ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈ ಗ್ರಾಮದಲ್ಲಿ ಇದುವರೆಗೂ ಒಂದು ಅಪರಾಧ ಕೃತ್ಯಗಳು ನಡೆದಿಲ್ಲ. ಇದು ಎಲ್ಲೋ ಹೊರ ದೇಶದಲ್ಲಿ ಅಲ್ಲ ನಮ್ಮ ಭಾರತದ ಹಾಗು ಕರ್ನಾಟಕದ ಪಕ್ಕದ ರಾಜ್ಯ ಆದಂತ ಆಂಧ್ರ ಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಬೈರಿಪುರಂ ಗ್ರಾಮದಲ್ಲಿ ಈ ಗ್ರಾಮದಲ್ಲಿನ ಜನರು ಹಾಗು ಇಲ್ಲಿನ ವಾತಾವರಣದ ಬಗ್ಗೆ ನೀವು ಕೇಳಿದರೆ ಆಶ್ಚರ್ಯ ಪಡೋದು ಗ್ಯಾರೆಂಟಿ..
ಹೇಳಿ ಕೇಳಿ ಅಂದ್ರ ಹಲವು ಅಪರಾಧ ಪ್ರಕರಣಕ್ಕೆ ಸುದ್ದಿ ಯಾಗುವಂತ ರಾಜ್ಯ ಆದರೆ ಅಂತ ರಾಜ್ಯದಲ್ಲಿ ಇಂತದೊಂದು ಗ್ರಾಮ ಇರೋದು ನಿಜಕ್ಕೂ ಆಶ್ಚರ್ಯವೇ ಆಗಿದೆ.ಬೈರಿಪುರಂ ಗ್ರಾಮದಲ್ಲಿ ಸ್ವಾತಂತ್ರ್ಯ ಸಿಕ್ಕಿದ ನಂತರ ಒಂದೇ ಒಂದು ಅಪರಾಧ ನಡೆದಿಲ್ಲವಂತೆ 15 ವರ್ಷಗಳ ಹಿಂದೆ ಕಾನೂನು ವ್ಯಾಜ್ಯದ ಕೇಸು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವುದು ಬಿಟ್ಟರೆ ಬೇರೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ.
ಈ ಗ್ರಾಮದಲ್ಲಿ ಚಿಕ್ಕ ಪುಟ್ಟ ಗಲಾಟೆಗಳು ಸಮಸ್ಯೆಗಳು ಎದುರಾದರೆ ಆ ಊರಿನ ಗ್ರಾಮಸ್ಥರೇ ಕೂಡಿ ಪರಿಹಾರವನ್ನು ಕಂಡು ಕೊಳ್ಳುತ್ತಾರೆ. ಹಾಗು ಯಾವುದೇ ಅಪರಾಧ ಕೃತ್ಯಗಳು ನಡೆಯದಂತೆ ಆ ಗ್ರಾಮದ ಜನರು ನೋಡಿಕೊಳ್ಳುತ್ತಾರೆ. ಈ ಗ್ರಾಮವನ್ನು ಅಪರಾಧ ಮುಕ್ತ ಗ್ರಾಮವನ್ನಾಗಿ ಇಡುವುದು ಇಲ್ಲಿಯ ಜನರ ಸಂಪ್ರದಾಯವಾಗಿದೆ ಅಂತೇ.
ಗ್ರಾಮಸ್ಥರು ತಮ್ಮಷ್ಟಕ್ಕೆ ವಿವಾದಗಳನ್ನು ಬಗೆಹರಿಸಲು ಪ್ರಯತ್ನಿಸುತ್ತಾರೆ. ತಮ್ಮ ಗ್ರಾಮದ ಮುಖ್ಯಸ್ಥರು ಕೊಡುವ ತೀರ್ಮಾನವನ್ನು ಗೌರವಿಸುತ್ತಾರೆ. ಸ್ವಾತಂತ್ರ್ಯ ಬಂದ ನಂತರ ಒಂದೇ ಒಂದು ಕೇಸು ದಾಖಲಾಗಿದೆಯಷ್ಟೆ ಎನ್ನುತ್ತಾರೆ ಕಾವಿಟಿ ಸಬ್ ಇನ್ಸ್ ಪೆಕ್ಟರ್ ಕೆ.ವಾಸು ನಾರಾಯಣ.
