ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಡ್ರೋನ್ ಮೂಲಕ ಕೇವಲ 18 ನಿಮಿಷದಲ್ಲಿ 30 ಕಿ.ಮೀ ಸಂಚರಿಸಿ ರಕ್ತದ ಮಾದರಿಯನ್ನು ನೀಡಿದ ಘಟನೆ ಮೊದಲ ಬಾರಿಗೆ ಉತ್ತರಾಖಂಡದಲ್ಲಿ ನಡೆದಿದೆ.ನಂದಗೋನ್ನ ಜಿಲ್ಲಾಸ್ಪತ್ರೆಯಿಂದ ರಕ್ತದ ಮಾದರಿಯನ್ನು ಡ್ರೋನ್ ಮೂಲಕ ತೇರಿಯಲ್ಲಿರುವ ಆಸ್ಪತ್ರೆಗೆ ಕಳುಹಿಸಲಾಗಿದೆ. ಮೊದಲ ಪ್ರಯತ್ನದಲ್ಲೇ ಇದು ಸಫಲವಾಗಿದ್ದು, ಇದು ಭಾರತದ ಆರೋಗ್ಯದ ಸೇವೆಯಲ್ಲಿ ಇದೊಂದು ದೊಡ್ಡ ಹೆಜ್ಜೆ ಆಗಲಿದೆ.

ಡ್ರೋನ್ ನಂದಗೋನದಿಂದ ತೇರಿ ನಡುವಿನ 30 ಕಿ.ಮೀ ದೂರವನ್ನು 18 ನಿಮಿಷದಲ್ಲಿ ಡ್ರೋನ್ ಕ್ರಮಿಸಿದೆ. ಡ್ರೋನ್ ಪ್ರತಿ ಗಂಟೆಗೆ 100 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮಥ್ರ್ಯ ಹೊಂದಿದೆ. ಈ ಪ್ರಯತ್ನ ಯಶಸ್ವಿ ಆಗಿದೆ. ಆಸ್ಪತ್ರೆ 30 ಕಿ.ಮೀ ದೂರವಿದ್ದು ಕೇವಲ 18 ನಿಮಿಷದಲ್ಲಿ ರಕ್ತದ ಮಾದರಿಯನ್ನು ಕಳುಹಿಸಲಾಗಿದೆ. ಇದು ದೂರದ ಪ್ರದೇಶದಲ್ಲಿ ಇರುವ ರೋಗಿಗಳಿಗೆ ಸಹಾಯವಾಗುತ್ತದೆ ಎಂದು ತೇರಿ ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದ್ದಾರೆ.

ರಸ್ತೆ ಮೂಲಕ ರಕ್ತದ ಮಾದರಿ ಬರಬೇಕಾದರೆ 60 ರಿಂದ 80 ನಿಮಿಷ ಬೇಕಾಗುತಿತ್ತು. ಸರಿಯಾದ ರಸ್ತೆ ಹಾಗೂ ವೈದ್ಯಕೀಯ ಸೌಲಭ್ಯಗಳ ಕೊರತೆ ಇರುವ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಇದು ಉಪಯೋಗವಾಗಲಿದೆ.

ಬಿಸಿಲಿನಿಂದ ರಕ್ತ ಹಾಳಾಗಬಾರದು ಎಂದು ಅದರ ಜೊತೆ ಕೂಲ್ ಕಿಟ್ ಕೂಡ ಇಡಲಾಗಿತ್ತು ಎಂದು ತೇರಿ ಗ್ರಾಮದ ಬುರಾರಿ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.ಐಐಟಿಯ ಹಳೆಯ ವಿದ್ಯಾರ್ಥಿ ನಿಖಿಲ್ ಉಪಾದ್ಯಾಯ ಮಾಲೀಕತ್ವ ಸಿಡಿ ಸ್ಪೇಸ್ ರೋಬೋಟಿಕ್ಸ್ ಲಿಮಿಟೆಡ್ ಕಂಪನಿ ಈ ಡ್ರೋನ್ ನಿರ್ಮಾಣ ಮಾಡಿದೆ. 