ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮೂಗುತಿಯೆಂದರೆ ಕೇವಲ ಸಾಂಪ್ರದಾಯಿಕ ಮಹಿಳೆಯರು ಮಾತ್ರ ಹಾಕಿಕೊಳ್ಳುವುದು, ಆಧುನಿಕ ಮಹಿಳೆಯರು ಮೂಗುತಿ ಧರಿಸುವುದಿಲ್ಲ. ಅವರು ಇದರಿಂದ ದೂರು ಇರುತ್ತಾರೆ ಎನ್ನುವ ಕಾಲವಿತ್ತು. ಆದರೆ ಕ್ರಮೇಣ ಮೂಗುತಿ ಕೂಡ ಒಂದು ಫ್ಯಾಷನ್ ಆಗುತ್ತಾ ಹೋಯಿತು. ಟೆನಿಸ್ ತಾರೆ ಸಾನಿಯಾ ಮಿರ್ಜಾ ಕೂಡ ಮೂಗುತಿ ಸುಂದರಿ ಎಂದು ಕರೆಯಲ್ಪಡುತ್ತಿದ್ದಳು. ಆಕೆಯನ್ನು ನೋಡಿಯೋ ಗೊತ್ತಿಲ್ಲ. ಮೂಗುತಿ ಮಾತ್ರ ಒಂದು ಫ್ಯಾಷನ್ ಆಗಿ ಬೆಳೆಯಿತು.
ಕೆಲವೊಂದು ಸಿನಿಮಾಗಳಲ್ಲಿ ನಾಯಕಿಯರು ಮೂಗುತಿ ಧರಿಸಿ ಮತ್ತಷ್ಟು ಟ್ರೆಂಡ್ ಉಂಟು ಮಾಡಿದರು. ಮೂಗು ಚುಚ್ಚಿಕೊಳ್ಳುವಾಗ ತುಂಬಾ ಎಚ್ಚರಿಕೆ ವಹಿಸಬೇಕು. ಯಾಕೆಂದರೆ ಸ್ವಲ್ಪ ತಪ್ಪಾದರೂ ಅದರ ಕಲೆ ಜೀವಮಾನವಿಡಿ ಉಳಿದುಕೊಳ್ಳುವುದು.
ಅದೇ ರೀತಿ ಕೆಲವು ಮಂದಿ ಮೂಗುತಿ ಚುಚ್ಚಿಸಿಕೊಳ್ಳುವುದರಿಂದ ಸೋಂಕು ಉಂಟಾಗಬಹುದು. ಮೂಗುತಿ ಚುಚ್ಚಿಸಿಕೊಳ್ಳುವ ಪ್ರಾಮುಖ್ಯತೆ ಬಗ್ಗೆ ಈ ಲೇಖನದಲ್ಲಿ ತಿಳಿಯುವ. ಇದನ್ನು ತಿಳಿದುಕೊಂಡರೆ ನಿಮ್ಮ ಅನುಭವ ಮತ್ತಷ್ಟು ಸುಖದಾಯಕ ಹಾಗೂ ಸೋಂಕು ರಹಿತವಾಗಲಿದೆ…
ವೃತ್ತಿಪರರಿಂದ ಮೂಗು ಚುಚ್ಚಿಸಿಕೊಳ್ಳಿ :- ಕೆಲವರು ಮನೆಯಲ್ಲಿಯೇ ಮೂಗು ಚುಚ್ಚಿಸಿಕೊಳ್ಳಲು ಇಷ್ಟಪಡುತ್ತಾರೆ. ಮನೆಯಲ್ಲಿ ಹೆಚ್ಚಿನ ಧೈರ್ಯ ಕೂಡು ಬರುವುದು. ಆದರೆ ಇದರಿಂದ ಸೋಂಕು ಅಥವಾ ಬೇರೆ ಸಮಸ್ಯೆ ಕಾಣಿಸಬಹುದು. ವೃತ್ತಿಪರರ ನೆರವು ಪಡೆದರೆ ತುಂಬಾ ಒಳ್ಳೆಯದು. ಅವರು ಕಿವಿ ಚುಚ್ಚಿಸಿಕೊಳ್ಳುವ ಪ್ರಾಮುಖ್ಯತೆಯನ್ನು ನಿಮಗೆ ಹೇಳಬಹುದು.

