ಸಿನಿಮಾ

ಸ್ಯಾಂಡಲ್ ವುಡ್ ನಟ ಮತ್ತು ಸಿಸಿಎಲ್ ಆಟಗಾರ ಧ್ರುವ ಶರ್ಮಾ ಇನ್ನಿಲ್ಲ…

346

ಚಂದನವನದ ನಟ ಹಾಗೂ ಸೆಲೆಬ್ರಿಟಿ ಕ್ರಿಕೆಟ್ ಲೀಗ್‍ನ, ಬುಲ್ಡೋಜರ್ಸ್ ತಂಡದ ಖ್ಯಾತ ಆಟಗಾರ ಧ್ರುವ ಶರ್ಮಾ ನಿಧನರಾಗಿದ್ದು, ಪತ್ನಿ ಮತ್ತು  ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಧ್ರುವ ಅವರನ್ನು, ಹೆಬ್ಬಾಳದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೇ ಧ್ರುವ  ಸಾವನ್ನಪ್ಪಿದ್ದಾರೆ. ವಿಕಲಚೇತನ ಪತ್ರಿಭೆಯಾಗಿದ್ದ ಧ್ರುವ, ಸಿಸಿಎಲ್‌ ಮತ್ತು ನಟನೆ ಮೂಲಕ ಗುರುತಿಸಿಕೊಂಡಿದ್ದರು. ನಟ ಧ್ರುವ, ಕಿಚ್ಚ ಸುದೀಪ್ ಅವರ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡದಲ್ಲಿ ಉತ್ತಮ ಆಟಗಾರರಾಗಿದ್ದರು.

35 ವರ್ಷದ  ಧ್ರುವ ಶರ್ಮಾ ಪತ್ನಿ ಮತ್ತು 7 ವರ್ಷದ ಮಗಳು, 4 ವರ್ಷದ ಮಗನನ್ನು ಅಗಲಿದ್ದಾರೆ. ಧ್ರುವ ಅವರ ತಂದೆ ಸುರೇಶ್ ಶರ್ಮಾ ಕೂಡ ನಟ, ನಿರ್ಮಾಪರ,  ಫೈನಾನ್ಶಿಯರ್ ಹಾಗೂ ನಿರ್ದೇಶಕರಾಗಿದ್ದು, ಈ ಹಿಂದೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

ಉದ್ಯಮಿ, ನಟರೂ ಆಗಿರುವ ಸತೀಶ್ ಶರ್ಮಾ ಅವರ ಪುತ್ರರಾಗಿರುವ ಧ್ರುವ ಶರ್ಮಾ 2005ರಲ್ಲಿ ವಿಶ್ವ ಕಿವುಡರ ಕ್ರಿಕೆಟ್‍ನಲ್ಲಿ ಭಾರತ ತಂಡದಲ್ಲಿ ಆಡಿದ್ದರು. ವಾಕ್-ಶ್ರವಣ ದೋಷದಿಂದಾಗಿ ಬಾಲ್ಯದಿಂದಲೇ ಸಾಕಷ್ಟು ಅವಮಾನ ಎದುರಿಸಿದ್ದ ಧ್ರುವ ಶರ್ಮಾ ಆ ಎಲ್ಲ ನಿಂದನೆಗಳನ್ನು ಮೆಟ್ಟಿ ನಿಂತಿದ್ದರು.

ಮೂಗ ಮತ್ತು ಕಿವುಡರಾಗಿದ್ದ ಧ್ರುವ ತಮ್ಮ ಅಮೋಘ ಅಭಿನಯ ಹಾಗೂ ಕ್ರಿಕೆಟ್‌ ನಿಂದ ಎಲ್ಲರ ಗಮನ ಸೆಳೆದಿದ್ದರು. 2007ರಲ್ಲಿ ತಮ್ಮ 25ನೇ ವರ್ಷ ವಯಸ್ಸಿನಲ್ಲಿ ಸ್ನೇಹಾಂಜಲಿ ಎಂಬ ಚಲನಚಿತ್ರದಲ್ಲಿ ನಾಯಕರಾಗಿ ನಟಿಸಿ ಎಲ್ಲರ ಹುಬ್ಬೇರುವಂತೆ ಮಾಡಿದರು. ಧ್ರುವ್ ಅವರ ಹಠಾತ್ ಸಾವಿಗೆ ಚಿತ್ರರಂಗದ ಅನೇಕ ಗಣ್ಯರು, ಸ್ನೇಹಿತರು ಕಂಬನಿ ಮಿಡಿದಿದ್ದಾರೆ.

