ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಜಗತ್ತಿನಲ್ಲಿ ಯೂಟ್ಯೂಬ್ ವಿಡಿಯೋಗಳು ಸಖತ್ ಸದ್ದು ಮಾಡುತ್ತಿದ್ದು, ಯೂಟ್ಯೂಬ್‍ನಲ್ಲಿ ವಿವಿಧ ಬಗೆಯ ಅಡುಗೆಗಳನ್ನು ಹೇಳಿಕೊಡುವ ಅನೇಕ ಚಾನಲ್‍ಗಳಿವೆ. ಚೆಫ್‍ಗಳಿಂದ ಹಿಡಿದು ಗೃಹಿಣಿಯರೂ ಕೂಡ ಯೂಟ್ಯೂಬ್‍ನಲ್ಲಿ ಅಡುಗೆ ವಿಡಿಯೋಗಳನ್ನ ಹಾಕ್ತಿರ್ತಾರೆ. ಇಲ್ಲಿ ಯಾರ ಸಹಾಯವೂ ಇಲ್ಲದೇ ಸ್ಟಾರ್ ಆಗಬಹುದು. ತಮ್ಮದೇ ಚಾನಲ್ ಶುರು ಮಾಡಬಹುದು, ಹಣವನ್ನು ಸಂಪಾದನೆ ಮಾಡಬಹುದು. ಇದೇ ಮಾದರಿಯಲ್ಲಿ ಆಂಧ್ರ ಶತಾಯುಷಿ, 106 ವರ್ಷದ ಅಜ್ಜಿಯೊಬ್ಬರು ಹಳ್ಳಿ ಸ್ಟೈಲ್ ಅಡುಗೆಗಳ ಮೂಲಕ ಇಂಟರ್ನೆಟ್ ಸ್ಟಾರ್ ಆಗಿದ್ದಾರೆ.
ಆಂಧ್ರಪ್ರದೇಶದ ಮಸ್ತಾನಮ್ಮ ಎಂಬ ಶತಾಯುಷಿ (106 ವರ್ಷ) ನಾಟಿ ಸ್ಟೈಲ್ ನಾನ್-ವೆಜ್ ಮಾಡುವುದರಲ್ಲಿ ಸಖತ್ ಫೇಮಸ್ ಆಗಿದ್ದು, ತಮ್ಮ ರುಚಿ ಮತ್ತು ರೆಸಿಪಿಯನ್ನು ಜಾಗತಿಕವಾಗಿ ಯೂಟ್ಯೂಬ್ ಮೂಲಕ ಹಂಚಿಕೊಳ್ಳುವ ಮೂಲಕ ಜಗತ್ತಿನ ‘ಅತೀ ಹಿರಿಯ ಯೂಟ್ಯೂಬ್ ಸ್ಟಾರ್’ ಎಂಬ ಖ್ಯಾತಿ ಪಡೆದುಕೊಂಡಿದ್ದಾರೆ.
ಆಂಧ್ರಪ್ರದೇಶದ ಮಸ್ತಾನಮ್ಮ ಎಂಬ ಶತಾಯುಷಿ, 106 ವರ್ಷದ ಈ ಅಜ್ಜಿ, ನಾಟಿ ಸ್ಟೈಲ್ ನಾನ್-ವೆಜ್ ಮಾಡುವುದರಲ್ಲಿ ಸಖತ್ ಫೇಮಸ್.ತಮ್ಮ ರುಚಿ ಮತ್ತು ರೆಸಿಪಿಯನ್ನು,ಅವರು ಕಂಟ್ರಿ ಫುಡ್ಸ್ (country foods) ಎಂಬ ತಮ್ಮ ಸ್ವಂತ ಯೂಟ್ಯೂಬ್ ಚಾನಲ್ ಮೂಲಕ , ಜಗತ್ತಿನ ‘ಅತೀ ಹಿರಿಯ ಯೂಟ್ಯೂಬ್ ಸ್ಟಾರ್’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿಡಿಯೋ ನೋಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ…
ವಿಶ್ವದ ಅತ್ಯಂತ ಹಿರಿಯ ಯೂಟ್ಯೂಬರ್ ಎನಿಸಿಕೊಂಡಿರುವ ಮಸ್ತಾನಮ್ಮ ಅವರ ಯೂಟ್ಯೂಬ್ ಚಾನಲ್‌ಗೆ 2.61 ಲಕ್ಷ ಸಬ್ ಸ್ಕ್ರೈಬರ್ ಇದ್ದಾರೆ ಎನ್ನಲಾಗಿದೆ. ಇದು ದೊಡ್ಡ ಪ್ರಮಾಣದಾಗಿದ್ದು, ಯೂಟೂಬ್‌ನಲ್ಲಿ ಇಷ್ಟು ಸಬ್ ಸ್ಕ್ರೈಬರ್ ಪಡೆಯುವುದು ಅಷ್ಟು ಸುಲಭದ ಮಾತಲ್ಲ.
