ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡರು ನಿಖಿಲ್ ಗೆ ರಾಜನೀತಿಯ ಪಾಠ ಮಾಡಿದ್ದಾರೆ. ಸೋಲನ್ನ ಹೇಗೆ ಎದುರಿಸಬೇಕು, ಸೋಲಿನಿಂದ ಗೆಲುವಿನ ಕಡೆಗೆ ನಡೆದು ಹೋಗುವುದು ಹೇಗೆ ಎಂಬುದರ ಕುರಿತು ಪಾಠ ಮಾಡಿದ್ದಾರೆ.ಸೋಲಿನಿಂದ ಬೇಸರವಾಗಿದ್ದ ನಿಖಿಲ್ ಅವರನ್ನ ಪದ್ಮನಾಭ ನಗರದ ತಮ್ಮ ನಿವಾಸಕ್ಕೆ ಕರೆಸಿಕೊಂಡಿರುವ ದೇವೇಗೌಡರು ರಾಜನೀತಿ ಬೋಧಿಸಿದ್ದಾರೆ. ಸೋಲು ಗೆಲುವು ಜೀವನದಲ್ಲಿ ಸಾಮಾನ್ಯ. ಎರಡನ್ನೂ ಆತ್ಮವಿಶ್ವಾಸದಿಂದಲೇ ಎದುರಿಸಬೇಕು ಎಂದು ತಮ್ಮ ಮೊಮ್ಮಗನಿಗೆ ರಾಜಪಾಠ ಬೋಧಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಚುನಾವಣೆ ಅಂದಮೇಲೆ ಸೋಲು-ಗೆಲುವು ಎಲ್ಲವೂ ಸಹಜ. ಅದನ್ನ ಮನಸ್ಸಿಗೆ ಹಚ್ಚಿಕೊಂಡು ಬೇಸರ ಮಾಡಿಕೊಳ್ಳುವುದಲ್ಲ. ಎಲ್ಲವನ್ನ ಮರೆತು ಮುಂದುವರಿಯಬೇಕು ಎಂದು ಎಚ್‍ಡಿಡಿ ಹೇಳಿದ್ದಾರೆ. ಇದಕ್ಕೆ ನಾನೇನು ಸೋತ ಬೇಸರದಲ್ಲಿಲ್ಲ. ಆದರೆ ನಿಮಗೆ ಹಾಗೂ ಅಪ್ಪನಿಗೆ ಅಷ್ಟೊಂದು ಪ್ರೀತಿ ತೋರಿಸುವ ಮಂಡ್ಯ ಜನ ನನ್ನನ್ನ ಕೈ ಬಿಟ್ಟಿದ್ದು ನನಗೆ ಬೇಜಾರಾಯಿತು ಅಷ್ಟೇ ಎಂದಿದ್ದಾರೆ.

ರಾಜಕಾರಣದಲ್ಲಿ ನಮ್ಮಗುರಿ ಸ್ಪಷ್ಟವಾಗಿರಬೇಕು. ಎಷ್ಟೇ ಕಷ್ಟ ಆದರೂ ಗುರಿ ಮುಟ್ಟುವ ಛಲ ಇರಬೇಕು. ನೀನು ಮಂಡ್ಯದಲ್ಲೇ ರಾಜಕಾರಣ ಮಾಡೋದಾದ್ರೆ ಸ್ಪಷ್ಟವಾದ ತೀರ್ಮಾನ ಮಾಡಿ ಮುಂದುವರಿ. ಮುಂದೆ ಹೋದ ಮೇಲೆ ಹಿಂದೆ ಬರೋ ಹಾಗಿರಬಾರದು ಎಂದು ಎಚ್‍ಡಿಡಿ ಮಾತಿಗೆ ನಿಖಿಲ್, ಇಲ್ಲ ತಾತಾ ಇಷ್ಟು ಮುಂದೆ ಹೋದ ಮೇಲೆ ಹಿಂದೆ ಬರುವ ಪ್ರಶ್ನೆಯೇ ಇಲ್ಲ. ಎಲ್ಲಿ ಸೋತಿದ್ದೀನಿ ಅಲ್ಲೇ ಗೆಲ್ಲಬೇಕು ಗೆಲ್ಲುತ್ತೇನೆ ಎಂದು ತಿಳಿಸಿದ್ದಾರೆ.
