ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಮ್ಮ ಹಿಂದೂ ಧರ್ಮದಲ್ಲಿ ಇರುವಷ್ಟು ಸಂಪ್ರದಾಯಗಳು ಬೇರೆ ಯಾವುದೇ ಧರ್ಮದಲ್ಲಿ ಇಲ್ಲವೆಂದರೆ ತಪ್ಪಾಗಲಾರದು. ಯಾಕೆಂದರೆ ಹುಟ್ಟಿನಿಂದ ಸಾವಿನ ತನಕ ಹಿಂದೂಗಳು ಹಲವಾರು ರೀತಿಯ ಸಂಪ್ರದಾಯಗಳನ್ನು ಪಾಲಿಸಿಕೊಂಡು ಹೋಗುತ್ತಾರೆ. ಹುಟ್ಟಿದ ಮಗುವಿಗೆ ನಾಮಕರಣದಿಂದ ಹಿಡಿದು ಸತ್ತ ವ್ಯಕ್ತಿಗೆ ಪಿಂಡ ಬಿಡುವ ತನಕ ಪ್ರತಿಯೊಂದು ಸಂಪ್ರದಾಯಗಳು ಹಿಂದೂಗಳಲ್ಲಿ ಇದೆ.
ಅದರಲ್ಲೂ ಮನೆಯಲ್ಲಿ ಯಾರಾದರೂ ಹಿರಿಯರು ಸಾವನ್ನಪ್ಪಿದರೆ ಕಿರಿಯರು ತಲೆಬೋಳಿಸಿಕೊಳ್ಳುವ ಸಂಪ್ರದಾಯವು ಇದೆ. ಹಿಂದಿನ ಕಾಲದಲ್ಲಿ ಪತಿ ಸಾವನ್ನಪ್ಪಿದರೆ ಪತ್ನಿಯ ತಲೆ ಬೋಳಿಸಲಾಗುತ್ತಿತ್ತು. ಆದರೆ ಆ ಕೆಟ್ಟ ಪದ್ಧತಿಯನ್ನು ಇಂದಿನ ದಿನಗಳಲ್ಲಿ ಅನುಸರಿಸಲಾಗುತ್ತಿಲ್ಲ. ತಂದೆ ಅಥವಾ ತಾಯಿ ಸಾವನ್ನಪ್ಪಿದರೆ, ಸಹೋದರ ಅಥವಾ ಸಹೋದರಿ ಸಾವನ್ನಪ್ಪಿದರೆ ಮಗ ಅಥವಾ ಅವರಿಗೆ ಸಂಬಂಧಪಟ್ಟವರು ತಲೆ ಬೋಳಿಸುವ ಪದ್ಧತಿ ಈಗಲೂ ಇದೆ. ಇದು ಯಾಕೆಂದು ತಿಳಿಯಲು ಈ ಲೇಖನವನ್ನು ಮುಂದಕ್ಕೆ ಓದುತ್ತಾ ಸಾಗಿ…
ಪತಿ ಸಾವಿನಿಂದ ವಿಧವೆಯಾಗುವ ಮಹಿಳೆಯ ತಲೆಯನ್ನು ಬೋಳಿಸಿ ಮುಂಡನ ನಡೆಸಲಾಗುತ್ತದೆ. ಈ ಮುಂಡನವು ಜೀವಮಾನಪೂರ್ತಿ ಉಳಿದಿರುತ್ತದೆ ಮತ್ತು ವಿಧವೆಯರು ಕೂದಲು ಬೆಳೆಸುವುದಿಲ್ಲ. ಮೇಲ್ಜಾತಿಯಲ್ಲಿ ಇದು ಹೆಚ್ಚಾಗಿ ಕಂಡುಬರುತ್ತಾ ಇತ್ತು. ಆದರೆ ಇಂದಿನ ದಿನಗಳಲ್ಲಿ ಇದನ್ನು ಪಾಲಿಸುವವರ ಸಂಖ್ಯೆ ತೀರ ಕಡಿಮೆಯಾಗಿದೆ. ಮನೆಯಲ್ಲಿ ಹಿರಿಯರು ಸಾವನ್ನಪ್ಪಿದಾಗ ಪುರುಷರು ತಲೆ ಬೋಳಿಸಿಕೊಳ್ಳುತ್ತಾರೆ. ಇದು ತಾತ್ಕಾಲಿಕವಾಗಿರುತ್ತದೆ ಮತ್ತು ಕೆಲವೇ ಸಮಯದಲ್ಲಿ ಕೂದಲು ಬೆಳೆಯುತ್ತದೆ.
