ಉಪಯುಕ್ತ ಮಾಹಿತಿ, ಜ್ಯೋತಿಷ್ಯ

ಹರಿದ ಬಟ್ಟೆ, ಜೀನ್ಸ್ ತೊಡೋದರಿಂದ ಏನಾಗುತ್ತೆ ಗೊತ್ತಾ?

593

ಈವರೆಗೆ ವಾಸ್ತುವಿಗೆ ಸಂಬಂಧಿಸಿದಂತೆ ಅನೇಕ ವಿಷಯಗಳನ್ನು ಹೇಳಿದ್ದೇವೆ. ಫೆಂಗ್ ಶೂಯಿಯಲ್ಲಿ ಯಾವ ವಸ್ತು ಮನೆಯಲ್ಲಿದ್ದರೆ ಶುಭ ಹಾಗೆ ಯಾವ ಜಾಗದಲ್ಲಿ ಯಾವ ವಸ್ತು ಇರಬೇಕು ಎಂಬೆಲ್ಲ ವಿಷಯಗಳನ್ನು ಹೇಳಲಾಗಿದೆ. ಇದ್ರ ಜೊತೆಗೆ ಫೆಂಗ್ ಶೂಯಿಯಲ್ಲಿ ಬಟ್ಟೆಗೂ ಮಹತ್ವ ನೀಡಲಾಗಿದೆ.  ಯಾವ ಬಟ್ಟೆ ಧರಿಸ್ತೇವೆ ಹಾಗೆ ಬಟ್ಟೆಯನ್ನು ಹೇಗೆ ಬಳಸ್ತೇವೆ ಎಂಬುದು ಫೆಂಗ್ ಶೂಯಿಯಲ್ಲಿ ಮಹತ್ವ ಪಡೆದಿದೆ.

ನೀವು ಧರಿಸುವ ಬಟ್ಟೆ ನಿಮ್ಮ ಸೌಂದರ್ಯವನ್ನು ಹೆಚ್ಚಿಸಬಹುದು. ಆದ್ರೆ ಇದೇ ಬಟ್ಟೆ ನಿಮ್ಮ ದುರಾದೃಷ್ಟಕ್ಕೆ ಕಾರಣವಾಗಬಹುದು. ಮನೆಯಿಂದ ಹೊರ ಹೋಗುವಾಗಲ್ಲ ಮನೆಯಲ್ಲಿರುವಾಗ ಅಥವಾ ಅಡುಗೆ ಮಾಡುವಾಗ ಕೂಡ ಹಳೆಯ ಹಾಗೂ ಹರಿದ ಬಟ್ಟೆಯನ್ನು ಧರಿಸಬಾರದು. ಇದು ಬಡತನಕ್ಕೆ ದಾರಿ ಮಾಡಿಕೊಡುತ್ತದೆ.

ಬೆಳಿಗ್ಗೆ ಎದ್ದ ತಕ್ಷಣ ನೈಟ್ ಡ್ರೆಸ್ ಬಿಚ್ಚಿ ಕಣ್ಣಿಗೆ ಹಿತವೆನಿಸುವ ಬಟ್ಟೆಯನ್ನು ಧರಿಸಬೇಕು. ಇದು ನಿಮ್ಮಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಿ ಅದೃಷ್ಟವನ್ನು ಹೊತ್ತು ತರುತ್ತದೆ.

ಸ್ವಚ್ಛವಾಗಿರುವ ಬಟ್ಟೆ ಹಾಗೂ ಸುಂದರ ನಗುವಿನೊಂದಿಗೆ ಬೆಳಗನ್ನು ನೀವು ಸ್ವಾಗತಿಸಬೇಕು. ಬಟ್ಟೆಯನ್ನು ತೊಳೆದ ನಂತ್ರ ಅದನ್ನು ಬಿಸಿಲಿನಲ್ಲಿ ಒಣ ಹಾಕಬೇಕು.

