ಸಿನಿಮಾ

ಸ್ಯಾಂಡಲ್ ವುಡ್ ಗೆ ಬರಲಿದ್ದಾರೆ ‘ಪ್ರೇಮಂ’ ಬೆಡಗಿ ‘ಸಾಯಿಪಲ್ಲವಿ’..!ತಿಳಿಯಲು ಈ ಲೇಖನ ಓದಿ …

709

ಸಿನಿಮಾರಂಗದಲ್ಲಿ ‘ಮಲರ್’ ಮತ್ತು ‘ಭಾನುಮತಿ’   ಅಂತಾನೇ ಫೇಮಸ್ ಆಗಿರುವ ‘ಸಾಯಿಪಲ್ಲವಿ’ ಕನ್ನಡ ಸಿನಿಮಾರಂಗದಲ್ಲಿ ಕಾಣಿಸಿಕೊಳ್ಳುದಿಲ್ಲವೇ..? ಪ್ರೇಮಂ ಹಾಗೋ ಟಾಲಿವೋಡ ಸಿನಿಮ  ‘ಫಿದ’ ಬೆಡಗಿಯನ್ನ ಸ್ಯಾಂಡಲ್ ವುಡ್ ಗೆ ಕರೆತರೋದಿಲ್ಲವೇ.? ಅನ್ನೋದು ಅದೆಷ್ಟೋ ಹುಡುಗರ ಪ್ರಶ್ನೆ ಆಗಿತ್ತು. ಸದ್ಯ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.

‘ಸಾಯಿಪಲ್ಲವಿ’ಯನ್ನ ಸ್ಯಾಂಡಲ್ ವುಡ್ ಸಿನಿಮಾಗಾಗಿ ಕರೆತರಲು ಸಿನಿಮಾ ತಂಡವೊಂದು ಸಜ್ಜಾಗಿದೆ. ಚಿತ್ರತಂಡ ‘ಪ್ರಜ್ವಲ್ ದೇವರಾಜ್’ ಜೊತೆಯಲ್ಲಿ ‘ಪ್ರೇಮಂ’ ಬೆಡಗಿಯನ್ನ ಜೋಡಿ ಮಾಡಲು ಸಿದ್ದತೆ ನಡೆಸಿದೆ. ಹಾಗಾದ್ರೆ ಆ ಸಿನಿಮಾ ತಂಡ ಯಾವುದು.?

ಸಾಯಿಪಲ್ಲವಿ’ ಕರೆತರಲಿರುವ ಸಿನಿಮಾತಂಡ:-

ಸೆಟ್ಟೇರಲು ಸಜ್ಜಾಗಿರುವ ಚಿತ್ರತಂಡ ಸಾಯಿಪಲ್ಲವಿಯವರನ್ನ ತಮ್ಮ ಸಿನಿಮಾಗೆ ನಾಯಕಿಯಾಗಿ ಆಯ್ಕೆ ಮಾಡಲು ಸಿದ್ದತೆ ನಡೆಸಿದೆ. ಸದ್ಯ ಡೇಟ್ಸ್ ಗಾಗಿ ಮಾತುಕತೆ ನಡೆಸಲು ಮುಂದಾಗಿದ್ದು, ನಟ ಪ್ರಜ್ವಲ್ ಅಭಿನಯದ ಮುಂದಿನ ಸಿನಿಮಾಗೆ ಸಾಯಿಪಲ್ಲವಿಯರನ್ನ ಕರೆತರುವ ಸಾಧ್ಯತೆಗಳು ಹೆಚ್ಚಾಗಿದೆ.

‘ಪುಷ್ಪಕವಿಮಾನ’ ಟೀಂ ಜೊತೆ ಸಿನಿಮಾ:-

ಈ ಹಿಂದೆ ‘ಪುಷ್ಪಕ ವಿಮಾನ’ ಸಿನಿಮಾ ನಿರ್ಮಾಣ ಮಾಡಿದ್ದ ನಿರ್ಮಾಪಕ ‘ವಿಖ್ಯಾತ್’ ಸದ್ಯ ಪ್ರಜ್ವಲ್ ಅಭಿನಯದ ಹೊಸ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ. ಇನ್ನೂ ಟೈಟಲ್ ಇಡದ ಈ ಸಿನಿಮಾಗಾಗಿ ಸಾಯಿಪಲ್ಲವಿಯವರನ್ನ ಕರೆ ತರಲು ಪ್ರಯತ್ನ ನಡೆಯುತ್ತಿದೆ.

ಮಲರ್’ ಬರುವ ಸಾಧ್ಯತೆ ಹೆಚ್ಚಾಗಿದೆ:-

ಈ ಹಿಂದೆ ‘ರಮೇಶ್ ಅರವಿಂದ್’ ಅಭಿನಯದ ‘ಪುಷ್ಪಕ ವಿಮಾನ’ ಸಿನಿಮಾದ ಹಾಡೊಂದಕ್ಕೆ ನಟಿ ಜೂಹಿ ಚಾವ್ಲಾರನ್ನ ನಿರ್ಮಾಪಕ ವಿಖ್ಯಾತ್ ಕರೆತಂದಿದ್ರು. ಈಗ ಅದೇ ನಿರ್ಮಾಪಕರು ಪ್ರಜ್ವಲ್ ಜೊತೆ ನಾಯಕಿಯಾಗಿ ಸಾಯಿಪಲ್ಲವಿಯರನ್ನ ಆಯ್ಕೆ ಮಾಡಿದ್ದಾರೆ.

ಸೆಟ್ಟೇರಲು ಸಿದ್ದವಾಯ್ತು ಸಿನಿಮಾ:-

ಪ್ರಜ್ವಲ್ ಸಿನಿಮಾದಲ್ಲಿ ಫನ್ ಕಾಪ್ ಕ್ಯಾರೆಕ್ಟರ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪವನ್ ಒಡೆಯರ್ ಜೊತೆಯಲ್ಲಿ ಕೆಲಸ ಮಾಡಿದ್ದ ಶ್ರೀ ನರಸಿಂಹ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಸದ್ಯ ಪ್ರೀ ಪ್ರೊಡಕ್ಷನ್ ಕೆಲಸಗಳು ಶುರುವಾಗಿದ್ದು ಇನ್ನ ಕೆಲವೇ ದಿನಗಳಲ್ಲಿ ಸಿನಿಮಾ ಸೆಟ್ಟೇರಲಿದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