ಕ್ರೀಡೆ

4 ಬಾಲ್‍ಗಳಿಗೆ ಬರೋಬ್ಬರಿ 92 ರನ್ ನೀಡಿದ್ದ ಬೌಲರ್‍ಗೆ 10 ವರ್ಷ ನಿಷೇಧ..!ಇದು ಹೇಗಾಯ್ತು ಗೊತ್ತಾ..?

3073

4 ಬಾಲ್‍ಗಳಿಗೆ 92 ರನ್‍ಗಳನ್ನು ನೀಡಿದ ಬೌಲರ್ ಸುಜೊನ್ ಮಹಮ್ಮದ್ ಅವರ ಮೇಲೆ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ 10 ವರ್ಷಗಳ ಕಾಲ ನಿಷೇಧ ಹೇರಿ ಆದೇಶ ಹೊರಡಿಸಿದೆ.

ಅಂದು ನಡೆದ ಮ್ಯಾಚ್‍ನ ಕ್ಯಾಪ್ಟನ್, ತಂಡದ ನಾಯಕ ಮತ್ತು ಮ್ಯಾನೇಜರ್ ಅವರನ್ನು 5 ವರ್ಷಗಳ ಕಾಲ ಢಾಕಾ ಡಿವಿಜನ್ ಲೀಗ್ ನಿಂದ ನಿಷೇಧಿಸಲಾಗಿದೆ.

                            ಮೂಲ

ಅಂದು ನಡೆದಿದ್ದೇನು?

ಢಾಕಾ ಸೆಕೆಂಡ್ ಡಿವಿಶನ್ ಲೀಗ್ ನಲ್ಲಿ ನಡೆದ 50 ಓವರ್ ಗಳ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಾಲ್ಮಾಟಿಯಾ ಕ್ಲಬ್ 14 ಓವರ್ ಗಳಲ್ಲಿ ಕೇವಲ 88 ರನ್ ಗಳಿಸಿ ಆಲೌಟಾಯ್ತು. 89 ರನ್ ಗಳ ಗೆಲುವಿನ ಗುರಿ ಪಡೆದ ಎದುರಾಳಿ ತಂಡ ಅಕ್ಸಿಯೋಮ್ ಕ್ರಿಕೆಟರ್ಸ್ ಕೇವಲ 4 ಬಾಲ್ ಗಳಲ್ಲಿ 92 ರನ್ ಬಾರಿಸಿತ್ತು. ಲಾಲ್ಮಾಟಿಯಾ ತಂಡದ ಬೌಲರ್ ಸುಜೊನ್ ಮಹಮ್ಮದ್ 13 ವೈಡ್ ಮತ್ತು 3 ನೋಬಾಲ್ ಎಸೆಯುವ ಮೂಲಕ ವಿರೋಧಿ ತಂಡದ ಗೆಲುವಿಗೆ ಕಾರಣರಾಗಿದ್ದರು.

ಮೊದಲ ಓವರ್ ನಲ್ಲಿ ಬೌಲರ್ ಎಸೆದ 13 ವೈಡ್ ಗಳನ್ನು ಕೀಪರ್ ಹಿಡಿಯುವ ಪ್ರಯತ್ನವನ್ನೇ ಮಾಡದೇ ಅವೆಲ್ಲವೂ ಬೌಂಡರಿ ಗೆರೆ ದಾಟಿತ್ತು. ಪರಿಣಾಮ ವೈಡ್ ಗಳಿಂದ 65 ರನ್‍ಗಳು ಹರಿದು ಬಂದರೆ, ಅದೇ ಓವರ್ ನಲ್ಲಿ ಬಂದ 3 ನೋಬಾಲ್ ಕೂಡ ಬೌಂಡರಿ ಗೆರೆ ದಾಟಿತ್ತು. ಇದರಿಂದಲೂ 15 ರನ್ ಗಳು ಖಾತೆಗೆ ಸೇರಿತ್ತು. ಈ ರನ್ ಗಳ ತಂಡ ಆರಂಭಿಕ ಬ್ಯಾಟ್ಸ್‍ಮನ್ ಮೂರು ಎಸೆತಗಳಲ್ಲಿ ಸತತ ಮೂರು ಬೌಂಡರಿ ಹೊಡೆದ್ದರು. ಇದರಿಂದ ತಂಡಕ್ಕೆ 12 ರನ್ ಬಂದಿತ್ತು. ಅಂತಿಮವಾಗಿ ಆಕ್ಸಿಯಮ್ ಕ್ರಿಕೆಟರ್ಸ್ ತಂಡ ಕೇವಲ 4 ಎಸೆತಗಳಲ್ಲಿ 92 ಪೇರಿಸಿ 10 ವಿಕೆಟ್ ಗಳಿಂದ ಭರ್ಜರಿ ಜಯ ಸಾಧಿಸಿತ್ತು.