ತೊಳೆದ ಹಾಗೂ ಒಣಗಿದ ಬಟ್ಟೆಯನ್ನು ರಾತ್ರಿ ಹೊರಗೆ ಇಡಬಾರದು. ರಾತ್ರಿ ನಕಾರಾತ್ಮಕ ಶಕ್ತಿ ಜಾಸ್ತಿ ಇರುತ್ತದೆ. ಇದು ಬಟ್ಟೆಯ ಮೇಲೂ ಪ್ರಭಾವ ಬೀರುತ್ತದೆ. ಅದೇ ಬಟ್ಟೆಯನ್ನು ನಾವು ಧರಿಸಿದ್ರೆ ನಮ್ಮ ಮೇಲೆ ನಕಾರಾತ್ಮಕ ಶಕ್ತಿ ಪ್ರಭಾವ ಹೆಚ್ಚಾಗುತ್ತದೆ.

ತಿಂಗಳಿಗೊಮ್ಮೆಯಾದ್ರೂ ದಿಂಬು ಹಾಗೂ ಹಾಸಿಗೆಯನ್ನು ಬಿಸಿಲಿಗೆ ಹಾಕಬೇಕು. ಅನಾರೋಗ್ಯಕ್ಕೊಳಗಾದ ವ್ಯಕ್ತಿ ಬಳಸಿದ ಬಟ್ಟೆಯನ್ನು ಸ್ವಚ್ಛಗೊಳಿಸಿ ಬಿಸಿಲಿಗೆ ಹಾಕಬೇಕು. ಸಣ್ಣಪುಟ್ಟ ವಿಷಯಗಳು ಕೂಡ ನಮ್ಮ ಆರೋಗ್ಯ, ಅದೃಷ್ಟದ ಮೇಲೆ ಪರಿಣಾಮ ಬೀರುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ, ಉಪಯುಕ್ತ ಮಾಹಿತಿ

    ಮೆಂತ್ಯ ತಿನ್ನೋದ್ರಿಂದ ನಿಮ್ಮ ಆರೋಗ್ಯದ ಮೇಲೆ ಏನೆಲ್ಲಾ ಅದ್ಭುತ ಪ್ರಯೋಜನಗಳಾಗುತ್ತೆ ಗೊತ್ತಾ..!

    ಹಲವಾರು ರೋಗಗಳಿಗೆ ಮನೆಯಲ್ಲೇ ಮದ್ದಿದೆ ಎಂಬುದು ಎಷ್ಟೋ ಜನಕ್ಕೆ ಗೊತ್ತಿದ್ದರೂ ಅದನ್ನು ಉಪಯೋಗ ಮಾಡಿಕೊಳ್ಳದಿರುವವರೇ ಹೆಚ್ಚು. ಇದಕ್ಕೆ ಕಾರಣವೂ ಇದೆ. ಆಧುನಿಕ ಯುಗದಲ್ಲಿ ತಂತ್ರಜ್ಞಾನಗಳೊಂದಿಗೆ ಸಾಗುತ್ತಿರುವ ನಾವು ನಮ್ಮಲ್ಲೇ ಇರುವ ನೈಸರ್ಗಿಕವಾದ ಔಷಧಿಗಳನ್ನು ಅರಿಯದೆ ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದೇವೆ. *ನೆನೆ ಹಾಕಿದ ಮೆಂತ್ಯವನ್ನು ನುಣ್ಣಗೆ ರುಬ್ಬಿ ಕುದಿಯುವ ಹಾಲಿನೊಂದಿಗೆ ಬೆರೆಸಿ ರಾತ್ರಿ ಮಲಗುವಾಗ ಹಚ್ಚಿ, ಬೆಳಿಗ್ಗೆ ಎದ್ದೊಡನೆ ಮುಖ ತೊಳೆದುಕೊಳ್ಳಬೇಕು. ಇದರಿಂದ ಚರ್ಮ ಸುಕ್ಕುಗಟ್ಟುವುದಿಲ್ಲ. *ಇದನ್ನು ಸೇವಿಸಿದರೆ ತಾಯಂದಿರಲ್ಲಿ ಎದೆ ಹಾಲು ಹೆಚ್ಚಿಸಲು ಸಹಾಯ ಮಾಡುತ್ತದೆ. *ಬೆಳಿಗ್ಗೆ…

  • ಸುದ್ದಿ

    ಮದುವೆಯಾದ ಮೊದಲ ರಾತ್ರಿಯ ನಂತರ ಬೆಳಿಗ್ಗೆ ಮನೆ ಬಿಟ್ಟ ವಧು!ಅಸಲಿ ವಿಷಯ ನೀವು ಅಂದುಕೊಂಡ ಹಾಗೆ ಇಲ್ಲ….

