ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಆರ್ಯಭಟ್ಟ ಕ್ರಿಶ 499 ರಲ್ಲಿ “ಸೊನ್ನೆ” (0)ಕಂಡುಹಿಡಿದ ? ನಂತರ ಬಂದ ಬ್ರಹ್ಮ ಗುಪ್ತ ಇದನ್ನು ಡೆವಲಪ್ ಮಾಡಿ ಈಗಿನ ಸೊನ್ನೆ ರೂಪಕ್ಕೆ ತಂದ? ಹಾಗಿದ್ದರೆ ಕೇವಲ ಒಂದೂವರೆ ಸಾವಿರ ವರ್ಷದ ಹಿಂದೆ ಬಂದಿದ್ದಾ ಸೊನ್ನೆ ? ಅದರ ಮೊದಲು ಏನಿತ್ತು ? ಉಳಿದ ನಂಬರಗಳು ಯಾರು ಕಂಡುಹಿಡಿದಿದ್ದು ?
ಕ್ರಿಪೂ ಮೂರನೇ ಶತಮಾನದಲ್ಲಿ ಅಂದರೆ 800 ವರ್ಷ ಮೊದಲೇ ಪುಣೆ ಮತ್ತು ಉತ್ತರ ಪ್ರದೇಶದ ಗುಹೆಗಳಲ್ಲಿ ಸೊನ್ನೆ(ಝೀರೋ) ಕಂಡು ಬಂದಿದೆ.
ಇದಕ್ಕೂ ತುಂಬಾ ಮೊದಲು ಅಂದರೆ ಕ್ರಿಪೂ 2000 ರಲ್ಲಿ ಸುಮೇರಿಯನ್ನರು ಮತ್ತು ಬ್ಯಾಬಿಲೋನ್ ನವರೂ ಝೀರೊ ತರ ಉಪಯೋಗಿಸಿದ್ದಾರೆ.
ಆದರೆ ಅದೊಂದು ಅಂಕಿ ಅಂತ ಆಗಿರಲಿಲ್ಲ. ಖಾಲಿ ಜಾಗ ಬಿಡುತ್ತಿದ್ದರು. ಇದರಿಂದ ಗೊಂದಲ ಉಂಟಾಗುತ್ತಿತ್ತು. ಇವರಿಗೆ ಎಡದ ಅಂಕಿ ದೊಡ್ಡದು ಬಲದ ಅಂಕಿ ಚಿಕ್ಕದು ಅಂತ ಪೊಸೀಶನ್ ಸಿಸ್ಟಮ್ ಕೂಡ ಗೊತ್ತಿತ್ತು.
ಆರ್ಯಭಟ ದೊಡ್ಡ ನಂಬರ ಗಳ ಶಾರ್ಟ್ ಫಾರ್ಮ ಕಂಡು ಹಿಡಿದಿದ್ದ. ಉದಾಹರಣೆ ಗೆ – ಕ್ಯೂಘ್ರ ಅಂದರೆ 4,320,000 ಇದು ಜನಪ್ರಿಯ ಆಗಲಿಲ್ಲ.
ಬ್ರಹ್ಮ ಗುಪ್ತ ನ ನಂತರ ಅರಬ್ ಜನ ನಮ್ಮ ಪುಸ್ತಕ ಗಳನ್ನು ಭಾಷಾಂತರ ಮಾಡಿದರು. ನಮ್ಮ ನಂಬರಗಳನ್ನು ಮತ್ತು ಝೀರೋ ಕಾಪಿ ಮಾಡಿದರು. ನಮಗೆ ಗೌರವ ಕೊಡುವುದಕ್ಕಾಗಿ ಅಲ್ಲಿನ ಪಂಡಿತರು ಇದಕ್ಕೆ – ರಕಮ್ ಅಲ್ ಹಿಂದ್ ಅಂತ ಹೆಸರಿಟ್ಟರು. ಇದನ್ನು ಓದಿದಾಗ ನನಗೆ ಅನ್ನಿಸಿದ್ದು ಹಿಂದ್ ಶಬ್ದ ಆಗಿನಿಂದಲೇ ಇದೆ ಅಂತ.
ಮುಂದೆ ಅರಬ್ ರಿಂದ ಈ ಪದ್ಧತಿ ಎಲ್ಲಾ ಕಡೆಗಳಲ್ಲಿ ಹೋಗಿ ಈಗಿನ ನಂಬರ ಪದ್ದತಿ ಗೆ ಹಿಂದೂ ಅರಬ್ ಪದ್ಧತಿ ಅಂತಲೇ ಕರೆಯುತ್ತಾರೆ.
