ ರಾಜ್ ಜನ ಸಾಮಾನ್ಯರಾಗಿದ್ದರು. ಆದರೆ ಜನಸಾಮಾನ್ಯರ ನಡುವೆ ಇದ್ದ ಕಳ್ಳರು ಯಾರೆಂದು ಉಳಿದವರಿಗೆ ತಿಳಿದಿರಲಿಲ್ಲ. ಕಿತ್ತಾಟ ಕಿರುಚಾಟ ಹಾಗೂ…