ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೂರೂವರೆ ವರ್ಷದಲ್ಲಿ ಪ್ರಚಾರಕ್ಕಾಗಿ 3,755 ಕೋಟಿ ರೂಪಾಯಿ ವ್ಯಯಿಸಿದೆ ಎಂಬ ವಿಚಾರ ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಿದ್ದ ಅರ್ಜಿಯಿಂದ ಬಯಲಿಗೆ ಬಂದಿದೆ.
ಮೋದಿ ಸರ್ಕಾರ 2014ರ ಏಪ್ರಿಲ್ನಿಂದ 2017ರ ಅಕ್ಟೋಬರ್ವರೆಗೆ ಪ್ರಚಾರಕ್ಕಾಗಿಯೇ ಬರೋಬ್ಬರಿ 37,54,06,23,616 ರೂಪಾಯಿ ವ್ಯಯಿಸಿದೆ. ವಿದ್ಯುನ್ಮಾನ, ಮುದ್ರಣ ಮತ್ತು ಇತರ ಸಾರ್ವಜನಿಕ ಪ್ರಚಾರದ ಜಾಹೀರಾತಿಗಾಗಿ ಇಷ್ಟು ಮೊತ್ತದ ಹಣ ವ್ಯಯ ಮಾಡಲಾಗಿದೆ ಎಂದು ಆರ್ಟಿಐ ಅಡಿ ಸಲ್ಲಿಸಿದ ಅರ್ಜಿಗೆ ಸರ್ಕಾರವೇ ಉತ್ತರಿಸಿದೆ.
ಗ್ರೇಟರ್ ನೋಯ್ಡಾ ಮೂಲದ ಸಾಮಾಜಿಕ ಕಾರ್ಯಕರ್ತ ರಾಮ್ವೀರ್ ತನ್ವರ್ ಎಂಬುವವರು ಆರ್ಟಿಐ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಉತ್ತರಿಸಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಕೇಂದ್ರ ಸರ್ಕಾರ ಮೂರೂವರೆ ವರ್ಷದಲ್ಲಿ ವಿದ್ಯುನ್ಮಾನ, ರೇಡಿಯೋ, ಡಿಜಿಟಲ್ ಸಿನಿಮಾ, ಇಂಟರ್ನೆಟ್, ಎಸ್ಎಂಎಸ್ಗಳಿಗೆ 1,666 ಕೋಟಿ ರೂಪಾಯಿಗೂ ಅಧಿಕ ಹಣ ವೆಚ್ಚ ಮಾಡಿದೆ.
ಮುದ್ರಣ ಮಾಧ್ಯಮದಲ್ಲಿ ಪ್ರಚಾರಕ್ಕಾಗಿ 1,698 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವ್ಯಯಿಸಿದೆ ಎಂದು ಮಾಹಿತಿ ನೀಡಿದೆ.
ಜೊತೆಗೆ ಸಾರ್ವಜನಿಕ ಪೋಸ್ಟರ್ಗಳು, ಬುಕ್ಲೆಟ್ಗಳು, ಕ್ಯಾಲೆಂಡರ್ಗಳಿಗಾಗಿ 399 ಕೋಟಿ ರೂಪಾಯಿಗೂ ಅಧಿಕ ಹಣ ವೆಚ್ಚ ಮಾಡಲಾಗಿದೆ ಎಂದು ಆರ್ಐಟಿ ಅರ್ಜಿಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಉತ್ತರಿಸಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಜನರ ತೆರಿಗೆ ಹೊರೆ ತಪ್ಪಿಸಲು ಗ್ರಾಹಕರ ಉತ್ಪನ್ನಗಳು ಹಾಗೂ ದಿನ ಬಳಕೆ ವಸ್ತುಗಳ ಮೇಲಿನ ಸರಕುಗಳು ಮತ್ತು ಸೇವೆಗಳ ತೆರಿಗೆ (ಜಿಎಸ್ಟ) ಕಡಿಮೆ ಮಾಡಿರುವ ಕೇಂದ್ರ ಸರ್ಕಾರ ಈಗ ವಾಷಿಂಗ್ಮೆಷಿನ್, ಫ್ರಿಜ್ನಂಥ ಗೃಹೋಪಯೋಗಿ ಸಾಧನಗಳ ಸುಂಕ ಕಡಿಮೆ ಮಾಡಲು ಚಿಂತನೆ ನಡೆಸಿದೆ.
ಮಕ್ಕಳು ಸತತವಾಗಿ ಸ್ಮಾರ್ಟ್ ಫೋನ್ ಮತ್ತು ಟಿವಿ ವೀಕ್ಷಿಸುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ನಿಮಗೆ ಅರಿವಿದೆಯೇ…
ಇಂದೋರ್ ನಲ್ಲಿ ಮಹಿಳೆಯೊಬ್ಬಳು 60 ವರ್ಷದ ನಿವೃತ್ತ ಸರ್ಕಾರಿ ನೌಕರನೊಬ್ಬನನ್ನು ಮದುವೆಯಾಗಿ ಅರೇ ದಿನದಲ್ಲಿ ಮನೆಯಲ್ಲಿ ಚನ್ನಾಭರಣ ಮತ್ತು ನಗದಿನೊಂದಿಗೆ ಪರಾರಿಯಾಗಿರುವ ಘಟನೆ ನಡೆದಿದೆ.
