ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮತದಾನ ಪ್ರತಿಯೊಬ್ಬರ ಹಕ್ಕು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾದರೂ , ಮತದಾನದ ದಿನ ಎಷ್ಟೋ ಮಂದಿ ಮನೆಯಿಂದ ಹೊರಬರುವುದಿಲ್ಲ.. ಅದರಲ್ಲಿ ಕೆಲವರು ಯುವ ಜನತೆಯೂ ಕೂಡ ಸೇರಿರುತ್ತಾರೆ.. ಅದರಲ್ಲೂ 2000 ಸಾಲಿನ ವರ್ಷದಲ್ಲಿ ಹುಟ್ಟಿದವರಿಗೆ 2018 ರಲ್ಲಿ ನಡೆಯುವ ಚುನಾವಣೆಯಲ್ಲಿ ಮೊದಲ ವೋಟ್ ಮಾಡುವ ಅವಕಾಶವಾಗಿದೆ..
ಹೌದು 2018 ರಲ್ಲಿ ಮೊದಲ ಬಾರಿಗೆ ವೋಟ್ ಮಾಡುತ್ತಿರುವ ಯುವ ಜನತೆಯ ಜೊತೆಗೆ ಎಲ್ಲಾ ವರ್ಗದವರಿಗೂ ಮತದಾನದ ಮಹತ್ವವನ್ನು ತಿಳಿಸಿ ಅರಿವು ಮೂಡಿಸಲೆಂದೇ ಮಲ್ಲೇಶ್ವರಂ ನ “ನಮ್ಮ ವೋಟ್ ಫೌಂಡೇಷನ್” ನವರು 5K ಓಟವನ್ನು ಫೆಬ್ರವರಿ 25ರಂದು ಆಯೋಜಿಸಿದ್ದರು..
ಮಲ್ಲೇಶ್ವರಂ ಶಾಸಕರಾದ ಡಾ.ಅಶ್ವತ್ಥ್ ನಾರಾಯಣ್ ರವರು ಚಾಲನೆ ನೀಡಿದ ಈ ಅಭಿಯಾನದಲ್ಲಿ 2000 ಸ್ಪರ್ಧಿಗಳು ಭಾಗವಹಿಸುವ ಮೂಲಕ ಅಭೂತಪೂರ್ವ ಯಶಸ್ಸು ಕಂಡಿತು..
ಚಾಲನೆ ನೀಡಿದ್ದಷ್ಟೇ ಅಲ್ಲದೇ ಸ್ವತಃ ತಾವೂ ಕೂಡ ಸ್ಪರ್ಧಿಗಳೊಂದಿಗೆ ಪಾಲ್ಗೊಂಡು ಎಲ್ಲೂ ನಿಲ್ಲದೇ ಓಟವನ್ನು ಪೂರ್ಣಗೊಳಿಸಿದ್ದು ವಿಶೇಷವಾಗಿತ್ತು.. ಕಾರ್ಯಕ್ರಮವನ್ನು ಉದ್ಘಾಟಿಸಿ ಕೇವಲ ಸ್ಪೂರ್ತಿಯ ಮಾತುಗಳನ್ನಾಡಿ ಮನೆಗೆ ಹೋಗುವ ಬದಲು ಸ್ಪರ್ಧಿಗಳೊಂದಿಗೆ ಭಾಗವಹಿಸಿ ಕ್ರೀಡಾ ಸ್ಪೂರ್ತಿ ಮೆರೆದಿದ್ದು ನಿಜಕ್ಕೂ ಹೆಮ್ಮೆಯ ವಿಷಯವೇ ಸರಿ..
ಮಲ್ಲೇಶ್ವರಂ ಪ್ಲೇ ಗ್ರೌಂಡ್ ನಲ್ಲಿ ಶುರುವಾದ ಓಟ 5 ಕಿ ಮೀ ಸಾಗಿ ಮತ್ತದೇ ಆಟದ ಮೈದಾನದಲ್ಲಿ ಮುಕ್ತಾಯಗೊಂಡಿತು.. ಸಂಪೂರ್ಣ 5 ಕಿ ಮೀ ಅನ್ನು ಶಾಸಕರು ನಿರಾಯಾಸವಾಗಿ ಪೂರ್ಣಗೊಳಿಸಿದ್ದು ಓಟದಲ್ಲಿ ಭಾಗವಹಿಸಿದ ಎಷ್ಟೋ ಯುವಕರಿಗೆ ಹುಬ್ಬೇರುವಂತೆ ಮಾಡಿತು..
ಕ್ಷೇತ್ರದ ಜನತೆಗೆ ಶಾಸಕರುಗಳು ನೋಡಲು ಸಿಗುವುದೇ ಅಪರೂಪ ಆದರೆ ಮಲ್ಲೇಶ್ವರಂ ಶಾಸಕರಾದ ಡಾ.ಅಶ್ವತ್ಥ್ ನಾರಾಯಣ್ ರವರ ವಿಚಾರದಲ್ಲಿ ಈ ಅಭಿಪ್ರಾಯ ಬದಲಾಗುತ್ತದೆ.. ಸದಾ ಜನರ ನಡುವೆಯ ಜನಸಾಮಾನ್ಯರಂತೆ ಕಾಣುವ ಇವರು ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಾ ಅವರಿಗೆ ಅವಕಾಶಗಳನ್ನು ಮಾಡಿಕೊಡುವುದರಲ್ಲಿ ಮೊದಲಿಗರೆಂದೇ ಹೇಳಬಹುದು..
