ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ವಿದ್ಯುತ್ ಕಳ್ಳತನ ತಡೆಗೆ ಪ್ರೀಪೇಯ್ಡ್ ಅಥವಾ ಸ್ಮಾರ್ಟ್ ಮೀಟರ್ ಅಳವಡಿಸುವುದು ಕಡ್ಡಾಯಗೊಳಿಸುವುದರೊಂದಿಗೆ, ಈ ವರ್ಷದ ಅಂತ್ಯದೊಳಗೆ ತಡೆ ರಹಿತ ವಿದ್ಯುತ್ ನೀಡಲು ಸರಕಾರ ಚಿಂತಿಸಿದೆ.
ದಿನದ 24 ಗಂಟೆಯೂ ವಿದ್ಯುತ್ ಪೂರೈಕೆ ಮಾಡಲು ಕೇಂದ್ರ ಸರ್ಕಾರ ಹೊಸ ಯೋಜನೆಯನ್ನು ಹಮ್ಮಿಕೊಂಡಿದೆ. ವಿದ್ಯುತ್ ಖೋತಾ ಮಾಡಿದಲ್ಲಿ 2019ರ ಏಪ್ರಿಲ್ ನಿಂದ ವಿತರಕರಿಗೇ ದಂಡ ಹಾಕಲಾಗುತ್ತದೆ. ಅಷ್ಟೇ ಅಲ್ಲ ವಿದ್ಯುತ್ ಕಳವು ತಡೆಯಲು ಸ್ಮಾರ್ಟ್ ಮೀಟರ್ ಗಳನ್ನು ಅಳವಡಿಸಲು ಚಿಂತನೆ ನಡೆದಿದೆ.
2018ರ ಅಂತ್ಯದ ವೇಳೆಗೆ ಸರ್ವರಿಗೂ ವಿದ್ಯುತ್ ಪೂರೈಸಲು 16,000 ಕೋಟಿ ರೂ. ವೆಚ್ಚದಲ್ಲಿ ಸೌಭಾಗ್ಯ ಸ್ಕೀಮ್ ಅನ್ನು ಕೂಡ ಲಾಂಚ್ ಮಾಡಲಾಗಿತ್ತು. 2019ರ ಮಾರ್ಚ್ ವೇಳೆಗೆ ದೇಶಾದ್ಯಂತ ದಿನದ 24 ಗಂಟೆಯೂ ವಿದ್ಯುತ್ ನೀಡುವುದು ನಮ್ಮ ಉದ್ದೇಶ. ಮಾರ್ಚ್ ಬಳಿಕ ವಿನಾಕಾರಣ ಲೋಡ್ ಶೆಡ್ಡಿಂಗ್ ಮಾಡಿದ್ರೆ ವಿತರಕರಿಗೆ ದಂಡ ಹಾಕುವುದಾಗಿ ಇಂಧನ ಸಚಿವ ಆರ್.ಕೆ.ಸಿಂಗ್ ಈ ವಿಷಯವನ್ನು ತಿಳಿಸಿದ್ದಾರೆ.
ತಾಂತ್ರಿಕ ದೋಷ ಅಥವಾ ಪ್ರಕೃತಿ ವಿಕೋಪಗಳ ಕಾರಣಗಳನ್ನು ಹೊರತುಪಡಿಸಿ, ಸುಖಾ ಸುಮ್ಮನೆ ವಿದ್ಯುತ್ ಕಡಿತಗೊಳಿಸಿದರೆ, ವಿದ್ಯುತ್ ಪೂರೈಕೆದಾರರಿಗೆ ದಂಡ ವಿಧಿಸಲಾಗುತ್ತದೆ.ವಿದ್ಯುತ್ ಮೀಟರ್, ಬಿಲ್ ಪಾವತಿ ಎಲ್ಲವನ್ನೂ ಡಿಜಿಟಲೀಕರಣ ಮಾಡುವ ಉದ್ದೇಶ ಸರ್ಕಾರಕ್ಕಿದೆ. ಅದಕ್ಕಾಗಿ ಪ್ರಿ ಪೇಯ್ಡ್ ಮೀಟರ್ ಅಳವಡಿಸಲು ಎಲ್ಲಾ ರಾಜ್ಯಗಳು ಇದಕ್ಕೆ ಸಮ್ಮತಿಸಿವೆ. ವಿದ್ಯುತ್ ಪೂರೈಕೆಗೆ ತಕ್ಕಂತೆ ಶುಲ್ಕ ವಸೂಲಿ ಆಗುತ್ತಿಲ್ಲ. ಹಾಗಾಗಿ ಈ ಕ್ರಮ ಅನಿವಾರ್ಯ ಅಂತಾ ಸಚಿವರು ತಿಳಿಸಿದ್ದಾರೆ.