    ಮಗಳಿಗೋ ಮಗನಿಗೋ ಮದುವೆ ಮಾಡಬೇಕಾದರೆ ಹಲವಾರು ಕಡೆ ವಿಚಾರಿಸಿ ಎರಡೂ ಕುಟುಂಬಗಳ ಕಡೆ ವಿಚಾರಿಸಿ ಮದುವೆ ಮಾಡುತ್ತಾರೆ. ಹೆಣ್ಣು ಗಂಡು ಚೆನ್ನಾಗಿ ಬಾಳಬೇಕೆಂಬ ಬಯಕೆಯಿಂದ ಹೀಗೆ ಮಾಡುತ್ತಾರೆ. ಆದರೆ ಇಲ್ಲಿ  ಮದುವೆಯೊಂದು ಮುರಿದು ಬಿದ್ದಿದೆ. ಮೊದಲ ರಾತ್ರಿ ಕಣ್ಣೀರಿನಲ್ಲಿ ಕೈತೊಳೆದ ವಧು ಬೆಳಿಗ್ಗೆ ಗಂಡನ ಮನೆ ತೊರೆದಿದ್ದಾಳೆ. ಎರಡು ದಿನ ರೂಮಿನಲ್ಲಿ ಬಂಧಿಯಾಗಿದ್ದ ವರ ಹಾಗೂ ಆತನ ತಂದೆ-ತಾಯಿ ಈಗ ಆಸ್ಪತ್ರೆ ಸೇರಿದ್ದಾರೆ. ಜನವರಿ 22ರಂದು ಧೀರಜ್ ಮದುವೆ ತನು ಜೊತೆ ನಡೆದಿತ್ತು. ಜನವರಿ 23ರಂದು ತನು ಗಂಡನ…

  • ಉಪಯುಕ್ತ ಮಾಹಿತಿ

    ನಿಮ್ಮ ಹೆಸರುಗಳು ಮತದಾರರ ಪಟ್ಟಿಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಿ

    karnataka ಎಲ್ಲಾ ಜಿಲ್ಲೆಯ ಎಲ್ಲಾ ತಾಲೂಕಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಮತದಾರರ ಲಿಸ್ಟ್ ಅನ್ನು ನೋಡಬಹುದು ಇದು ಎಲ್ಲರಿಗೂ ತುಂಬಾ ಅನುಕೂಲವಾಗುತ್ತದೆ. ನಿಮ್ಮ ನಿಮ್ಮ ಹೆಸರುಗಳು ಮತದಾರರ ಪಟ್ಟಿಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಿ. 2023 ರ ಅಂತಿಮ ಮತದಾರರ ಪಟ್ಟಿ – ವಿಧಾನಸಭೆ ಕ್ಷೇತ್ರಗಳ ಹೆಸರುಗಳ ಪಟ್ಟಿಯನ್ನು ವೀಕ್ಷಿಸಲು ಜಿಲ್ಲೆಯ ಹೆಸರಿನ ಮೇಲೆ ಕ್ಲಿಕ್ ಮಾಡಿ https://ceo.karnataka.gov.in/FinalRoll_2023/

