ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮತದಾನ ಪ್ರತಿಯೊಬ್ಬರ ಹಕ್ಕು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾದರೂ , ಮತದಾನದ ದಿನ ಎಷ್ಟೋ ಮಂದಿ ಮನೆಯಿಂದ ಹೊರಬರುವುದಿಲ್ಲ.. ಅದರಲ್ಲಿ ಕೆಲವರು ಯುವ ಜನತೆಯೂ ಕೂಡ ಸೇರಿರುತ್ತಾರೆ.. ಅದರಲ್ಲೂ 2000 ಸಾಲಿನ ವರ್ಷದಲ್ಲಿ ಹುಟ್ಟಿದವರಿಗೆ 2018 ರಲ್ಲಿ ನಡೆಯುವ ಚುನಾವಣೆಯಲ್ಲಿ ಮೊದಲ ವೋಟ್ ಮಾಡುವ ಅವಕಾಶವಾಗಿದೆ..
ಹೌದು 2018 ರಲ್ಲಿ ಮೊದಲ ಬಾರಿಗೆ ವೋಟ್ ಮಾಡುತ್ತಿರುವ ಯುವ ಜನತೆಯ ಜೊತೆಗೆ ಎಲ್ಲಾ ವರ್ಗದವರಿಗೂ ಮತದಾನದ ಮಹತ್ವವನ್ನು ತಿಳಿಸಿ ಅರಿವು ಮೂಡಿಸಲೆಂದೇ ಮಲ್ಲೇಶ್ವರಂ ನ “ನಮ್ಮ ವೋಟ್ ಫೌಂಡೇಷನ್” ನವರು 5K ಓಟವನ್ನು ಫೆಬ್ರವರಿ 25ರಂದು ಆಯೋಜಿಸಿದ್ದರು..
ಮಲ್ಲೇಶ್ವರಂ ಶಾಸಕರಾದ ಡಾ.ಅಶ್ವತ್ಥ್ ನಾರಾಯಣ್ ರವರು ಚಾಲನೆ ನೀಡಿದ ಈ ಅಭಿಯಾನದಲ್ಲಿ 2000 ಸ್ಪರ್ಧಿಗಳು ಭಾಗವಹಿಸುವ ಮೂಲಕ ಅಭೂತಪೂರ್ವ ಯಶಸ್ಸು ಕಂಡಿತು..
ಚಾಲನೆ ನೀಡಿದ್ದಷ್ಟೇ ಅಲ್ಲದೇ ಸ್ವತಃ ತಾವೂ ಕೂಡ ಸ್ಪರ್ಧಿಗಳೊಂದಿಗೆ ಪಾಲ್ಗೊಂಡು ಎಲ್ಲೂ ನಿಲ್ಲದೇ ಓಟವನ್ನು ಪೂರ್ಣಗೊಳಿಸಿದ್ದು ವಿಶೇಷವಾಗಿತ್ತು.. ಕಾರ್ಯಕ್ರಮವನ್ನು ಉದ್ಘಾಟಿಸಿ ಕೇವಲ ಸ್ಪೂರ್ತಿಯ ಮಾತುಗಳನ್ನಾಡಿ ಮನೆಗೆ ಹೋಗುವ ಬದಲು ಸ್ಪರ್ಧಿಗಳೊಂದಿಗೆ ಭಾಗವಹಿಸಿ ಕ್ರೀಡಾ ಸ್ಪೂರ್ತಿ ಮೆರೆದಿದ್ದು ನಿಜಕ್ಕೂ ಹೆಮ್ಮೆಯ ವಿಷಯವೇ ಸರಿ..
ಮಲ್ಲೇಶ್ವರಂ ಪ್ಲೇ ಗ್ರೌಂಡ್ ನಲ್ಲಿ ಶುರುವಾದ ಓಟ 5 ಕಿ ಮೀ ಸಾಗಿ ಮತ್ತದೇ ಆಟದ ಮೈದಾನದಲ್ಲಿ ಮುಕ್ತಾಯಗೊಂಡಿತು.. ಸಂಪೂರ್ಣ 5 ಕಿ ಮೀ ಅನ್ನು ಶಾಸಕರು ನಿರಾಯಾಸವಾಗಿ ಪೂರ್ಣಗೊಳಿಸಿದ್ದು ಓಟದಲ್ಲಿ ಭಾಗವಹಿಸಿದ ಎಷ್ಟೋ ಯುವಕರಿಗೆ ಹುಬ್ಬೇರುವಂತೆ ಮಾಡಿತು..