ಡೌನ್ ಟು ಅರ್ಥ್ ಪರ್ಸನಾಲಿಟಿ ಇಂದಲೇ ಎಲ್ಲರಿಗೂ ಇಷ್ಟವಾಗುವ ಡಾ.ಅಶ್ವತ್ಥ್ ನಾರಾಯಣ್ ರವರು ಎಂದಿಗೂ ಹೀಗೆ ಇರಲಿ ಎಂಬುದೇ ನಮ್ಮ ಆಶಯ..
ಏನೇ ಆಗಲಿ ಮತದಾನ ನಮ್ಮ ನಿಮ್ಮೆಲ್ಲರ ಹಕ್ಕು.. ವೋಟ್ ಮಾಡಲು ಮರೆಯದಿರಿ.. ಮರೆತವರನ್ನು ಕರೆತಂದು ಮತದಾನ ಮಾಡಿ..
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸ್ಮಾರ್ಟ್ಫೋನ್ನಲ್ಲಿ ಬಳಕೆಗೆ ಅಭಿವೃದ್ಧಿಪಡಿಸಲಾಗಿರುವ ಎಂ-ಆಧಾರ್ ಆ್ಯಪ್ ಅನ್ನು ಮತ್ತಷ್ಟು ಸುರಕ್ಷಿತಗೊಳಿಸಿರುವ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ)ಹೊಸ ಆವೃತ್ತಿಯನ್ನು ಗ್ರಾಹಕರ ಬಳಕೆಗಾಗಿ ಬಿಡುಗಡೆಮಾಡಿದೆ.ಹಿಂದಿನ ಆವೃತ್ತಿಯನ್ನು ಅಳಿಸಿ,ನೂತನ ಆವೃತ್ತಿಯನ್ನು ಸ್ಮಾರ್ಟ್ಫೋನ್ಗಳಲ್ಲಿ ಇನ್ಸ್ಟಾಲ್ ಮಾಡಿಕೊಳ್ಳುವಂತೆ ಯುಐಡಿಎಐ ಸೂಚಿಸಿದೆ. ನೂತನ ಆವೃತ್ತಿಯ ಎಂ-ಆಧಾರ್ನಲ್ಲಿ ಕನ್ನಡ ಸೇರಿದಂತೆ 13 ಭಾಷೆಗಳಿವೆ. ಆಧಾರ್ ಕಾರ್ಡ್ ಡೌನ್ಲೋಡ್, ಆಫ್ಲೈನ್ ಇಕೆವೈಸಿ, ವಿಳಾಸ ಪರಿಷ್ಕರಣೆ, ಇ-ಮೇಲ್ ಪರಿಶೀಲನೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಗ್ರಾಹಕರು ಎಂ-ಆಧಾರ್ನಿಂದ ಪಡೆಯಬಹುದಾಗಿದೆ. ಗುರುತು ಖಾತ್ರಿಗಾಗಿ ಆಧುನಿಕ ಬಯೋಮೆಟ್ರಿಕ್ ವ್ಯವಸ್ಥೆಯನ್ನುನೂತನ ಆವೃತ್ತಿಯಲ್ಲಿ ಬಳಸಲಾಗಿದ್ದು, ಇದರಿಂದ ಆಧಾರ್ ಆ್ಯಪ್ಅನ್ನು ಲಾಕ್…
ಇತ್ತೀಚಿನ ಜೀವನ ಶೈಲಿಯಲ್ಲಿ ಎಲ್ಲವು ಕಷ್ಟವಾಗುತ್ತಿವೆ. ಕೀಲು ನೋವು, ಮೂಳೆ ಸವೆತ ಮಂಡಿ ನೋವು ಇತ್ತೀಚೆಗೆ 30, 40 ವರ್ಷದವರಿಗೆ ದೊಡ್ಡವರಿಗೆ ಮಾತ್ರ ಮಂಡಿ ನೋವು ಅಥವಾ ಕೀಲುಗಳ ನೋವು ಕಾಣಿಸುಕೊಳ್ಳುತಿತ್ತು, ಆದರೆ ಈಗ ಎಲ್ಲಾ ಬದಲಾಗಿದೆ.