500 ಗ್ರಾಂ ತೂಕದ ವಸ್ತುಗಳನ್ನು ಹೊರುವ ಸಾಮಥ್ರ್ಯವನ್ನು ಈ ಡ್ರೋನ್ ಹೊಂದಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ 50 ಕಿ.ಮೀ ಸಂಚರಿಸುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪ್ರತಿವರ್ಷ ಚೈತ್ರ ಮಾಸದ ಶುಧ್ಧ ನವಮಿಯಂದು ಶ್ರೀರಾಮ ನವಮಿ ಮಾಡುತ್ತೇವೆ. ಆದರೆ ಶ್ರೀರಾಮನವಮಿ ಎಂಬುದು ಯಾಕೆ ಬಂದಿದೆ ಎಂದರೆ, ಇದೇ ನವಮಿಯಂದು ಶ್ರೀ ರಾಮಚಂದ್ರ ಹುಟ್ಟಿದ್ದು, ಇದೇ ನವಮಿಯಂದು ಸೀತಾ ಮಾತೆಯನ್ನು ಮದುವೆ ಮಾಡಿಕೊಂಡು ಸೀತರಾಮನಾದ. ಹಾಗೆಯೇ 14 ವರ್ಷಗಳ ವನವಾಸದ ನಂತರ ಸೀತಾದೇವಿಯನ್ನು ರಾವಣನನಿಂದ ಬಿಡಿಸಿ ಅದೇ ದಿನ ಅಯೋಧ್ಯೆ ಮಹಾರಾಜನಾಗಿ ಶ್ರೀರಾಮನು ಪಟ್ಟಾಭಿಷೇಕ ಆದ ದಿನ. ಹಾಗಾಗಿ ಅದೇ ನವಮಿಯ ದಿನ ರಾಮನ ಜನ್ಮದಿನದ ಜೊತೆಗೆ ಸೀತಾರಾಮ ಕಲ್ಯಾಣ ಮಹೋತ್ಸವ ನೋಡಿದರೆ ಜನ್ಮಜನ್ಮದ ಪುಣ್ಯ…
ಪ್ರೀತಿಸಿ ಮದುವೆಯಾದ ಪ್ರೇಮಿಗಳಿಗೆ ಜಾತಿ ಬೇರೆಬೇರೆ ಇದ್ದ ಕಾರಣ ಮನೆಯವರು ಧಮಕಿ ಹಾಕಿದ ಘಟನೆ ವಿಜಯಪುರ ದಲ್ಲಿ ನಡೆದಿದೆ. ನಾವು ಒಬ್ಬರಿಗೊಬ್ಬರು ಪ್ರೀತಿಸಿದ್ದೆವೆ, ಮದುವೆ ಕೂಡ ಆಗಿದ್ದೆವೆ ಆದರೆ ನಮಗೆ ಜೀವನ ನಡೆಸಲು ಬಿಡುತ್ತಿಲ್ಲ. ಹೀಗಾಗಿ ನಮಗೆ ಬದಕಲು ಬಿಡಿ ಎಂದು ಪ್ರೇಮಿಗಳು ಅಂಗಲಾಚುತ್ತಿದ್ದಾರೆ. 5 ವರ್ಷಗಳಿಂದ ಪ್ರೀತಿಸಿ ಮದುವೆಯಾಗಿದ್ದ ದಂಪತಿಗಳಿಗೆ ಪೋಷಕರೇ ವಿಲನ್ ಆಗಿದ್ದಾರೆ. ವಿಜಯಪುರ ಜಿಲ್ಲೆ ಸಿಂಧಗಿ ತಾಲೂಕಿನ ನಾವದಗಿತ ಶೃತಿ ಹಾಗೂ ಆಲಮೇಲ ಪಟ್ಟಣದ ಗೌತಮ್ ಪೋಷಕರ ವಿರೋಧದ ಮಧ್ಯೆಯೂ ಸೆಪ್ಟೆಂಬರ್ 25ರಂದು…
ಸ್ಯಾಂಡಲ್ ವುಡ್ ನ ಖ್ಯಾತ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಪುತ್ರಿಯ ಫೋಟೋ ಕೊನೆಗೂ ಬಹಿರಂಗವಾಗಿದೆ. ಅಕ್ಷಯ ತೃತೀಯ ದಿನ ಮಂಗಳವಾರದಂದು ರಾಧಿಕಾ ಪಂಡಿತ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಮಗಳ ಫೋಟೋ ಹಾಕಿ ಸಂಭ್ರಮಿಸಿದ್ದಾರೆ. ನಾವಿನ್ನೂ ಅವಳಿಗೆ ಹೆಸರಿಟ್ಟಿಲ್ಲ, ಅಲ್ಲಿಯವರೆಗೆ ಬೇಬಿ ವೈಆರ್ ಎಂದು ಕರೆಯೋಣ, ನಿಮ್ಮ ಪ್ರೀತಿ, ಹಾರೈಕೆ ಆಕೆಯ ಮೇಲೆಯೂ ಸದಾ ಇರಲಿ ಎಂದು ರಾಧಿಕಾ ಪಂಡಿತ್ ಕೋರಿದ್ದಾರೆ.ಯಶ್-ರಾಧಿಕಾ ಪಂಡಿತ್ ದಂಪತಿಗೆ ಕಳೆದ ವರ್ಷ ಡಿಸೆಂಬರ್ 2ರಂದು ಹೆಣ್ಣು ಮಗು…