ಕ್ಷೇತ್ರದ ಜನತೆಗೆ ಶಾಸಕರುಗಳು ನೋಡಲು ಸಿಗುವುದೇ ಅಪರೂಪ ಆದರೆ ಮಲ್ಲೇಶ್ವರಂ ಶಾಸಕರಾದ ಡಾ.ಅಶ್ವತ್ಥ್ ನಾರಾಯಣ್ ರವರ ವಿಚಾರದಲ್ಲಿ ಈ ಅಭಿಪ್ರಾಯ ಬದಲಾಗುತ್ತದೆ.. ಸದಾ ಜನರ ನಡುವೆಯ ಜನಸಾಮಾನ್ಯರಂತೆ ಕಾಣುವ ಇವರು ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಾ ಅವರಿಗೆ ಅವಕಾಶಗಳನ್ನು ಮಾಡಿಕೊಡುವುದರಲ್ಲಿ ಮೊದಲಿಗರೆಂದೇ ಹೇಳಬಹುದು..
ಡೌನ್ ಟು ಅರ್ಥ್ ಪರ್ಸನಾಲಿಟಿ ಇಂದಲೇ ಎಲ್ಲರಿಗೂ ಇಷ್ಟವಾಗುವ ಡಾ.ಅಶ್ವತ್ಥ್ ನಾರಾಯಣ್ ರವರು ಎಂದಿಗೂ ಹೀಗೆ ಇರಲಿ ಎಂಬುದೇ ನಮ್ಮ ಆಶಯ..
ಏನೇ ಆಗಲಿ ಮತದಾನ ನಮ್ಮ ನಿಮ್ಮೆಲ್ಲರ ಹಕ್ಕು.. ವೋಟ್ ಮಾಡಲು ಮರೆಯದಿರಿ.. ಮರೆತವರನ್ನು ಕರೆತಂದು ಮತದಾನ ಮಾಡಿ..
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಇಂಡಿಯನ್ ಪ್ರೀಮಿಯರ್ ಲೀಗ್ ನ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರ ಆಂಡ್ರೆ ರಸ್ಸೆಲ್ ಸಿಕ್ಸರ್ ಕಿಂಗ್ ಆಗ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆಂಡ್ರೆ ರಸ್ಸೆಲ್ 11 ಸಿಕ್ಸರ್ ಬಾರಿಸಿ ಈ ಬಾರಿ ಐಪಿಎಲ್ ನಲ್ಲಿ ನಾನೇ ಸಿಕ್ಸರ್ ಕಿಂಗ್ ಎನ್ನುತ್ತಿದ್ದಾರೆ. ಆಂಡ್ರೆ ರಸ್ಸೆಲ್ ಸಿಕ್ಸರ್ ಕಿಂಗ್ ಆದ್ರೆ ಅವ್ರ ಪತ್ನಿ ಬಿಕಿನಿ ಕ್ವೀನ್ ಎನ್ನುತ್ತಿದ್ದಾರೆ ಜನರು. ಆಂಡ್ರೆ ರಸ್ಸೆಲ್ ಜಮೈಕಾದ ನಿವಾಸಿ. ಪತ್ನಿ ಲಾರಾ ಡೊಮಿನಿಕನ್…
*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಡಿಜಿಟಲ್ ಪೇಮೆಂಟ್ ಮೊಬೈಲ್ ಆ್ಯಪ್ ಆಗಿರುವ ಭೀಮ್ ಅನ್ನು ಪ್ರಚಾರ ಪಡಿಸುವ ಸಲುವಾಗಿ ಕೇಂದ್ರ ಸರಕಾರ ಏ.14ರಿಂದ ನಾನಾ ಬಗೆಯ ಕ್ಯಾಶ್ ಬ್ಯಾಕ್ ಮತ್ತು ಇನ್ಸೆಂಟಿವ್ಗಳನ್ನು ನೀಡಲಿದೆ. ಭೀಮ್ ಆ್ಯಪ್’ನ್ನು ಪ್ರಧಾನಿ ನರೇಂದ್ರ ಮೋದಿಯವರು 30 ಡಿಸೆಂಬರ್ 2016ರಂದು ಬಿಡುಗಡೆ ಮಾಡಿದ್ದರು. ಯುಪಿಐ (ಯುನಿಫೈಡ್ ಪೇಮೆಂಟ್ ಇಂಟರ್ ಫೇಸ್) ಮೂಲಕ ಹಣ ಪಾವತಿ ಮಾಡಲು ಬಳಸುವ ಆ್ಯಪ್ ಇದಾಗಿದೆ. ಈಗಾಗಲೇ ಒಂದು ವರ್ಷ ಪೂರೈಸಿರುವ ಈ ಭೀಮ್…