ನಂಬರ ಲೆಕ್ಕ ಮಾಡುವುದು ಅಂದರೆ ಒಂದು ಎರಡು ಮೂರು ಮಾನವ ಗುಹಾ ವಾಸಿ ಆಗಿದ್ದಾಗಲೇ ಇರುವುದರಿಂದ ಇವನ್ನು ಭಾರತೀಯರೇ ಕಂಡು ಹಿಡಿದರು ಅಂತ ಹೇಳಲಾಗುತ್ತಿಲ್ಲ. ಆದರೂ ಈಗಿನ ನಂಬರ ಪದ್ಧತಿ ಕಂಡು ಹಿಡಿದದ್ದು ಭಾರತವೇ. ಕೇವಲ ಝೀರೋ ಮಾತ್ರ ಅಲ್ಲ. ಒಂದರಿಂದ ಒಂಬತ್ತು ಹೀಗಿತ್ತು ಭಾರತ ಇಲ್ಲವಾದರೆ ಜಗತ್ತಿನ ಆಟವು ಮುಗಿದಿತ್ತು .
ಅನ್ನಲೂ ಬಹುದು. ಇದರ ಮೊದಲು 1000 ಅಂತ ಬರೆಯಲು ಓದಲು ಸುಮಾರು 1000 ಗೆರೆ ಹಾಕುತ್ತಾ ಕೂರುವ ಸ್ಥಿತಿ ಜಗತ್ತಿನ ಕೆಲವು ಕಡೆ ಇತ್ತು. ಹಾಗಂತ ಮಾಯನ್ನರೂ ಕೂಡ ತಮ್ಮದೇ ಆದ ಝೀರೋ ತರದ್ದೇ ಸ್ವಂತವಾಗಿ ಕಂಡುಹಿಡಿದಿದ್ದಾರೆ. ಆದರೆ ಎಡದ ಅಂಕಿ ದೊಡ್ಡದು, ಬಲದ ಅಂಕಿ ಚಿಕ್ಕದು ಅಂತ ಪೊಸಿಶನ್ ಸಿಸ್ಟಮ್ ಗೆ ಹೆಚ್ಚಾಗಿ ಭಾರತವೇ ಮೂಲ. ಅವರೆಲ್ಲರೂ ಕಲ್ಲಿನಲ್ಲಿ ಕೊರೆದು, ನಾವು ತಾಳೆ ಗ್ರಂಥಗಳು ಉಪಯೋಗಿಸಿದ್ದರಿಂದ ಅಧಿಕೃತ ದಾಖಲೆಗಳು ಸಿಗುತ್ತಿಲ್ಲ.
ಎಲ್ಲರಿಗೂ ಮೊದಲು ವೇದ ಕಾಲದಲ್ಲಿ ಒಂದು ಕಲ್ಪ ಅಂದರೆ 4,320,000,000 ವರ್ಷ ಗಳು .
ಸೌರವ್ಯೂಹ ದ ಉದ್ದ 1,871,206,920,000,000 ಯೋಜನಗಳು ಅಂತ ಹೇಳಿದ್ದಾರೆ. ಝೀರೋ ಬಂದಿದ್ದು ಒಂದೂವರೆ ಸಾವಿರ ವರ್ಷದ ಹಿಂದೆ ಅಂದರೆ ವೇದ ಕಾಲದಲ್ಲಿ ಈ ನಂಬರ ಕಲ್ಪಿಸಲು ಸಾಧ್ಯ ಇತ್ತೇ ?