ಕುಲ ಕುಲವೆಂದು ಬಡಿದಾಡುವ ಈ ದಿನದಲ್ಲಿ ಮುಸ್ಲಿಂ ಯುವಕನೊಬ್ಬ ಎಲ್ಲದೇವರು ಒಂದೇ ಎಂದು ತಿಳಿದು ಅಯ್ಯಪ್ಪ ಮಾಲೆ ಧರಿಸಿ ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಸ್ಮರಣೆ ಮಾಡುತ್ತಿದ್ದಾನೆ. ಅಯ್ಯಪ್ಪಮಾಲೆ ಭಕ್ತರು 41 ದಿನ ಮಂಡಳ ಪೂರೈಸಿ ಶಬರಿಗೆ ಹೋಗುವಾಗ ಅರಣ್ಯದ ಮಧ್ಯದಲ್ಲಿಅಯ್ಯಪ್ಪ ಸ್ವಾಮಿಯ ಶಿಷ್ಯ ಬಾಬರ ಸ್ವಾಮಿ ಅವರ ದರ್ಗಾ ಇದೆ. ಪ್ರಥಮ ಬಾರಿಗೆ ಅಯ್ಯಪ್ಪ ಮಾಲೆ ಧರಿಸಿದ ಭಕ್ತರು ದರ್ಗಾದ ದರ್ಶನ ಪಡೆದು ಮೈಮೇಲೆ ವಿವಿಧ ಬಣ್ಣ ಹಚ್ಚಿಕೊಳ್ಳುತ್ತಾರೆ. ಅಡವಿಯಲ್ಲಿಹೋಗುವಾಗ ಕಾಡು ಪ್ರಾಣಿಗಳಿಂದ ರಕ್ಷಣೆಗೆ ಬಾಬರ…
ಸಾಮಾಜಿಕ ಜಾಲತಾಣಗಳಲ್ಲಿ ಒಂದಾಗಿರುವ ವಾಟ್ಸಪ್ ಭಾರತದಲ್ಲಿ ತನ್ನ ಬಿಸಿನೆಸ್ ಆ್ಯಪ್ ಅನ್ನು ಬಿಡುಗಡೆಗೊಳಿಸಿದ ಮೊದಲ ವರ್ಷದಲ್ಲಿ 6.84 ಕೋಟಿ ರೂ. ಆದಾಯ ಗಳಿಸುವಲ್ಲಿ ಯಶಸ್ವಿಯಾಗಿದೆ. ಅತ್ಯಧಿಕ ಸಂಖ್ಯೆಯ ಬಳಕೆದಾರರನ್ನು ಹೊಂದಿರುವ ವಾಟ್ಸಪ್ ದೇಶದಲ್ಲಿ ಈಗ ಆದಾಯ ಗಳಿಕೆಯ ಹಾದಿಯತ್ತ ಹೊರಳಿದೆ. ಬಿಸಿನೆಸ್ ಆವೃತ್ತಿ ಮೂಲಕ ವಾಟ್ಸಪ್ ಮೊದಲ ವರ್ಷದ ಗಳಿಕೆಯನ್ನು ಬಹಿರಂಗಪಡಿಸಿದೆ. ರಿಜಿಸ್ಟ್ರಾರ್ ಆಫ್ ಕಂಪನೀಸ್ಗೆ ವಾಟ್ಸಪ್ ಸಲ್ಲಿಸಿರುವ ದಾಖಲಾತಿಗಳ ಪ್ರಕಾರ, 2019 ರಲ್ಲಿಕಂಪನಿ 6.84 ಕೋಟಿ ರೂ. ಆದಾಯ ಮತ್ತು 57 ಲಕ್ಷ ರೂ. ಲಾಭ ಗಳಿಸಿದೆ. ತನ್ನ…
ಗರುಡ ಪುರಾಣದ ಪ್ರಕಾರ, ಮನುಷ್ಯ ಭೂಮಿಯ ಮೇಲೆ ಮಾಡುವ ಅತ್ಯಾಚಾರ,ಅನಾಚಾರ ಮತ್ತು ಅಪರಾಧಗಳಿಗೆ ಪ್ರತ್ತೇಕವಾದ ಶಿಕ್ಷೆಗಳನ್ನು ಕೊಡಲಾಗುತ್ತದೆ ಎಂದು ಹೇಳಲಾಗುತ್ತದೆ. ಅದರಲ್ಲಿ ಅಂತಹ ಕೆಲವು ಶಿಕ್ಷೆಗಳ ಬಗ್ಗೆ ಇಲ್ಲಿ ಕೊಡಲಾಗಿದೆ