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ಈ ಉಂಡೆ ಮಾಡ್ಕೊಂಡು ತಿಂದರೆ ಕೆಮ್ಮು ಕಫ ಸಮಸ್ಯೆ ಮಾಯ.

    ಈ ಉಂಡೆಗಳನ್ನು ತಿನ್ನುವುದರಿಂದ ಕೆಮ್ಮು ಕಫ ಶೀತದಂತಹ ಹಲವಾರು ಕಾಯಿಲೆಗಳು ದೂರವಾಗುತ್ತವೆ. ಸಣ್ಣ ಪುಟ್ಟ ಕಾಯಿಲೆಗಳಿಗೆ ಆಸ್ಪತ್ರೆಗೆ ಹೋಗುವ ಬದಲು ಈ ಉಂಡೆ ಮೂಲಕ ನಿವಾರಿಸಬಹುದು ಸಿಹಿಯಾದ ಉಂಡೆ ಮಾಡಿಕೊಡುವ ಮೂಲಕ ನೀವು ನಿಮ್ಮ ಮಕ್ಕಳಲ್ಲಿ ಇರುವ ಅನಾರೋಗ್ಯವನ್ನು ನಿಯಂತ್ರಿಸಬಹುದು . ಒಣ ಪಧಾರ್ಥಗಳ ಅಥವಾ ಒಣ ಹಣ್ಣುಗಳ ಲಡ್ಡು ಇದನ್ನು ಮಾಡಲು ಈಗ ಎಂಟು ಒಣ ಖರ್ಜುರ ಅಥವಾ ಉತ್ತತ್ತಿ ನಂತರ 10 ರಿಂದ 12 ಒಣದ್ರಾಕ್ಷಿ ಇದರ ಜೊತೆಗೆ ಎಂಟು ಬಾದಾಮಿ ತೆಗೆದುಕೊಂಡಿದ್ದೇವೆ ಮೊದಲು…

  • ಆರೋಗ್ಯ, ಉಪಯುಕ್ತ ಮಾಹಿತಿ

    ಒಣ ದ್ರಾಕ್ಷಿ ನೆನೆಸಿದ ನೀರನ್ನು ಚೆಲ್ಲುವ ಬದಲು, ಪ್ರತಿದಿನ ಬೆಳ್ಳಗ್ಗೆ ಒಂದು ಗ್ಲಾಸ್ ಒಣ ದ್ರಾಕ್ಷಿ ನೀರು ಕುಡಿದು ನೋಡಿ…