ಯಾರ ವಿರುದ್ಧ ಮಾತನಾಡಬೇಡ. ನಿನ್ನ ಪಾಡಿಗೆ ನೀನು ಕೈಲಾದ ಕೆಲಸ ಮಾಡಿಕೊಂಡು ಹೋಗು. ಜನ ಅವರಾಗಿಯೇ ನಿನ್ನ ಇಷ್ಟ ಪಡಬೇಕು. ಸೋಲಿಸಿದರೂ ನಮ್ಮ ಜೊತೆಗಿದ್ದು ಕಷ್ಟ ಸುಖಕ್ಕೆ ಸ್ಪಂದಿಸಿದ ಅನ್ನಬೇಕು. ಹಾಗೆ ಕೆಲಸ ಮಾಡಬೇಕು ಅದಕ್ಕೆ ಬದ್ಧತೆ ಇರಬೇಕು ಎಂದಿದ್ದಾರೆ. ಇದಕ್ಕೆ ನಾನು ಯಾರ ವಿರುದ್ಧವೂ ಮಾತನಾಡಲ್ಲ. ಮಂಡ್ಯದಲ್ಲೇ ಇದ್ದು ಕೆಲಸ ಮಾಡುತ್ತೇನೆ ಎಂದು ನಿಖಿಲ್ ಉತ್ತರಿಸಿದ್ದಾರೆ.

ಇನ್ನೊಂದು ವಿಷಯ ತಿಳ್ಕೋ ನೀನು ಮಂಡ್ಯದಲ್ಲಿ ಓಡಾಡೋದು ನಾಳೆ ಇನ್ಯಾರೋ ರಾಮನಗರ, ಮಾಗಡಿ ಅಲ್ಲಿ ನಿಂತ್ರೆ ಸುಲಭವಾಗಿ ಗೆಲ್ಲಬಹುದು ಅಂದ್ರೆ ಅವಾಗ ಇನ್ನೊಂದು ತರ ಯೋಚನೆ ಮಾಡೋ ಹಾಗೆ ಮಾಡ್ಕೋಬೇಡ ಎಂದು ಹೇಳಿದ್ದಕ್ಕೆ ನಿಖಿಲ್, ಖಂಡಿತಾ ಇಲ್ಲ ತಾತಾ ನಾನು ಬೇರೆ ಯೋಚನೆ ಮಾಡಲ್ಲ. ನನಗೆ ನನ್ನ ಸೋಲಿಗಿಂತ ನಿಮ್ಮ ಸೋಲು ಜಾಸ್ತಿ ನೋವಾಯ್ತು ಎಂದು ತಿಳಿಸಿದ್ದಾರೆ.
ಸೋಲಿಗೆ ಎದೆಗುಂದಬೇಡ. ಯಾರಿಗೂ ಬೈಬೇಡ, ಗುರಿ ಸ್ಪಷ್ಟವಾಗಿರಲಿ ರಾಜಕೀಯವಾಗಿ ಮುಂದುವರಿ ಎಂದು ಪಾಠ ಮಾಡಿದ್ದಾರೆ. ಒಟ್ಟಿನಲ್ಲಿ ಇದೀಗ ರಾಜಕೀಯ ಚಾಣಕ್ಯ ದೇವೇಗೌಡರ ಹಿತ ನುಡಿ, ಗುರುಬೋಧನೆಗೆ ನಿಖಿಲ್ ರಿಂದ ಯಾವ ರೀತಿಯ ರಾಜಕೀಯ ನಡೆಗೆ ಕಾರಣವಾಗಬಹುದು ಎಂಬ ಕುತೂಹಲವನ್ನು ಈಗ ಹುಟ್ಟು ಹಾಕಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಹಾಮಾರಿ ಕೊರೋನಾ ಇರುವ ಸಮಯದಲ್ಲಿ ಎಸ್ಎಸ್ಎಲ್ಸಿ ಹಾಗೂ ಇನ್ನಿತರೇ ಪರೀಕ್ಷೆಗಳು ಮಾಡಲೇಬೇಕೆಂದರೆ ಪ್ರತಿ ವಿದ್ಯಾರ್ಥಿಗಳ ಹೆಸರಿನಲ್ಲಿ 50 ಲಕ್ಷ ಹಾಗೂ ಪ್ರತಿ ಶಿಕ್ಷಕರಿಗೂ 25 ಲಕ್ಷ ಹಣವನ್ನು ಅವರ ಅಕೌಂಟ್ ಗೆ ಡೆಪಾಸಿಟ್ ಮಾಡಿ ಎಂದು ಕನ್ನಡ ಹೊರಾಟಗಾರ ವಾಟಾಳ್ ನಾಗರಾಜ್ ಅವರು ಹೇಳಿಕೆಯನ್ನು ನೀಡಿದ್ದಾರೆ. ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುವುದರ ವಿರುಧ್ದ ಪ್ರತಿಭಟಿಸಿ, ನಂತರ ಸುದ್ದಿಗಾರರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್ ಕೊರೊನ ಜೊತೆ ಸರಸ ಸರಿಯಿಲ್ಲ. ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವರಾದ…