ಹಳ್ಳಿ ವಾತಾವರಣದಲ್ಲಿ, ಸೌದೆ ಒಲೆಯಲ್ಲಿ ನಾನ್‌ವೆಜ್ ಮಾಡುವ ಶತಾಯುಷಿ ಅಜ್ಜಿ ಮಸ್ತಾನಮ್ಮ, ಇದರಿಂದಲೇ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಹಳ್ಳಿ ವಾತಾವರಣ, ಮೈದಾನದಲ್ಲಿ ಇವರು ಅಡುಗೆ ಮಾಡುತ್ತಾರೆ.. ಚಿಕನ್ ಬಿರಿಯಾನಿ, ಮೀನು ಸಾರು, ಮೊಟ್ಟೆಯ ರೆಸಿಪಿಗಳು, ಬದನೆಕಾಯಿ ಮಸಾಲಾ, ಬೆಂಡೇಕಾಯಿ ಫ್ರೈ, ಫ್ರೆಂಚ್ ಫ್ರೈಸ್ ಹೀಗೆ ವಿವಿಧ ಬಗೆಯ ವೆಜ್ ಹಾಗೂ ನಾನ್ ವೆಜ್ ಅಡುಗೆಗಳನ್ನ ಮಾಡೋದು ಹೇಗೆ ಅನ್ನೋದನ್ನ ಮಸ್ತಾನಮ್ಮ ವಿಡಿಯೋಗಳಲ್ಲಿ ತೋರಿಸಿಕೊಡ್ತಾರೆ.
ಅಜ್ಜಿ ಮಸ್ತಾನಮ್ಮ ಸ್ವಲ್ಪ ಪ್ರಮಾಣದಲ್ಲಿ ಅಡುಗೆ ಮಾಡುವುದೇ ಇಲ್ಲ.ಎಲ್ಲವೂ ಹತ್ತರಿಂದ ಹದಿನೈದು ಜನ ತಿನ್ನುವ ಹಾಗೆಯೇ ಇರುತ್ತದೆ. ಅಲ್ಲದೇ ಅಜ್ಜಿ ಮಾಡಿದ ಅಡುಗೆಯನ್ನು ಎಲ್ಲರಿಗೆ ಬಡಿಸುತ್ತಾರೆ ಇದೆ ಅವರ ಸ್ಪೆಷಾಲಿಟಿ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅಭಿನಯ ಚತುರ ಮಾಸ್ಟರ್ ಹಿರಣ್ಣಯ್ಯ ಕೊನೆಯುಸಿರೆಳೆದಿದ್ದಾರೆ. ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಖ್ಯಾತ ರಂಗಭೂರ್ಮಿ ಕಲಾವಿದ ಹಿರಣ್ಣಯ್ಯ ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಮೈಸೂರು ಮೂಲದ 84 ವರ್ಷದ ಮಾಸ್ಟರ್ ಹಿರಣ್ಣಯ್ಯ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಗುರುವಾರ ಬೆಳಗ್ಗೆ 8:30ರ ವೇಳೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಲಂಚಾವತರ ಮೂಲಕ ಮನೆಮಾತಾಗಿದ್ದ ಹಿರಣಯ್ಯ ಅನಾರೋಗ್ಯದಿಂದಾಗಿ ತೆರೆಯ ಹಿಂದೆ ಸರಿದಿದ್ದರು. ಫೆಬ್ರವರಿ 15, 1934ರಂದು ಮೈಸೂರಿನಲ್ಲಿ ಮಾಸ್ಟರ್ ಹಿರಣಯ್ಯ ಜನಿಸಿದ್ದರು. ಅವರ ಮೂಲ ಹೆಸರು ನರಸಿಂಹಮೂರ್ತಿ….