ಕೃಷಿ ಭೂಮಿಗೆ ಸಂಬಂಧಿಸಿದಂತೆ ಎರಡು ಗುಂಪಿನ ಮಧ್ಯೆ ವಿವಾದ ಶುರು ಆಗಿತ್ತು ಆಗಾಗಿ ಆರೋಪಿಗಳು ಪಕ್ಕದ ಗ್ರಾಮದವರಾಗಿದ್ದರಿಂದ ಹಾಗು ವಿವಾದ ಕಂದಾಯ ಜಮೀನಿಗೆ ಸಂಬಂಧಪಟ್ಟದ್ದಾಗಿದ್ದರಿಂದ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಈ ಗ್ರಾಮ ಸಮಿತಿಯಿದ್ದು ಅಲ್ಲಿ ವಿವಾದಗಳ ವಿಚಾರಣೆಯಾಗಿ ಪರಿಹಾರ ಕಂಡುಕೊಳ್ಳಲಾಗುತ್ತದೆ. ಇತ್ತೀಚೆಗೆ ವಿಚ್ಛೇದನಕ್ಕೆ ಹೊರಟಿದ್ದ ಐವರು ದಂಪತಿಗಳನ್ನು ಸಮಾಲೋಚನೆ ನಡೆಸಿದ ನಂತರ ವಿಚ್ಛೇದನದ ಯೋಚನೆ ಬಿಟ್ಟು ಇಂದು ಉತ್ತಮ ಜೀವನ ನಡೆಸುತ್ತಿದ್ದಾರೆ. ಅದೇನೇ ಇರಲಿ ಇಂತಹ ಒಂದು ಗ್ರಾಮ ಇರುವುದು ನಿಜಕ್ಕೂ ಅದ್ಭುತವೇ ಅನ್ನಬಹುದು..
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಧ್ಯಾಹ್ನದ ಹೊತ್ತಲ್ಲಿ, ಊಟವಾದ ಬಳಿಕ ಒಂದ್ಹತ್ತು ನಿಮಿಷವಾದ್ರೂ ಮಲಗೋದು ಬಹುತೇಕರ ಅಭ್ಯಾಸ. ಈ ರೀತಿ ಹಗಲು ನಿದ್ದೆ ಮಾಡೋದ್ರಿಂದ ಹಲವು ಲಾಭಗಳಿವೆ. ವಾರಕ್ಕೊಮ್ಮೆ ಅಥವಾ ಎರಡು ಬಾರಿ ಹಗಲು ನಿದ್ದೆ ಮಾಡಿದ್ರೆ ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ. ಹಗಲು ಮಾಡುವ ನಿದ್ದೆ ಹೃದಯ ಸಂಬಂಧಿ ಖಾಯಿಲೆಗಳಿಂದ ನಿಮ್ಮನ್ನು ದೂರವಿಡುತ್ತದೆ ಅನ್ನೋದು ಸಂಶೋಧನೆಯಲ್ಲಿ ದೃಢಪಟ್ಟಿದೆ. ಸ್ವಿಡ್ಜರ್ಲೆಂಡ್ ನಲ್ಲಿ ಒಟ್ಟು 3462 ಮಂದಿಯನ್ನು ಸಂಶೋಧನೆಗೆ ಒಳಪಡಿಸಲಾಗಿದೆ. ಇವರೆಲ್ಲ 35 ರಿಂದ 75 ವರ್ಷ ವಯಸ್ಸಿನವರು. ಹಾರ್ಟ್ ಎಂಬ ಪತ್ರಿಕೆಯಲ್ಲಿ ಈ ಬಗ್ಗೆ…
