ತಂತ್ರಜ್ಞಾನ

10ನೇ ತರಗತಿ ಬಾಲಕನ 5 ಕೋಟಿ ಒಪ್ಪಂದ !ಈ ಲೇಖನಿ ಓದಿ ಶಾಕ್ ಆಗ್ತೀರಾ…

8691

ವಯಸ್ಸಿಗೂ ಬುದ್ದಿವನ್ತಿಕೆಗೂ ಏನೂ ಸಂಭಂದವಿಲ್ಲ ಅಂತಾರೆ. ಇಂತಹವರನ್ನೂ ನೋಡಿಯೇ ಇಂತಹ ಮಾತು ಹೇಳಿದ್ದಾರೆ ಅನಿಸುತ್ತದೆ. ಏಕೆಂದರೆ, ನೀವು ಶಾಕ್ ಆಗ್ತೀರ, ಇನ್ನೂ ಹತ್ತನೇ ತರಗತಿ ಓದುತ್ತಿರುವ ಹರ್ಷವರ್ಧನ್ ಜಾಲಾ ಏರೋಬಾಟಿಕ್ಸ್ 7 ಟೆಕ್ ಸೊಲ್ಯೂಷನ್ಸ್ ಎಂಬ ಸಂಸ್ಥೆಯ ವ್ಯವಸ್ಥಾಪಕ, ಸಿಇಓ.

ಹರ್ಷವರ್ಧನ್ 14 ವರ್ಷದ  ಬಾಲಕ, ಗುಜರಾತ್’ನಲ್ಲಿ ನಡೆಯುತ್ತಿರುವ ವೈಬ್ರಂಟ್‌ ಜಾಗತಿಕ ಶೃಂಗಸಭೆಯಲ್ಲಿ ತಾನು ಡಿಸೈನ್ ಮಾಡಿದ ಡ್ರೋನ್ ಅನ್ನು ಪ್ರದರ್ಶನಕ್ಕೆ ತಂದಿದ್ದನು. ಈ ಡ್ರೋನ್  ಕಾರ್ಯವನ್ನು ಗಮನಿಸಿದ ಗುಜರಾತ್ ಸರ್ಕಾರ ತಮಗೆ ಅಂತಹ ಡ್ರೋನ್ ಬೇಕೆಂದು ಆತನ ಜೊತೆ ಬರೊಬ್ಬರಿ 5 ಕೋಟಿ ರೂಪಾಯಿಗಳ ಒಪ್ಪಂದ ಮಾಡಿಕೊಂಡಿದೆ.

ಈ ಡ್ರೋನ್ ಮಾಡುವ ಕೆಲಸ :- ಯುದ್ಧ ಪ್ರದೇಶಗಳಲ್ಲಿ, ಗಡಿ ಪ್ರದೇಶಗಳಲ್ಲಿ ಅಡಗಿಸಿ ಇಟ್ಟಿರುವ ಮದ್ದುಗುಂಡುಗಳನ್ನು ಗುರ್ತಿಸಿ, ಅವುಗಳನ್ನು ನಿಷ್ಕ್ರಿಯಗೊಳಿಸಲು ಉಪಯೋಗಿಸುವ ಮೂರು ವಿಧದ ಡ್ರೋನ್’ಗಳನ್ನು ಈ ಪುಟ್ಟ ಪೋರ ತಯಾರಿಸಿದ್ದಾನೆ.

ಈ ಆಲೋಚನೆ ಬಂದಿದ್ದು ಹೇಗೆ?

ಕಳೆದ ಒಂದು ವರ್ಷದಿಂದ ತಾನು ಇಂತಹ ಡ್ತೋನ್’ಗಳನ್ನು ನಿರ್ಮಿಸುತ್ತಿದ್ದು, ಟಿವಿ ನೋಡುವಾಗ ತುಂಬಾ ಜನ ಸೈನಿಕರು ಸ್ಪೋಟಕಗಳಿಂದ ಸಾವನ್ನಪ್ಪುವುದು, ತೀವ್ರವಾಗಿ ಗಾಯಗೊಳ್ಳುವುದನ್ನು ನೋಡಿ ಈ ಆಲೋಚನೆ ಬಂದಿರುವುದಾಗಿ ತಿಳಿಸಿದ್ದಾನೆ. ಈ ಮೂರು ವಿಧದ ಡ್ರೋನ್’ಗಳನ್ನು ತಯಾರಿಸಲು 5 ಲಕ್ಷ ರೂಪಾಯಿ ಖರ್ಚು ಮಾಡಿರುವುದಾಗಿ ತಿಳಿಸಿದ್ದಾನೆ.