ಬಿರುಗಾಳಿ ಸಹಿತ ಸುರಿದ ಭಾರೀ ಮಳೆಯ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಯ ಮೇಲ್ಛಾವಣಿ ಸೇರಿದಂತೆ, 20ಕ್ಕೂ ಅಧಿಕ ವಿದ್ಯುತ್ ಕಂಬ, ಟಿಸಿ ಜಖಂಗೊಂಡಿದೆ. ನೆಲಮಂಗಲ ತಾಲೂಕಿನ ಕುಲವನಹಳ್ಳಿ ಗ್ರಾಮ ಪಂಚಾಯ್ತಿ ಭಾಗದಲ್ಲಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಗೋವೇನಹಳ್ಳಿ ಸರ್ಕಾರಿ ಶಾಲೆಯ ಮೇಲ್ಛಾವಣಿ ಸಂಪೂರ್ಣ ಜಖಂಗೊಂಡಿದ್ದು, ಇಂದು ಬೆಳಗ್ಗೆ ಕ್ಲಾಸ್ಗೆ ಆಗಮಿಸಿದ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಾಕ್ ಆಗಿದ್ದಾರೆ. ಶಾಲೆಯಿಂದ ಹೊರಗೆ ನಿಂತು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಾಲಾ ಕಟ್ಟಡ ವೀಕ್ಷಿಸುತ್ತಿದ್ದಾರೆ. ತಾಳೇಕೆರೆ, ತಿಪ್ಪಗೊಂಡನಹಳ್ಳಿ ಗ್ರಾಮದಲ್ಲಿ 20ಕ್ಕೂ ಅಧಿಕ…
ಲೋಕಸಭೆ ಚುನಾವಣೆ ದಿನಾಂಕ ಪ್ರಕಟವಾಗಿದೆ. ಚುನಾವಣೆ ಹತ್ತಿರ ಬರ್ತಿದ್ದಂತೆ ಚುನಾವಣಾ ಆಯೋಗ, ರಾಜಕೀಯ ಪಕ್ಷಗಳ ಜೊತೆ ಮತದಾರರು ತಯಾರಿ ಶುರು ಮಾಡಿದ್ದಾರೆ. ಪ್ರತಿಯೊಬ್ಬ ನಾಗರೀಕನೂ ತನ್ನ ಹಕ್ಕು ಚಲಾಯಿಸಬೇಕಾಗುತ್ತದೆ. ಆದ್ರೆ ಅನೇಕರು ವೋಟರ್ ಐಡಿ ಇಲ್ಲ ಎನ್ನುವ ಕಾರಣಕ್ಕೆ ಮತದಾನ ಮಾಡಲು ಹೋಗುವುದಿಲ್ಲ. ಸಾಮಾನ್ಯವಾಗಿ ವೋಟರ್ ಐಡಿ ಹಾಗೂ ಸ್ಲಿಪ್ ಮತದಾನಕ್ಕೆ ಅಗತ್ಯವಾಗಿ ಬೇಕಾಗುತ್ತದೆ. ನಿಮ್ಮ ಬಳಿ ವೋಟರ್ ಐಡಿ ಇಲ್ಲವೆಂದ್ರೆ ಚಿಂತೆ ಬೇಡ. ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ದರೆ ಸಾಕು. ವೋಟರ್ ಲಿಸ್ಟ್ ನಲ್ಲಿ…
ಚಿಲ್ಲಿ ಚಿಕನ್ ಹೆಸರು ಕೇಳದವರೇ ಇಲ್ಲ. ಹೆಸರು ಕೇಳಿದ ಕೂಡಲೇ ಬಾಯಲ್ಲಿ ನೀರೂರಿಸುವ ಚಿಲ್ಲಿ ಚಿಕನ್ ಕಣ್ಣ ಮುಂದೆ ಬರುತ್ತದೆ. ನಿಮಗಾಗಿ ಬಾಯಿಲ್ಲಿ ನೀರಿರುವ, ಮೈಸೂರು ಶೈಲಿಯ ಚಿಲ್ಲಿ ಚಿಕನ್ ರೆಸಿಪಿ …
ಉತ್ತಮ ಆರೋಗ್ಯ ಹಾಗೂ ಸದೃಢ ದೇಹಕ್ಕಾಗಿ ಜನ ಜಿಮ್ ಗೆ ಹೋಗ್ತಾರೆ. ಕೆಲವರಿಗೆ ಸದೃಢ ದೇಹ ಹೊಂದುವ ಆಸೆ ಸಿಕ್ಕಾಪಟ್ಟೆ ಇರುತ್ತೆ. ಹಾಗಾಗಿ ಏನೂ ತಿನ್ನದೆ ಜಿಮ್ ಗೆ ಹೋಗ್ತಾರೆ. ಇದ್ರಿಂದ ಆರೋಗ್ಯ ಹಾಗೂ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಖಾಲಿ ಹೊಟ್ಟೆಯಲ್ಲಿ ಜಿಮ್ ಗೆ ಹೋಗುವುದು ಒಳ್ಳೆಯದಲ್ಲ. ಅಲ್ಪ ಆಹಾರ ಸೇವನೆ ಮಾಡಿ ಜಿಮ್ ಗೆ ಹೋಗುವುದು ಬೆಸ್ಟ್. ಜಿಮ್ ಗೆ ಹೋಗುವ ಮೊದಲು ಹಾಲು ಮತ್ತು ಓಟ್ಸ್ ಸೇವನೆ ಮಾಡಿ. ಹೀಗೆ ಮಾಡುವುದರಿಂದ…