ಸ್ಯಾಂಡಲವುಡ್ನಲ್ಲಿ ಹೊಸತನದಿಂದ ಗೆದ್ದಿದ್ದ ಚಿತ್ರ ಲೂಸಿಯಾ ಎಲ್ಲರ ಗಮನವನ್ನು ಸೆಳೆದಿದ್ದದ್ದು ಆ ಚಿತ್ರದಲ್ಲಿ ಹೀರೋ ಸತೀಶ್ ತೆಗೆದುಕೊಳ್ಳುತ್ತಿದ್ದ ಮಾತ್ರೆಯಿಂದ. ಇದೀಗಾ ಅಂತಹದ್ದೇ ಮಾತ್ರೆ ಬೆಂಗಳೂರಿಗೆ ಕಾಲಿಟ್ಟಿದ್ದು, ಟೆಕ್ಕಿ ಮತ್ತು ಕಾಲೇಜ್ ಸ್ಟೂಡೆಂಟ್ಗಳನ್ನು ಗಮನದಲ್ಲಿಟ್ಟುಕೊಂಡು ಈ ಗುಳಿಗೆ ಮಾರಾಟ ನಡೆಯುತ್ತಿದೆ ಎನ್ನಲಾಗಿದೆ. ಎಂತಹ ಮನುಷ್ಯನಾದರೂ ಕನಿಷ್ಠ 8-10 ಗಂಟೆಗಳ ಕಾಲ ಅಮಲಿನಲ್ಲಿ ಇಡಬಹುದಾದ ಈ ಮಾತ್ರೆ ಮಾದಕ ವಸ್ತುಗಳನ್ನು ಮೀರಿಸುವಷ್ಟು ಶಕ್ತಿ ಹೊಂದಿದೆ. ವಿದೇಶದಿಂದ ಬರುವ ಈ ಟ್ಯಾಬ್ಲೆಟ್ ಮೂಲ ಬರ್ಮಾ. ಒಂದು ಟ್ಯಾಬ್ಲೆಟ್ನ ಬೆಲೆ 1000 ರೂಪಾಯಿ….
ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿದ್ದು, ಸರ್ಕಾರದಿಂದಲೇ ಸಾಮೂಹಿಕ ವಿವಾಹ ಯೋಜನೆ ರೂಪಿಸುವ ಬಗ್ಗೆ ಮಾತನಾಡಿದ್ದಾರೆ. ಎ-ದರ್ಜೆಯ ದೇಗುಲಗಳಲ್ಲಿ ವಿವಾಹಕ್ಕೆಅವಕಾಶ ಮಾಡಿಕೊಡಲಾಗುವುದು. ಧಾರ್ಮಿಕ ದತ್ತಿ ಇಲಾಖೆಯ100 ದೇಗುಲ ಆಯ್ಕೆ ಮಾಡಿಕೊಂಡಿದ್ದೇವೆ. ಏ.26,ಮೇ 24ರಂದು ವಿವಾಹ ನಡೆಸಲು ನಿರ್ಧಾರ ಮಾಡಲಾಗಿದೆ. ಇದರ ಬಗ್ಗೆ ಸುತ್ತೋಲೆಗಳನ್ನ ಹೊರಡಿಸಲಾಗಿದೆ ಎಂದು ಹೇಳಿದ್ದಾರೆ. ಇನ್ನು ಮದುವೆಯ ರೂಲ್ಸ್ ಬಗ್ಗೆ ಮಾತನಾಡಿದ ಪೂಜಾರಿ, ವಿವಾಹಕ್ಕೊಳಗಾಗುವವರಿಗೆ ನಿಯಮ ಮಾಡಿದ್ದೇವೆ. 30 ದಿನಕ್ಕೂ ಮೊದಲೇ ನೊಂದಣಿ ಮಾಡಿಕೊಳ್ಳಬೇಕು. ಎರಡನೇ ಮದುವೆಗೆ ಇಲ್ಲಿ ಅವಕಾಶವಿಲ್ಲ. ವಧು- ವರರ…
