ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮೆರಿನಾ ಗಾರ್ಡನ್ ದಕ್ಷಿಣ ಮುಂಬಯಿಯ ಶ್ರೀಮಂತರ ದುರಹಂಕಾರದ ವರ್ತನೆ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ. ಪ್ರತಿಷ್ಠಿತ ಗಾರ್ಡನ್‌ಗೆ ಸ್ಲಮ್ ಮಕ್ಕಳು ಆಡಲು ಬರಬಾರದೆಂದು ಕಫ್ ಪರೇಡ್ ಪ್ರದೇಶದ ನಿವಾಸಿಗಳು ಪೊಲೀಸ್ ಕಂಪ್ಲೇಂಟ್ ಮಾಡಿರುವ ಅಮಾನವೀಯ ಘಟನೆ ನಡೆದಿದೆ.
ದಕ್ಷಿಣ ಮುಂಬಯಿಯ ಪ್ರಸಿದ್ಧ ಗಾರ್ಡನ್‌ಗಳಲ್ಲಿ ಮೆರಿನಾ ಗಾರ್ಡನ್ ಒಂದು. ಇತ್ತೀಚಿಗಷ್ಟೆ ಮುಂಬಯಿ ದಕ್ಷಿಣದ ಜಿಲ್ಲಾಧಿಕಾರಿ ಸಂಪದ ಮೆಹ್ತಾ ಸ್ಲಮ್ ಮಕ್ಕಳಿಗೂ ಅವಕಾಶ ನೀಡಬೇಕೆಂದು ಆದೇಶ ನೀಡಿದ್ದರು.ಇದರಿಂದ ಶ್ರೀಮಂತ ಹೈಫೈ ವರ್ಗಕ್ಕೆ ಮಾತ್ರ ಸ್ವಲ್ಪ ಮುಜುಗರ ಉಂಟಾಗಿದೆ.
ಸಂವಿಧಾನಕ್ಕೆ ಶ್ರೀಮಂತರು, ಬಡವರು ಅಂತ ಬೇಧವಿಲ್ಲ. ಸಾರ್ವಜನಿಕ ಸ್ವತ್ತನ್ನು ಬಳಸಲು ಹಕ್ಕು ಪ್ರತಿಯೊಬ್ಬರಿಗೂ ಇದೆ. ಈ ಗಾರ್ಡನ್ ಆಡಲು ಬಂದ ಸ್ಲಮ್ ಮಕ್ಕಳಿಗೆ ‘ಒಂದೋ ಪೊಲೀಸ್ ವ್ಯಾನ್ ಹತ್ತಿ ಸ್ಟೇಷನ್‌ಗೆ ಹೋಗಿ ಇಲ್ಲ ಜಾಗ ಖಾಲಿ ಮಾಡಿ’ ಎಂದು ಬೆದರಿಸಿದ್ದಾರೆ ಅಲ್ಲಿಯ ವಾಚ್‌ಮೆನ್, ನಾವು ಆಡಲು ಬಂದಾಗ ಸೆಕ್ಯೂರಿಟಿ ಗಾರ್ಡ್ ಕೋಲು ಹಿಡಿದು ನಮ್ಮನ್ನು ಬೆರಿಸುತ್ತಾರೆ, ನಮ್ಮನ್ನು ಓಡಿಸಲು ನಾಯಿಯನ್ನೂ ಕೂಡ ಬಿಟ್ಟಿದ್ದಾರೆ, ಕಫ್ ಪರೇಡ್ ಟವರ್‌ನ ಶ್ರೀಮಂತ ಮಕ್ಕಳು ಬಂದಾಗ ನಾವು ಮೈದಾನದಿಂದ ಹೋಗಬೇಕಾಗುತ್ತದೆ’ ಎಂದಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈ ಸ್ಮಾರ್ಟ್ ಯುಗದಲ್ಲಿ ಪ್ರತಿನಿತ್ಯ ಹೊಸ ಹೊಸ ಆವಿಷ್ಕಾರವಾಗುವುದನ್ನು ನಾವು ನೋಡಿರುತ್ತೇವೆ ಅದನ್ನು ನಾವು ಅನುಭವಿಸುತ್ತಲೂ ಇರಬಹುದು, ಕೇವಲ 10 ವರ್ಷಗಳ ಹಿಂದೆ ಇದ್ದ ತಂತ್ರಜ್ಞಾನಕ್ಕೂ ಈಗಿನ ತಂತ್ರಜ್ಞಾನಕ್ಕೂ ಅಜಗಜಾಂತರ ವ್ಯತ್ಯಾಸವಿದೆ, ಹಾಗೆಯೇ ಈಗಿರುವ ತಂತ್ರಜ್ಞಾನಕ್ಕೂ ಮುಂದಿನ 20 ಅಥವಾ 30 ವರ್ಷಗಳ ತಂತ್ರಜ್ಞಾನಕ್ಕೂ ಬಹಳಷ್ಟು ವ್ಯತ್ಯಾಸವಿರುತ್ತದೆ! ಈ ಕೆಳಗಿನ ವಿಡಿಯೋ ನಮ್ಮ ಮುಂದಿನ ಪೀಳಿಗೆ ಉಪಯೋಗಿಸಬಹುದಾದ ತಂತ್ರಜ್ಞಾನಗಳ ಬಗ್ಗೆ ನಿಮಗೆಲ್ಲ ಕಿರುನೋಟವನ್ನು ತೋರಿಸುತ್ತದೆ! ಕುತೂಹಲಭರಿತವಾದ ಈ ವಿಡಿಯೋವನ್ನು ತಪ್ಪದೇ ವೀಕ್ಷಿಸಿ..!
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಸೋಮವಾರ ನಿಧನರಾಗಿದ್ದಾರೆ. ನಡೆದಾಡುವ ದೇವರೇ ಎಂದು ಕರೆಸಿಕೊಳ್ಳುತ್ತಿದ್ದ ಶ್ರೀಗಳು ಅಪಾರ ಭಕ್ತರನ್ನು ಅಗಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಶತಾಯುಷಿ, ತ್ರಿವಿಧ ದಾಸೋಹಿ, ನಡೆದಾಡುವ ದೇವರು ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಇಂದು ಲಿಂಗೈಕ್ಯರಾಗಿದ್ದಾರೆ. ಸಂತರಾಗಿ 111 ವರ್ಷಗಳ ಯತಿ ಜೀವನ ಯಾನ ಪೂರೈಸಿರುವ ಶ್ರೀಗಳನ್ನೂ ಕಾಡುತ್ತಿದ್ದ ಅನಾರೋಗ್ಯ ಇಂದು ಅವರನ್ನು ಭಕ್ತ ಸಾಗರದಿಂದ ಬಹದೂರಕ್ಕೆ ಒಯ್ದಿದೆ. ಈಗಾಗಲೇ ನಾಡಿನಾದ್ಯಂತ ಮೌನ ಆವರಿಸಿದ್ದು, ಶ್ರೀಗಳ ಅಂತಿಮ…
ಅಭಿನಯ ಚತುರ ಮಾಸ್ಟರ್ ಹಿರಣ್ಣಯ್ಯ ಕೊನೆಯುಸಿರೆಳೆದಿದ್ದಾರೆ. ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಖ್ಯಾತ ರಂಗಭೂರ್ಮಿ ಕಲಾವಿದ ಹಿರಣ್ಣಯ್ಯ ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಮೈಸೂರು ಮೂಲದ 84 ವರ್ಷದ ಮಾಸ್ಟರ್ ಹಿರಣ್ಣಯ್ಯ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಗುರುವಾರ ಬೆಳಗ್ಗೆ 8:30ರ ವೇಳೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಲಂಚಾವತರ ಮೂಲಕ ಮನೆಮಾತಾಗಿದ್ದ ಹಿರಣಯ್ಯ ಅನಾರೋಗ್ಯದಿಂದಾಗಿ ತೆರೆಯ ಹಿಂದೆ ಸರಿದಿದ್ದರು. ಫೆಬ್ರವರಿ 15, 1934ರಂದು ಮೈಸೂರಿನಲ್ಲಿ ಮಾಸ್ಟರ್ ಹಿರಣಯ್ಯ ಜನಿಸಿದ್ದರು. ಅವರ ಮೂಲ ಹೆಸರು ನರಸಿಂಹಮೂರ್ತಿ….
