ವಿಚಿತ್ರ ಆದರೂ ಸತ್ಯ

ಹೆಂಡ್ತಿ ಮಾತು ಕೇಳಿ, ಇಲ್ಲಂದ್ರೆ ನಿಮಗೆ, ನಿಮ್ಮ ಗಡ್ಡಕ್ಕೆ ಅನಾಹುತ ತಪ್ಪಿದ್ದಲ್ಲ !!!

229
ಇದು ನಿಮಗೆ ತಮಾಷೆ ಅನ್ನಿಸಬಹುದು, ಏನಪ್ಪಾ ಆ ತಮಾಷೆ ಅಂತಿರಾ. ಹೌದು, ಉತ್ತರಪ್ರದೇಶದ ಅಲಿಘಡ್ ಎಂಬಲ್ಲಿ ಈ ತಮಾಷೆ ನಡೆದಿದೆ. ಗಡ್ಡ ಶೇವ್ ಮಾಡಲು ನಿರಾಕರಿಸಿದ ಕಾರಣಕ್ಕೆ ತೀವ್ರವಾಗಿ ಕೆಂಡಾಮಂಡಲಗೊಂಡ ಪತ್ನಿಯೊಬ್ಬಳು ತನ್ನ ಪತಿ ಮೇಲೆ ಬಿಸಿ ನೀರು ಸುರಿದಿರುವ ಘಟನೆ ಅದು.
ಎಲ್ಲಿ,ಹೇಗೆ ಅಂತ ಮುಂದೆ ಓದಿ :- 
ಉತ್ತರಪ್ರದೇಶದ ಅಲಿಘಡ್ ಎಂಬಲ್ಲಿ ಈ ಘಟನೆ ನಡೆದಿದ್ದು, ಸಲ್ಮಾನ್ ಎಂಬುವರು ಶೋಷಣೆಗೊಳಗಾದ  ವ್ಯಕ್ತಿಯಾಗಿದ್ದಾರೆ.

ಸಲ್ಮಾನ್ ಅವರ ಪತ್ನಿ ,ನಗ್ಮಾ ಬಿಸಿನೀರು ಹಾಕಿದ ಪತ್ನಿಯಾಗಿದ್ದಾಳೆ. ಧಾರ್ಮಿಕ ನಂಬಿಕೆ ಹಿನ್ನಲೆಯಲ್ಲಿ ಸಲ್ಮಾನ್ ಗಡ್ಡವನ್ನು ಶೇವ್ ಮಾಡಲು ನಿರಾಕರಿಸಿದ್ದಾನೆ. ಈ ವಿಚಾರ ಸಂಬಂಧ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಕುಪಿತಗೊಂಡ ಪತಿಯ ಮೇಲೆ ನಗ್ಮಾ ಇದ್ದಕ್ಕಿದ್ದಂತೆಯೇ ಬಿಸಿ ನೀರು ತಂದು ಸಲ್ಮಾನ್ ಮೇಲೆ ಸುರಿದಿದ್ದಾಳೆ.

ಸಲ್ಮಾನ್ ಹಾಗೂ ನಗ್ಮಾ ಮದುವೆಯಾಗಿ 6 ತಿಂಗಳಾಗಿದೆ. ಸಲ್ಮಾನ್ ಡ್ರೆಸ್ಸಿಂಗ್ ಸ್ಟೈಲ್ ಬಗ್ಗೆ ನಗ್ಮಾಗೆ ಅಸಮಾಧಾನವಿದ್ದು, ಇಬ್ಬರ ನಡುವೆ ಈ ಬಗ್ಗೆ ಸಾಕಷ್ಟು ಜಗಳಗಳಾಗಿವೆ.
ಮಾಡೆಲ್ ಗಳ ರೀತಿ ಡ್ರೆಸ್ ಸೆನ್ಸ್ ಹಾಗೂ ಅವರ ರೀತಿ ಸ್ಟೈಲಿಶ್ ಆಗಿ ಇರುವಂತೆ ಪ್ರತೀನಿತ್ಯ ಗಂಡನಿಗೆ ಬಲವಂತೆ ಮಾಡಿದ್ದಾಳೆ. ಇದಕ್ಕೆ ಸಲ್ಮಾನ್ ನಿರಾಕರಿಸಿದ್ದಾನೆ. ಈ ಹಿನ್ನಲೆಯಲ್ಲಿ ಗಂಡನ ಮೇಲೆ ಬಿಸಿ ನೀರು ಸುರಿದಿದ್ದಾಳೆಂದು ಪೊಲೀಸರು ಹೇಳಿದ್ದಾರೆ.

ಡ್ರೆಸ್ ಸೆನ್ಸ್ ಹಾಗೂ ಸ್ಟೈಲಿಶ್ ಆಗಿರುವಂತೆ ಪ್ರತಿನಿತ್ಯ ನನ್ನ ಪತ್ನಿ ಬಲವಂತ ಮಾಡುತ್ತಿದ್ದಳು. ಇದಕ್ಕೆ ನಿರಾಕರಿಸಿದ್ದಕ್ಕೆ ಬಿಸಿ ನೀರು ಸುರಿದಳು. ನನ್ನ ಕಿರುಚಾಟ ಕೇಳಿ ಸ್ಥಳೀಯರು ಬಂದು ನನ್ನನ್ನು ಆಸ್ಪತ್ರೆಗೆ ದಾಖಲಿಸಿದರು ಎಂದು ಶೋಷಣೆಗೊಳಗಾದ ಸಲ್ಮಾನ್ ಹೇಳಿದ್ದಾರೆ.

ಇದೀಗ ಮನನೊಂದಿರುವ ಸಲ್ಮಾನ್ ತನ್ನ ಪತ್ನಿಯ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದು ನ್ಯಾಯಕ್ಕಾಗಿ ಆಗ್ರಹಿಸಿದ್ದಾನೆ.

ಅದಕ್ಕೆ ಹೇಳ್ತೀವಿ ಕೆಲವೊಂದು ಹೆಂಡತಿ ಮಾತುಗಳನ್ನು ಕೇಳಿ, ಕೇಳ್ತೀರಾ ಆಲ್ವಾ. ಕೇಳಿಲ್ಲ ಅಂದ್ರೆ ಗೊತ್ತಲ್ವ ಏನಾಗುತ್ತೆ ಅಂತ……

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