    ಒಣದ್ರಾಕ್ಷಿಯನ್ನು ಎಲ್ಲರೂ ಇಷ್ಟಪಡುತ್ತಾರೆ. ಅದರಲ್ಲೂ ಗೋಡಂಬಿ ಜೊತೆ ತಿನ್ನಲು ತುಂಬಾ ಸಿಹಿಯಾಗಿರುತ್ತದೆ. ಅದನ್ನು ಹಾಗೇ ತಿನ್ನುವ ಬದಲು ನೀರಿನಲ್ಲಿ ನೆನೆಸಿ ತಿಂದರೆ ಆರೋಗ್ಯಕ್ಕೆ ಇನ್ನೂ ಉತ್ತಮ. ಆದರೆ ಒಣದ್ರಾಕ್ಷಿ ತಿಂದ ಬಳಿಕ ನೆನೆಸಿದ ನೀರನ್ನು ಚೆಲ್ಲುತ್ತೇವೆ. ಆ ನೀರಿನಿಂದ ಆಗುವ ಪ್ರಯೋಜನ ತಿಳಿದರೆ ಖಂಡಿತ ಎಸೆಯುವುದಿಲ್ಲ. * ಪ್ರತಿದಿನ ಬೆಳಿಗ್ಗೆ ಒಣದ್ರಾಕ್ಷಿ ನೆನೆಸಿದ ನೀರನ್ನು ಕುದಿಸಿ ಕುಡಿಯುವುದರಿಂದ ಮಲಬದ್ಧತೆ, ಅಸಿಡಿಟಿ ಹಾಗೂ ಆಯಾಸ ಸಮಸ್ಯೆ ದೂರವಾಗುತ್ತದೆ. * ಈ ನೀರು ಕೊಲೆಸ್ಟ್ರಾಲ್ ಮಟ್ಟವನ್ನು ಸರಿಯಾಗಿಡುತ್ತದೆ. * ಇದು…

  • ಸುದ್ದಿ

    ವಾಟ್ಸಾಪ್ ಪ್ರಿಯರಿಗೊಂದು ಶಾಕಿಂಗ್ ನ್ಯೂಸ್…! 2020 ಕ್ಕೆ ಕೊನೆಯಾಗುತ್ತೆ ಈ ಆ್ಯಪ್…!! ಯಾವುದು ಗೊತ್ತೇ,.?

    ವಾಟ್ಸಾಪ್ ಬಳಕೆದಾರರಿಗೆ ಬಿಗ್ ಶಾಕ್! ಫೇಸ್‌ಬುಕ್ ಒಡೆತನದ ವಾಟ್ಸಾಪ್ ತನ್ನ ಅಪ್ಲಿಕೇಶನ್‌ನಲ್ಲಿ ಬದಲಾವಣೆ ತರುವ ಉದ್ದೇಶ ಹೊಂದಿದ್ದು, ಫೆಬ್ರವರಿ 1, 2020ರ ಬಳಿಕ ಕೆಲ ಮೊಬೈಲ್‌ಗಳಿಗೆ ತನ್ನ ಸೌಲಭ್ಯವನ್ನು ನಿಲ್ಲಿಸಲು ಕಂಪನಿ ತೀರ್ಮಾನಿಸಿದೆ. ಪ್ರಪಂಚದ ಜನಪ್ರಿಯ ಸಂದೇಶ ರವಾನೆ ಮಾಡುವ ವೇದಿಕೆಗಳಲ್ಲಿ ವಾಟ್ಸಾಪ್ ಹೆಚ್ಚು ಜನಮೆಚ್ಚುಗೆ ಪಡೆದುಕೊಂಡಿದೆ. ಇದೀಗ ವಾಟ್ಸಾಪ್ ಪ್ರಿಯರಿಗೆ ಒಂದ ಕಹಿ ಸುದ್ದಿ ಬಂದಿದ್ದು ಕೆಲ ಮೊಬೈಲ್‌ಗಳಲ್ಲಿ ವಾಟ್ಸಾಪ್ ಸೇವೆ ಬಂದ್ ಆಗಲಿದೆ ಎಂದು ಕೇಳಿ ಬಂದಿದೆ. ಸಾಮಾಜಿಕ ಜಾಲತಾಣದ ದೈತ್ಯ ಮಾದ್ಯಮವಾಗಿ ಬೆಳೆದಿರುವ…

  • ಸುದ್ದಿ

    ಸರ್ಕಾರಿ ನೌಕರರಿಗೊಂದು ಬಂಪರ್ ಆಪರ್ ,5 ದಿನ ಮೊದಲೇ ಸಿಗಲಿದೆ ಸಂಬಳ….!