ಡ್ರೋನ್’ನಲ್ಲಿ ಏನೇನಿದೆ :-

ಈ ಡ್ರೋನ್’ನಲ್ಲಿ ಇನ್‌ಫ್ರಾರೆಡ್, ಆರ್’ಜಿಬಿ ಸೆನ್ಸರ್ ಇರುತ್ತದೆ ಎಂದೂ, ಜೊತೆಗೆ ಥರ್ಮಲ್ ಮೀಟರ್, 21 ಮೇಗಾಪಿಕ್ಸಲ್ ಕ್ಯಾಮರ, ಮೆಕಾನಿಕಲ್ ಷಟ್ಟರ್ ಇರುತ್ತದೆ ಎಂದು ಹರ್ಷವರ್ಧನ್ ತಿಳಿಸಿದ್ದಾನೆ.

ಡ್ರೋನ್ ಕಾರ್ಯ ಹೇಗಿರುತ್ತೆ :-

ಇವುಗಳ ಸಹಾಯದಿಂದ ಹೈ ರಿಜಲ್ಯೂಷನ್ ಫೋಟೋಗಳನ್ನು ತೆಗೆದು ಕಳುಹಿಸುತ್ತದೆ ಎಂದು ವಿವರಿಸಿದ. ಭೂಮಿಯಿಂದ 2 ಅಡಿ ಗುರುತನ್ನು, 8 ಚದರ ಮೀಟರ್ ಪರಿಧಿಯಲ್ಲಿರುವ ಎಲ್ಲಾ ಜಾಗವನ್ನು ಈ ಡ್ರೋನ್ ಕವರ್ ಮಾಡುತ್ತದೆ. ಆ ಜಾಗದಲ್ಲಿ ಎಲ್ಲಿಯಾದರೂ ಸ್ಪೋಟಕಗಳು ಕಂಡು ಬಂದರೆ ತಕ್ಷಣ ಬೇಸ್ ಸ್ಟೇಷನ್’ಗೆ ಕಳುಹಿಸುತ್ತದೆ. ಇದರಲ್ಲಿ 50 ಗ್ರಾಂಗಳು ತೂಕದ ಬಾಂಬ್ ಒಂದು ಇದ್ದು, ಅದು ಸ್ಫೋಟಕಗಳನ್ನು ಧ್ವಂಸ ಮಾಡುತ್ತದೆ. ತನ್ನ ಕಂಪನಿ ಏರೋಬಾಟಿಕ್ಸ್ ಹೆಸರಿನಲ್ಲಿ ಈ ಡ್ರೋನ್ ಅನ್ನು ಈಗಾಗಲೇ ಪೇಟೆಂಟ್ ಸಹ ರಿಜಿಸ್ಟ್ರಾರ್ ಮಾಡಿಸಿದ್ದಾನೆ ಈ ಬಾಲಕ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • baby
    inspirational, Motivation

    ಮಕ್ಕಳನ್ನು ಹೇಗೆ ಬೆಳೆಸಬೇಕು ಎಂದು ತಿಳಿದು ಕೊಳ್ಳಿ

    ಮಕ್ಕಳನ್ನು ಹೇಗೆ ಬೆಳೆಸಬೇಕು ಎಂದು ತಿಳಿದು ಕೊಳ್ಳಿ
    ನಿಮ್ಮ ಮಗಳು ಅಥವಾ ಮಗ ಚಿಕ್ಕಪ್ಪ ಸೇರಿದಂತೆ ಯಾವುದೇ ಪರಿಸ್ಥಿತಿಯಲ್ಲಿ ಯಾರ ಮಡಿಲಲ್ಲೂ ಕುಳಿತುಕೊಳ್ಳಬೇಡಿ ಎಂದು ಎಚ್ಚರಿಸಿ

  • ಜ್ಯೋತಿಷ್ಯ

    ಶಿವರಾತ್ರಿಯೆಂದು ಈ ರಾಶಿಗಳು ಇರುವವರು ಹೀಗೆ ರುದ್ರಾಭಿಷೇಕ ಮಾಡಿದ್ರೆ ಹೆಚ್ಚು ಫಲ..!ಹೇಗೆಂದು ತಿಳಿಯಲು ಈ ಲೇಖನ ಓದಿ…

    ಮಹಾಶಿವರಾತ್ರಿ ದಿನದಂದು ಮಾಡುವ ರುದ್ರಾಭಿಷೇಕಕ್ಕೆ ಬಹಳ ಮಹತ್ವ ಇದೆ.ಅವರವರ ರಾಶಿಗಳಿಗೆ ತಕ್ಕಂತೆ ಮಾಡಿದ್ರೆ ಹೆಚ್ಚು ಪುಣ್ಯ ಪ್ರಾಪ್ತಿಯಾಗುತ್ತೆ ಎಂದು ಹೇಳಲಾಗಿದೆ.

