ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಜೀವನ ಸಂಗಾತಿ ಬಗ್ಗೆ ಎಲ್ಲರೂ ತಮ್ಮದೇ ಆದಂತ ಕನಸು ಕಟ್ಟಿರುತ್ತಾರೆ.ಆದ್ರೆ ಈಗಂತೂ ಜೀವನ ಸಂಗಾತಿ ಹುಡುಕುವುದು ಅಷ್ಟೋಂದು ಸುಲಭವಲ್ಲ.
ಜೀವನ ಸಂಗಾತಿಯ ಆಯ್ಕೆಗೆ ತಲೆಕೆಡಿಸಿಕೊಳ್ಳುವವರು ಎಷ್ಟು ಜನರಿಲ್ಲ? ಸುಂದರವಾಗಿದ್ದರೆಅನುಕೂಲವಿಲ್ಲ, ಅನುಕೂಲತೆಯಿದ್ದರೆ ಹುಡುಗ ಚೆನ್ನಾಗಿಲ್ಲ, ಎರಡೂ ಇದ್ದರೂ ಕುಟುಂಬದ ಹಿನ್ನೆಲೆಸರಿಯಿಲ್ಲ, ಎಲ್ಲವೂ ಸರಿ ಇದ್ದರೆ ಜಾತಕ ಆಗಿ ಬರೋಲ್ಲ…
ಮದುವೆ ಮಾಡೋದಂದ್ರೆ ಸುಲಭಾನಾ? ಎಲ್ಲವೂ ಸರಿ ಇರಬೇಕಂದ್ರೆ ಮದುವೆನೇ ಆಗಲ್ಲ, ರಾಜಿ ಆಗ್ಲೇ ಬೇಕು ಎಂದುಕೊಂಡೇ ಯಾರೋ ಒಬ್ಬರನ್ನು ಒಪ್ಪಿಕೊಳ್ಳುವುದುನಂತರದ ಮಾತು. ಆದರೆ ಹೀಗೆ ವರಾನ್ವೇಷಣೆಯ ಪ್ರಕ್ರಿಯೆಯಲ್ಲಿ ಹುಡುಗಿಯರು ಹಾಕುವ ಷರತ್ತುಳು, ವರ ಬೇಡಿಕೆಗಳ ಪಟ್ಟಿ ಬೆಳೆಯುತ್ತಲೇ ಹುಡುಗನನ್ನು ಹುಡುಕುವ ಪಾಲಕರ ಗೋಳನ್ನು ನೋಡಿದರೆ ಅಯ್ಯೋ ಎನ್ನಿಸಬಹುದು!
ಆದರೆ ಸಾಕಷ್ಟು ಷರತ್ತು, ಬೇಡಿಕೆಗಳೆಲ್ಲ ಇದ್ದಾಗ್ಯೂ ಹುಡುಗಿಯರು ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಅಥವಾ ಅವನ್ನು ತಿರಸ್ಕರಿಸು ವುದಕ್ಕೆತೆಗೆದುಕೊಳ್ಳುವ ಸಮಯ ಕೇವಲ ಹದಿನೈದು ನಿಮಿಷವಂತೆ!
ಭವಿಷ್ಯ ಪೂರಾ ಜೊತೆಯಾಗಿರಬೇಕಾದ ವ್ಯಕ್ತಿಯ ಬಗ್ಗೆ ಹದಿನೈದು ನಿಮಿಷ ಮಾತ್ರವೇ ಯೋಚಿಸ್ತಾರಾ? ಹೌದು ಎನ್ನುತ್ತದೆ ವಾಷಿಂಗ್ಟನ್ನಿನ ಮನಃಶಾಸ್ತ್ರಜ್ಞರ ತಂಡ. ಮನಸ್ಸಿನಲ್ಲಿತನ್ನನ್ನು ವರಿಸುವ ಹುಡುಗನ ಬಗ್ಗೆ ಎಷ್ಟೇ ಕನಸುಗಳಿದ್ದರೂ, ಗಂಭೀರವಾಗಿ ಜೀವನ ಸಂಗಾತಿಯ ಆಯ್ಕೆಯ ಬಗ್ಗೆ ಯೋಚಿಸುವಾಗ ಮಾತ್ರ ಮಹಿಳೆ ಹೆಚ್ಚುಯೋಚಿಸುವುದಿಲ್ಲವಂತೆ.