ವೇದ ಕಾಲದಲ್ಲಿ” ದಶ, ಶತ, ಸಹಸ್ರ, ಆಯತ, ನಿಯತ, ಪ್ರಯತ, ಅರ್ಬುದ, ನಿರ್ಬುದ, ಸಮುದ್ರ, ಮಧ್ಯ, ಅಂತ, ಪರಾರ್ಥ ” ಹೀಗೆ ಲೆಕ್ಕ ಮಾಡುತ್ತಿದ್ದರಂತೆ. 2 ಆಯತ 6 ಸಹಸ್ರ 4 ಶತ 3 ದಶ 2 = 26432 ಈ ತರ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಲಾಲ್‌ಬಾಗ್‌ನಲ್ಲಿ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ಆಗಸ್ಟ್ 9ರಿಂದ ಆರಂಭವಾಗಲಿದೆ. ದೇಶ ಸ್ವಾತಂತ್ರ್ಯಗೊಂಡ ನಂತರ ರಾಜಸಂಸ್ಕೃತಿಯನ್ನು ಭಾರತದಲ್ಲಿ ಮೊದಲ ಬಾರಿಗೆ ವಿಲೀನಗೊಳಿಸಿದ್ದ ಕೀರ್ತಿಗೆ ಪಾತ್ರರಾಗಿದ್ದ ಜಯಚಾಮರಾಜ ಒಡೆಯರ್ ಅವರ ಜೀವನ ಚರಿತ್ರೆಯನ್ನು ಫಲಪುಷ್ಪಗಳಿಂದ ಅನಾವರಣಗೊಳಿಸಲಾಗುತ್ತದೆ. ಅವರ ಶತಮಾನೋತ್ಸವ ಅಂಗವಾಗಿ ಅವರ ಬಾಲ್ಯ , ಶಿಕ್ಷಣ ಮತ್ತು ಆಡಳಿತದಲ್ಲಿ ರಾಜ್ಯಕ್ಕೆ ಸಲ್ಲಿಸಿದ ಸೇವೆ ಕುರಿತು ಸಾರ್ವಜನಿಕರಿಗೆ ತಿಳಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಮೈಸೂರು ಸಂಸ್ಥಾನದ ಕೊನೆಯ ದೊರೆಯಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರ ಜೀವನ ಚರಿತ್ರೆ ಅವರು ರಾಜ್ಯಕ್ಕೆ…
ಮುಧೋಳ ಹೌಂಡ್ / ಮುಧೋಲ್ ಹೌಂಡ್, ಇದನ್ನು ಮರಾಠಾ ಹೌಂಡ್, ಪಾಶ್ಮಿ ಹೌಂಡ್ ಮತ್ತು ಕ್ಯಾಥೆವಾರ್ ಡಾಗ್ ಎಂದೂ ಕರೆಯುತ್ತಾರೆ, ಇದು ಭಾರತದಿಂದ ದೃಷ್ಟಿಗೋಚರ ತಳಿಯಾಗಿದೆ. ಕೆನಲ್ ಕ್ಲಬ್ ಆಫ್ ಇಂಡಿಯಾ (ಕೆಸಿಐ) ಮತ್ತು ಇಂಡಿಯನ್ ನ್ಯಾಷನಲ್ ಕೆನಲ್ ಕ್ಲಬ್ (ಐಎನ್‌ಕೆಸಿ) ಈ ತಳಿಯನ್ನು ವಿವಿಧ ತಳಿಗಳ ಹೆಸರಿನಲ್ಲಿ ಗುರುತಿಸುತ್ತವೆ. ಕೆಸಿಐ ಇದನ್ನು ಕಾರವಾನ್ ಹೌಂಡ್ ಎಂದು ನೋಂದಾಯಿಸಿದರೆ, ಐಎನ್‌ಕೆಸಿ ಮುಧೋಲ್ ಹೌಂಡ್ ಹೆಸರನ್ನು ಬಳಸುತ್ತದೆ ರಾಜ್ಯದ ಬಾಗಲಕೋಟೆ ಜಿಲ್ಲೆಯ ಸಣ್ಣ ಪಟ್ಟಣ ಮುಧೋಳ ಎಂಬ ಊರಿನ ಹೆಸರನ್ನು…
