ಸಿನಿಮಾ

ಸುಮಲತಾ ಪರ ನಿಂತ ಡಿಬಾಸ್ ಮತ್ತು ಯಶ್..ರಾಕಿಂಗ್ ಸ್ಟಾರ್ ಹೇಳಿದ್ದೇನು ಗೊತ್ತಾ?

128

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಮುಂದಾಗಿರುವ ಸುಮಲತಾ ಅಂಬರೀಶ್ ಅವರಿಗೆ ಸ್ಯಾಂಡಲ್ ವುಡ್ ಖ್ಯಾತ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಇಂದು ಬಹಿರಂಗವಾಗಿಯೇ ಬೆಂಬಲ ಘೋಷಿಸಿದ್ದು, ಸುಮಲತಾ ಅಂಬರೀಶ್ ಅವರೊಂದಿಗೆ ಪತ್ರಿಕಾಗೋಷ್ಟಿಯಲ್ಲಿ ಪಾಲ್ಗೊಂಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಮಾತನಾಡಿ, ನಾವು ಸುಮಲತಾ ಅವರ ಜೊತೆ ಕಲಾವಿದರಾಗಿ ಕೂತಿಲ್ಲ. ಮನೆ ಮಕ್ಕಳಾಗಿ ಕುಳಿತ್ತಿದ್ದೇವೆ. ಮನೆ ತಾಯಿಯ ನಿರ್ಧಾರಕ್ಕೆ ಮಕ್ಕಳಾದ ನಾವು ಜೊತೆ ಇರುತ್ತೇವೆ ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ.

ಖಾಸಗಿ ಹೋಟೆಲ್ ನಲ್ಲಿ ಸುಮಲತಾ ನಡೆಸಿದ್ದ ಸುದ್ದಿಗೋಷ್ಠಿ ವೇಳೆ ಮಾತನಾಡಿದ ಅವರು, ಮೊದಲಿಂದಲೂ ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್ ಅವರ ಮನೆಯವರೊಂದಿಗೆ ಒಡನಾಟ ಇದೆ. ಅವರ ಮನೆಯಲ್ಲಿ ದರ್ಶನ್ ದೊಡ್ಡ ಮಗನಂತಿದ್ದಾರೆ. ಅಕ್ಕ ಒಂದು ನಿರ್ಧಾರ ತಗೊಂಡಿದ್ದಾರೆ. ಅದಕ್ಕೆ ನಾವು ಯೋಚನೆ ಮಾಡುವ ಅಗತ್ಯ ಇಲ್ಲ. ಅಕ್ಕ ಎಲ್ಲಿ ಹೆಜ್ಜೆ ಇಡುತ್ತಾರೋ ಅವರನ್ನ ನಾವು ಹಿಂಬಾಲಿಸುತ್ತೇವೆ ಎಂದು ಹೇಳಿದರು.

ಅಂಬರೀಶಣ್ಣ ನಮಗೆ ತುಂಬಾ ಅನುಕೂಲ ಮಾಡಿದ್ದಾರೆ. ಮಂಡ್ಯ ಜನಕ್ಕೆ ಅಂಬರೀಶಣ್ಣ ಯಾರು? ಏನು ಅಂತ ಗೊತ್ತು. ಅಷ್ಟು ವರ್ಷ ಜನರ ಪ್ರೀತಿ ಗಳಿಸೋದು ಸುಲಭವಲ್ಲ. ಅಂಬರೀಶಣ್ಣ ಮಂಡ್ಯದ ಮನೆಮಗ. ಸುಮಲತಾ ಯಾಕೆ ಸ್ಪರ್ಧಿಸುತ್ತಿದ್ದಾರೆ ಅಂತ ಅರ್ಥ ಮಾಡ್ಕೋಬೇಕು. ಇದು ಸೂಕ್ಷ್ಮವಾದ ವಿಚಾರ, ಅವರು ರಾಜಕೀಯ ಲಾಭಕ್ಕಾಗಿ ಸ್ಪರ್ಧಿಸುತ್ತಿಲ್ಲ. ಮಂಡ್ಯದ ನಂಟಿಗೆ ಸರಿಸಾಟಿ ಯಾವುದೂ ಇಲ್ಲ ಎಂದು ಸುಮಲತಾ ಅವರ ಪರ ಯಶ್ ಬ್ಯಾಟಿಂಗ್ ಮಾಡಿದರು.