ತನ್ನೆಲ್ಲ ನಿರೀಕ್ಷೆಯೊಂದಿಗೆ ಕ್ರಮೇಣ ಕೊಂಚ ರಾಜಿಯಾಗುತ್ತ, ತನ್ನಿಂದಲೂ ತನ್ನ ಸಂಗಾತಿ ಇಂಥವನ್ನೆಲ್ಲ ನಿರೀಕ್ಷಿಸು ತ್ತಾನಲ್ಲ ಎಂಬ ಸತ್ಯವನ್ನು ಅರಿಯುತ್ತಾಳಂತೆ.ಕೊರತೆಗಳನ್ನು ಸರಿಪಡಿಸಿಕೊಂಡು, ಪರಸ್ಪರರ ಅಭಿರುಚಿಗಳನ್ನು ಗೌರವಿಸಿಕೊಂಡು ಬದುಕಿದರೆ ಇಬ್ಬರ ನಿರೀಕ್ಷೆಯೂ ನಿಜವಾಗುತ್ತೆ ಎಂಬುದು ಕ್ರಮೇಣಅರ್ಥವಾಗುತ್ತದೆಯಂತೆ. ಆದರೆ ಈ ಎಲ್ಲ ಜ್ಞಾನೋದಯಕ್ಕೂ ಮುನ್ನ ಆಕೆ ಭವಿಷ್ಯದ ಬಗ್ಗೆ ಯೋಚಿಸಲು ತೆಗೆದುಕೊಳ್ಳುವ ಸಮಯ ಮಾತ್ರ ತೀರಾ ಕಡಿಮೆ ಎನ್ನಿಸುತ್ತದಲ್ಲವೇ!?
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸರಕು ಸೇವಾ ತೆರಿಗೆ (GST) ಜಾರಿಗೆ ಬಂದಲ್ಲಿ ಬಿಂದಾಸ್ ಆಗಿ ಒಳ್ಳೆಯ ಊಟ, ಉಪಾಹಾರ ನೀವು ತೃಪ್ತಿಯಾಗುವಷ್ಟು ಮಾಡಬಹುದು. ಹಾಗೂ ಒಂದು ಸಿನೆಮಾ ನೋಡಿದ ಮೇಲೂ ಮತ್ತೊಂದು ನೋಡಿಯೇ ಬಿಡೋಣ ಎನ್ನುವ ಧೈರ್ಯ ಬಂದರೂ ಬರಬಹುದು.
ಎರಡು ಕುಟುಂಬಗಳನ್ನು ಒಂದು ಮಾಡುವ ಸಮಾರಂಭವೇ ಮದುವೆ…ಇಲ್ಲಿಯವರೆಗೂ ಇದ್ದ ಒಂಟಿ ಪ್ರಯಾಣ ಇನ್ನು ಮುಂದೆ ಜೋಡಿಯಾಗಿ ಸಾಗುತ್ತದೆ. ನಮ್ಮ ಸಂಪ್ರದಾಯದ ಪ್ರಕಾರ ಮದುವೆಗೊಂದು ವಿಶಿಷ್ಟತೆಯಿದೆ. ಐದು ದಿನಗಳ ಕಾಲ ನಯನ ಮನೋಹರವಾಗಿ ಸಾಗುವ ಮದುವೆಯಲ್ಲಿ ಬಂಧು ಮಿತ್ರರು,ಬಾಜಾ ಭಜಂತ್ರಿಗಳು..ಎಲ್ಲವೂ ಓಕೆ.
ಶಿವರಾಮ ಕಾರಂತ (ಅಕ್ಟೋಬರ್ 10, 19೦6-ಸೆಪ್ಟೆಂಬರ್ 16, 1997)- “ಕಡಲತೀರದ ಭಾರ್ಗವ”, “ನಡೆದಾಡುವ ವಿಶ್ವಕೋಶ” ಎಂದೇ ಖ್ಯಾತರಾಗಿದ್ದ ಕನ್ನಡ ಸಾಹಿತ್ಯ-ಸಂಸ್ಕೃತಿಯ ವಕ್ತಾರ, ಕವಿ, ಕಾದಂಬರಿಕಾರ, ನಾಟಕಕಾರ, ಅನುವಾದಕ, ವೈಜ್ಞಾನಿಕ ಬರಹಗಾರ. ಆಡುಮುಟ್ಟದ ಸೊಪ್ಪಿಲ್ಲ. ಹಾಗೇಯೆ ಕಾರಂತರು ಬರೆಯದ ಸಾಹಿತ್ಯ ಪ್ರಕಾರವೇ ಇಲ್ಲವೆನ್ನಲಾಗಿದೆ. ವಿಶ್ವ ವಿದ್ಯಾನಿಲಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದಿಲ್ಲದಿದ್ದರೂ, ಅವರ ಸಾಹಿತ್ಯ ಪರಿಶ್ರಮ ಅಪಾರವಾದುದು. ಜ್ಞಾನಪೀಠ, ಪದ್ಮಭೂಷಣ, ಪಂಪ ಪ್ರಶಸ್ತಿ, ನಾಡೋಜ ಪುರಸ್ಕಾರ, ಎಂಟು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ಗಳನ್ನಿತ್ತು ಪುರಸ್ಕರಿಸಿವೆ. ಜೀವನ:- ಜ್ಞಾನಪೀಠಪುರಸ್ಕೃತ ಡಾ. ಶಿವರಾಮ ಕಾರಂತರು ಹುಟ್ಟಿದ್ದು ಉಡುಪಿ ಜಿಲ್ಲೆಯ ಕೋಟದಲ್ಲಿ ೧೯೦೨, ಅಕ್ಟೋಬರ್ ೧೦ರಂದು. ಒಂದು ಶತಮಾನಕ್ಕೆ ನಾಲ್ಕು ವರ್ಷಗಳಷ್ಟೇ…
