ಸುದ್ದಿ

16ರ ಬಾಲಕಿಗೆ ಬಾಲ್ಯ ವಿವಾಹ ಸಂಬ್ರಮ – ಮದುಮಗ ಸೇರಿದಂತೆ 6 ಮಂದಿ ಅರೆಸ್ಟ್……!

104

ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರ ಕ್ಷೇತ್ರದಲ್ಲೇ ಬಾಲ್ಯವಿವಾಹ ನಡೆದಿದ್ದು, ಈ ಬಾಲ್ಯ ವಿವಾಹದ ವರದಿ ಮಾಡಲು ತೆರಳಿದ್ದ ಮಾಧ್ಯಮದವರ ಮೇಲೆ ಹಲ್ಲೆ ಯತ್ನವೂ ನಡೆದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಸ್ವಕ್ಷೇತ್ರ ಚಾಮರಾಜನಗರದ ಕಲ್ಯಾಣ ಮಂಟಪವೊಂದರಲ್ಲಿ ಬಾಲ್ಯ ವಿವಾಹ ನಡೆದಿದೆ. ಸಚಿವರ ಸಮುದಾಯಕ್ಕೆ ಸೇರಿದ 16 ವರ್ಷದ ಬಾಲಕಿಗೆ 24 ವರ್ಷದ ಯುವಕನೊಂದಿಗೆ ವಿವಾಹ ನೆರವೇರಿದೆ.ಚಾಮರಾಜನಗರದ ಉಪ್ಪಾರ ಬಡಾವಣೆಯ ಬಾಲಕಿಯೊಂದಿಗೆ ಅದೇ ಬಡಾವಣೆಯ ಯುವಕನೊಂದಿಗೆ ಮದುವೆ ನಡೆಯುತ್ತಿರುವ ಬಗ್ಗೆ ಮಕ್ಕಳ ಸಹಾಯವಾಣಿಗೆ ದೂರವಾಣಿ ಕರೆಯೊಂದು ಬಂದಿದೆ.

ಈ ಮಾಹಿತಿ ಆಧರಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪೊಲೀಸರೊಂದಿಗೆ ಕಲ್ಯಾಣಮಂಟಪಕ್ಕೆ ಹೋಗಿದ್ದಾರೆ. ಆದರೆ ಅಷ್ಟೊತ್ತಿಗೆ ಮಾಂಗಲ್ಯಧಾರಣೆ ಆಗಿ ಹೋಗಿತ್ತು. ಬಾಲಕಿಗೆ 18 ವರ್ಷ ತುಂಬಿರುವ ಬಗ್ಗೆ ದಾಖಲಾತಿ ಒದಗಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಮದುಮಗ ಮಹೇಶ್ ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ. ಬಾಲಕಿಯನ್ನು ವಶಕ್ಕೆ ಪಡೆದು ಬಾಲಮಂದಿರದಲ್ಲಿ ಆಶ್ರಯ ನೀಡಲಾಗಿದೆ.

ಈ ಸಂದರ್ಭದಲ್ಲಿ ವರದಿ ಮಾಡಲು ಹೋದ ಮಾಧ್ಯಮದವರ ಮೇಲೆ ಬಾಲಕಿಯ ಸಂಬಂಧಿಕರು ಹಲ್ಲೆ ಮಾಡಲು ಯತ್ನಿಸಿದ್ದಾರೆ. ಜೊತೆಗೆ ವಿಡಿಯೋ ಮಾಡದಂತೆ ಧಮ್ಕಿ ಹಾಕಿದ್ದಾರೆ.ಬಾಲ್ಯ ವಿವಾಹದ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಸಿ.ಪುಟ್ಟರಂಗಶೆಟ್ಟಿ, ಬಾಲ್ಯ ವಿಹಾಹಕ್ಕೆ ತಮ್ಮ ತೀವ್ರ ವಿರೋಧವಿದ್ದು ಯಾವುದೇ ಮುಲಾಜಿಲ್ಲದೆ ಪೋಷಕರ ವಿರುದ್ಧ ಕ್ರಮ ಜರುಗಿಸಲು ಪೊಲೀಸರಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ರಾಜಕೀಯ

    ಮಿತ್ರ ಪಕ್ಷ ಕಾಂಗ್ರೆಸ್ ತೊರೆದು ಜೆಡಿಎಸ್, ಬಿಜೆಪಿ ಜೊತೆ ಮೈತ್ರಿ?