ಪ್ರೀ ಪೇಯ್ಡ್ ಮೀಟರ್ ಅಳವಡಿಕೆ ಹಾಗೂ ಫಲಾನುಭವಿಗಳಿಗೆ ನೇರ ಲಾಭ ವರ್ಗಾಯಿಸಲು ಹಾಗೂ 24×7 ವಿದ್ಯುತ್ ಪೂರೈಸಲು ದೇಶದ ಬಹುತೇಕ ರಾಜ್ಯಗಳು ಒಪ್ಪಿವೆ, ಎಂದು ಸಚಿವರು ತಿಳಿಸಿದ್ದಾರೆ.
ಇನ್ನು ಮುಂದೆ ಮೀಟರಿಂಗ್, ಬಿಲ್ ಸಂಗ್ರಹಕ್ಕೆ ಸಂಬಂಧಿಸಿದಂತೆ ಮಾನವ ಸಂಪರ್ಕವಿಲ್ಲದಂತೆ ಮಾಡಲಾಗುವುದು. ಮೊಬೈಲ್ ಮೂಲಕವೇ ವಿದ್ಯುತ್ ಬಿಲ್ ಕಟ್ಟುವ ವ್ಯವಸ್ಥೆ ಮಾಡಲಾಗುವುದು. ಆದರೆ, ಈ ಕಾರ್ಯಕ್ಕೆ ಯಾವುದೇ ಕಾಲ ಮಿತಿ ನಿಗದಿಗೊಳಿಸಿಲ್ಲ. ಅಲ್ಲದೇ ಪೂರೈಕೆದಾರರಿಗೆ ಆಗುವ ನಷ್ಟವನ್ನು ಸರಿದೂಗಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ, ಸಚಿವರು ಭರವಸೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿಯಲ್ಲಿನ ಪ್ರಶ್ನಾತೀತ ನಾಯಕರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿಯವರ ವರ್ಚಸ್ಸನ್ನೇ ಬಿಜೆಪಿ ಬಳಸಿಕೊಳ್ಳುತ್ತಿದ್ದು, ಮತ್ತೊಮ್ಮೆ ಅಧಿಕಾರಕ್ಕೇರುವ ವಿಶ್ವಾಸದಲ್ಲಿದೆ. ಇದರ ಮಧ್ಯೆ ಪ್ರಧಾನಿ ಮೋದಿ ಮಧ್ಯ ಪ್ರದೇಶದ ಇಂದೋರ್ ನಲ್ಲಿ ಮಾತನಾಡುವ ವೇಳೆ, ಪಕ್ಷದಲ್ಲಿ ತಮ್ಮನ್ನು ಎಚ್ಚರಿಸುವ, ಬುದ್ಧಿವಾದ ಹೇಳುವ ಹಾಗೂ ಪ್ರಶ್ನಿಸುವವರು ಯಾರೆಂಬ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ನರೇಂದ್ರ ಮೋದಿಯವರು ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ಜೊತೆ ಈ ಹಿಂದೆ ತಾವು ಪಕ್ಷದ ಕೆಲಸ ಮಾಡಿದ್ದು,…
ಹೊರಗಡೆ ಗಂಡನಾದವನು ಎಷ್ಟೇ ಫೇಮಸ್ ಆಗಿದ್ರೂ ಹೆಂಡತಿಗೆ ಮಾತ್ರ ಗಂಡನೇ ಎಂಬ ಗಾದೆಗೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಹೊಸ ‘ಸಾಕ್ಷಿ’ಯಾಗಿದ್ದಾರೆ. ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಕೂಲ್ ಕ್ಯಾಪ್ಟನ್ ಮಾತ್ರ ಅಲ್ಲ, ಹೆಂಡತಿಗೆ ಒಳ್ಳೆ ಪತಿ ಕೂಡ ಎನ್ನುವುದನ್ನು ತೋರಿಸಿ ಕೊಟ್ಟಿದ್ದಾರೆ. ಟೀಂ ಇಂಡಿಯಾದ ಮಾಜಿ ನಾಯಕನಾದರೂ ಸಾರ್ವಜನಿಕ ಸ್ಥಳದಲ್ಲಿ ಪತ್ನಿ ಸಾಕ್ಷಿ ಕಾಲಿಗೆ ಚಪ್ಪಲಿ ತೊಡಿಸುವ ಮೂಲಕ ಧೋನಿ ಸರಳತೆ ಮೆರೆದಿದ್ದಾರೆ. ಧೋನಿ ಪತ್ನಿ ಕಾಲಿಗೆ ಚಪ್ಪಲಿ…
