ಸಿನಿಮಾ

32 ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿ, ಇಪ್ಪತ್ತೈದು ವರ್ಷಗಳಿಂದ ಥಿಯೇಟರ್ಗೆ ಕಾಲಿಟ್ಟಿಲ್ಲದ ನಟ..!ತಿಳಿಯಲು ಇದನ್ನು ಓದಿ ..

414

ಸಿನಿಮಾ ಸೆಲೆಬ್ರಿಟಿಗಳು ಬೇರೆಯವರ ಚಿತ್ರ ನೋಡದಿದ್ದರೂ ತಾವು ಬಣ್ಣ ಹಚ್ಚಿದ ಸಿನಿಮಾವನ್ನು ತಪ್ಪದೇ ಫರ್ಸ್ಟ್ ಡೇ ಫರ್ಸ್ಟ್ ಶೋ ನೋಡುತ್ತಾರೆ. ಆದರೆ ಇಲ್ಲೊಬ್ಬ ಕಲಾವಿದ ನಟಿಸಿದ್ದು ಸಾವಿರಕ್ಕೂ ಅಧಿಕ ಚಿತ್ರಗಳಾದರೂ, ಕಳೆದ 25 ವರ್ಷಗಳಿಂದ ಒಂದು ಬಾರಿಯೂ ಥಿಯೇಟರ್​ಗೆ ಕಾಲಿಟ್ಟಿಲ್ಲವಂತೆ! ಯಾರವರು? ಕಾಮಿಡಿ ಕಿಂಗ್ ಬ್ರಹ್ಮಾನಂದಮ್..

ಕಳೆದ 32 ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿರುವ ಅವರು, ಈವರೆಗೆ ಸಾವಿರಕ್ಕೂ ಅಧಿಕ ಚಿತ್ರಗಳಲ್ಲಿ ಹಾಸ್ಯನಟನಾಗಿ ಎಲ್ಲರನ್ನೂ ನಗಿಸುತ್ತಿದ್ದಾರೆ. ಅವರ ಕಾಮಿಡಿ ನೋಡಲೆಂದೇ ಪ್ರೇಕ್ಷಕರು ಮುಗಿ ಬೀಳುತ್ತಾರೆ. ಆದರೆ ಅವರಿಗೆ ಸಿನಿಮಾ ನೋಡಬೇಕು ಎಂದು ಅನ್ನಿಸುವುದೇ ಇಲ್ಲವಂತೆ.

ಕಾರಣ ಏನು ಗೊತ್ತಾ..?

ಇದಕ್ಕೆ ಕಾರಣ ನೀಡುವ ಅವರು, ‘ನಟನೆ ನನ್ನ ವೃತ್ತಿ. ಹೀಗಾಗಿ ನಾನು ಅದನ್ನು ಪ್ರೀತಿಸುತ್ತೇನೆ. ಆದರೆ 3 ಗಂಟೆ ಕೂತು ಚಿತ್ರ ನೋಡುವುದು ತುಂಬ ಕಷ್ಟದ ವಿಚಾರ.

ಸಿನಿಮಾಗಳು ನನಗೆ ಅಸ್ವಾಭಾವಿಕವಾಗಿ ಕಾಣುತ್ತವೆ. ಹೀಗಾಗಿ ನಾನು ಥಿಯೇಟರ್​ಗೆ ಹೋಗುವುದೇ ಇಲ್ಲ. ಈ ವಿಚಾರ ಹೇಳಿಕೊಂಡರೆ ಜನ ನಂಬುವುದಿಲ್ಲ’ ಎಂದಿದ್ದಾರೆ. ಅವರಿಗೆ ನಾಟಕ ಎಂದರೆ ತುಂಬ ಇಷ್ಟವಂತೆ. ಬಿಡುವು ಸಿಕ್ಕಾಗೆಲ್ಲ ನಾಟಕಗಳನ್ನು ನೋಡುತ್ತಾರಂತೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