ಒಳ್ಳೆಯ ಗುಣಮಟ್ಟದ ಕ್ಲಿನಿಕ್‌ಗೆ ಹೋಗಿ :- ಸಣ್ಣ ಸಲೂನ್ ಅಥವಾ ಕ್ಲಿನಿಕ್‌ಗಳು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದಿಲ್ಲ. ಇದರಿಂದ ರಕ್ತಕ್ಕೆ ಸಂಬಂಧಿಸಿದ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚು. ಇದರಿಂದ ಕಿವಿ ಚುಚ್ಚಿಸಿಕೊಳ್ಳಲು ಒಳ್ಳೆಯ ಗುಣಮಟ್ಟದ ಕ್ಲಿನಿಕ್ ಗಳನ್ನು ಆಯ್ಕೆ ಮಾಡಿಕೊಳ್ಳಿ. ಇದರಲ್ಲಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳಬೇಡಿ.

ನಿಮಗೇನು ಬೇಕು ಎನ್ನುವ ಬಗ್ಗೆ ಸ್ಪಷ್ಟತೆಯಿರಲಿ :- ಮೂಗು ಚುಚ್ಚಿಸಿಕೊಳ್ಳುವುದರಿಂದ ಅದು ಮೂಗಿನಲ್ಲಿ ಶಾಶ್ವತವಾದ ತೂತನ್ನು ಉಂಟು ಮಾಡುತ್ತದೆ. ಇದರಿಂದ ನಿಮಗೆ ಮೂಗುತಿ ಬೇಕೇ ಅಥವಾ ಬೇಡವೇ ಎನ್ನುವುದನ್ನು ನಿಧಾನವಾಗಿ ಕುಳಿತುಕೊಂಡು ಯೋಚಿಸಿ. ಮೂಗು ಚುಚ್ಚಿಸಿಕೊಂಡ ಬಳಿಕ ನಿಮಗೆ ಏನೂ ಮಾಡಲು ಸಾಧ್ಯವಾಗಲ್ಲ.

ಸ್ವಲ್ಪ ಅಧ್ಯಯನ ಮಾಡಿ :- ನಿಮಗೆ ಏನು ಬೇಕು ಎನ್ನುವುದು ಸ್ವಷ್ಪವಾದರೂ ನೇರವಾಗಿ ಹೋಗಿ ಮೂಗುತಿ ಚುಚ್ಚಿಸಿಕೊಳ್ಳಬೇಡಿ. ಸ್ವಲ್ಪ ಸಮಯ ತೆಗೆದುಕೊಂಡು ಮೂಗು ಚುಚ್ಚಿಸಿಕೊಳ್ಳುವ ವಿಧಾನ ಮತ್ತು ಮೂಗುತಿಯ ಆಯ್ಕೆಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡು ಅಧ್ಯಯನ ನಡೆಸಿ.
ಸ್ಥಳೀಯ ಅನಸ್ತೇಸಿಯಾ ನೆರವಾಗಬಹುದು :- ಮೂಗು ಚುಚ್ಚಿಸಿಕೊಳ್ಳಲು ನಿರ್ಧರಿಸಿದ್ದರೂ ಅದರಿಂದ ಆಗುವಂತಹ ನೋವಿನ ಬಗ್ಗೆ ನಿಮಗೆ ತುಂಬಾ ಭೀತಿ ಉಂಟಾಗಿರುತ್ತದೆ. ಆದರೆ ಇದರ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ. ಮೆಡಿಕಲ್‌ಗಳಲ್ಲಿ ಕೆಲವೊಂದು ಸ್ಥಳೀಯ ಅನಸ್ತೇಸಿಯಾಗಳು ಲಭ್ಯವಿದೆ. ಇದು ನಿಮಗೆ ನೆರವಾಗಬಹುದು. ಕೆಲವು ಕ್ಲಿನಿಕ್ ಗಳು ಕ್ರೀಮ್ ಗಳನ್ನು ಬಳಸುತ್ತವೆ.

ಚರ್ಚೆ ಮಾಡಿ :- ಈಗಾಗಲೇ ಮೂಗುತಿ ಚುಚ್ಚಿಸಿಕೊಂಡಿರುವವರ ಜತೆ ಅವರ ಅನುಭವನ್ನು ತಿಳಿದುಕೊಳ್ಳಬಹುದು. ನಿಮಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸುಲಭವಾಗಬಹುದು. ಇದರಿಂದ ಮೂಗು ಚುಚ್ಚಿಸಿಕೊಳ್ಳುವ ಸಲೂನ್ ಮತ್ತು ಅದರ ಬಳಿಕದ ಆರೈಕೆಯ ಬಗ್ಗೆ ತಿಳಿದುಕೊಳ್ಳಲು ಸುಲಭವಾಗುತ್ತದೆ.