ಮಂಡ್ಯದ ಜನತೆಗೆ ಅಂಬರೀಶ್ ಪ್ರೀತಿ ಮೀರಿ ದೊಡ್ಡ ಶಕ್ತಿ ಇದೆ. ಮಂಡ್ಯದ ಜನತೆಗೆ ಜ್ಞಾನ, ಶಕ್ತಿ, ಪ್ರೀತಿ, ಒಡನಾಟ, ತಾಳ್ಮೆ, ಸಹನೆ ಎಲ್ಲ ಇದೆ. ಮಂಡ್ಯದ ಜನ ಅಂಬರೀಶ್ ಕುಟುಂಬವನ್ನು ಕೈ ಬಿಡಲ್ಲ. ಮನೆ ತಾಯಿಯ ನಿರ್ಧಾರಕ್ಕೆ ಮಕ್ಕಳಾದ ನಾವು ಸದಾ ಜೊತೆಗಿರುತ್ತೇವೆ ಎಂದು ಸುಮಲತಾ ಅವರಿಗೆ ಸಾಥ್ ನೀಡಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಇಲ್ಲಿ ಮಹಿಳೆಯರಿಗೆ ಒಂದಲ್ಲ ಎರಡಲ್ಲ 8 ಗಂಡಂದಿರು…!ಮುಂದೆ ಓದಿ…….

    ಮಹಾಭಾರತದ ದ್ರೌಪದಿ ಎಲ್ಲರಿಗೂ ಗೊತ್ತು. ಆಕೆ ಪಾಂಡವರ ಪತ್ನಿ. ಐವರು ಗಂಡಂದಿರನ್ನು ಹೊಂದಿದ್ದ ದ್ರೌಪದಿಯೇ ಮಹಾಭಾರತಕ್ಕೆ ಕಾರಣ ಎನ್ನಲಾಗುತ್ತದೆ. ಅದೇನೇ ಇರಲಿ ಒಂದಕ್ಕಿಂತ ಹೆಚ್ಚು ಗಂಡಂದಿರನ್ನು ಹೊಂದಿರುವ ಮಹಿಳೆಯರು ಭಾರತದಲ್ಲಿ ಇದ್ದಾರೆ. ರಾಜಸ್ತಾನ ಮತ್ತು ಮಧ್ಯಪ್ರದೇಶದ ಗಡಿ ಭಾಗ ಮುರೆನಾದಲ್ಲಿ ಒಂದಕ್ಕಿಂತ ಹೆಚ್ಚು ಗಂಡಂದಿರನ್ನು ಹೊಂದಿರುವ ಮಹಿಳೆಯರಿದ್ದಾರೆ. ಇದು ಹಳೇ ಪದ್ಧತಿಯೇನಲ್ಲ. ಕೆಲ ವರ್ಷಗಳ ಹಿಂದೆ ಅಲ್ಲಿನ ಮುಖಂಡರು ಗ್ರಾಮದ ಒಳಿತಿಗಾಗಿ ಈ ನಿರ್ಧಾರ ಕೈಗೊಂಡಿದ್ದಾರೆ. ಈ ಊರಿನಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ. ಯುವಕರ ಸಂಖ್ಯೆ…

  • ಉಪಯುಕ್ತ ಮಾಹಿತಿ

    ಅಕ್ಕಿಯಲ್ಲಿ ಹುಳ ಬಾರದಂತೆ ಮಾಡುವ ವಿಧಾನ ನಿಮ್ಗೆ ಗೊತ್ತಾ ..?ತಿಳಿಯಲು ಈ ಲೇಖನ ಓದಿ ..

    ಹಳ್ಳಿ ಪ್ರದೇಶಗಳಲ್ಲಿ ಜನರು ತಮ್ಮ ಹೊಲದಲ್ಲಿ ಬೆಳೆದ ಭತ್ತವನ್ನು ಅಕ್ಕಿ ಮಾಡಿ ಅದನ್ನು ಒಂದು ವರ್ಷದವರೆಗೂ ಉಪಯೋಗಿಸುತ್ತಾರೆ. ಹೀಗೆ ವರ್ಷಗಟ್ಟಲೆ ಅಕ್ಕಿಯನ್ನು ಶೇಖರಿಸಿ ಇಡುವುದರಿಂದ ಅದರಲ್ಲಿ ಹುಳಗಳು ಹುಟ್ಟುತ್ತವೆ.

  • ಉಪಯುಕ್ತ ಮಾಹಿತಿ

    ಹಲಸಿನ ಹಣ್ಣಿನ ಈ ಪ್ರಯೋಜನಗಳನ್ನು ಕೇಳಿದ್ರೆ, ನೀವು ತಿನ್ನದೇ ಸುಮ್ಮನೆ ಇರಲ್ಲ…

    ಹಲಸಿನ ಹಣ್ಣಿನ ಹೆಸರು ಕೇಳಿದ್ರೆ ಸಾಕು ಬಾಯಲ್ಲಿ ನೀರು ಬರುತ್ತೆ. ಆದ್ರೆ ಇದು ವರ್ಷ ಪೂರ್ತಿ ನಮ್ಗೆ ಸಿಗೋದಿಲ್ಲ. ಕೆಲವೊಂದು ಸೀಸನ್’ಗಳಲ್ಲಿ ಮಾತ್ರ ಸಿಗುತ್ತೆ. ಹಲಸಿನ ಹಣ್ಣಿನ ವಿಚಾರದಲ್ಲಿ, ಆರೋಗ್ಯದ ಕಡೆ ಬಂದ್ರೆ ಕೆಲವೊಂದು ಅಭಿಪ್ರಾಯಗಳು ವಿಭಿನ್ನವಾಗಿವೆ. ಎನಂದ್ರೆ ಹಲಸಿನ ಹಣ್ಣು ತಿಂದ್ರೆ ಖಾಯಿಲೆ ಬರುತ್ತೆ, ಆರೋಗ್ಯ ಕೆಡುತ್ತೆ ಅನ್ನೋದು ಇದೆ.