ಆಧಾರ್ ನಲ್ಲಾದ ಈ ತಪ್ಪನ್ನು ತಿದ್ದಲು ನಿಮಗೆ ಇನ್ನೊಂದೇ ಅವಕಾಶ ಸಿಗಲಿದೆ. ಆಧಾರ್ ಕಾರ್ಡ್ ಸಿದ್ಧವಾಗಿದ್ದು, ಜನ್ಮ ದಿನಾಂಕ ತಪ್ಪಾಗಿದ್ದರೆ ಪದೇ ಪದೇ ಇದನ್ನು ಬದಲಿಸಲು ಸಾಧ್ಯವಿಲ್ಲ. ಒಮ್ಮೆ ಮಾತ್ರ ನೀವು ಜನ್ಮ ದಿನಾಂಕದಲ್ಲಿ ತಿದ್ದುಪಡಿ ಮಾಡಬಹುದು. ಇದನ್ನು ಯುಐಡಿಎಐ ಅಧಿಕೃತ ಟ್ವೀಟರ್ ನಲ್ಲಿ ಸ್ಪಷ್ಟಪಡಿಸಿದೆ. ವಿಳಾಸ ಬಿಟ್ಟು ಆಧಾರ್ ನಲ್ಲಾಗಿರುವ ಯಾವುದೇ ತಪ್ಪನ್ನು ತಿದ್ದಲು ಆಧಾರ್ ಕೇಂದ್ರಕ್ಕೆ ಹೋಗಬೇಕಾಗುತ್ತದೆ. ಜನ್ಮ ದಿನಾಂಕವನ್ನು ಕೂಡ ಆಧಾರ್ ಕೇಂದ್ರಕ್ಕೆ ಹೋಗಿಯೇ ತಿದ್ದಬೇಕು. ಜನ್ಮ ದಿನಾಂಕ ತಿದ್ದುಪಡಿ ಮಾಡುವಾಗ ಸೂಕ್ತ…
ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಅವರು ಮಾಜಿ ನಾಯಕ ಎಂಎಸ್ ಧೋನಿಯ ದಾಖಲೆಯೊಂದನ್ನು ಮುರಿಯುವುದರಲ್ಲಿದ್ದಾರೆ. ಶರ್ಮಾ ಇನ್ನೆರಡೇ ಸಿಕ್ಸ್ ಬಾರಿಸಿದರೂ ಏಕದಿನದಲ್ಲಿ ಭಾರತ ಪರ ಧೋನಿ ಮಾಡಿರುವ ಅತ್ಯಧಿಕ ಸಿಕ್ಸ್ ದಾಖಲೆ ಬದಿಗೆ ಸರಿಯಲಿದೆ.ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲೂ ರೋಹಿತ್ ಗೆ ಧೋನಿ ದಾಖಲೆ ಮುರಿಯಲು ಅವಕಾಶವಿತ್ತು. ಆದರೆ ಶರ್ಮಾ ಕೇವಲ 1 ರನ್ನಿಗೆ ಮುಜೀಬ್ ಉರ್ ರಹ್ಮಾನ್‌ಗೆ ವಿಕೆಟ್ ಒಪ್ಪಿಸಿ ನಿರ್ಗಮಿಸುವ ಮೂಲಕ ಅವಕಾಶ ಕಳೆದುಕೊಂಡಿದ್ದರು. ಗುರುವಾರ (ಜೂನ್ 27) ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದಲ್ಲಿ…
ಮರಣಾ ನಂತರದ ದೇಹದ ವಿಸರ್ಜನ ಕ್ರಿಯೆಗೆ ಅಂತ್ಯೇಷ್ಟಿ ಅಥವಾ ಅಂತಿಮ ಸಂಸ್ಕಾರ ಎಂದು ಕರೆಯಲಾಗುತ್ತದೆ.ನಮ್ಮ ಭಾರತ ದೇಶದಲ್ಲಿ ಅಂತ್ಯಸಂಸ್ಕಾರವು ಧರ್ಮದಿಂದ ಧರ್ಮಕ್ಕೆ ವಿಭಿನ್ನವಾಗಿರುತ್ತದೆ. ಆದರೆ ನಮ್ಮ ಪಕ್ಕದ ದೇಶವಾದ ಟಿಬೇಟಿನಲ್ಲಿ ವಿಚಿತ್ರ ರೀತಿಯ ಶವ ಸಂಸ್ಕಾರ ಮಾಡುತ್ತಾರೆ. ಸಾಮಾನ್ಯರು ಸತ್ತಾಗ ಹಳೆಯ ಟೈರು ಮತ್ತಿತರ ಉರಿಯುವ ವಸ್ತುಗಳನ್ನು ಉಪಯೋಗಿಸಿ ಶವದಹನ ಮಾಡುವ ಪದ್ಧತಿ ಇದು. ಎರಡನೆಯದು ಹೊಂಡ ತೆಗೆದು ಹೂಳುತ್ತಾರೆ.ಮೂರನೆಯದು ಸತ್ತ ಮೂರೂ ದಿನಗಳ ನಂತರ ಹೆಣವನ್ನು ಬಟ್ಟೆಯಲ್ಲಿ ಸುತ್ತಿ ನೀರಿನಲ್ಲಿ ಹಾಕುತ್ತಾರೆ. ನಾಲ್ಕನೆಯ ಶವ ಸಂಸ್ಕಾರ ಮಾಡುವ…