ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪ್ರತಿಯೊಬ್ಬ ವ್ಯಕ್ತಿಯೂ ಪ್ರತಿಷ್ಠೆ, ಗೌರವ, ಉನ್ನತ ಹುದ್ದೆ ಬಯಸ್ತಾನೆ. ಆದ್ರೆ ಕೆಲವೇ ಕೆಲವು ವ್ಯಕ್ತಿಗಳು ಮಾತ್ರ ಜೀವನದಲ್ಲಿ ಬಯಸಿದ್ದನ್ನು ಪಡೆಯಲು ಯಶಸ್ವಿಯಾಗ್ತಾರೆ.
ಪ್ರತಿಷ್ಠೆ, ಗೌರವ ಪ್ರಾಪ್ತಿಯಾಗಲು ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವೊಂದು ಉಪಾಯಗಳನ್ನು ಹೇಳಲಾಗಿದೆ. ಅದನ್ನು ಪಾಲಿಸಿದ್ರೆ ಉನ್ನತ ಹುದ್ದೆ ಜೊತೆ ಸುಖ ಪ್ರಾಪ್ತಿಯಾಗಲಿದೆ.
ಉಪಾಯ: ಸ್ನಾನ ಮಾಡುವ ನೀರಿಗೆ ಬೆಲ್ಲ, ಬಂಗಾರದ ಯಾವುದಾದ್ರೂ ವಸ್ತು, ಅರಿಶಿನ, ಜೇನುತುಪ್ಪ, ಸಕ್ಕರೆ, ಉಪ್ಪು, ಹಳದಿ ಬಣ್ಣದ ಹೂ, ಇವುಗಳಲ್ಲಿ ಯಾವುದಾದ್ರೂ ಒಂದನ್ನು ಹಾಕಿ.
ಪ್ರತಿ ದಿನ ಈ ಉಪಾಯ ಅನುಸರಿಸಿದ್ರೆ ಯಶಸ್ಸು ಪ್ರಾಪ್ತಿಯಾಗಲಿದೆ. ಸ್ನಾನದ ನಂತ್ರ ತಾಮ್ರದ ಪಾತ್ರೆಯಲ್ಲಿ ನೀರು ತುಂಬಿ ಸೂರ್ಯನಿಗೆ ಅರ್ಪಿಸಿ. ಹೀಗೆ ಮಾಡಿದಲ್ಲಿ ಲಾಭ ನಿಮ್ಮನ್ನರಸಿ ಬರುತ್ತದೆ.
ದುರ್ಗಾ ಸಪ್ತಶತಿಯ ಅಧ್ಯಯನ ಮಾಡುವುದ್ರಿಂದಲೂ ಲಾಭವಿದೆ. ಪ್ರತಿ ದಿನ ಇದರ ಪಠಣ ಮಾಡುವುದ್ರಿಂದ ಸಮಾಜದಲ್ಲಿ ಪ್ರತಿಷ್ಠೆ, ಗೌರವ ಪ್ರಾಪ್ತಿಯಾಗುತ್ತದೆ. ಪ್ರತಿ ದಿನ ಪಕ್ಷಿಗೆ ಧಾನ್ಯಗಳನ್ನು ಹಾಕಿದ್ರೂ ಪ್ರಯೋಜನ ಸಿಗಲಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಆ ಊರಿನಲ್ಲಿ ಅಂದ ಅನ್ನೋಅಂದಕ್ಕೇನೆ ಹಂಗಿದಂಗಂಗೆ ಉಂಡೆನಾಮ ತಿಕ್ಕಿದಂತೆ ಬೆಳ್ಳಗಾಗಿಸಿ ಮಿರಿಮಿರಿ ಮಿಂಚಿಸಿದಂತಹಾ ಹುಡುಗಿಯರಿದ್ದಾರಂತೆ, ಅದರಲ್ಲೂ ಅವರ ಮೇಲೆ ನಲವತ್ತು ಹಿಡಿ ಮರಳು ಅವರ ಮೇಲೆಸೆದರೂ ಕೆಳಕ್ಕಿಳಿಯದಷ್ಟು ಹುಡುಗಿಯರ ರಾಶಿ ರಾಶಿ ಇದ್ದಾರೆ !