ದಿನಭವಿಷ್ಯ 21/2/2019 ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ ನಿಮ್ಮ ನಾಲಗೆ ನಿಮ್ಮ ಅಜ್ಜ ಅಜ್ಜಿಯಂದಿರ ಭಾವನೆಗಳಿಗೆ ಘಾಸಿ ಮಾಡುವುದರಿಂದ ನಿಮ್ಮ ಭಾಷೆಯನ್ನು…
ಪ್ರೀತಿಸಿ ಮದುವೆಯಾದ ಪ್ರೇಮಿಗಳಿಗೆ ಜಾತಿ ಬೇರೆಬೇರೆ ಇದ್ದ ಕಾರಣ ಮನೆಯವರು ಧಮಕಿ ಹಾಕಿದ ಘಟನೆ ವಿಜಯಪುರ ದಲ್ಲಿ ನಡೆದಿದೆ. ನಾವು ಒಬ್ಬರಿಗೊಬ್ಬರು ಪ್ರೀತಿಸಿದ್ದೆವೆ, ಮದುವೆ ಕೂಡ ಆಗಿದ್ದೆವೆ ಆದರೆ ನಮಗೆ ಜೀವನ ನಡೆಸಲು ಬಿಡುತ್ತಿಲ್ಲ. ಹೀಗಾಗಿ ನಮಗೆ ಬದಕಲು ಬಿಡಿ ಎಂದು ಪ್ರೇಮಿಗಳು ಅಂಗಲಾಚುತ್ತಿದ್ದಾರೆ. 5 ವರ್ಷಗಳಿಂದ ಪ್ರೀತಿಸಿ ಮದುವೆಯಾಗಿದ್ದ ದಂಪತಿಗಳಿಗೆ ಪೋಷಕರೇ ವಿಲನ್ ಆಗಿದ್ದಾರೆ. ವಿಜಯಪುರ ಜಿಲ್ಲೆ ಸಿಂಧಗಿ ತಾಲೂಕಿನ ನಾವದಗಿತ ಶೃತಿ ಹಾಗೂ ಆಲಮೇಲ ಪಟ್ಟಣದ ಗೌತಮ್ ಪೋಷಕರ ವಿರೋಧದ ಮಧ್ಯೆಯೂ ಸೆಪ್ಟೆಂಬರ್ 25ರಂದು…
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಕುಲವಧು’ ಧಾರಾವಾಹಿಯಲ್ಲಿ ಧನ್ಯಾ ಎಂದೇ ಖ್ಯಾತಿ ಪಡೆದಿರುವ ದೀಪಿಕಾ ಇತ್ತೀಚೆಗಷ್ಟೆ ‘ಮಿಸ್ ಸೌತ್ ಇಂಡಿಯಾ ಗ್ಲಾಮರ್ 2019’ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ನಟಿ ದೀಪಿಕಾ ಅವರು ಈ ಬಗ್ಗೆ ತಮ್ಮ ಇನ್ಸ್ ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ. ತಾವು ವಿನ್ನರ್ ಆದ ತಕ್ಷಣದ ಫೋಟೋವನ್ನು ಕ್ಲಿಕ್ಕಿಸಿಕೊಂಡು ಅದನ್ನು ಅಪ್ಲೋಡ್ ಮಾಡಿ ಅಭಿಮಾನಿಗಳಿಗೆ ಮತ್ತು ತಮ್ಮ ಗೆಳೆಯನಿಗೆ ಧನ್ಯವಾದ ತಿಳಿಸಿದ್ದಾರೆ. “ಮಿಸ್ ಸೌತ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದಕ್ಕೆ ತುಂಬಾ ಸಂತೋಷವಾಗಿದೆ. ಅದರಲ್ಲೂ ನಾನು ‘ಮಿಸ್ ಸೌತ್ ಇಂಡಿಯಾ…
ಭಗವಂತನ ಸಾನಿಧ್ಯದಲ್ಲಿ ಅಗರ್ಬತ್ತಿ ಹಚ್ಚುವುದು ಪೂಜೆ ಮತ್ತು ಪ್ರಾರ್ಥನೆಯ ಮಹತ್ವದ ಅಂಶ. ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಧ್ಯಾನದ ವೇಳೆ ಊದಿನಕಡ್ಡಿ ಹಚ್ಚುವ ಸಂಪ್ರದಾಯವಿದೆ. ಇದೊಂದು ಪುರಾತನ ಆಚರಣೆ. ಊದಿನಕಡ್ಡಿ ಮನೆ ತುಂಬ ಸುಗಂಧ ಪಸರಿಸುವುದು ಮಾತ್ರವಲ್ಲ, ಇದನ್ನು ಹಚ್ಚುವುದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಪುರಾತನ ಕಾಲದಲ್ಲಿ ಹಲವು ಔಷಧೀಯ ವಸ್ತುಗಳನ್ನು ಊದಿನಕಡ್ಡಿಯಲ್ಲಿ ಅಳವಡಿಸಲಾಗುತ್ತಿತ್ತು. ಲೋಬಾನ ಹಾಗೂ ಗುಗ್ಗಲ್ ಅತ್ಯಂತ ಜನಪ್ರಿಯವಾಗಿದ್ದವು. ಅದನ್ನು ಇಂದಿಗೂ ಬಳಸಲಾಗುತ್ತದೆ. ಲೋಬಾನವನ್ನು ಬಾಸ್ವೆಲ್ಲಿಯಾ ಎಂಬ ಮರದ ಅಂಟಿನಿಂದ ತಯಾರಿಸಲಾಗುತ್ತದೆ. ನಾವು ಅದರ ಸುಗಂಧವನ್ನು…