ವ್ಯಕ್ತಿ ವಿಶೇಷಣ

ಸ್ವತಂತ್ರ ಭಾರತದ ಪ್ರಪ್ರಥಮ ಮತದಾರನ ಬಗ್ಗೆ ನಿಮಗೆಷ್ಟು ಗೊತ್ತು..?ಇಲ್ಲಿಯವರೆಗೂ ತಪ್ಪದೆ ಮತದಾನ ಮಾಡಿರುವ ಇವರ ಬಗ್ಗೆ ತಿಳಿಯಲು ಈ ಲೇಖನ ಓದಿ…

547

ಪ್ರಸ್ತುತ ದಿನಗಳಲ್ಲಿ ಮತದಾನ ಮಾಡಲು ಹಿಂದೆ ಮುಂದೆ ನೋಡುವ ಜನರ ಮುಂದೆ ಇವರು ಎಲ್ಲರಿಗಿಂತ ಮೊದಲೇ ಮತ ಹಾಕಲು ಬಯಸುತ್ತಾರೆ.ಆದರೆ ಶಿಮ್ಲಾದ ಶ್ಯಾಮ್‌ ಶರಣ್‌ ನೇಗಿ ಯವರು ಸ್ವತಂತ್ರ ಭಾರತದ ಮೊದಲ ಮತದಾರ ಎಂದು ಪ್ರಸಿದ್ಧರಾಗಿದ್ದಾರೆ.

ವೃತ್ತಿಯಲ್ಲಿ ಶಿಕ್ಷಕರಾಗಿದ್ದ ಶ್ಯಾಮ್ ಅವರು, ಮಂಡಿ ಲೋಕಸಭಾಕ್ಕೆ ಸೇರುವ ಕಿನ್ನೌರ್‌ನಲ್ಲಿ ಅ.25, 1951ರಂದು ನಡೆದ ಸ್ವತಂತ್ರ ಭಾರತದ ಮೊದಲ ಚುನಾವಣೆಯಲ್ಲಿ ಪ್ರಥಮ ಮತ ಹಾಕುವ ಮೂಲಕ “ಸ್ವತಂತ್ರ ಭಾರತದ ಮೊದಲ ಮತದಾರ”ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಆಗ ಅವರಿಗೆ 33ರ ಪ್ರಾಯ.

1951ರಿಂದ ಇಂದಿನವರೆಗೂ ಅವರು 17 ಬಾರಿ ಲೋಕಸಭಾ ಚುನಾವಣೆಯ ಮತ ಚಲಾಯಿಸಿದ್ದಾರೆ. ರಾಜ್ಯ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಯಾವುದನ್ನೂ ತಪ್ಪಿಸದ ನೇಗಿ, ತಮ್ಮ ಸುತ್ತಮುತ್ತಲಿನವರನ್ನೂ ಮತ ಹಾಕಿ, ಪ್ರಜಾಪ್ರಭುತ್ವ ಚಿಂತನೆ ಸಾಕಾರಗೊಳಿಸುನವಂತೆ ಪ್ರೇರೇಪಿಸುತ್ತಲೇ ಬಂದಿದ್ದಾರೆ.

ಹಿಮಾಚಲ ರಾಜ್ಯ ಚುನಾವಣಾ ಆಯೋಗವು, ಇವರ ಇಚ್ಛಾಶಕ್ತಿ ಗಮನಿಸಿ ಬುಡಕಟ್ಟು ಪ್ರದೇಶಗಳಲ್ಲಿ ಜನರಿಗೆ ಮತದ ಮಹತ್ವ ತಿಳಿಸಲು, ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿತ್ತು.

2010ರಲ್ಲಿ ಚುನಾವಣಾ ಆಯೋಗದ ವಜ್ರ ಮಹೋತ್ಸವದ ಪ್ರಯುಕ್ತ ಆಗಿನ ಮುಖ್ಯ ಚುನಾವಣಾ ಆಯುಕ್ತ ನವೀನ್ ಚಾವ್ಲಾ ಅವರು ಶಿಮ್ಲಾದಿಂದ 250 ಕಿ.ಮೀ. ದೂರದ ಕಲ್ಪದಲ್ಲಿರುವ ತಾತನ ಮನೆಗೇ ಹೋಗಿ ಅವರನ್ನು ಗೌರವಿಸಿದ್ದರು.


ಇತ್ತೀಚಿಗೆ ನಡೆದ ಹಿಮಾಚಲ ಪ್ರದೇಶದ ಚುನಾವಣೆಯಲ್ಲಿ 97ರ ವಯಸ್ಸಿನಲ್ಲೂ ಶ್ಯಾಮ್‌ ಶರಣ್‌ ನೇಗಿ ಅವರು ವೋಟ್‌ ಮಾಡಿದ್ದು ವಿಶೇಷವಾಗಿತ್ತು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