ಕೋಲಾರ ಜಿಲ್ಲೆಯ ಹಿರಿಯ ಪತ್ರಕರ್ತರು ಹಾಗೂ ಸಾಹಿತಿಗಳಾದ ಎಂ.ಎಸ್.ಪ್ರಭಾಕರ (ಕಾಮರೂಪಿ) (87) ಇಂದು ಕೋಲಾರ ಕಠಾರಿಪಾಳ್ಯದ ಸ್ವಗೃಹದಲ್ಲಿ ವಯೋಸಹಜತೆಯಿಂದ ವಿಧಿವಶರಾದರು. ಕೋಲಾರದಲ್ಲಿ ಹುಟ್ಟಿ ಬೆಳೆದು ಉಪನ್ಯಾಸಕರಾಗಿ ಸೇವೆ ಆರಂಭಿಸಿ ಪತ್ರಕರ್ತ ಅಂಕಣಕಾರರಾಗಿ ಹೆಸರು ಸಂಪಾದಿಸಿ ದ ಹಿಂದೂ ಪತ್ರಿಕೆಯ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿ ಖ್ಯಾತರಾಗಿದ್ದಾರೆ. ದಕ್ಷಿಣ ಆಫ್ರಿಕಾದ ನೀಗ್ರೋ ಜನಾಂಗದ ನೆಲ್ಸನ್ ಮಂಡೇಲಾ ಅವರನ್ನು ಸಂದರ್ಶನ ಮಾಡಿದ ಏಕೈಕ ಭಾರತೀಯ ಪತ್ರಕರ್ತ ಇವರಾಗಿದ್ದರು. ಕುದುರೆಮೊಟ್ಟೆ ಕಥಾ ಸಂಕಲನದಿಂದ ಕನ್ನಡ ಸಾರಸ್ವತ ಲೋಕಕ್ಕೆ ಚಿರಪರಿಚಿತರಾಗಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ…
ಮುಂಬರುವ 2019ರ ಲೋಕಸಭೆ ಚುನಾವಣೆಗೆ ಬಿಜೆಪಿ ತಯಾರಿ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದ ಸಂಸದರ ಸಭೆ ನಡೆಸಿರುವ ಬೆನ್ನಲ್ಲೆ ಕಾಂಗ್ರೆಸ್ ಪಕ್ಷ ಲೋಕಸಭೆ ಚುನಾವಣೆಗೆ ಸೋನಿಯಾ ಪುತ್ರಿ ಪ್ರಿಯಾಂಕಾ ಗಾಂಧಿಯನ್ನು ಕರ್ನಾಟಕದಿಂದ ಕಣಕ್ಕಿಳಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಜಿಲ್ಲೆಯಲ್ಲಿ ಮತ್ತೆ ಜೋಡೆತ್ತು ಸದ್ದು ಮಾಡಿದ್ದು, ರಾಜಕೀಯವಾಗಿ ಅಲ್ಲದೆ ಜೋಡೆತ್ತುಗಳು ಮಾನವೀಯತೆ ಮೆರೆದಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಗೋಮಾತೆ ಸೇವೆಗೆ ಸಿದ್ಧರಾಗಿದ್ದಾರೆ. ನಟ ದರ್ಶನ್ ಕಳೆದ ದಿನ ಚೈತ್ರ ಗೋಶಾಲೆಗೆ ಸುಮಾರು 15 ಟ್ರ್ಯಾಕ್ಟರ್ ಭತ್ತದ ಹುಲ್ಲನ್ನು ಅನುದಾನ ಮಾಡಿದ್ದರು. ಇದೀಗ ನಟ ಯಶ್ ಕೂಡ ಚೈತ್ರ ಗೋಶಾಲೆಗೆ ಸಹಾಯ ಮಾಡುತ್ತಿದ್ದಾರೆ. ಈ ಮೂಲಕ ಮಂಡ್ಯದ ಚೈತ್ರ ಗೋಶಾಲೆಗೆ ದರ್ಶನ್ ಮತ್ತು ಯಶ್ ಬೆಳಕಾಗಿದ್ದಾರೆ. ಯಶ್ ಪಾಂಡವಪುರದ ತಾಲೂಕಿನ ದೊಡ್ಡಬ್ಯಾಡರಹಳ್ಳಿಯಲ್ಲಿರುವ ಚೈತ್ರ ಗೋಶಾಲೆಯ…
ಅವನು ಕರ್ಣ. ಆತ ಕುಂತಿಯ ಮೊದಲ ಮಗ. ಪಾಂಡವರ ಹಿರಿಯಣ್ಣ. ಪರಶುರಾಮರ ಮೆಚ್ಚಿನ ಶಿಷ್ಯ. ದುರ್ಯೋಧನನ ಆಪ್ತಮಿತ್ರ. ಅರ್ಜುನನ ಪರಮಶತ್ರು. ಅವನು, ಭೀಷ್ಮರ ಕಣ್ಣಲ್ಲಿ ಸಿಡಿಮಿಡಿ ಉಂಟುಮಾಡುವ ಆಸಾಮಿ. ಭೀಮನ ಪಾಲಿಗೊಂದು ಅಸೂಯೆ. ಕರ್ಣನೆಂದರೆ ಅಷ್ಟೇ ಅಲ್ಲ. ಆತ, ದ್ರೌಪದಿಯಂಥ ದ್ರೌಪದಿಯ ಎದೆಯಲ್ಲೂ ಆಸೆಯ ತರಂಗ ಎಬ್ಬಿಸಿದ ಸುಂದರಾಂಗ. ಕೊಡುಗೈ ದೊರೆ. ಅಂಗರಾಜ, ಹುಟ್ಟಿನಿಂದ ಕ್ಷತ್ರಿಯನಾಗಿದ್ದರೂ, ಎಲ್ಲರಿಂದಲೂ ಸೂತಪುತ್ರ ಎಂದು ಕರೆಸಿಕೊಂಡ ನತದೃಷ್ಟ ಮತ್ತು ಮಹಾಭಾರತದ ದುರಂತ ನಾಯಕ! ಕುಂತಿ-ಸೂರ್ಯದೇವನ ಸಮಾಗಮದ ಕಾರಣಕ್ಕೆ ಹುಟ್ಟಿದವನು ಕರ್ಣ. ಮಗನ ಮೇಲಿನ…
ಶೀತಾಘಾತ ಎಂದರೆ ಹೊರಗಿನ ಶೀತಲ ಗಾಳಿಯ ಪ್ರಭಾವ ಹೆಚ್ಚು ಹೊತ್ತು ನಮ್ಮ ಚರ್ಮದ ಮೇಲೆ ಬಿದ್ದಾಗ ಎದುರಾಗುವ ಪರಿಣಾಮಗಳಾಗಿವೆ. ಸಾಮಾನ್ಯವಾಗಿ ಬಿಸಿಲಿನ ಹೊಡೆತಕ್ಕೆ ಚರ್ಮ ಸುಡುತ್ತದೆ ಎಂದೇ ನಾವು ಭಾವಿಸಿದ್ದೇವೆ. ಆದರೆ ಶೀತದಿಂದಲೂ ಚರ್ಮದ ಮೇಲೆ ಆಘಾತ ಎದುರಾಗುತ್ತದೆ. ಎರಡೂ ಬಗೆಯ ಆಘಾತಗಳೂ ತ್ವಚೆಗೆ ಹಾನಿಕಾರಕವಾಗಿವೆ. ಎಷ್ಟೋ ಸಲ ಗಾಳಿ ತಣ್ಣಗಿದ್ದು, ಮೋಡ ಕವಿದಿದ್ದರೂ ಶೀತಾಘಾತ ಎದುರಾಗಬಹುದು. ಬನ್ನಿ, ಈ ಸ್ಥಿತಿ ಎದುರಾದರೆ ಯಾವ ಪರಿಹಾರ ಪಡೆಯಬಹುದು ಹಾಗೂ ಇದರಿಂದ ತಪ್ಪಿಸಿಕೊಳ್ಳಲು ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು…