ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಗಂಡ_ಹೆಂಡತಿಯರ ಮುದ್ದಾದ ಸಂಸಾರ. ಹೆಂಡತಿ ಗರ್ಭವತಿಯಾಗಿದ್ದಳು ಹುಟ್ಟುವ ಮಗು ಗಂಡೋ ಅಥವ ಹೆಣ್ಣೋ ಎನ್ನುವ ಕುತೂಹಲ ಆಕೆಗೆ. ಗಂಡನನ್ನು ಕೇಳಿದಾಗ ಯಾವುದಾದರೂ ಹುಟ್ಟಲಿ ಬಿಡು. ನಮಗೆ ಗಂಡು ಮಗು-ಹೆಣ್ಣು ಮಗು ಎರಡೂ ಒಂದೇ ಅಲ್ಲವೆ ಎಂದನು. ಅದಕ್ಕೆ ಹೆಂಡತಿಯು ಹೌದು, ಆದರೆ ನಮಗೆ ಗಂಡು ಮಗು ಹುಟ್ಟಿದರೆ ನೀವು ಹೇಗೆ ಬೆಳೆಸುತ್ತೀರಿ ಅವನನ್ನು? ಎಂದು ಕೇಳಿದಳು.

ಗಂಡ ಕಿಟಕಿಯಿಂದ ಹೊರಗೆ ಬಾನಿನತ್ತ ನೋಡುತ್ತಾ ಅವನನ್ನು ಮಹಾ ತುಂಟನನ್ನಾಗಿ ಬೆಳೆಸುತ್ತೇನೆ. ಅವನು ಚೆನ್ನಾಗಿ ಈಜಬೇಕು. ಸೈಕಲ್ ಹೊಡೆಯ ಬೇಕು. ಮರ ಹತ್ತಬೇಕು. ಕ್ರಿಕೆಟ್ ಆಡಬೇಕು. ಕರಾಟೆ ಕಲಿಯಬೇಕು. ಬೆಟ್ಟಗುಡ್ಡ ಹತ್ತಬೇಕು. ಬೈಕ್ ಓಡಿಸಬೇಕು. ನಕ್ಷತ್ರ ವೀಕ್ಷಣೆಯನ್ನು ಮಾಡಿಸ ಬೇಕು. ಲೆಕ್ಕವನ್ನು ಚೆನ್ನಾಗಿ ಕಲಿಸಬೇಕು. ಗಿಟಾರ್ ನುಡಿಸೋಕೆ ಬರಬೇಕು. ಹಾಡೋಕ್ ಕಲಿತ್ರೆ ಇನ್ನೂ ಚೆನ್ನಾಗಿರುತ್ತೆ ಎಂದ.

ಗಂಡ ಇನ್ನೂ ಮಗನಿಗೆ ಕಲಿಸಬೇಕಾದ ಪಟ್ಟಿಯನ್ನು ಮುಂದುವರೆಸುತ್ತಿದ್ದನೋ ಏನೋ?. ಹೆಂಡತಿಯು ಮಧ್ಯೆ ತಲೆಹಾಕಿದಳು. ಸರಿ, ಹೆಣ್ಣು ಮಗು ಹುಟ್ಟಿದರೆ ಅವಳಿಗೇನು ಕಲಿಸುತ್ತೀರಿ? ಕುತೂಹಲದಿಂದ ಕೇಳಿದಳು. ಹೆಣ್ಣು ಮಗಳೆ? ಹೆಣ್ಣು ಮಗಳು ಹುಟ್ಟಿದರೆ ಅವಳಿಗೆ ನಾನ್ಯಾಕೆ ಕಲಿಸಬೇಕು? ಎಂದ ಗಂಡ. ಆಘಾತವಾಯಿತು ಹೆಂಡತಿಗೆ. ಅವಳಿಗರಿವಿಲ್ಲದಂತೆಯೇ ಕಣ್ಣಿನಲ್ಲಿ ನೀರು ಉಕ್ಕಿತು. ಯಾಕ್ರಿ ನಮಗೆ ಗಂಡು ಮಗು ಹೆಣ್ಣು ಮಗು ಎರಡೂ ಒಂದೇ ಅಲ್ವ. ಹೆಣ್ಣು ಮಗುವಿಗೆ ಯಾಕೆ ಏನನ್ನೂ ಕಲಿಸಲ್ಲ! ಎಂದಳು.

ಗಂಡನು ನಗುತ್ತಾ, ಅಯ್ಯೋ.. ಹೆಣ್ಣು ಮಕ್ಕಳಿಗೆ ನಾವು ಏನೂ ಕಲಿಸಬೇಕಾಗಿಲ್ಲ ಕಣೆ. ಅವರಿಗೆ ಅದು ದೈವದತ್ತವಾಗಿ ಬಂದಿರು ತ್ತದೆ ಎಂದನು. ಅರ್ಥವಾಗಲಿಲ್ಲ. ಬಿಡಿಸಿ ಹೇಳಿ ಎಂದಳು ಹೆಂಡತಿ. ಹೆಣ್ಣು ಮಗಳಿಗೆ ನಾವು ಕಲಿಸಬೇಕಾಗಿಲ್ಲ. ಅವಳು ನಮಗೆ ಎಲ್ಲವನ್ನೂ ಕಲಿಸುತ್ತಾಳೆ. ನಾನು ಹೇಗೆ ಬಟ್ಟೆ ಹಾಕ್ಕೋಬೇಕು, ಏನನ್ನು ತಿನ್ನಬೇಕು, ಹೇಗೆ ತಿನ್ನಬೇಕು, ಏನನ್ನು ಮಾತಾಡಬೇಕು, ಏನನ್ನು ಮಾತನಾಡಬಾರದು, ಎಲ್ಲಿಗೆ ಹೋಗಬೇಕು, ಎಷ್ಟು ಹೊತ್ತಿಗೆಲ್ಲ ಮನೆಗೆ ಬರಬೇಕು. ಒಟ್ಟಿನಲ್ಲಿ ಹೇಳುವುದಾದರೆ ಅವಳು ನನಗೆ ಎರಡನೆಯ ಅಮ್ಮನಾಗಿಬಿಡುತ್ತಾಳೆ. ಮಗಳಿಗೆ ತಂದೆಯೇ ಹೀರೋ!. ನಾನು ಬದುಕಿನಲ್ಲಿ ಏನನ್ನೂ ಸಾಧಿಸದಿದ್ದರೂ ಅವಳ ಪಾಲಿಗೆ ನಾನೇ ಹೀರೊ. ಅವಳಿಗೆ ಏನನ್ನಾದರೂ ಕೊಡಿಸಲಾಗದಿದ್ದರೆ, ಅವಳೇ ನನಗೆ ಸಮಾಧಾನ ಹೇಳಿ ಮುಂದಿನ ತಿಂಗಳು ಕೊಡಿಸುವಿಯಂತೆ ಬಿಡಪ್ಪ ಎನ್ನುತ್ತಾಳೆ.

ಅವಳ ಮನಸ್ಸಿನಲ್ಲಿ ತನ್ನ ಅಪ್ಪನಂತಹ ಗಂಡ ಸಿಗಬೇಕು ಎನ್ನುವ ಆಸೆ ಸುಪ್ತವಾಗಿ ಬೆಳೆಯುತ್ತಿರುತ್ತದೆ. ಅವಳಿಗೆ ಮಕ್ಕಳು ಮೊಮ್ಮೊಕ್ಕಳಾದರೂ, ನಾನು ಮಾತ್ರ ಅವಳನ್ನು ಮುದ್ದು ಪುಟಾಣಿಯಂತೆ ಮಾತನಾಡಿಸಬೇಕು, ನೋಡಿಕೊಳ್ಳಬೇಕು, ಮುದ್ದು ಮಾಡಬೇಕು. ಅವಳು ಬೆಳೆಯುವುದೇ ಇಲ್ಲ.

ಅಪ್ಪನ ಮನಸ್ಸನ್ನು ನೋಯಿಸುವವರನ್ನು ಅವಳು ಯಾವ ಕಾರಣಕ್ಕೂ ಕ್ಷಮಿಸಲ್ಲ. ಓ ಮಗಳು ಮಾತ್ರ ನಿಮ್ಮನ್ನು ನೋಡ್ಕೋತಾಳ? ಮಗ ನೋಡ್ಕಳ್ಳಲ್ಲ ಅಂತ ನಿಮ್ಮ ಅಭಿಪ್ರಾಯಾನ? ಇಲ್ಲ ಇಲ್ಲ. ಗಂಡು ಮಕ್ಕಳೂ ನೋಡ್ಕೋತಾರೆ. ಆದರೆ ಅವರಿಗೆ ನಾವೇ ಎಲ್ಲವನ್ನೂ ಕಲಿಸಬೇಕು. ಹೆಣ್ಣು ಮಕ್ಕಳಿಗೆ ಯಾರೂ ಕಲಿಸಬೇಕಾಗಿಲ್ಲ. ಎಲ್ಲ ಹುಟ್ಟಿನೊಡನೆಯೇ ಬಂದಿರುತ್ತದೆ ಎಂದನು ಗಂಡ.
ಇರಬಹುದು ರೀ, ಆದರೆ ಅವಳು ಒಂದಲ್ಲ ಒಂದು ದಿನ ನಮ್ಮನ್ನೆಲ್ಲ ಬಿಟ್ಟು ಗಂಡನ ಮನೆಗೆ ಹೋಗಲೇಬೇಕಲ್ಲವೆ? ವಿಷಾದದಿಂದ ನುಡಿದಳು ಹೆಂಡತಿ. ಹೂಂ, ಹೋಗಲೇಬೇಕು. ಆದರೆ, ನಾವು ಸದಾ ಅವಳ ಹೃದಯದಲ್ಲಿ ಬೆಚ್ಚಗೆ ಇರುತ್ತೇವೆ. ಸದಾ ಕಾಲಕ್ಕೂ! ಎಂದನು. ಗಂಡನ ಕಣ್ಣಂಚು ತುಸು ತೇವವಾಗಿತ್ತು.
ಮೂಲ
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹಾಲಿವುಡ್ ನಟಿ ಆ್ಯಂಜಲೀನಾ ಜೋಲಿಯಂತೆ ಕಾಣಲು ಇರಾನಿನ ಯುವತಿಯೊಬ್ಬಳು 50 ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾಳೆ ಎಂಬ ಸುದ್ದಿ ಕೇಳಿ ಜನ ದಂಗಾಗಿದ್ದಾರೆ.
ದೀಪಾವಳಿ ಬಂದ್ರೆ ಸಾಕು ಮಹಿಳೆಯರಿಗೆ ಮನೆ ಮುಂದೆ ದೀಪಗಳನ್ನು ಜೋಡಿಸುವುದೇ ಒಂದು ಸಂಭ್ರಮ. ಬಾಗಿಲು, ಕಿಟಕಿ, ರಂಗೋಲಿ, ಕಾಂಪೌಂಡ್, ಹೂ ಕುಂಡಗಳಲ್ಲಿ ಹೀಗೆ ಅನಕೂಲವಾಗುವ ಸ್ಥಳಗಳಲ್ಲಿ ದೀಪಗಳನ್ನಿಟ್ಟು ಮನೆಯನ್ನು ಅಲಂಕರಿಸುತ್ತಾರೆ. ಆದ್ರೆ ದೀಪಗಳನ್ನು ಇಂತಿಷ್ಟೇ ಸಂಖ್ಯೆಯಲ್ಲಿ ಹಚ್ಚಬೇಕೆಂದು ನಿಯಮಾವಳಿಗಳಿವೆ. ಪೂಜಾ ಗೃಹದಲ್ಲಿ ಗಜಲಕ್ಷ್ಮಿ ಸ್ವರೂಪದಲ್ಲಿರುವ ಕಾಮಾಕ್ಷಿ ದೀಪಗಳನ್ನು ಹಚ್ಚಬೇಕು. ದೀಪಗಳಿಗೆ ಮೂರು ಅಥವಾ ಐದುಬಗೆಯ ಎಣ್ಣೆಯನ್ನು ಹಾಕುತ್ತಿರಬೇಕು. ಮನೆಯ ಮುಂಭಾಗ ಅಲಂಕರಿಸಲು ವ್ಯವಸ್ಥಿತ ದೀಪಗಳನ್ನು ಜೋಡಿಸಬೇಕೆಂದು ಹಿರಿಯರು ಹೇಳುತ್ತಾರೆ. ಹಾಗೆಯೇ ವ್ಯವಸ್ಥಿತವಾಗಿ ದೀಪಾಲಂಕಾರ ಮಾಡಬೇಕು. ನಿಮ್ಮ ಶಕ್ತಿಗನುಸಾರವಾಗಿ 12,…
ಹೋಟೆಲ್ ಹಾಗೂ ರೆಸ್ಟೋರೆಂಟ್ಗಳಲ್ಲಿ ಗ್ರಾಹಕರಿಗೆ ನೀಡಲಾಗುವ ಆಹಾರಕ್ಕೆ ಮಿತಿ ಹೇರಲು ಕೇಂದ್ರ ಸರ್ಕಾರ ಮುಂದಾಗಿದೆ. ಅಲ್ಲದೇ, ಒಬ್ಬ ವ್ಯಕ್ತಿ ಗರಿಷ್ಠ ಎಷ್ಟುಆಹಾರ ಸೇವಿಸಬಲ್ಲ ಎಂಬುದನ್ನು ಹೋಟೆಲ್ನವರೇ ತಿಳಿಸಬೇಕು ಹೇಳಿದೆ.