ಮನೆಯಲ್ಲಿ ಪ್ರಯತ್ನಿಸಬೇಡಿ :- ಹಿಂದಿನ ಕಾಲದಲ್ಲಿ ಮನೆಯಲ್ಲಿಯೇ ಮೂಗನ್ನು ಚುಚ್ಚಿಸಿಕೊಳ್ಳಲಾಗುತ್ತಾ ಇತ್ತು. ಆದರೆ ಇಂದಿನ ದಿನಗಳಲ್ಲಿ ಹಲವಾರು ರೀತಿಯಿಂದ ವಾತಾವರಣವು ಕಲುಷಿತವಾಗಿರುವ ಕಾರಣದಿಂದಾಗಿ ಸೋಂಕು ಹರಡುವ ಸಾಧ್ಯತೆ ತುಂಬಾ ಹೆಚ್ಚಿರುತ್ತದೆ. ಇದರಿಂದ ಮನೆಯಲ್ಲಿ ಮೂಗು ಚುಚ್ಚಿಸಿಕೊಳ್ಳಲು ಹೋಗಬೇಡಿ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹಿಂದೆ ಕೇವಲ ವಯಸ್ಸಾದರವರಲ್ಲಿ ಬಿಳಿಕೂದಲು ಕಾಣಿಸಿಕೊಳ್ಳುತ್ತಿತ್ತು. ಆದರೆ ಇತ್ತೀಚಿನ ಜೀವನ ಕ್ರಮ, ಆಹಾರ ಪದ್ಧತಿ ಮತ್ತು ಒತ್ತಡದ ಬದುಕಿನಿಂದಾಗಿ ಬಿಳಿಕೂದಲು ಸಣ್ಣ ವಯಸ್ಸಿನ ಮಕ್ಕಳಲ್ಲಿ ಕೂಡ ಕಾಣಿಸಿಕೊಂಡು ಮುಜುಗರ ಉಂಟು ಮಾಡುತ್ತಿದೆ.
ಕನಸುಗಾರ ರವಿಚಂದ್ರನ್ ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಇವರು ಮಾಡಿದ ಕೆಲಸ ಗುರುತಿಸಿ ಈಗ ವಿಶ್ವವಿದ್ಯಾಲಯವೊಂದು ಗೌರವ ಡಾಕ್ಟರೇಟ್ ಪದವಿ ನೀಡಲು ಮುಂದಾಗಿದೆ. ನಟ ವಿ.ರವಿಚಂದ್ರನ್ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ. ಬೆಂಗಳೂರಿನ ಸಿಎಂಆರ್ ಕಾಲೇಜು ಆವರಣದಲ್ಲಿ ಸಂಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರಿಗೆ ಡಾಕ್ಟರೇಟ್ ಗೌರವ ನೀಡಲಾಗಿದೆ. ಅಕ್ಟೋಬರ್ 18 ರವಿಚಂದ್ರನ್ ಮಗಳು ಗೀತಾಂಜಲಿ ಹುಟ್ಟಿದ ದಿನ. ಆ ದಿನವೇ ಅವರಿಗೆ ಗೌರವ ಡಾಕ್ಟರೇಟ್ ನೀಡಲಿದ್ದೇವೆ ಎಂದು ಯುನಿವರ್ಸಿಟಿಯಿಂದ ಕಾಲ್ಬಂದಿತ್ತಂತೆ. ಅಷ್ಟೇ ಅಲ್ಲದೆ ಅವರ 35ವರ್ಷಗಳ…