  • ದೇವರು-ಧರ್ಮ

    ಹಿಂದೂ ಧರ್ಮದಲ್ಲಿ ಪೂಜಿಸುವ ಕಾಮಧೇನು ಗೋವಿನ ಉತ್ಪತ್ತಿಯಾಗಿರುವುದೇ ಒಂದು ರೋಚಕ.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

    ಭಾರತದಲ್ಲಿ ಹಿಂದೂ ಧರ್ಮದ ಪ್ರಕಾರ ಗೋವುಗಳಿಗೆ ತುಂಬಾ ಪೂಜ್ಯನೀಯ ಮಹತ್ವವಿದೆ. ಗೋವನ್ನು ಗೋಮಾತೆಯ ರೂಪದಲ್ಲಿ ಪೂಜಿಸಲಾಗುತ್ತದೆ. ಹಿಂದೂಗಳ ಪ್ರಕಾರ ಗೋವು ದೇವತೆಗಳು ವಾಸ ಮಾಡುವ ಸ್ಥಾನವಾಗಿದೆ. ಗೋವನ್ನು ಕಾಮಧೆನುವೆಂದು ಸಹ ಪೂಜಿಸಲಾಗುತ್ತದೆ. ಹಾಗಾದ್ರೆ ಪುರಾಣದ ಪ್ರಕಾರ ಗೋವನ ಉತ್ಪತ್ತಿ ಹೇಗಾಯ್ತು ಗೊತ್ತಾ ? ತಿಳಿಯಲು ಮುಂದೆ ಓದಿ… ಗೋವಿನ ಉತ್ಪತ್ತಿಯ ಬಗ್ಗೆ ಇರುವಕಥೆಯನ್ನು ‘ಶತಪಥ ಬ್ರಾಹ್ಮಣ’ ಗ್ರಂಥದಲ್ಲಿ ನೀಡಲಾಗಿದೆ. ದಕ್ಷ ಪ್ರಜಾಪತಿಯು ಪ್ರಾಣಿಗಳ ಸೃಷ್ಟಿಯನ್ನುಮಾಡಿದ ನಂತರ ತುಸು ಅಮೃತವನ್ನು ಸೇವಿಸಿದನು. ಆ ಅಮೃತದಿಂದ ಅವನು ಸಂತುಷ್ಟನಾದನು. ಸುರಭಿ…

  • ಸುದ್ದಿ

    ಕಾಲಿನಿಂದಲೇ ಮತದಾನ ಮಾಡಿ ಎಲ್ಲರಿಗೂ ಸ್ಪರ್ತಿಯಾದ ಲಕ್ಷ್ಮೀ…

    ಮತದಾನ ಪ್ರತಿಯೊಬ್ಬರ ಹಕ್ಕು. ಆದರೆ ಎಲ್ಲಾ ಸರಿಯಿದ್ದರೂ ತಮ್ಮ ಹಕ್ಕು ಚಲಾಯಿಸದೇ ಅವರು ಸರಿ ಇಲ್ಲ ಇವರು ಸರಿ ಇಲ್ಲ ಅಂತ ಮಾತನಾಡುವವರೇ ಹೆಚ್ಚು. ಆದರೆ ತನ್ನ ಎರಡೂ ಕೈ ಇಲ್ಲದಿದ್ದರೂ ಕಾಲಿನಿಂದಲೇ ಯುವತಿಯೊಬ್ಬರು ಮತದಾನ ಮಾಡಿದ್ದಾರೆ.  ಹೌದು, ಕಾನಹೊಸಳ್ಳಿಯ ಲಕ್ಷ್ಮಿಯವರಿಗೆ ಎರಡೂ ಕೈಗಳಿಲ್ಲ. ಆದ್ರೆ ಆ ಬಗ್ಗೆ ತಲೆಕೆಡಿಸಿಕೊಳ್ಳದ ಲಕ್ಷ್ಮಿ ಕಾಲುಗಳಿಂದಲೇ ತಮ್ಮ ಹಕ್ಕು ಚಲಾಯಿಸಿದ್ದಾರೆ. ಗುಂಡಮುಣುಗಿಯ ಮತಗಟ್ಟೆ ಸಂಖ್ಯೆ 118 ರಲ್ಲಿ ಮತ ಚಲಾಯಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಎರಡೂ ಕೈಯಿಲ್ಲದ ಲಕ್ಷ್ಮಿಯವರಿಗೆ ಚುನಾವಣಾ ಸಿಬ್ಬಂದಿ…