  • ದೇವರು-ಧರ್ಮ

    ಹನುಮಂತ ದೇವರನ್ನು ನೆನೆಯುತ್ತ ನಿಮ್ಮ ಇಂದಿನ ರಾಶಿ ಭವಿಷ್ಯವನ್ನು ನೋಡಿರಿ

    ಮೇಷ ರಾಶಿ ಭವಿಷ್ಯ (Sunday, November 21, 2021) ಮೇಷ ರಾಶಿಯವರಿಗೆ ಇಂದು ಆರೋಗ್ಯ ಪರಿಪೂರ್ಣವಾಗಿರುತ್ತದೆ. ಹೂಡಿಕೆ ಮಾಡುವುದು ಅನೇಕ ಬಾರಿ ನಿಮಗೆ ಪ್ರಯೋಜನಕಾರಿಯೆಂದು ಸಾಬೀತುಪಡಿಸುತ್ತದೆ, ಇಂದು ನಿಮಗೆ ಈ ಮಾತು ಅರ್ಥವಾಗಬಹುದು ಏಕೆಂದರೆ ಯಾವುದೇ ಹಳೆಯ ಹೂಡಿಕೆಯಿಂದ ನೀವು ಪ್ರಯೋಜನವನ್ನು ಪಡೆಯಬಹುದು ಸ್ನೇಹಿತರು ಮತ್ತು ಸಂಬಂಧಿಗಳೊಡನೆ ಆನಂದಿಸಿ. ಮನ್ಮಥನ ಬಾಣದಿಂದ ತಪ್ಪಿಸಿಕೊಳ್ಳುವ ಅವಕಾಶ ಕಡಿಮೆಯಿದೆ. ನೀವಿಂದು ತಾರೆಯಂತೆ ಪ್ರಕಾಶಿಸಿ – ಆದರೆ ಕೇವಲ ಪ್ರಶಂಸಾರ್ಹ ಕೆಲಸಗಳನ್ನು ಮಾತ್ರ ಮಾಡಿ. ಇಂದು, ನಿಮ್ಮ ಸಂಗಾತಿ ಅವರ ಅದ್ಭುತವಾದ…

  • ಉಪಯುಕ್ತ ಮಾಹಿತಿ

    ಲಕ್ಷಾಂತರ ಪ್ಯಾನ್ ಕಾರ್ಡ್ ರದ್ದು!ನಿಮ್ಮ ಪ್ಯಾನ್ ಕಾರ್ಡ್ ರದ್ದಾಗಿದೆಯಾ,ಇಲ್ಲವಾ ಚೆಕ್ ಮಾಡಲು ಈ ಲೇಖನಿ ಓದಿ…

    ಹಣಕಾಸು ರಾಜ್ಯ ಸಚಿವ ಸಂತೋಷ ಕುಮಾರ್ ಗಂಗಾವರ್‌ರು ಸಂಸತ್ತಿಗೆ ಲಿಖಿತ ಪ್ರಶ್ನೆಗೆ ಉತ್ತರಿಸಿ ಒಬ್ಬವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಹಂಚಲಾಗಿತ್ತು. ಜುಲೈ 27ರವರೆಗೆ 11.44 ಲಕ್ಷ ನಕಲಿ ಪ್ಯಾನ್ ಕಾರ್ಡ್ ಗುರುತಿಸಿ ರದ್ದು ಪಡಿಸಲಾಗಿದೆ. ಎಂದು ತಿಳಿಸಿದ್ದಾರೆ. ಒಬ್ಬನೆ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ನೀಡಿದ್ದು ಪತ್ತೆಯಾಗಿದೆ.

  • ಸುದ್ದಿ

    ಬಿಗಿದಪ್ಪಿದ ಸ್ಥಿತಿಯಲ್ಲಿ ತಾಯಿ-ಮಗು ಶವ ಪತ್ತೆ..! ಕರುಳು ಹಿಂಡಿದ ದೃಶ್ಯ..!

    ಭಾರೀ ಮಳೆ ಪ್ರವಾಹ ಮತ್ತು ಭೂ ಕುಸಿತಗಳಿಂದ ನಲುಗಿರುವ ಕೇರಳಾದಲ್ಲಿ ಕರುಣಾಜನಕ ದೃಶ್ಯಗಳು ಕಂಡು ಬರುತ್ತಿದ್ದು, ಜನರು ಮಮ್ಮಲ ಮರಗುತ್ತಿದ್ದಾರೆ. ಮಲ್ಲಪುರಂ ಜಿಲ್ಲೆಯ ಕೊಟ್ಟುಕುಣ್ನು ಪರ್ವತ ಪ್ರದೇಶದಲ್ಲಿ ಸಂಭವಿಸಿದ ಭಾರೀ ಭೂ ಕುಸಿತದಿಂದ ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ತಾಯಿ ಮತ್ತು ಮಗುವಿನ ಶವ ಬಿಗಿದಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಹೃದಯವಿದ್ರಾವಕ ದೃಶ್ಯ ಕಂಡು ರಕ್ಷಣಾ ಕಾರ್ಯಕರ್ತರು ಮತ್ತು ಸ್ಥಳೀಯರು ಕಣ್ಣುಗಳು ಒದ್ದೆಯಾದವು. ಗೀತು(21) ಮತ್ತು ಆಕೆಯ ಒಂದೂವರೆ ವರ್ಷದ ಮಗು (ದೃವ)ವಿನ ಶವ ಭೂ…