ಈಗಂತೂ ಹುಡುಗ ಹುಡುಗಿಯರು ಡೇಟಿಂಗ್ ಮಾಡೋ ವಿಧಾನವೇ ಬದಲಾಗಿದೆ.ಕೆಲವರಂತೂ ತಮ್ಮ ಪ್ರಿಯ, ಪ್ರಿಯತಮೆಯನ್ನು ಭೇಟಿ ಮಾಡಲು ಹೋಗುವ ಸಂದರ್ಭದಲ್ಲಿ, ಬಟ್ಟೆ ಹೇಗಿರಬೇಕು, ಹೇಗೆ ಕಾಣಬೇಕು ಎಂಬುದರ ಬಗ್ಗೆ ತುಂಬಾ ತಲೆ ಕೆಡಿಸಿಕೊಳ್ಳುತ್ತಾರೆ.ಆದರೆ ಯುವತಿಯೊಬ್ಬಳು ತನ್ನ ಪ್ರಿಯತಮನ ಜೊತೆ ಡೇಟಿಂಗ್ ಮಾಡುವ ಸಲುವಾಗಿ,ತಾನು ಬಟ್ಟೆ ಬರೆಯಿಲ್ಲದೆ ನಗ್ನವಾಗಿ ಭೇಟಿ ಮಾಡಲು ಹೋಗಿದ್ದಾಳೆ..!
ದಿನನಿತ್ಯದ ಚಟುವಟಿಕೆಯಲ್ಲಿ ನಿದ್ರೆಯೂ ಒಂದು. ಉತ್ತಮ ಆರೋಗ್ಯಕ್ಕೆ ಪೌಷ್ಟಿಕಾಂಶ ಭರಿತ ಆಹಾರ ಮುಖ್ಯವಾದಂತೆ ಉತ್ತಮ ನಿದ್ರೆಗೂ ನಾವು ಸೇವಿಸುವ ಆಹಾರ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ.
ಅತ್ಯಮೂಲ್ಯ ನೈಸರ್ಗಿಕವಾಗಿ ದೊರೆಯುವ ‘ಕೀಡಾ ಜಾಡಿ’ ಅಥವಾ ಹಿಮಾಲಯನ್ ವಯಾಗ್ರಾಕ್ಕಾಗಿ ಉತ್ತರಾಖಂಡದ ಎರಡು ಗ್ರಾಮಗಳ ಜನರು ಕಿತ್ತಾಡಿದ್ದು ನಿಷೇಧಾಜ್ಞೆ ಜಾರಿಯಾಗಿದೆ.ನೈಸರ್ಗಿಕ ವಯಾಗ್ರಾ ಸಂಗ್ರಹಿಸುವ ವಿಚಾರವಾಗಿ ಪಿತೋರ್ಗಢ ಜಿಲ್ಲೆಯ ಬುಯಿ ಮತ್ತು ಪಾಟೋ ಗ್ರಾಮಗಳ ಜನರು ಜಗಳ ಮಾಡಿಕೊಂಡಿದ್ದಾರೆ. ವಯಾಗ್ರಾ ಬೆಳೆಯುವ ಪ್ರದೇಶ ನಮಗೆ ಸೇರಿದ್ದು ಎಂದು ಎರಡೂ ಗ್ರಾಮದವರು ಶಸ್ತ್ರಾಸ್ತ್ರ ಹಿಡಿದು ನಿಂತಿದ್ದಾರೆ. ಪಿತೋರ್ಗಢ ಜಿಲ್ಲೆಯ ಹಿಮಾಲಯ ಪ್ರದೇಶ ರಾಲಂ ಮತ್ತು ರಾಜರಾಂಘ ಬಗ್ಯಾಲ್ಸ್ ಹುಲ್ಲುಗಾವಲಿನಲ್ಲಿ ವಯಾಗ್ರಾ ಬೆಳೆಯುತ್ತಿದೆ. ಪರ್ವತದ ಎತ್ತರದಲ್ಲಿ ಬೆಳೆಯುವ ವಯಾಗ್ರಾವನ್ನು ಧಾರ್ಚುಲಾ ಮತ್ತು…