ಕನ್ನಡಿಗ ಕೆ.ಎಲ್.ರಾಹುಲ್ ಟೀಂ ಇಂಡಿಯಾ ಪರ ಬ್ಯಾಟಿಂಗ್ ಮಾತ್ರವಲ್ಲದೆ, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ವಿಕೆಟ್ ಕೀಪರ್ ಆಗಿ ಉತ್ತಮ ಪ್ರದರ್ಶನ ನೀಡಿದರು. ಇದರಿಂದ ಆಕರ್ಷಿತರಾದ ಭಾರತದ ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಸೋಮವಾರ ರಾಹುಲ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಕೆ.ಎಲ್.ರಾಹುಲ್ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಅವರಂತೆ ಹೆಚ್ಚಿನ ಅವಕಾಶಗಳನ್ನು ಪಡೆಯಬೇಕು. 5ನೇ ಕ್ರಮಾಂಕದಲ್ಲಿ ರಾಹುಲ್ ಬ್ಯಾಟಿಂಗ್ ಮಾಡಿ ತಂಡಕ್ಕೆ ಅತ್ಯುತ್ತಮ ಫಿನಿಶರ್ ಪಾತ್ರವನ್ನು ವಹಿಸಬಹುದು. ಅಷ್ಟೇ ಅಲ್ಲದೆ ತಂಡಕ್ಕೆ ಉತ್ತಮ ವಿಕೆಟ್ ಕೀಪರ್…
ಜಿಯೋ ಫೋನ್ ನಿರೀಕ್ಷೆಯಲ್ಲಿರುವ ಗ್ರಾಹಕರಿಗೊಂದು ಖುಷಿ ಸುದ್ದಿ. ಮುಂಗಡ ಬುಕ್ಕಿಂಗ್ ಮಾಡಿದ್ದ ಗ್ರಾಹಕರ ಕೈಗೆ ಈ ವಾರಾಂತ್ಯದಲ್ಲಿ ಜಿಯೋ 4ಜಿ ಫೀಚರ್ ಫೋನ್ ಸಿಗಲಿದೆ. ಮೂಲಗಳ ಪ್ರಕಾರ ಅಕ್ಟೋಬರ್ 1ರಂದು ಜಿಯೋ ತನ್ನ ಫೀಚರ್ ಫೋನ್ ಡಿಲೆವರಿ ಶುರು ಮಾಡಲಿದೆ. ಮೊದಲ ಬಾರಿ ಪ್ರಿ ಬುಕ್ಕಿಂಗ್ ವೇಳೆ 60 ಲಕ್ಷಕ್ಕೂ ಹೆಚ್ಚು ಫೋನ್ ಬುಕ್ಕಿಂಗ್ ಆಗಿತ್ತು.
ಭಾರತ ಮೂಲದ 12 ವರ್ಷ ವಯಸ್ಸಿನ ಬಾಲಕ ಬ್ರಿಟಿಷ್ ಟಿವಿ ಷೋ ಒಂದರಲ್ಲಿ ಎಲ್ಲ ಪ್ರಶ್ನೆಗಳಿಗೆ ಸರಿ ಉತ್ತರ ನೀಡುವ ಮೂಲಕ ರಾತ್ರೋರಾತ್ರಿ ಮನೆಮಾತಾಗಿದ್ದಾನೆ.
ಪ್ರತಿಯೊಬ್ಬರಿಗೂ ಕನಸು ಬೀಳುವುದು ಸಾಮಾನ್ಯ. ಅದರಲ್ಲಿ ಬೆಳಗ್ಗೆ ನಾಲ್ಕು ಗಂಟೆಯಿಂದ 5 ಗಂಟೆಯ ಒಳಗೆ ಬೀಳುವ ಕನಸುಗಳು ನಿಜವಾಗುತ್ತವೆ ಎಂಬ ನಂಬಿಕೆ ಇದೆ.ಕನಸಿನಲ್ಲಿ ಅನೇಕ ವ್ಯಕ್ತಿಗಳು ಹಾಗೂ ವಸ್ತುಗಳು ಬಂದು ಹೋಗುತ್ತವೆ.ಆದ್ರೆ ಕನಸಿನಲ್ಲಿ ಬರೋದೆಲ್ಲಾ ಒಳ್ಳೆಯದೋ ಅಥವಾ ಕೆಟ್ಟದ್ದೋ ಅಂತ ಅನೇಕರಿಗೆ ಗೊತ್ತಿರುವುದಿಲ್ಲ.ಅದರಲ್ಲಿ ದೇವರ ದೇವ ಮಹಾದೇವ ಸಂಭಂದಿಸಿದ ವಸ್ತುಗಳು ಕನಸಿನಲ್ಲಿ ಬಂದ್ರೆ ಅದೃಷ್ಟ ಬಾಗಿಲು ತೆರೆದಿದೆ ಎಂದೇ ಅರ್ಥ