ಲಾಲ್ಮಾಟಿಯಾ ತಂಡದ ಆರೋಪ ಏನು?

ಎಂಥ ಬೌಲರ್’ನೇ ಆದರೂ ಇಷ್ಟೊಂದು ಪ್ರಮಾಣದಲ್ಲಿ ವೈಡ್ ಮತ್ತು ನೋಬಾಲ್’ಗಳನ್ನು ಎಸೆಯಲು ಸಾಧ್ಯವಿಲ್ಲ. ಆಕ್ಸಿಯಾಮ್ ಮತ್ತು ಲಾಲ್ಮಾಟಿಯಾ ನಡುವಿನ ಈ ಪಂದ್ಯ ಹಲವು ವಿವಾದಗಳಿಂದ ಕೂಡಿತ್ತು. ಪಂದ್ಯ ಅಂಪೈರ್’ಗಳು ಆರಂಭದಿಂದಲೂ ಪಕ್ಷಪಾತಿ ಧೋರಣೆ ಹೊಂದಿದ್ದರು ಎಂಬುದು ಲಾಲ್ಮಾಟಿಯಾ ತಂಡದ ಆರೋಪಿಸಿತ್ತು.

ಟಾಸ್ ವೇಳೆ ತಮ್ಮ ತಂಡದ ಕ್ಯಾಪ್ಟನ್’ಗೆ ಕಾಯಿನ್ ನೋಡಲೂ ಅವಕಾಶ ಕೊಡದೇ ಮೊದಲು ಬ್ಯಾಟಿಂಗ್ ಕಳುಹಿಸಲಾಯಿತು. 14 ಓವರ್’ಗಳ ಇನ್ನಿಂಗ್ಸಲ್ಲಿ ಅಂಪೈರ್’ಗಳು ತಮ್ಮ ತಂಡದ ವಿರುದ್ಧ ಅನೇಕ ತೀರ್ಪುಗಳನ್ನು ಕೊಟ್ಟು ಎಂದು ಲಾಲ್ಮಾಟಿಯಾ ಆಟಗಾರರ ಆರೋಪ ಮಾಡಿದ್ದರು.

ಇಡೀ ಸರಣಿಯಲ್ಲಿ ಲಾಲ್ಮಾಟಿಯಾ ತಂಡದ ವಿರುದ್ಧ ಅಂಪೈರ್ ಗಳು ತಪ್ಪು ನಿರ್ಣಯ ನೀಡಿದ್ದಾರೆ ಎಂದು ಆರೋಪಗಳು ಎಲ್ಲಡೆಯಿಂದ ಕೇಳಿ ಬಂದಿದ್ದವು. ಈ ಬಗ್ಗೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ತನಿಖೆಗೆ ಮುಂದಾಗಿತ್ತು.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಕಾಡಿನ ನಾಶವಾಗುತ್ತಿರುವ ಹಿನ್ನೆಲೆ ಬಗ್ಗೆ ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಹೇಳಿದ್ದೇನು..?