ಭಾರತದ ಹೆಸರಾಂತ ಉದ್ಯಮಿ ಮುಖೇಶ್ ಅಂಬಾನಿ ಯಾರಿಗೆ ಗೊತ್ತಿಲ್ಲ ಹೇಳಿ ? ಇನ್ನು ಇತ್ತೀಚಿನ ದಿನಗಳಲ್ಲಿ ಜಿಯೋ ಸಿಮ್ ಅನ್ನು ಜಾರಿಗೆ ತಂದ ಮೇಲೆ ಆಟ ಆಡುವ ಹುಡುಗರಿಂದ ಹಿಡಿದು ಹಲ್ಲಿಲ್ಲದ ಮುದುಕರವರೆಗೂ ಅಂಬಾನಿ ಎಂದರೆ ಯಾರು ಎಂಬುದು ತಿಳಿದಿದೆ..ಯುವ ಪೀಳಿಗೆ ಅವರಿಗಂತೂ ಅವರನ್ನು ಜಿಯೋ ಅಂಬಾನಿ ಎಂದೇ ಕರೆಯುತ್ತಾರೆ. ಅಲ್ಲದೆ ಭಾರತ ದೇಶದ ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಅವರೇ ಮೊದಲ ಸ್ಥಾನ..ಇನ್ನು ಎಲ್ಲರೂ ಸಹ ಮುಕೇಶ್ ಅವರ ಬಗ್ಗೆ ತಿಳಿದುಕೊಂಡಿರುತ್ತಾರೆ. ಆದರೆ ಅವರ ಮನೆಯ…
ಸಾಮಾನ್ಯವಾಗಿ ನೀವು ಯಾವುದೇ ದೇಶದಲ್ಲಿ ಗಣ್ಯ ವ್ಯಕ್ತಿಗಳಿಗೆ, ಹಾಗು ಐತಿಹಾಸಿಕ ಸ್ಥಳಗಳಿಗೆ ಭದ್ರತೆ ಹಾಗು ಭದ್ರತಾ ಸಿಬ್ಬಂದಿಗಳನ್ನು ನಿಯೋಜನೆ ಮಾಡಿರುವುದನ್ನು ನೀವು ನೋಡಿರುತ್ತೀರಿ, ಆದರೆ ಭಾರತದಲ್ಲಿ ಇರುವ ಈ ಒಂದು ಮರಕ್ಕೆ ದಿನದ 24 ಗಂಟೆ ಮತ್ತು ವಾರದಲೂ ದಿನವೂ ಕೂಡ ವಿಶೇಷ ಭದ್ರತೆ ಒದಗಿಸಲಾಗುತ್ತದೆ ಎಂದರೆ ನೀವು ನಂಬುತ್ತೀರಾ, ನಿಜಕ್ಕೂ ಇದು ಸತ್ಯ. ಹೌದು ಭಾರತದ ಈ ಮರಕ್ಕೆ ವಿಶೇಷ ಕಾಳಜಿ ನೀಡಿ ಏಕೆ ರಕ್ಷಣೆ ಮಾಡಲಾಗುತ್ತಿದೆ ಎನ್ನುವ ಬಗ್ಗೆ ಈ ವಿಶೇಷ ವರದಿ ನೋಡಲೇಬೇಕು….
ವೈಶಾಖ – ಶುಕ್ಲ ತೃಥಿಯವನ್ನು ಅಕ್ಷಯ ತೃತೀಯ ಎಂದು ಕರೆಯಲಾಗುತ್ತದೆ.ಈ ಬಾರಿ ಮೇ 7 ರಂದು ಅಕ್ಷಯ ತೃತೀಯ ಆಚರಣೆ ಮಾಡಲಾಗ್ತಿದೆ. ಅಕ್ಷಯ ತೃತೀಯ ಪವಿತ್ರ ದಿನ. ಅಂದು ಮದುವೆ, ಗೃಹ ಪ್ರವೇಶ ಸೇರಿದಂತೆ ಕೆಲ ಶುಭ ಕಾರ್ಯಗಳನ್ನು ಮಾಡಲಾಗುತ್ತದೆ. ಅಕ್ಷಯ ತೃತೀಯದಂದು ಮಾಡಿದ ದಾನದ ಫಲ ಎಂದೂ ನಾಶವಾಗುವುದಿಲ್ಲ. ಮುಂದಿನ ಜನ್ಮಕ್ಕೂ ಪುಣ್ಯ ಪ್ರಾಪ್ತಿಯಾಗುತ್ತದೆ. ಅಕ್ಷಯ ತೃತೀಯದಂದು ಈಗ ನಾವು ಹೇಳುವ ಕೆಲಸದಲ್ಲಿ ಎರಡನ್ನು ಮಾಡಿದ್ರೂ ಪುಣ್ಯ ಪ್ರಾಪ್ತಿಯಾಗುತ್ತದೆ. ಅಕ್ಷಯ ತೃತೀಯದಂದು ಸಿಹಿ ಹಾಗೂ ತಣ್ಣನೆ…