ಚಳಿಗಾಲ ಬಂತೆಂದರೆ ಸಾಕು ಒಂದೆಲ್ಲಾ ಒಂದು ತ್ವಚೆ ಸಮಸ್ಯೆ ಶುರುವಾಗುವುದು. ಮೈಯನ್ನು ಉಣ್ಣೆ ಬಟ್ಟೆ, ಸ್ವೆಟರ್, ಕೋಟ್ ಇವುಗಳಿಂದ ರಕ್ಷಣೆ ಮಾಡಿದರೂ ಮುಖವನ್ನು ಹಾಗೇ ಬಿಡುವುದರಿಂದ ಮುಖದ ತ್ವಚೆ ಒಡೆಯಲಾರಂಭಿಸುತ್ತದೆ. ಇದರಿಂದ ಮುಖದ ತ್ವಚೆ ಡ್ರೈಯಾಗಿ ಮುಖದ ಕಾಂತಿ ಕಡಿಮೆಯಾಗುವುದು. ತುಟಿ ಒಡೆಯಲಾರಂಭಿಸುತ್ತದೆ, ಇದರಿಂದ ಮುಖ ಮತ್ತಷ್ಟು ಮಂಕಾಗಿ ಆಗಿ ಕಾಣುವುದು. ಚಳಿಯ ಪರಿಣಾಮ ನಿಮ್ಮ ಮುಖದ ಮೇಲೆ ಬೀರದಂತೆ ತಡೆಗಟ್ಟಲು ಫೇಶಿಯಲ್ ಮಾಡಿಸುವುದು ಒಳ್ಳೆಯದು. ಫೇಶಿಯಲ್ ಮಾಡಿಸುವುದರಿಂದ ಚಳಿಯಿಂದ ಒಡೆದು ಮುಖ ಕಪ್ಪಾಗುವುದಿಲ್ಲ, ಎಂದಿನಂತೆ ನಿಮ್ಮ…
ಹಸಿ ತರಕಾರಿಗಳ ಸೇವನೆಯಿಂದ ನಿಮ್ಮ ದೇಹಕ್ಕೆ ಬೇಕಾದ ಆರೋಗ್ಯ ಶಕ್ತಿ ದೊರೆಯುತ್ತದೆ ಎಂಬುದು ವೈದ್ಯಲೋಕ ತಿಳಿಸಿರುವ ಮಾಹಿತಿಯಾಗಿದೆ. ತರಕಾರಿಗಳನ್ನು ಬೇಯಿಸಿದಾಗ ಅದಲ್ಲಿರುವ ಪೋಷಕಾಂಶಗಳು ನಷ್ಟವಾಗುತ್ತವೆ ಎಂಬುದು ಸಂಶೋಧನೆಗಳಿಂದ ತಿಳಿದು ಬಂದಿದ್ದು ಆದಷ್ಟು ತರಕಾರಿಗಳನ್ನು ಹಸಿಹಸಿಯಾಗಿಯೇ ನಿಮ್ಮ ನಿತ್ಯದ ಆಹಾರ ಕ್ರಮದಲ್ಲಿ ಬಳಸುವುದರಿಂದ ಲಾಭ ನಿಮಗೇ ಉಂಟಾಗಲಿದೆ.
ನೀವು ಮನೆ ಖರೀದಿಸುವ ಯೋಚನೆಯಲ್ಲಿದ್ದೀರಾ? ನಿಲ್ಲಿ …..? ಸರ್ಕಾರ ಜಿಎಸ್ಟಿ ವ್ಯವಸ್ಥೆ ಜಾರಿಗೊಳಿಸುವವರೆಗೂ ನಿಮ್ಮ ನಿರ್ಧಾರಕ್ಕೆ ಬ್ರೇಕ್ ಹಾಕಿ. ಜುಲೈ ಒಂದರಿಂದ ಆರಂಭವಾಗುವ ಹೊಸ ತೆರಿಗೆ ವ್ಯವಸ್ಥೆಯಲ್ಲಿ, ದೊಡ್ಡ ಪ್ರಮಾಣದ ತೆರಿಗೆ ಹಣವನ್ನು ನೀವು ಉಳಿಸಬಹುದು.
ಒಂದೆಕರೆ ಕ್ಷಣದಲ್ಲೇ ಪರಿಹಾರಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು 9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ:- ಸುಡು ಕೆಂಡಗಳನ್ನು ಕಟ್ಟಿಕೊಂಡು ತಿರುಗಾಡುವ ಮೊದಲು ನಿಧಾನವಾಗಿ ನಿರ್ಣಯ ತೆಗೆದುಕೊಂಡು ಮುನ್ನುಗ್ಗುವುದು ಒಳ್ಳೆಯದು. ಸದ್ಯದ ಪರಿಸ್ಥಿತಿಯಲ್ಲಿ ಗ್ರಹಗತಿಗಳು ಉತ್ತಮ ಸ್ಥಾನದಲ್ಲಿ ಸಂಚರಿಸದೆ ಅನೇಕ ತೊಂದರೆಗಳು ಉಂಟಾಗುವವು.ನಿಮ್ಮ ಸಮಸ್ಯೆಏನೇಇರಲಿ ಎಷ್ಟೇ ಕಠಿಣವಾಗಿರಲಿ…