ಕುಟುಂಬದಲ್ಲಿ ದುಃಖದ ಘಟನೆ ನಡೆದಿದೆ ಮತ್ತು ನಾವು ಶೋಕದಲ್ಲಿ ಇದ್ದೇವೆ ಎನ್ನುವುದನ್ನು ಸೂಚಿಸಲು ಮುಂಡನ ಮಾಡಲಾಗುತ್ತದೆ. ಪರಿಚಯಸ್ಥರು ಶೋಕದಲ್ಲಿರುವ ವ್ಯಕ್ತಿಯೊಂದಿಗೆ ತುಂಬಾ ಎಚ್ಚರಿಕೆಯಿಂದ ವರ್ತಿಸಬೇಕು ಎನ್ನುವುದು ಮುಂಡನದ ಉದ್ದೇಶವಾಗಿದೆ.
ಕೂದಲು ಪ್ರತೀಕಾರದ ಸಿದ್ಧಾಂತವನ್ನು ತ್ಯಜಿಸುವುದರ ಸಂಕೇತವಾಗಿದೆ. ತಾತ್ಸಾರ ಭಾವನೆಯನ್ನು ಬಿಟ್ಟು ಸತ್ತವರು ಬಿಟ್ಟು ಹೋಗಿರುವ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುವುದೇ ಮುಂಡನದ ಉದ್ದೇಶವಾಗಿದೆ.
ದುಃಖದಿಂದ ಯಾವಾಗಲೂ ನಕಾರಾತ್ಮಕತೆ ಆವರಿಸುತ್ತದೆ. ಕೂದಲು ಬೋಳಿಸಿಕೊಂಡು ಹೊಸ ಜೀವನಕ್ಕೆ ತಯಾರಾಗುವುದು, ಅಂತಿಮ ಕ್ರಿಯೆಗಳಿಗೆ ಧನಾತ್ಮಕವಾಗಿ ತಯಾರಾಗುವುದು ಮತ್ತು ಬದ್ಧತೆ ಹಾಗೂ ಏಕಾಗ್ರತೆಯಿಂದ ಇದನ್ನು ಪೂರೈಸುವುದು ಮುಂಡನದ ಉದ್ದೇಶವಾಗಿದೆ.
ತುಂಬಾ ಪ್ರೀತಿಪಾತ್ರರು ಮತ್ತು ಮನಸ್ಸಿಗೆ ಹತ್ತಿರವಾಗಿರುವವರು ಸಾವನ್ನಪ್ಪಿದರೆ ಆಗ ಭಾವನಾತ್ಮಕವಾಗಿ ಪರಿಣಾಮ ಉಂಟಾಗುತ್ತದೆ. ಇದುವರೆಗೆ ಹಿರಿಯರಿಂದ ಸಿಗುತ್ತಿದ್ದ ಮಾರ್ಗದರ್ಶನ ಮತ್ತು ಸಲಹೆಗಳು ಇನ್ನು ಸಿಗುವುದಿಲ್ಲವೆನ್ನುವ ನೋವು ಇರುತ್ತದೆ. ವೈರಾಗ್ಯವನ್ನು ಬಿಟ್ಟು ಜೀವನಕ್ಕೆ ತಯಾರಾಗಬೇಕು ಎನ್ನುವುದು ಮುಂಡನದ ಉದ್ದೇಶವಾಗಿದೆ.
ಹಿರಿಯರು ಸಾವನ್ನಪ್ಪಿದಾಗ ಅವರ ಅಂತ್ಯಕ್ರಿಯೆ ಮತ್ತು ಇತರ ವಿಧಿವಿಧಾನಗಳನ್ನು ಮಾಡುವವರು ತಲೆ ಬೋಳಿಸಿಕೊಳ್ಳುತ್ತಾರೆ. ಇದು ಶುದ್ಧೀಕರಣ ವ್ರತವಾಗಿದೆ. ಇದು ದೈಹಿಕ ಹಾಗೂ ಮಾನಸಿಕವಾಗಿ ಸತ್ತವರಿಗೆ ಮಾಡುವ ಅಂತಿಮ ವೃತವಾಗಿದೆ.
ಮನೆಯಲ್ಲಿನ ಪುರುಷರು ತಲೆಬೋಳಿಸಿಕೊಳ್ಳುವುದು ಅವರು ತಮ್ಮ ಅಹಂ ಬಿಟ್ಟ ಸಂಕೇತವಾಗಿದೆ. ಮನೆಯಲ್ಲಿ ಹಿರಿಯರು ಸಾವನ್ನಪ್ಪಿದಾಗ ಅವರಿಂದ ಬಿಡುವಾದ ಜಾಗವನ್ನು ತುಂಬುವಾಗ ವ್ಯಕ್ತಿಯಲ್ಲಿ ಅಹಂ ಬರಬಹುದು ಮತ್ತು ಇದನ್ನು ಬಿಟ್ಟು ಮನೆಯವರೊಂದಿಗೆ ಒಳ್ಳೆಯ ರೀತಿಯಿಂದ ನಡೆದುಕೊಳ್ಳಬೇಕೆನ್ನುವ ಸಂಕೇತವೇ ಈ ಮುಂಡನ
ಸತ್ತವರಿಗೆ ಗೌರವ ಸೂಚಕವಾಗಿಯೂ ಮುಂಡನ ಮಾಡಲಾಗುತ್ತದೆ. ಹಲವಾರು ವರ್ಷಗಳಿಂದ ಕುಟುಂಬದಲ್ಲಿ ಪ್ರೀತಿಯಿಂದ ಇದ್ದು, ಕಿರಿಯರಿಗೆ ಮಾರ್ಗದರ್ಶನ ನೀಡಿ ಮುಂದಿನ ಜೀವನಕ್ಕೆ ಬೇಕಾಗುವ ದಾರಿಯನ್ನು ಮಾಡಿರುವ ಹಿರಿಯರು ಸಾವನ್ನಪ್ಪಿದಾಗ ಅವರಿಗೆ ಗೌರವ ಸೂಚಕವಾಗಿ ಮತ್ತು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎನ್ನುವ ಉದ್ದೇಶದಿಂದ ಮುಂಡನ ಮಾಡಲಾಗುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇತ್ತೀಚಿಗೆ ನಡೆದ ಮಹಿಳಾ ವಿಶ್ವಕಪ್ ನಲ್ಲಿ ಭಾರತ ತಂಡವು ಇಂಗ್ಲೆಂಡ್ ವಿರುದ್ದ ಸೋಲು ಅನುಭವಿಸಿತ್ತು.
ಜಿಯೋ ಕಂಪನಿ; ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಕಾರಣವಾಗಿದ್ದ ರಿಲಯನ್ಸ್ ಜಿಯೋ ಇದೀಗ ಇತರೆ ನೆಟ್ವರ್ಕ್ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ಚಾರ್ಜ್ ಮಾಡಲಿದೆ ಎಂದು ತಿಳಿಸಿದ್ದಾರೆ . ಈ ಹೊಸ ನಿಯಮವು ಇವತ್ತಿನಿಂದಲೇ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ. ಅಂದರೆ ಇನ್ಮುಂದೆ ಜಿಯೋ ಟು ಏರ್ಟೆಲ್ ಅಥವಾ ವೊಡಾಫೋನ್ ಸೇರಿದಂತೆ ಇನ್ನಿತರ ನೆಟ್ವರ್ಕ್ಗಳಿಗೆ ಕರೆ ಮಾಡಿದರೆ ಶುಲ್ಕ ಅನ್ವಯವಾಗಲಿದೆ. ಇದರ ಹೊರತಾಗಿ ಡೇಟಾ ಸೌಲಭ್ಯವನ್ನು ಉಚಿತವಾಗಿ ನೀಡುವುದಾಗಿ ಜಿಯೋ ಕಂಪೆನಿ ಹೇಳಿಕೊಂಡಿದೆ. ಇತರೆ ಜಿಯೋ…
KA-01 ಬೆಂಗಳೂರು ಕೇಂದ್ರ , ಕೋರಮಂಗಲ KA-02 ಬೆಂಗಳೂರು ಪಶ್ಚಿಮ, ರಾಜಾಜಿನಗರ KA-03 ಬೆಂಗಳೂರು ಪೂರ್ವ, ಇಂದಿರಾನಗರ KA-04 ಬೆಂಗಳೂರು ಉತ್ತರ, ಯಶವಂತಪುರ KA-05 ಬೆಂಗಳೂರು ದಕ್ಷಿಣ, ಜಯನಗರ 4th ಬ್ಲಾಕ್ KA-06 ತುಮಕೂರು KA-07 ಕೋಲಾರ KA-08 ಕೋಲಾರ್ ಗೋಲ್ಡ್ ಫೀಲ್ಡ್ಸ್ (KGF) KA-09 ಮೈಸೂರು ಪಶ್ಚಿಮ KA-10 ಚಾಮರಾಜ್ನಗರ KA-11 ಮಂಡ್ಯ KA-12 ಮಡಿಕೇರಿ KA-13 ಹಾಸನ KA-14 ಶಿವಮೊಗ್ಗ KA-15 ಸಾಗರ KA-16 ಚಿತ್ರದುರ್ಗ KA-17 ದಾವಣಗೆರೆ KA-18 ಚಿಕ್ಕಮಗಳೂರು KA-19 ಮಂಗಳೂರು…
