ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ವಯಸ್ಸಿಗೂ ಬುದ್ದಿವನ್ತಿಕೆಗೂ ಏನೂ ಸಂಭಂದವಿಲ್ಲ ಅಂತಾರೆ. ಇಂತಹವರನ್ನೂ ನೋಡಿಯೇ ಇಂತಹ ಮಾತು ಹೇಳಿದ್ದಾರೆ ಅನಿಸುತ್ತದೆ. ಏಕೆಂದರೆ, ನೀವು ಶಾಕ್ ಆಗ್ತೀರ, ಇನ್ನೂ ಹತ್ತನೇ ತರಗತಿ ಓದುತ್ತಿರುವ ಹರ್ಷವರ್ಧನ್ ಜಾಲಾ ಏರೋಬಾಟಿಕ್ಸ್ 7 ಟೆಕ್ ಸೊಲ್ಯೂಷನ್ಸ್ ಎಂಬ ಸಂಸ್ಥೆಯ ವ್ಯವಸ್ಥಾಪಕ, ಸಿಇಓ.
ಹರ್ಷವರ್ಧನ್ 14 ವರ್ಷದ ಬಾಲಕ, ಗುಜರಾತ್’ನಲ್ಲಿ ನಡೆಯುತ್ತಿರುವ ವೈಬ್ರಂಟ್ ಜಾಗತಿಕ ಶೃಂಗಸಭೆಯಲ್ಲಿ ತಾನು ಡಿಸೈನ್ ಮಾಡಿದ ಡ್ರೋನ್ ಅನ್ನು ಪ್ರದರ್ಶನಕ್ಕೆ ತಂದಿದ್ದನು. ಈ ಡ್ರೋನ್ ಕಾರ್ಯವನ್ನು ಗಮನಿಸಿದ ಗುಜರಾತ್ ಸರ್ಕಾರ ತಮಗೆ ಅಂತಹ ಡ್ರೋನ್ ಬೇಕೆಂದು ಆತನ ಜೊತೆ ಬರೊಬ್ಬರಿ 5 ಕೋಟಿ ರೂಪಾಯಿಗಳ ಒಪ್ಪಂದ ಮಾಡಿಕೊಂಡಿದೆ.
ಈ ಡ್ರೋನ್ ಮಾಡುವ ಕೆಲಸ :- ಯುದ್ಧ ಪ್ರದೇಶಗಳಲ್ಲಿ, ಗಡಿ ಪ್ರದೇಶಗಳಲ್ಲಿ ಅಡಗಿಸಿ ಇಟ್ಟಿರುವ ಮದ್ದುಗುಂಡುಗಳನ್ನು ಗುರ್ತಿಸಿ, ಅವುಗಳನ್ನು ನಿಷ್ಕ್ರಿಯಗೊಳಿಸಲು ಉಪಯೋಗಿಸುವ ಮೂರು ವಿಧದ ಡ್ರೋನ್’ಗಳನ್ನು ಈ ಪುಟ್ಟ ಪೋರ ತಯಾರಿಸಿದ್ದಾನೆ.
ಈ ಆಲೋಚನೆ ಬಂದಿದ್ದು ಹೇಗೆ?
ಕಳೆದ ಒಂದು ವರ್ಷದಿಂದ ತಾನು ಇಂತಹ ಡ್ತೋನ್’ಗಳನ್ನು ನಿರ್ಮಿಸುತ್ತಿದ್ದು, ಟಿವಿ ನೋಡುವಾಗ ತುಂಬಾ ಜನ ಸೈನಿಕರು ಸ್ಪೋಟಕಗಳಿಂದ ಸಾವನ್ನಪ್ಪುವುದು, ತೀವ್ರವಾಗಿ ಗಾಯಗೊಳ್ಳುವುದನ್ನು ನೋಡಿ ಈ ಆಲೋಚನೆ ಬಂದಿರುವುದಾಗಿ ತಿಳಿಸಿದ್ದಾನೆ. ಈ ಮೂರು ವಿಧದ ಡ್ರೋನ್’ಗಳನ್ನು ತಯಾರಿಸಲು 5 ಲಕ್ಷ ರೂಪಾಯಿ ಖರ್ಚು ಮಾಡಿರುವುದಾಗಿ ತಿಳಿಸಿದ್ದಾನೆ.
ಡ್ರೋನ್’ನಲ್ಲಿ ಏನೇನಿದೆ :-
ಈ ಡ್ರೋನ್’ನಲ್ಲಿ ಇನ್ಫ್ರಾರೆಡ್, ಆರ್’ಜಿಬಿ ಸೆನ್ಸರ್ ಇರುತ್ತದೆ ಎಂದೂ, ಜೊತೆಗೆ ಥರ್ಮಲ್ ಮೀಟರ್, 21 ಮೇಗಾಪಿಕ್ಸಲ್ ಕ್ಯಾಮರ, ಮೆಕಾನಿಕಲ್ ಷಟ್ಟರ್ ಇರುತ್ತದೆ ಎಂದು ಹರ್ಷವರ್ಧನ್ ತಿಳಿಸಿದ್ದಾನೆ.
ಡ್ರೋನ್ ಕಾರ್ಯ ಹೇಗಿರುತ್ತೆ :-
ಇವುಗಳ ಸಹಾಯದಿಂದ ಹೈ ರಿಜಲ್ಯೂಷನ್ ಫೋಟೋಗಳನ್ನು ತೆಗೆದು ಕಳುಹಿಸುತ್ತದೆ ಎಂದು ವಿವರಿಸಿದ. ಭೂಮಿಯಿಂದ 2 ಅಡಿ ಗುರುತನ್ನು, 8 ಚದರ ಮೀಟರ್ ಪರಿಧಿಯಲ್ಲಿರುವ ಎಲ್ಲಾ ಜಾಗವನ್ನು ಈ ಡ್ರೋನ್ ಕವರ್ ಮಾಡುತ್ತದೆ. ಆ ಜಾಗದಲ್ಲಿ ಎಲ್ಲಿಯಾದರೂ ಸ್ಪೋಟಕಗಳು ಕಂಡು ಬಂದರೆ ತಕ್ಷಣ ಬೇಸ್ ಸ್ಟೇಷನ್’ಗೆ ಕಳುಹಿಸುತ್ತದೆ. ಇದರಲ್ಲಿ 50 ಗ್ರಾಂಗಳು ತೂಕದ ಬಾಂಬ್ ಒಂದು ಇದ್ದು, ಅದು ಸ್ಫೋಟಕಗಳನ್ನು ಧ್ವಂಸ ಮಾಡುತ್ತದೆ. ತನ್ನ ಕಂಪನಿ ಏರೋಬಾಟಿಕ್ಸ್ ಹೆಸರಿನಲ್ಲಿ ಈ ಡ್ರೋನ್ ಅನ್ನು ಈಗಾಗಲೇ ಪೇಟೆಂಟ್ ಸಹ ರಿಜಿಸ್ಟ್ರಾರ್ ಮಾಡಿಸಿದ್ದಾನೆ ಈ ಬಾಲಕ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸಾಮಾನ್ಯವಾಗಿ ಈ ಹಿಂದೆ ಗ್ರಾಹಕರು ಎಟಿಎಂ ಕೇಂದ್ರಗಳನ್ನು ಹಣ ವಿತ್ ಡ್ರಾ ಮಾಡುವುದಕ್ಕಾಗಿ ಮಾತ್ರ ಬಳಸುತಿದ್ದರು. ಆದರೆ ಇದೀಗ ಇನ್ನೂ ಅನೇಕ ವ್ಯವಹಾರಗಳನ್ನು ಎಟಿಎಂ ಯಂತ್ರಗಳ ಮೂಲಕ ಮಾಡಬಹುದಾಗಿದೆ
ಬೆಂಗಳೂರಿನ ಹೆಚ್’ಬಿಆರ್ ಬಡಾವಣೆಯ ಕಾಚರಕನಹಳ್ಳಿಯ ಶ್ರೀ ಕೋದಂಡರಾಮಸ್ವಾಮಿ ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪನೆಗಾಗಿ ಸಿದ್ದವಾಗಿದ್ದ 62 ಅಡಿ ಎತ್ತರದ, 750 ಟನ್ ತೂಕದ ವೀರಾಂಜನೇಯ ಸ್ವಾಮಿಯ ವಿಗ್ರಹವನ್ನು, 300 ಚಕ್ರಗಳ ಬೃಹತ್ ವಾಹನದಲ್ಲಿ ಸ್ಥಳಕ್ಕೆ ಈಗಾಗಲೇ ಸಾಗಿಸಲಾಗಿದೆ. ಆದರೆ ವಿಪರ್ಯಾಸ ಎಂದರೆ, ಅಂದು ಪರ್ವತವನ್ನೇ ಹೊತ್ತು ತಂದು ಲಕ್ಷ್ಮಣನನ ಜೀವ ಉಳಿಸಿದ, ರಾಮ ಭಕ್ತ ಹನುಮಂತನ ಪ್ರತಿಷ್ಟಾಪನೆಗೆ ವಿಘ್ನದ ಮೇಲೆ ವಿಘ್ನ ಶುರುವಾಗಿದೆ. ಕೋಲಾರದಿಂದ ಬೆಂಗಳೂರಿನ ಹೆಚ್’ಬಿಆರ್ ಬಡಾವಣೆಯ ಕಾಚರಕನಹಳ್ಳಿಗೆ ಹೊರಟಿದ್ದ ಬೃಹತ್ ಆಂಜನೇಯನ ವಿಗ್ರಹಕ್ಕೆ ಮಾರ್ಗ ಮಧ್ಯದಲ್ಲೇ ತೊಂದರೆ ಎದುರಾಗಿತ್ತು….
ನಮ್ಮ ದೇಶದಲ್ಲಿ ಆಕಳ ಸಗಣಿ ಹಾಗೂ ಗೋಮೂತ್ರವನ್ನು ಹಬ್ಬಗಳಲ್ಲಿ ಬಳಕೆ ಮಾಡ್ತೇವೆ. ಮನೆಯನ್ನು ಗೋಮೂತ್ರ ಹಾಗೂ ಸಗಣಿಯಿಂದ ಶುದ್ಧಮಾಡುವ ಪದ್ಧತಿ ಇದೆ. ಆದ್ರೆ ಆ ಬುಡಕಟ್ಟು ಜನಾಂಗದವರು ಗೋಮೂತ್ರದಿಂದ ಸ್ನಾನ ಮಾಡ್ತಾರೆ. ಅಷ್ಟೇ ಅಲ್ಲ ರೋಗದಿಂದ ರಕ್ಷಣೆ ಪಡೆಯಲು ಸಗಣಿಯನ್ನು ದೇಹಕ್ಕೆ ಹಚ್ಚಿಕೊಳ್ತಾರೆ. ನಾವು ಈಗ ಹೇಳ್ತಾ ಇರೋದು ಆಫ್ರಿಕಾದ ದಕ್ಷಿಣ ಸುಡಾನ್ ನ ಮುಂದರಿ ಬಡುಕಟ್ಟು ಜನಾಂಗದ ಸಂಸ್ಕೃತಿಯ ಬಗ್ಗೆ. ಈ ಜನರು ಬೆಳಿಗ್ಗೆ ಎದ್ದ ತಕ್ಷಣ ಗೋಮೂತ್ರದಲ್ಲಿ ಸ್ನಾನ ಮಾಡ್ತಾರೆ. ಇವರ ಜೀವನ ಶೈಲಿ…
ಉತ್ತರ ಪ್ರದೇಶದ ಅಜಂಘಡ ಜಿಲ್ಲೆಯ ಶಾಲೆಯ ನೆಲವನ್ನು ಒರೆಸುತ್ತಿದ್ದ ಮಕ್ಕಳ ಚಿತ್ರವನ್ನು ಸೆರೆ ಹಿಡಿದ ಪತ್ರಕರ್ತನ ಬಂಧನವಾಗಿ ವಾರ ಕಳೆದ ಬಳಿಕ, ಸ್ಥಳೀಯ ಆಡಳಿತವು ಪ್ರಕರಣ ಸಂಬಂಧ ತನಿಖೆಗೆ ಆದೇಶಿಸಿದೆ. ಜಿಲ್ಲೆಯ ಊದ್ಪುರ ಸರಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ನೆಲವನ್ನು ಒರೆಸುತ್ತಿದ್ದ ಮಕ್ಕಳ ಚಿತ್ರಗಳನ್ನು ಸೆರೆಹಿಡಿದ ಸ್ಥಳೀಯ ಪತ್ರಕರ್ತ ಸಂತೋಷ್ ಜೈಸ್ವಾಲ್ನನ್ನು ಪೊಲೀಸರು ಬಂಧಿಸಿ, ಆತನ ವಿರುದ್ಧ ಸುಲಿಗೆ ಹಾಗೂ ಸಾರ್ವಜನಿಕ ಸೇವಕರ ಕರ್ತವ್ಯಕ್ಕೆ ಅಡ್ಡಿಯಾದ ಆಪಾದನೆ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಶಾಲಾ ಪ್ರಾಂಶುಪಾಲರು, ಪತ್ರಕರ್ತನ ವಿರುದ್ದ…
ಅನೇಕ ಜನರು ಹೆಣ್ಣು ಹೆತ್ತವರಿಗೆ ತುಂಬಾ ಕಷ್ಟ ಅನ್ನೋದು ಎಷ್ಟು ಸತ್ಯ ಅಲ್ವಾ.ಪೋಷಕರಿಗೆ ಮಗಳು ಏನಾದ್ರು ಹುಡುಗರ ಬಗ್ಗೆ ಮಾತನಾಡಿದ್ರೆ ತುಂಬಾ ಆತಂಕ ಉಂಟಾಗುತ್ತದೆ. ಎಲ್ಲಿ ನಮ್ಮ ಮಗಳು ಪ್ರೀತಿಯ ಬಲೆಗೆ ಸಿಗಾಕಿಕೊಳ್ಳುತ್ತಾಳೋ ಎಂಬ ಆತಂಕ ಶುರುವಾಗುತ್ತದೆ. ಹುಡುಗಿಯರು ಪ್ರೀತಿಯಲ್ಲಿ ಬಿದ್ದರೆ ತಮ್ಮ ಜೀವನದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳುತ್ತಾರೆ.ಅದು ಏನು ಅಂತ ನಾವು ಹೇಳಿದ್ದೀವಿ ನೋಡಿ.
ಸಿಲಿಕಾನ್ ಸಿಟಿಯ ಕೆಂಗೇರಿ ರೈಲ್ವೆ ನಿಲ್ದಾಣದಲ್ಲಿ ಹೂವು ಮಾರುತ್ತಿದ್ದ ಬಾಲಕಿಯನ್ನು ವಸತಿ ಶಾಲೆಗೆ ಸೇರಿಸಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಾರ್ಮಿಕ ಇಲಾಖೆ ಅಧಿಕಾರಿಗಳು ಸಂಗೀತಾಳ ತಂದೆ, ತಾಯಿಯ ಮನವೊಲಿಸಿ ಕೊನೆಗೂ ಬಾಲಕಿಗೆ ಶಿಕ್ಷಣ ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಬಾಲಕಿ ರಾಮನಗರದ ಕೈಲಾಂಚದಲ್ಲಿರುವ ವಸತಿ ಶಾಲೆಯಲ್ಲಿ 7ನೇ ತರಗತಿಗೆ ದಾಖಲಾತಿ ಪಡೆದಿದ್ದಾಳೆ. ಮನೆಯಲ್ಲಿ ಕಡು ಬಡತನವಿರುವ ಕಾರಣಕ್ಕೆ ತಂದೆ ತಾಯಿ ಇದ್ದರೂ ಕೆಂಗೇರಿ ರೈಲ್ವೆ ನಿಲ್ದಾಣದಲ್ಲಿ ಸಂಗೀತಾ ಹೂವು ಮಾರುತ್ತಿದ್ದಳು. ಸಂಗೀತ ತಂದೆ…