    ನೀರಿನ  ಸಂರಕ್ಷಣೆಗಾಗಿ ನ್ಯೂಸ್ ​18 ಹಮ್ಮಿಕೊಂಡಿರುವ  #Mission Paani ಆಂದೋಲನ  ಸಾಕಷ್ಟು ಪರಿಣಾಮಕಾರಿಯಾಗಿದೆ. ಇಶಾ ಫೌಂಡೇಶನ್​ ಸಂಸ್ಥಾಪಕ ಸದ್ಗುರು ನೀರಿನ ಸಂರಕ್ಷಣೆ ಕುರಿತು ನ್ಯೂಸ್​ 18 ನಡೆಸಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ನೀರನ್ನು ಸಂರಕ್ಷಿಸುವುದು ಹೇಗೆ? ಬರಗಾಲದಿಂದ ತತ್ತರಿಸಿ ಹೋಗಿರುವ ಭೂಮಿಯನ್ನು ಉಳಿಸಿಕೊಳ್ಳುವುದರ ಬಗ್ಗೆ ಮಾಹಿತಿ ನೀಡಿದ್ದಾರೆ. ಕಾಡಿನ ನಾಶವಾಗುತ್ತಿರುವ ಹಿನ್ನೆಲೆ, ಮಳೆ ನೀರು ನದಿಗಳಿಗೆ ಬೇಗನೇ ಹರಿದು ಪ್ರವಾಹಕ್ಕೆ ಕಾರಣವಾಗುತ್ತಿದೆ ಎಂದೂ ಸಹ ತಿಳಿಸಿದರು. ತಮಿಳುನಾಡಿನಲ್ಲಿ ಈ ವರ್ಷ ಬರಗಾಲ ಸೃಷ್ಟಿಯಾಗಿದ್ದು, ಎಲ್ಲೆಡೆ ನೀರಿಗೆ ಹಾಹಾಕಾರ ಶುರುವಾಗಿದೆ….

  • ಸುದ್ದಿ

    ತನ್ನ ಬಾಡಿಗಾರ್ಡ್ ಆಗಿದ್ದವಳನ್ನೇ ಮದ್ವೆ ಆಗಿ ರಾಣಿಯನ್ನಾಗಿ ಮಾಡಿದ ರಾಜ.!?

    ಥೈಲ್ಯಾಂಡ್ ಮಹಾರಾಜ ವಜಿರಲೊಂಗ್ ಕಾರ್ನ್ ತಮ್ಮ ಅಂಗರಕ್ಷಕಿ ಯನ್ನೇ ಮದುವೆಯಾಗಿ ಅಚ್ಚರಿ ಮೂಡಿಸಿದ್ದಾರೆ. 66 ವರ್ಷದ ವಜಿರಲೊಂಗ್ ಕಾರ್ನ್ 40 ವರ್ಷದ ಸುಥಿದಾ ತಿಜಯ್‍ರನ್ನು ಮದುವೆಯಾಗಿದ್ದಾರೆ. ಈ ಬಗ್ಗೆ ರಾಜಭವನ ಅಧಿಕೃತವಾಗಿ ಮಾಹಿತಿಯನ್ನು ನೀಡಿದೆ. ಅಲ್ಲದೇ ಮದುವೆ ಸಂಬಂಧದ ವಿಡಿಯೋವನ್ನು ಬಿಡುಗಡೆ ಮಾಡಿದೆ. ಥೈಲ್ಯಾಂಡ್ ರಾಜರಾಗಿ 70 ವರ್ಷ ಆಳ್ವಿಕೆ ನಡೆಸಿದ್ದ ವಜಿರಲೊಂಗ್ ಕಾರ್ನ್ ಅವರ ತಂದೆ 2016ರಲ್ಲಿ ಸಾವನ್ನಪ್ಪಿದ್ದರು. ಆ ಬಳಿಕ ಇವರನ್ನು ರಾಜರನ್ನಾಗಿ ಘೋಷಣೆ ಮಾಡಲಾಗಿತ್ತು. ಸದ್ಯ ಅಧಿಕೃತವಾಗಿ ವಜಿರಲೊಂಗ್ ಕಾರ್ನ್ ಅಧಿಕಾರ ವಹಿಸಿಕೊಳ್ಳಲಿದ್ದು,…

  • ಮನರಂಜನೆ

    ಬಿಗ್‍ಬಾಸ್ ಸೀಸನ್ 7 ಟಿಕೆಟ್ ಟು ರಲ್ಲಿ ಫಿನಾಲೆ ಗೆದ್ದ ವಾಸುಕಿ ವೈಭವ್.