ಭಾರತದ ಅತೀ ದೊಡ್ಡ ಹನುಮಂತನಿಗೆ ಭರ್ಜರಿ ಸ್ವಾಗತ ಮಾಡಿ, ಬೀಳ್ಕೊಟ್ಟ ಸೂಲಿಬೆಲೆ ಗ್ರಾಮಸ್ತರು. ಹೌದು, ಭಾರತದ ಅತೀ ಎತ್ತರದ, 62 ಅಡೀ ಇರುವ ಹನುಮನ ಏಕಶಿಲಾವಿಗ್ರಹವನ್ನು ಕೋಲಾರದಿಂದ ಬೆಂಗಳೂರಿಗೆ ಸಾಗಿಸುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿರುವಂತದ್ದೆ. ಹನುಮನಿಗೆ ಅಭೂತಪೂರ್ವ ಸ್ವಾಗತ ಬೆಂಗಳೂರಿನ ಹೆಚ್’ಬಿಆರ್ ಬಡಾವಣೆಯ ಕಾಚರಕನಹಳ್ಳಿಯ ಶ್ರೀ ಕೋದಂಡರಾಮಸ್ವಾಮಿ ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪನೆಗಾಗಿ ಸಿದ್ದವಾಗಿದ್ದ 62 ಅಡಿ ಎತ್ತರದ, 750 ಟನ್ ತೂಕದ ವೀರಾಂಜನೇಯ ಸ್ವಾಮಿಯ ವಿಗ್ರಹವನ್ನು, 300 ಚಕ್ರಗಳ ಬೃಹತ್ ವಾಹನದಲ್ಲಿ ಸಾಗಿಸಲಾಗುತ್ತಿದೆ. ಮಾರ್ಗ ಮಧ್ಯ ತೊಂದರೆಯಾದರೂ, ಆ…
ಆಲೂಗಡ್ಡೆ ಮತ್ತು ಈರುಳ್ಳಿಯನ್ನು ನೀವು ಏತಕ್ಕಾಗಿ ಬಳಸುತ್ತೀರಿ..? ಇಂಥದ್ದೊಂದು ಪ್ರಶ್ನೆ ಕೇಳಿದರೆ ಯಾರೇ ಆದರೂ ಅಡುಗೆ ತಯಾರಿಸಲು ಬಳಸುತ್ತೇವೆ ಎಂದು ಹೇಳುತ್ತಾರೆ. ಆದರೆ, ಆಲೂಗಡ್ಡೆ ಮತ್ತು ಈರುಳ್ಳಿಯಿಂದ ವಿದ್ಯುತ್ ಉತ್ಪಾದನೆಯಾಗುತ್ತದೆ.
ಇನ್ಮುಂದೆ ವಾಹನಗಳ ಮೇಲೆ ಜಾತಿ ಸೂಚಕ ನಮ್ಮದೇ ಶ್ರೇಷ್ಠ ಜಾತಿ ಎಂದು ಬಿಂಬಿಸುವ ಘೋಷ ವಾಕ್ಯಗಳಿದ್ದ 250 ವಾಹನಗಳ ಮಾಲೀಕರಿಗೆ ಪೊಲೀಸರು ದಂಡ ವಿಧಿಸಿದ್ದಾರೆ ಸುಲಲಿತ ಸಂಚಾರ ಮತ್ತು ಆಂದೋಲನದ ಭಾಗವಾಗಿ ಶುಕ್ರವಾರ ‘ಆಪರೇಷನ್ ಕ್ಲೀನ್ ‘ ಕಾರ್ಯಾಚರಣೆ ನಡೆಸಿರುವ ಪೊಲೀಸರು ಜನರಲ್ಲಿ ಭೀತಿ ಹುಟ್ಟಿಸುವಂತ ಘೋಷ ವಾಕ್ಯಗಳಿರುವ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿದರು. ವಾಹನಗಳಮೇಲೆ ‘ಗೌಡ್ರ ಗೂಳಿ’, ‘ಕುಂತರೆ ಕುರುಬ, ನಿಂತರೆ ಕಿರುಬ’, ‘ತಿಗಳರ ಹುಡ್ಗ’ ಇನ್ನೂ ಹಲವು ರೀತಿಯಜಾತಿ ಸೂಚಕ ಸ್ಟಿಟಕರ್ಗಳನ್ನು ಅಂಟಿಸಿಕೊಂಡಿರುವುದು ಸಾಮಾನ್ಯವಾಗಿ ಕಾಣುತ್ತದೆ…