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಪ್ರತಿ ತಿಂಗಳ ನಾಲ್ಕನೇ ಶನಿವಾರ ರಜೆ ನೀಡಲು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೃಷ್ಣ ಭೈರೇಗೌಡ ಅವರು, 17 ರಾಜ್ಯಗಳಲ್ಲಿ ಪ್ರತಿ ಶನಿವಾರ ರಜೆ ಜಾರಿಯಲ್ಲಿದೆ. 4 ರಾಜ್ಯಗಳಲ್ಲಿ ತಿಂಗಳಲ್ಲಿ ಎರಡು ಶನಿವಾರ ರಜೆ ಇದೆ. ಅದೇ ರೀತಿ ನಮ್ಮ ರಾಜ್ಯದಲ್ಲೂ ರಜೆಗೆ ಒತ್ತಾಯ ಇತ್ತು. ಜಯಂತಿಗಳು, ಹಬ್ಬಗಳನ್ನು ಕಡಿತ ಮಾಡಬೇಕಾ…
ರಜೆ ಬಂದರೆ ಸಾಕು ಮನೆಯಲ್ಲಿ ಎಲ್ಲರು ಇರುತ್ತಾರೆ. ಒಂದು ಕಡೆ ಎಲ್ರೂ ಇದ್ದರೆ ಸಾಕು ಏನಾದರೂ ಸ್ಪೈಸಿಯಾಗಿ ತಿನ್ನಲೂ ಕೇಳುತ್ತಾರೆ. ಪ್ರತಿದಿನ ಅದೇ ತಿಂಡಿ ಅಂತ ಬೇಸರ ಮಾಡಿಕೊಂಡು ತಿನ್ನುವುದಿಲ್ಲ. ಹೀಗಾಗಿ ಬೇಗ ತಯಾರಾಗುವ ಎಗ್ ಪೆಪ್ಪರ್ ಫ್ರೈ ಮಾಡುವ ವಿಧಾನ.. ಬೇಕಾಗುವ ಸಾಮಾಗ್ರಿಗಳು 1. ಮೊಟ್ಟೆ – 4 3. ಎಣ್ಣೆ – 2-3 ಚಮಚ3. ಮೆಣಸು – 1 ಚಮಚ 4. ಉಪ್ಪು – ರುಚಿಗೆ ತಕ್ಕಷ್ಟು5. ಕೊತ್ತಂಬರಿ ಸೊಪ್ಪು -ಸ್ವಲ್ಪ 6. ಅರಿಶಿಣ –…
ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಭಯ ಹೋಗಲಾಡಿಸಿ ಪರೀಕ್ಷೆ ಬಗ್ಗೆ ಆತ್ಮವಿಶ್ವಾಸ ಮೂಡಿಸುವ ಸಲುವಾಗಿ 6 ಮತ್ತು 8ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಸಚಿವ ಎಸ್. ಸುರೇಶ್ ಕುಮಾರ್ ಅವರು ತಿಳಿಸಿದರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಬಳಿಕ ಬುಧವಾರ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ಅವರು ಬ್ಯಾಡಮೂಡ್ಲು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಪರೀಕ್ಷೆ ಬಗ್ಗೆ ಚರ್ಚಿಸಿದ ಬಳಿಕ…
ಹೌದು, ನೀವು ಕೇಳಿದ್ದು ನಿಜ…ಈ ಜಗತ್ತಿನಲ್ಲಿ ಏನೆಲ್ಲಾ ವಿಸ್ಮಯ ಅಚ್ಚರಿಗಳು ನಡೆಯುತ್ತವೆ ಎಂಬುದಕ್ಕೆ ಇದು ಒಂದು ಉದಾಹರಣೆಯಾಗಿದೆ.ನಾವೆಲ್ಲಾ ಕೋಳಿ,ಪಕ್ಷಿಗಳು,ಹಾವುಗಳು ಹಾಗೂ ಕೆಲವೊಂದು ಜೀವಿಗಳು ಮೊಟ್ಟೆ ಇಡುವುದನ್ನು ಕೇಳಿದ್ದೇವೆ.ಆದರೆ ಮನುಷ್ಯ ಮೊಟ್ಟೆ ಇದುತ್ತಾನೆಂದ್ರೆ ಇದು ಎಂತಹವರಿಗೂ ನಂಬೋದಕ್ಕೆ ಅಸಾಧ್ಯ ಆಲ್ವಾ…
ಇದು ಸೆಲ್ಫಿ ಯುಗ. ಕೈನಲ್ಲಿ ಮೊಬೈಲ್ ಪ್ರತಿಯೊಂದು ಕ್ಷಣದ ಫೋಟೋ ಸೆಲ್ಫಿಯಾಗಿ ಹೊರಬರುತ್ತದೆ. ಸೆಲ್ಫಿ ವಿಶೇಷತೆ ಹೊಂದಿರುವ ಮೊಬೈಲ್ ಫೋನುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ವಿಶ್ವದಾದ್ಯಂತ ಸೆಲ್ಫಿ ಕಾರಣಕ್ಕೆ ನಡೆಯುತ್ತಿರುವ ಸಾವಿನಲ್ಲಿ ಶೇಕಡಾ 60ರಷ್ಟು ಪಾಲು ಭಾರತದ್ದಿದೆ. ಕಳೆದ ಎರಡು ವರ್ಷಗಳ ಅಂಕಿ-ಅಂಶ ಇದನ್ನು ಸ್ಪಷ್ಟಪಡಿಸಿದೆ.