    ಈ ವಾರ ಬಿಗ್ ಮನೆಯಿಂದ ಹೊರ ಹೋಗಲು ಏಳು ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಮನೆಯ ಎಲ್ಲಾ ಸದಸ್ಯರು ನಾಮಿನೇಟ್ ಆದರೂ ಬಿಗ್‍ಬಾಸ್ ಸ್ಪರ್ಧಿಗಳಿಗೆ ಫಿನಾಲೆ ಹಂತ ತಲುಪಲು ಒಂದು ಬಿಗ್ ಆಫರ್ ನೀಡಿದ್ದರು. ಈ ವಾರ ಅತಿ ಹೆಚ್ಚು ಪದಕ ಪಡೆಯುವ ಒಬ್ಬ ಸ್ಪರ್ಧಿ ‘ಬಿಗ್‍ಬಾಸ್ ಸೀಸನ್ 7’ ರ ಫಿನಾಲೆ ಹಂತವನ್ನು ತಲುಪುವ ಅವಕಾಶವನ್ನು ಬಿಗ್‍ಬಾಸ್ ನೀಡಿದ್ದರು. ಇದೀಗ ‘ಬಿಗ್‍ಬಾಸ್ ಸೀಸನ್ 7’ ರ ಮೊದಲ ಫೈನಲಿಸ್ಟ್ ಆಗಿ ವಾಸುಕಿ ಆಯ್ಕೆಯಾಗಿದ್ದಾರೆ. ಈ ವಾರ ಟಿಕೆಟ್…

  • ಸುದ್ದಿ

    ರಾಜ್ಯ ಸರ್ಕಾರದಿಂದ ನೆರೆ ಸಂತ್ರಸ್ತರಿಗೊಂದು ಸಿಹಿ ಸುದ್ದಿ….!

    ನೆರೆ ಸಂತ್ರಸ್ತ ಕುಟುಂಬಗಳಿಗೆ ಒಂದೇ ಕಂತಿನಲ್ಲಿ ಮನೆ ಬಾಡಿಗೆ ಹಣ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. 5 ತಿಂಗಳ ಮನೆಯ ಬಾಡಿಗೆಯನ್ನು ಒಂದೇ ಕಂತಿನಲ್ಲಿ ನೀಡಲಾಗುವುದು ಎಂದು ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ಕೋಲಾರದಲ್ಲಿ ಮಾತನಾಡಿದ ಅವರು, ನೆರೆ ಸಂತ್ರಸ್ಥರಿಗಾಗಿ ಮನೆ ಬಾಡಿಗೆಗೆ ಮಾಸಿಕ 5000 ರೂ. ನೀಡಲಾಗಿದೆ. ಮಾಲೀಕರು ಮುಂಗಡ ಹಣ ಕೊಡುವಂತೆ ಕೇಳುವುದರಿಂದ 5 ತಿಂಗಳ ಬಾಡಿಗೆ 25 ಸಾವಿರ ರೂ.ಗಳನ್ನು ಒಂದೇ ಕಂತಿನಲ್ಲಿ ನೀಡಲು ಯೋಜಿಸಲಾಗಿದೆ ಎಂದು ಹೇಳಿದ್ದಾರೆ. ಪ್ರವಾಹಸಂತ್ರಸ್ತರಿಗೆ ಪರಿಹಾರ ವಿತರಣೆಯಲ್ಲಿ…

  • ಜ್ಯೋತಿಷ್ಯ

    ದಿನ ಭವಿಷ್ಯ ಶುಕ್ರವಾರ…ಈ ಶುಭದಿನದಂದು ನಿಮ್ಮ ರಾಶಿಯ ಶುಭಫಲಗಳು ಹೇಗಿವೆ ನೋಡಿ…

    ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ:- ಮೇಲ್ನೋಟಕ್ಕೆ ಎಲ್ಲವೂ ಸರಿಯಿದ್ದಂತೆ ಕಂಡರೂ ಸರ್ರನೆ ಕೆಲವು ಬಗೆಯ ಕಿರಿಕಿರಿಗಳು ಎದುರಾಗುವವು. ಸಾಯಿ ಮಂದಿರಕ್ಕೋ ಅಥವಾ ರಾಘವೇಂದ್ರ ಸ್ವಾಮಿಗಳ ಮಠಕ್ಕೋ ಭೇಟಿ ನೀಡಿ ಸಾಂತ್ವನ ಮಾಡಿಕೊಳ್ಳಿ…ನಿಮ್ಮ ಸಮಸ್ಯೆ.ಏನೇ .ಇರಲಿ…