ಇತ್ತೀಚಿನ ದಿನಗಳಲ್ಲಿ ಎಲ್ಲರೂ ಆನ್ಲೈನ್ ಬ್ಯಾಂಕಿಂಗ್ ಸೇವೆಗಳನ್ನು ಬಳಸುತ್ತಿದ್ದಾರೆ, ತಂತ್ರಜ್ಙಾನ ಬೆಳೆಯುತ್ತಿದ್ದಂತೆ ಬ್ಯಾಂಕಿಂಗ್ ವ್ಯವಹಾರಗಳು ಸಹ ಎಲ್ಲರಿಗೂ ಸುಲಭವಾಗುತ್ತಿದೆ. ಹಾಗೆಯೇ ಇಂಟರ್ನೆಟ್ ಹ್ಯಾಕಿಂಗ್ , ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಸಾರ್ವಜನಿಕರಿಗೆ ಹೆಚ್ಚು ಉಪಯುಕ್ತವಾಗುತ್ತಿವೆ.ಸಮಯದ ಉಳಿತಾಯದ ಜೊತೆಗೆ ಸುಲಭವಾಗಿ ಹಣದ ವರ್ಗಾವಣೆ, ಬಿಲ್ ಪಾವತಿಯನ್ನು ಮಾಡಬಹುದಾಗಿದೆ. ಆದರೆ ಕೆಲ ನಿಯಮಗಳನ್ನು ಪಾಲಿಸದಿದ್ದರೆ ಮೋಸಕ್ಕೂ ಒಳಗಾಗಬೇಕಾಗುತ್ತದೆ. ಬ್ಯಾಂಕಿನಲ್ಲಿ ಸಾಲುಗಟ್ಟಿ ನಿಂತು ಹಣ ಪಾವತಿ ಮಾಡುವುದು, ಹಣವನ್ನು ಹಿಂತೆಗೆದುಕೊಳ್ಳುತ್ತಿದ್ದ ಕಾಲ ಬದಲಾಗಿದೆ. ATM ಮಷಿನ್ ಗಳು ಬಂದ ಮೇಲಂತೂ ಜನರು ಹಣವನ್ನು…
ಐಪಿಎಲ್ 12 ನೇ ಆವೃತ್ತಿಯ ಎರಡು ವಾರಗಳ ವೇಳಾಪಟ್ಟಿ ಬಿಡುಗಡೆಯಾಗಿದೆ. ಐಪಿಎಲ್ – 2019 ರ ಪಂದ್ಯಗಳು ಮಾರ್ಚ್ 23 ರಿಂದ ಶುರುವಾಗಲಿದೆ. ಉದ್ಘಾಟನೆ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಮಂಗಳವಾರ ಇಂಡಿಯನ್ ಪ್ರೀಮಿಯರ್ ಲೀಗ್ ಅಧಿಕೃತ ಟ್ವೀಟರ್ ನಲ್ಲಿ ವೇಳಾಪಟ್ಟಿ ಪ್ರಕಟಿಸಲಾಗಿದೆ. 17 ಪಂದ್ಯಗಳ ವೇಳಾಪಟ್ಟಿಯನ್ನು ಟ್ವಿಟ್ ಮಾಡಲಾಗಿದೆ. ಮಾರ್ಚ್ 23 ರಿಂದ ಏಪ್ರಿಲ್ 5 ರವರೆಗೆ ಪಂದ್ಯಗಳು ನಡೆಯಲಿವೆ. ಕೊಲ್ಕತ್ತಾ, ಚೆನ್ನೈ,…
ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್,ಶಿವರಾಜ್ ಕುಮಾರ್ ನಂತರ ಕನ್ನಡದ ಮತ್ತೊಬ್ಬ ನಟ ಗೌರವ ಡಾಕ್ಟರೇಟ್ ಪಡೆಯಲಿದ್ದಾರೆ. ಅವರು ಬೇರೆ ಯಾರು ಅಲ್ಲ ಕ್ರೇಜಿ ಸ್ಟಾರ್ ರವಿ ಚಂದ್ರನ್. ಬೆಂಗಳೂರಿನ ಸಿ ಎಮ್ ಆರ್ ವಿಶ್ವ ವಿದ್ಯಾನಿಲಯ ರವಿ ಚಂದ್ರನ್ ರಿಗೆ ಗೌರವ ಡಾಕ್ಟರೇಟ್ ನೀಡುತ್ತಿದೆ. ಈ ಹಿಂದೆ ರವಿಚಂದ್ರನ್ ಅಭಿಮಾನಿಗಳು ತಮ್ಮ ಪ್ರೀತಿಯ ನಟನಿಗೆ ಡಾಕ್ಟರೇಟ್ ನೀಡಬೇಕು ಎಂದು ತಮ್ಮ ಆಸೆ ವ್ಯಕ್ತ ಪಡಿಸಿದ್ದರು. ಇದೀಗ ಅವರ ಬಯಕೆ ಈಡೇರಿದೆ. ನವೆಂಬರ್ 3 ರಂದು ದೊಡ್ಡ ಕಾರ್ಯಕ್ರಮದ ಮೂಲಕ…
ಮೈಸೂರು ಮಹಾರಾಜ ಯದುವೀರ ಪತ್ನಿ, ರಾಣಿ ತ್ರಿಷಿಕಾರವರಿಗೆ ಜನಿಸಿದ ಪುಟ್ಟ ರಾಜಕುಮಾರನಿಗೆ ಈಗ ನಾಮಕರಣದ ಸಂಭ್ರಮ.
ಪ್ರತಿಬಾರಿ ಆಲೂಗಡ್ಡೆಯನ್ನ ಬೇಯಿಸುವಾಗ ಎಲ್ಲರಲ್ಲೂ ಕಾಡುವ ಪ್ರಶ್ನೆ ಎಂದರೆ ಆಲೂಗಡ್ಡೆ ಬೇಯುವಾಗ ಒಡೆದುಹೋಗುತ್ತದೆ ಎಂಬುದು. ಆಲೂಗಡ್ಡೆ ಒಡೆದು ಅದರೊಳಗೆ ನೀರು ಸೇರಿ ಆಲೂಗಡ್ಡೆಯ ರುಚಿ ಹಾಳಾಗುತ್ತದೆ.