ಬೆಂಗಳೂರು: ಜನಸಾಮಾನ್ಯರಿಗೆ ನೆರವಾಗಲೆಂದು ಭಾರತೀಯ ಅಂಚೆ ಇಲಾಖೆಯು. ಅತ್ಯಂತ ಕಡಿಮೆ. ಹಣದಲ್ಲಿ ಭಾರಿ ಮೊತ್ತದ. ಅಪಘಾತ ವಿಮೆಯನ್ನು ಪರಿಚಯಿಸಿದೆ. ಆಕಸ್ಮಿಕ ಅವಘಡಗಳಿಗೆ ತುತ್ತಾದಾಗ ಅಂಚೆ ಕಚೇರಿಯ ಈ ಅಲ್ಪ ಮೊತ್ತದ ಅಪಘಾತ ವಿಮೆ ಆರ್ಥಿಕವಾಗಿ ಸಹಾಯಕ್ಕೆ ಬರಲಿದೆ. ಕನಿಷ್ಠೆ 18ರಿಂದ ಗರಿಷ್ಠ 65ವರ್ಷದ ಒಳಗಿನವರು ಕೂಡಲೇ ಖಾತೆ 1 ತೆರೆದು ಈ ವಿಮೆಯ ಅನುಕೂಲ ಪಡೆಯಬಹುದಾಗಿದೆ. ಹತ್ತಾರು. ಆಕಸ್ಮಿಕ ಅಪಘಾತಗಳಿಗೆ ಪರಿಹಾರ ಪಡೆಯಲು ಕೂಡಲೇ ಈ ವಿಮೆಯ ಪ್ರಯೋಜನ ಪಡೆಯಬಹುದಾಗಿದೆ. ನಿಮ್ಮ ಹತ್ತಿರದ. ಅಂಚೆ ಕಚೇರಿಗೆ ತೆರಳಿ…
ಡಿಜಿಟಲ್ ಯುಗಕ್ಕೆ ತೆರೆದುಕೊಂಡಿರುವ ರಾಜಧಾನಿಯಲ್ಲಿ ಓಡಾಡುವ ಬಸ್ಗಳಲ್ಲಿ ಈವರೆಗೆ ವೈಫೈ ಸೇವೆ ಲಭ್ಯವಿರಲಿಲ್ಲ. ಕೆಲ ವರ್ಷಗಳಿಂದೀಚೆಗೆ ಲಗ್ಗೆ ಇಟ್ಟ ಟ್ಯಾಕ್ಸಿಗಳು ಗ್ರಾಹಕರಿಗೆ ಉಚಿತ ವೈಫೈ ಸೇವೆ ಒದಗಿಸಿ, ವೋಲ್ವೊ ಬಸ್ಗಳಿಗೆ ತೀವ್ರ ಪೈಪೋಟಿಯೊಡ್ಡಿವೆ. ಹೀಗಾಗಿ, ಬಿಎಂಟಿಸಿಯು ಪ್ರಯಾಣಿಕರಿಗೆ ಬೆರಳ ತುದಿಯಲ್ಲೇ ಮಾಹಿತಿ ದೊರಕಿಸುವ ನಿಟ್ಟಿನಲ್ಲಿ ಹೆಜ್ಜೆಗಳನ್ನಿಡುತ್ತಿದೆ.
ಸುಮ್ಮನೆ ಊಹಿಸಿಕೊಳ್ಳಿ ನೀವು ನಿಮ್ಮ ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ ಸ್ಟಾರ್ಟ್ ಮಾಡುತ್ತೀರಿ ಅಲ್ಲಿ ಗೂಗಲ್ ಇಲ್ಲದಿದ್ದರೆ, ನಿಮ್ಮ ಐ ಫೋನ್ ಸ್ವಿಚ್ ಆನ್ ಮಾಡುತ್ತೀರ ಅಲ್ಲಿ ಪರದೆಯ ಮೇಲೆ ಏನೂ ಬರದೆ ಬರಿ ಕಪ್ಪು ಪರದೆ ಕಂಡರೆ ..? ಫೇಸ್ ಬುಕ್, ಟ್ವಿಟ್ಟರ್, ಅಮೆಜಾನ್ ಮತ್ತು ಮೈಕ್ರೋ ಸಾಫ್ಟ್ ಯಾವುದೂ ಇಲ್ಲದ ಜಗತ್ತನ್ನ ಊಹಿಸಿಕೊಳ್ಳಿ…. ಇದು ನಿಜ ಜೀವನದಲ್ಲಿ ಆಗಿಬಿಟ್ಟರೆ? ಜಗತ್ತು ಎಂತಹ ಪ್ಯಾನಿಕ್ ಗೆ ಒಳಗಾಗಬಹದು? ಗಮನಿಸಿ ನೋಡಿ ಇಂದು ಜಗತ್ತನ್ನ ಆಳುತ್ತಿರುವುದು ಟೆಕ್ನಾಲಜಿ…