ಎಲ್ಲಾ ಕಾಲದಲ್ಲೂ ಸುಲಭವಾಗಿ ದೊರೆಯುವ ಖರ್ಜೂರ ವನ್ನು ನಿತ್ಯ ಒಂದೆರಡು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು.ಡ್ರೈಫ್ರುಟ್ಗಳು ನಮ್ಮ ದೈನಂದಿನ ಆಹಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇವುಗಳಲ್ಲಿರುವ ವಿಟಮಿನ್ ಮತ್ತು ಮಿನರಲ್ಗಳು ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಅತ್ಯವಶ್ಯಕವಾದುದು. ಖರ್ಜೂರ ಎಲ್ಲರೂ ಇಷ್ಟಪಡುವ ಹಣ್ಣು. ರುಚಿಗೂ ಸೈ ಆರೋಗ್ಯಕ್ಕೂ ಜೈ. ಪುರಾತನ ಕಾಲದಲ್ಲಿ ಇಜಿಪ್ತಿಯನ್ನರು ಖರ್ಜೂರದಿಂದ ವೈನ್ ತಯಾರಿಸುತ್ತಿದ್ದರಂತೆ. 30 ವೆರೈಟಿ ಖರ್ಜೂರ ಮಾರುಕಟ್ಟೆಯಲ್ಲಿ ಸಿಗುತ್ತದೆ. ಅಸಿಡಿಟಿ ಮತ್ತು ಎದೆ ಉರಿ ಇದ್ದರೆ ಒಂದು ಖರ್ಜೂರ ತಿಂದರೆ ಸಾಕು ಕಡಿಮೆಯಾಗುತ್ತದೆ. ಇದರಲ್ಲಿ…
ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಅಭ್ಯರ್ಥಿಗಳು ತಮ್ಮ ಚಿಹ್ನೆಯೊಂದಿಗೆ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಮಂಡ್ಯ ಲೋಕಸಭಾ ಚುನಾವಣಾ ಕಣದಲ್ಲಿ ಅಭ್ಯರ್ಥಿಗಳಿಗೆ ಇವಿಎಂನಲ್ಲಿ ಸ್ಥಾನ ನೀಡಲಾಗಿದೆ. ಅದರಲ್ಲಿ ಮೊದಲ ಹೆಸರೇ ಮುಖ್ಯಮಂತ್ರಿ ಪುತ್ರ ನಿಖಿಲ್ ಕುಮಾರಸ್ವಾಮಿಯವರದ್ದಾದ್ರೆ, ಕೊನೆಯಿಂದ ಎರಡನೇಯವರಾಗಿ ಸುಮಲತಾ ಹೆಸರಿದೆ…! ಇವಿಎಂನ ಕ್ರಮ ಸಂಖ್ಯೆ 1 ರಲ್ಲೇ ನಿಖಿಲ್ ಕುಮಾರಸ್ವಾಮಿಯವರ ಹೆಸರು ನೀಡಲಾಗಿದೆ. ಆದ್ರೆ ಸುಮಲತಾ ಅಂಬರೀಷ್ ಹೆಸರನ್ನು ಇವಿಎಂನಲ್ಲಿ ಕೊನೆಯಿಂದ ಎರಡನೇಯದಾಗಿ ಹಾಕಲಾಗಿದೆ. ಅಲ್ಲದೆ ಸುಮಲತಾ ಅಂಬರೀಷ್ ಹೆಸರಿನ ಮೊದಲು ಮತ್ತು ಕೊನೆಗೆ…
ಎಳನೀರಿನಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್, ವಿವಿಧ ಬಗೆಯ ವಿಟಮಿನ್ ಮತ್ತು ಖನಿಜಾಂಶಗಳಿವೆ. ಆಂಟಿಆಕ್ಸಿಡೆಂಟ್ ಗುಣವಿರುವ ಎಳನೀರು ರೋಗಗಳನ್ನು ತಡೆಯಲು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ಬಾಯಾರಿಕೆ, ದಣಿವಾರಿಸಲು ಮಾತ್ರ ಎಳನೀರು ಬೆಸ್ಟ್ ಅಲ್ಲ. ಎಲ್ಲ ಕಾಲದಲ್ಲಿಯೂ ಎಳನೀರು ಸೇವನೆ ಮಾಡಬೇಕು