ಜನರು ATM ಕಾರ್ಡ್ ಮೂಲಕ ಮಾಡುವ ವ್ಯವಹರಕ್ಕನುಗುಣವಾಗಿ 25 ಸಾವಿರದಿಂದ 5 ಲಕ್ಷ ಹಣದ ವರೆಗೆ ಅಪಘಾತ ವಿಮೆಯನ್ನು ಪಡೆಯಬಹುದಾಗಿದೆ..ಜನರಿಗೆ ಉಪಯೋಗವಾಗುವಂತ ಈ ಮಹತ್ತರ ಯೋಜನೆಯ ಬಗ್ಗೆ ಇಲ್ಲಿದೆ ನೋಡಿ ವಿವರ.. ಈ ಸೌಲಭ್ಯದ ಲಾಭ ಪಡೆಯಬೇಕಿದ್ದರೆ ನಿಮ್ಮ ಬ್ಯಾಂಕ್ ಅಕೌಂಟ್ ಹಾಗೂ ಪಾಸ್ ಬುಕ್ ಚಾಲ್ತಿಯಲ್ಲಿರಬೇಕು.. ನೀವು ATM ಕಾರ್ಡ್ ಪಡೆದ 45 ದಿನಗಳಲ್ಲಿ ಕಾರ್ಡ್ ಅನ್ನು ಬಳಸಿ ವ್ಯವಹಾರ ಮಾಡಿದ್ದರೆ ಈ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ.. ಯಾವ ಯಾವ ಕಾರ್ಡ್ ಗಳಿಗೆ ಎಷ್ಟು ವಿಮೆ…
ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಮಾನಸಿಕ ಸಮತೋಲನ ಕಳೆದುಕೊಂಡು ಓಡಾಡುತ್ತಿದ್ದಾರೆ. ಇವರ ಸ್ಥಿತಿಯನ್ನು ನೋಡಿ ಕೆಲವರು ವಿಡಿಯೋ ಮಾಡಿ ಲೇವಡಿ ಮಾಡುತ್ತಿದ್ದಾರೆ. ಇನ್ನೂ ಕೆಲವರು ವೆಂಕಟ್ ಸ್ಥಿತಿಗೆ ಮರುಗುತ್ತಿದ್ದಾರೆ. ಸದ್ಯ ಊಟ ಇಲ್ಲದೆ ಕೆಲವರಿಂದ ಹಲ್ಲೆಗೊಳಗಾಗಿರುವ ವೆಂಕಟ್ಗೆ ಸುದೀಪ್ ಚಿಕಿತ್ಸೆಗೆ ನೆರವಾಗಲು ಮುಂದಾಗಿದ್ದಾರೆ. ಕಿಚ್ಚ ಚಾರಿಟೇಬಲ್ ಸೊಸೈಟಿ ಈ ಬಗ್ಗೆ ಮಾಹಿತಿ ನೀಡಿದ್ದು, ಜನರು ಸ್ವಲ್ಪ ಸಂಯಮದಿಂದ ವರ್ತಿಸಬೇಕೆಂದು ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ವತಿಯಿಂದ ಮನವಿ ಮಾಡಿದ್ದಾರೆ. ಆತ್ಮೀಯರೆ ಕಳೆದ ಕೆಲ ದಿನಗಳಿಂದ ಮಾನಸಿಕವಾಗಿ ಜರ್ಜಿರಿತರಾಗಿ…
ಮಂಗಳೂರು ಹಾಗೂ ಮುಂಬೈಗೆ ಭಾರೀ ಅಪಾಯವೊಂದು ಕಾದಿದೆ. ಸಮುದ್ರ ತೀರಕ್ಕೆ ಎರಡೂ ನಗರಗಳು ಹತ್ತಿರದಲ್ಲಿರುವುದರಿಂದ ಅಪಾಯದ ಅಂಚಿನಲ್ಲಿದೆ. ಅಂಟಾರ್ಕಿಟಿಕಾದಲ್ಲಿ ಹಿಮ ಕರುಗುತ್ತಿರುವುದರಿಂದ ಸಮುದ್ರ ಮಟ್ಟ ದಿನೇ ದಿನೇ ಹೆಚ್ಚಾಗುತ್ತಿದ್ದು ಸಮುದ್ರದ ಅಕ್ಕಪಕ್ಕ ಇರುವ ನಗರಗಳಿಗೆ ಅಪಾಯ ಕಾದಿದೆ ಎಂದು ನಾಸಾ ಹೊರ ತಂದಿರುವ ಡೇಟಾ ಪ್ರಕಾರ ನ್ಯೂಯಾರ್ಕ್ ಪತ್ರಿಕೆ ವರದಿ ಮಾಡಿದೆ.
ಇದು ಮಹಾದೇವ ಶಿವನ ಪಂಚಾಕ್ಷರಿ ಮಂತ್ರ, ಜಪಿಸಿದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.