  • ಸುದ್ದಿ

    ತನ್ನ ಧ್ವನಿಯಿಂದಲೇ ಬಾಟಲ್ ಕ್ಯಾಪ್ ತೆರೆದ ಗಾಯಕಿ….!

    ಸಾಮಾಜಿಕ ಜಾಲತಾಣಗಳಲ್ಲಿ ಹೊಸತೊಂದು ಚಾಲೆಂಜ್ ಬಂದಿದೆ; ಅದೇ ಬಾಟಲ್ ಕ್ಯಾಪ್ ಚ್ಯಾಲೆಂಜ್. ಇದರಲ್ಲಿ ಚಾಲೆಂಜ್ ತಗೊಂಡವರು ರೌಂಡ್‌ ಹೌಸ್ ಕಿಕ್ ಹೊಡೆದು ಬಾಟಲ್‌ಗೆ ಹಾಕಿದ ಮುಚ್ಚಳವನ್ನು ತೆಗೆಯಬೇಕು. ಜೇಸನ್ ಸ್ಟ್ಯಾಥಮ್, ಅಕ್ಷಯ್ ಕುಮಾರ್, ಟೈಗರ್ ಶ್ರಾಫ್‌ರಂತಹ ನಟರು ಹಾಗೂ ಹಲವು ಫೈಟರ್‌ಗಳು ಇದರಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇಲ್ಲೊಬ್ಬ ಗಾಯಕಿ ಕೇವಲ ತನ್ನ ಧ್ವನಿಯಿಂದಲೇ ಬಾಟಲ್ ಕ್ಯಾಪ್ ಎಗರಿಸಿರುವಂತೆ ಕಾಣುತ್ತದೆ. ಮರಿಯಾ ಕ್ಯಾರಿ ಎನ್ನುವ ಅಮೆರಿಕಾದ ಗಾಯಕಿ ಟ್ವೀಟರ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಅವರು ಹೈ ಪಿಚ್‌ನಲ್ಲಿ ರಾಗ ಎಳೆಯುತ್ತಿದ್ದಂತೆ…

  • ಸುದ್ದಿ

    ಹಿಂದೂಗಳು ಹಿಂಸಾಚಾರ ಮಾಡ್ತಾರೆ ಎಂಬುದಕ್ಕೆ ರಾಮಾಯಣ-ಮಹಾಭಾರತವೇ ಸಾಕ್ಷಿ ಎಂದ ರಾಜಕೀಯ ಮುಖಂಡ..!

    ರಾಜಕೀಯ ಮುಖಂಡರು ತಾವು ಏನು ಹೇಳುತ್ತಿದ್ದೇವೆ ಎಂಬ ಪರಿವೆ ಇಲ್ಲದೇ ಇಲ್ಲ ಸಲ್ಲದ ವಿವಾಧತ್ಮಕ ಹೇಳಿಕೆಗಳನ್ನು ಕೊಡುವುದರಲ್ಲಿ ಮೊದಲಿಗರಾಗಿರುತ್ತಾರೆ. ಈಗ ಹಿಂದೂಗಳು ಹಿಂಸಾಚಾರ ಮಾಡುತ್ತಾರೆ ಎಂಬುದನ್ನ ಈ ಹಿಂದೂ ಧರ್ಮದ ಈ ಮಹಾಕಾವ್ಯಗಳಿಗೆ ಹೋಲಿಕೆ ಮಾಡುವುದರ ಮುಖಾಂತರ ವಿವಾದ  ಸೃಷ್ಟಿಸಿದ್ದಾರೆ. ಹಿಂದೂಗಳು ಹಿಂಸಾಚಾರ ಮಾಡ್ತಾರೆ ಎಂಬುದಕ್ಕೆ ರಾಮಾಯಣ-ಮಹಾಭಾರತವೇ ಸಾಕ್ಷಿ ಎಂದು ಹೇಳುವ ಮೂಲಕ ಸಿಪಿಐ ಮುಖ್ಯ ಕಾರ್ಯದರ್ಶಿ ಸೀತಾರಾಮ್ ಯಚೂರಿ ವಿವಾದ ಸೃಷ್ಟಿಸಿದ್ದಾರೆ. ಹಿಂದೂಗಳು ಶಾಂತಿ ಪ್ರಿಯರು ಆದ್ರೆ ಕೆಲ ಧರ್ಮದವರು ಹಿಂಸಾಚಾರದಲ್ಲಿ ತೊಡಗಿದ್ದಾರೆ ಎಂದು ಕೆಲ ಬಿಜೆಪಿ…

  • Health

    ರೋಗಗಳನ್ನು ನಿವಾರಿಸುವ ಜೊತೆಗೆ, ದೇಹಕ್ಕೆ ತಂಪು ನೀಡುವ ಕರಬೂಜ ಹಣ್ಣಿನ ಉಪಯೋಗ ತಿಳಿಯಿರಿ .