    ಇಷ್ಟು ದಿನ ಬಿಜೆಪಿ ಸಮ್ಮಿಶ್ರ ಸರ್ಕಾರ ಈಗ ಬೀಳುತ್ತದೆ ಆಗ ಬೀಳುತ್ತದೆ ಎಂದು ಹೇಳಿಕೊಂಡೆ ಬರುತ್ತಿದೆ ಆದರೆ ಅದು ಸಾಧ್ಯವಾಗಿಲ್ಲ. ಆಪರೇಷನ್ ಕಮಲ ಮಾಡಲು ಬಿಜೆಪಿ ಏನೆಲ್ಲ ಹರಸಾಹಸ ಮಾಡಿ ಕಡೆಗೆ ಮುಖಭಂಗ ಅನುಭವಿಸಿದೆ. ಈಗಲೂ ಸಹ ಕಾಂಗ್ರೆಸ್ನ ರೆಬಲ್ ಶಾಸಕ ರಮೇಶ್ ಜಾರಕಿಹೊಳಿ ಬಿಜೆಪಿ ಗೆ ಹೋಗುತ್ತಾರೆ ಎಂಬ ಸುದ್ದಿ ಎಲ್ಲೆಡೆ ಹರಡಿದೆ. ಅವರು ಮಾತ್ರ ಅಲ್ಲ ಅವರ ಜೊತೆ ಅವರ ಬೆಂಬಲಿಗರು ಮೈತ್ರಿ ಸರ್ಕಾರ ಉರುಳಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಇದಕ್ಕೆ ಕಾರಣ ಅವರಿಗೆ ಸಚಿವ…

  • ಸುದ್ದಿ

    ನೀವು ನಿಂತು ಆಹಾರವನ್ನು ಸೇವನೆ ಮಾಡುತ್ತಿದ್ದೀರಾ ಹಾಗಾದರೆ ಇದನ್ನು ನೀವು ತಪ್ಪದೆ ತಿದುಕೊಳ್ಳಬೇಕು.!

    ನಿಂತುಕೊಂಡು ತಿಂದರೆ ಅದರಿಂದ ನಮ್ಮ ಆರೋಗ್ಯದ ಮೇಲೆ ಯಾವ ಪರಿಣಾಮಗಳು ಬೀರಬಹುದು ಎಂದು ನಾವು ತಿಳಿದುಕೊಳ್ಳಬೇಕು. ಇಂದಿನ ಸೂಪರ್ ಫಾಸ್ಟ್ ಯುಗದಲ್ಲಿ ನಮಗೆ ಕುಳಿತುಕೊಂಡು ಆರಾಮವಾಗಿ ತಿನ್ನಲು ಪುರುಸೊತ್ತೇ ಇಲ್ಲ. ಅದು ಹೋಟೆಲ್ ಗಳಿಗೆ ಹೋದರೂ ಅಲ್ಲಿ ಕಾರ್ಮಿಕರ ಕೊರತೆಯಿಂದಾಗಿ ಸೆಲ್ಫ್ ಸರ್ವೀಸ್ ಮಾಡಿ, ನಿಂತುಕೊಂಡೇ ತಿನ್ನುವ ವ್ಯವಸ್ಥೆ ಮಾಡಿರುವರು. ಆದರೆ ನಿಂತುಕೊಂಡು ತಿನ್ನುವುದು ನಮ್ಮ ದೇಹಕ್ಕೆ ಒಳ್ಳೆಯದೇ ಅಥವಾ ಕೆಟ್ಟದೇ ಎನ್ನುವ ಪ್ರಶ್ನೆ ಮೂಡುವುದು. ಆದರೆ ನೆಲದ ಮೇಲೆ ಕುಳಿತುಕೊಂಡು, ಕಾಲುಗಳನ್ನು ಮಡಚಿಟ್ಟು ತಟ್ಟೆಯಲ್ಲಿ ಬಡಿಸಿಟ್ಟ…

  • ಸಿನಿಮಾ

    ಮಾರುವೇಷದಲ್ಲಿ ಥಿಯೇಟರ್​ಗೆ ಹೋಗಿ ಕೆಜಿಎಫ್ ನೋಡಿದ ಸ್ಟಾರ್ ನಟ..!ಅಲ್ಲಿ ದರ್ಶನ್ ಫ್ಯಾನ್ ಆಡಿದ ಮಾತು ಕೇಳಿ ಕಣ್ಣಿರಿ ಟ್ಟರು..!

    ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕಜಿಎಫ್’ ಸಿನಿಮಾ ಭಾರತದಾದ್ಯಂತ ಎಲ್ಲೆಡೆ ಹವಾ ಕ್ರಿಯೆಟ್ ಮಾಡಿದ್ದು, ಸಿನಿತಾರೆಯರು ಸೇರಿದಂತೆ ಅಭಿನಿಮಾನಿಗಳಿಂದ ಅಪಾರ ಮೆಚ್ಚುಗೆ ಪಡೆಯುತ್ತಿದೆ. ಅಭಿಮಾನಿಗಳ ರೀತಿ ಎಂಜಾಯ್ ಮಾಡಿಕೊಂಡು ಸಿನಿಮಾ ನೋಡಲು ಸ್ಯಾಂಡಲ್‍ವುಡ್ ನಟ ಲುಂಗಿ, ಹವಾಯಿ ಚಪ್ಪಲಿ ಧರಿಸಿಕೊಂಡು ಸಿನಿಮಾ ನೋಡಿದ್ದಾರೆ. ನವರಸ ನಾಯಕ ಜಗ್ಗೇಶ್​ ಅವರು ಮಾರು ವೇಷದಲ್ಲಿ ಥಿಯೇಟರ್​ಗೆ ಹೋಗಿ ಕೆಜಿಎಫ್​ ಚಿತ್ರ ವೀಕ್ಷಣೆ ಮಾಡಿದ್ದು, ಈ ವೇಳೆ ಥಿಯೇಟರ್ ನಲ್ಲಿ ತಮಗಾದ ರೋಚಕ ಅನುಭವವನ್ನು ಹಂಚಿಕೊಂಡಿದ್ದಾರೆ.ನಟ ಜಗ್ಗೇಶ್ ಅವರು ಲುಂಗಿ, ಹವಾಯಿ…

  • ಶ್ರದ್ಧಾಂಜಲಿ

    ಖ್ಯಾತ ನಟ ನಂದಮೂರಿ ತಾರಕರತ್ನ ನಿಧನ

    ಬೆಂಗಳೂರು: ಟಾಲಿವುಡ್​ ಖ್ಯಾತ ನಟ ನಂದಮೂರಿ ತಾರಕರತ್ನ (Nandamuri Taraka Ratna) ನಿಧನರಾಗಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಇಂದು(ಫೆ.18) ಬೆಂಗಳೂರಿನ ನಾರಾಯಣ ಹೃದಯಾಲದಲ್ಲಿ ತಾರಕರತ್ನ(39) ಕೊನೆಯುಸಿರೆಳೆದಿದ್ದಾರೆ.  ಜನವರಿ 27ರಂದು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಕುಪ್ಪಂ ಬಳಿ ಟಿಡಿಪಿ ಪಾದಯಾತ್ರೆ ವೇಳೆ ಕುಸಿದುಬಿದ್ದಿದ್ದರು. ಆ ವೇಳೆ ತಾರಕರತ್ನಗೆ ಹೃದಯಸ್ತಂಭನವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಬೆಂಗಳೂರಿನ ನಾರಾಯಣ ಹೃದಯಾಲಕ್ಕೆ ಶಿಫ್ಟ್​ ಮಾಡಲಾಗಿತ್ತು.  23 ದಿನಗಳಿಂದ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಾರಕರತ್ನ ಅವರಿಗೆ, ಬೆಂಗಳೂರಿನ ನಾರಾಯಣ ಆಸ್ಪತ್ರೆಯಲ್ಲಿ ನುರಿತ…

  • ವ್ಯಕ್ತಿ ವಿಶೇಷಣ

    ಈಗ 5 ರೂಪಾಯಿಗೆ ವೈದ್ಯಕೀಯ ಸೇವೆ ಸಿಗುತ್ತೆ …!ತಿಳಿಯಲು ಇದನ್ನು ಓದಿ..

    ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆಯನ್ನು ವಿರೋಧಿಸಿ ಸಾವಿರಾರು ವೈದ್ಯರುಗಳು ತಮ್ಮ ಕರ್ತವ್ಯ ನಿಷ್ಟೆಯನ್ನು ಮರೆತು ಆಸ್ಪತ್ರೆ ಓಪಿಡಿ ಸೇವೆಗಳನ್ನು ನಿಲ್ಲಿಸಿದ ಪರಿಣಾಮ ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.