    ನೌಕರರು, ಉದ್ಯೋಗಿಗಳ ವಲಯಕ್ಕೆ ಶುಭ ಸುದ್ದಿ ಇಲ್ಲಿದೆ. ಸೆಪ್ಟಂಬರ್ 26, 27 ರಂದು ಬ್ಯಾಂಕ್  ಮುಷ್ಕರವಿದ್ದು, ಸತತವಾಗಿ 5 ದಿನ ರಜೆ ಇರುವುದರಿಂದ 5 ದಿನ ಮೊದಲೇ ವೇತನ ನೀಡಲು ಹಣಕಾಸು ಸಚಿವಾಲಯ ಸುತ್ತೋಲೆ ಹೊರಡಿಸಿದೆ. ಸೆಪ್ಟೆಂಬರ್ 26, 27 ರಂದು ಬ್ಯಾಂಕ್ ವಿಲೀನ ವಿರೋಧಿಸಿ ಮುಷ್ಕರ ನಡೆಯಲಿದೆ. 28 ರಂದು 4ನೇ ಶನಿವಾರ ಬ್ಯಾಂಕುಗಳಿಗೆ ರಜೆ ಇರುತ್ತದೆ. 29 ರಂದು ಭಾನುವಾರ ಕೂಡ ರಜೆ ಇರುತ್ತದೆ. ಸೆಪ್ಟೆಂಬರ್ 30 ರಂದು ಬ್ಯಾಂಕುಗಳ ಅರ್ಧ ವಾರ್ಷಿಕ ವಹಿವಾಟು…

  • ಜೀವನಶೈಲಿ

    ನಿಮ್ಮ ಮಕ್ಕಳಿಗೆ ಕಿವಿ ಚುಚ್ಚುವುದಕ್ಕೆ ಮುಂಚೆ ಏನು ಮಾಡಬೇಕು ಗೊತ್ತಾ? ಈ ಲೇಖನಿ ಓದಿ…

    ಮಗುವಿಗೆ ಕಿವಿ ಚುಚ್ಚಿಸುವಾಗ ಯಾವುದೇ ರೀತಿಯ ಅನಸ್ಥೆಸಿಯಾ ಬಳಸುವುದಿಲ್ಲ. ಹಾಗಾಗಿ ನಿಮ್ಮ ಮಗುವಿಗೆ ತುಂಬಾನೇ ನೋವುಂಟಾಗಬಹುದು. ಕೆಲವು ಪೋಷಕರು ಮಗು ತುಂಬಾ ಚಿಕ್ಕದಿದ್ದಾಗಲೇ ಈ ನೋವು ಮುಗಿದು ಬಿಡಲಿ ಎಂದು ಯೋಚಿಸುತ್ತಾರೆ.

  • ಜೀವನಶೈಲಿ

    ನಿಮ್ಮ ‘ಬಾತ್ ರೂಂ’ ಸ್ವಚ್ಛವಾಗಿದ್ದರೆ ದೂರವಾಗುತ್ತೆ ನಿಮ್ಮ ಬಡತನ ..!ತಿಳಿಯಲು ಈ ಲೇಖನ ಓದಿ …

    ವಾಸ್ತುಪ್ರಕಾರ ಮನೆಯ ಸಭಾಂಗಣ, ಕೋಣೆ, ಅಡುಗೆ ಮನೆ, ಶೌಚಾಲಯ ಎಲ್ಲವೂ ನಮ್ಮ ಹಣಕಾಸಿನ ಮೇಲೆ ಪರಿಣಾಮ ಬೀರುತ್ತದೆ. ವಾಸ್ತುಶಾಸ್ತ್ರದ ಪ್ರಕಾರ ಮನೆಯ ಪ್ರತಿಯೊಂದು ಕೊಠಡಿ ಹಾಗೂ ಮನೆಯಲ್ಲಿರುವ ಪ್ರತಿಯೊಂದು ವಸ್ತು ಮನೆಯ ಸುಖ-ಶಾಂತಿ, ಆರ್ಥಿಕ ಪರಿಸ್ಥಿತಿ ಮೇಲೆ ಪ್ರಭಾವ ಬೀರುತ್ತದೆ.