    ಕರಬೂಜ ಹಣ್ಣು ಸಾಮಾನ್ಯವಾಗಿ ಎಲ್ಲರಿಗೂ ಕೂಡ ಚಿರಪರಿಚಿತವಾಗಿರುವಂತ ಹಣ್ಣಾಗಿದೆ, ನೋಡಲು ಹೊರಮುಖವಾಗಿ ಒರಟಾಗಿದ್ದರು ಕೂಡ ಈ ಹಣ್ಣು ಮನುಷ್ಯನ ದೇಹಕ್ಕೆ ಉತ್ತಮ ಆರೋಗ್ಯವನ್ನು ವೃದ್ಧಿಸುವಂತ ಗುಣಗಳನ್ನು ಹೇರಳವಾಗಿ ಹೊಂದಿದೆ. ಬೇಸಿಗೆಯಲ್ಲಿ ಕರಬೂಜ ಹಣ್ಣಿನ ಸೇವನೆ ಅತಿಹೆಚ್ಚಿನದಾಗಿ ಮಾಡಲಾಗುತ್ತದೆ, ಈ ಹಣ್ಣಿನ ಸೇವನೆ ಅಷ್ಟೇ ಅಲ್ದೆ ಇದರ ಪಾನಕ ಜ್ಯುಸ್ ಇವುಗಳನ್ನು ಮಾಡಿ ಕೂಡ ಸೇವನೆ ಮಾಡಲಾಗುತ್ತದೆ. ದೇಹಕ್ಕೆ ಉತ್ತಮ ಆರೋಗ್ಯವನ್ನು ಒದಗಿಸುವಂತ ಹಣ್ಣುಗಳಲ್ಲಿ ಈ ಕರಬೂಜ ಹಣ್ಣು ಕೂಡ ಒಂದಾಗಿದೆ. ಈ ಹಣ್ಣಿನಲ್ಲಿರುವಂತ ಪೋಷಕಾಂಶಗಳು ಹಾಗೂ ಐರನ್…

  • ಸ್ಪೂರ್ತಿ

    6 ನೇ ತರಗತಿ ಫೈಲ್ ಆಗಿದ್ದ ಈ ಹುಡುಗ ಈಗ ಕೋಟಿ ಕೋಟಿ ಅಧಿಪತಿ, ಮಾಡುವ ಕೆಲಸ ಏನು.

    ನಮಗೆ ಕೆಲವು ಸಮಯದಲ್ಲಿ ಧಿಡೀರನೆ ತಲೆಯಲ್ಲಿ ಬರುವ ಕೆಲವು ಯೋಚನೆಗಳು ಕೆಲವೊಮ್ಮೆ ನಮ್ಮ ಜೀವನವನ್ನ ಬದಲಾಯಿಸಬಹುದು ಅನ್ನುವುದಕ್ಕೆ ಉತ್ತಮ ಉದಾಹರಣೆ ಇದಾಗಿದೆ. ಹೌದು ಕೆಲವೊಮ್ಮೆ ನಮ್ಮ ತಲೆಯಲ್ಲಿ ಬರುವ ಕೆಲವು ಯೋಚನೆಗಳು ಬೇರೆಯವರಿಗೆ ತಮಾಷೆ ಅನಿಸಿದರೂ ಅದೂ ಕೆಲವೊಮ್ಮೆ ನಮ್ಮ ಜೀವನದ ಹಾದಿಯನ್ನೇ ಬದಲಾಯಿಸಬಹುದು. ಹೌದು ಕೇರಳಕ್ಕೆ ರಾಜ್ಯದ ಒಂದು ಕುಗ್ರಾಮದಲ್ಲಿ ಹುಟ್ಟಿದ್ದ ಈ ಹುಡುಗನ ಹೆಸರು ಮುಸ್ತಫಾ, ಮುಸ್ತಫಾ ಅವರು ವಾಸವಿದ್ದ ಊರಿನಲ್ಲಿ ಸರಿಯಾದ ರಸ್ತೆ ಮತ್ತು ನೀರು ಇರಲಿಲ್ಲ ಮತ್ತು ಅವರ ಊರಿನಲ್ಲಿ ಕೇವಲ…