ರಾಜಕೀಯ

ಸುಮಲತಾ ಅಂಬರೀಷ್ ರವರಿಂದ ಸಿಎಂ ಕುಮಾರಸ್ವಾಮಿಗೆ ತಿರುಗೇಟು?ಏಕೆ ಗೊತ್ತಾ?

235

ಸದ್ಯ ರಾಜ್ಯ ರಾಜಕೀಯದ ಹಾಟ್ ಸ್ಪಾಟ್ ಆಗಿರುವ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಯ ರಾಜಕೀಯ ಚಟುವಟಿಕೆಗಳು ಬಿರುಸುಗೊಳ್ಳತೊಡಗಿವೆ.

ಸುಮಲತಾ ಅಂಬರೀಷ್ ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ಈಗಾಗಲೇ ತಿಳಿಸಿದ್ದು, ಬಿರುಸಿನ ಓಡಾಟ ನಡೆಸಿದ್ದಾರೆ. ಪುತ್ರ ನಿಖಿಲ್ ಕುಮಾರ್ ಅವರನ್ನು ಮಂಡ್ಯದಿಂದ ಕಣಕ್ಕಿಳಿಸಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಮುಂದಾಗಿದ್ದು ಪೂರ್ವ ತಯಾರಿ ನಡೆಸಿದ್ದಾರೆ.

ಈ ಚುನಾವಣೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತು ಸುಮಲತಾ ಅಂಬರೀಶ್ ಅವರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಚುನಾವಣೆ ಘೋಷಣೆಗೂ ಮೊದಲೇ ಮಂಡ್ಯದಲ್ಲಿ ರಾಜಕೀಯ ನಾಯಕರ ಪ್ರಚಾರ, ವಾಕ್ಸಮರ ಶುರುವಾಗಿದೆ.

ಅಂಬರೀಶ್ ಅವರು ಮೃತಪಟ್ಟ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಗೆ ಅವರ ಮೃತದೇಹವನ್ನು ತಂದವರು ಯಾರು? ಮಂಡ್ಯ ಜಿಲ್ಲೆಗೆ ಅಂಬರೀಶ್ ಕೊಡುಗೆ ಏನೂ ಇಲ್ಲದಿದ್ದರೂ ನಾನು ಕರ್ತವ್ಯ ಮೆರೆದಿದ್ದೇನೆ. ಅನುಕಂಪಕ್ಕೆ ಮರುಳಾಗದಿರಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎನ್ನಲಾಗಿದೆ.

ಇದಕ್ಕೆ ತಿರುಗೇಟು ನೀಡಿರುವ ಸುಮಲತಾ, ಅಂಬರೀಶ್ ಎಂದಿಗೂ ತಾವು ಮಾಡಿದ ಕೆಲಸಗಳನ್ನು ಹೇಳಿಕೊಂಡು ತಿರುಗಿಲ್ಲ. ಅವರು ಏನೆಲ್ಲಾ ಮಾಡಿದ್ದಾರೆ ಎಂಬುದು ಜನರಿಗೇ ಗೊತ್ತಿದೆ ಎಂದು ಹೇಳಿದ್ದಾರೆ. ಸುಮಲತಾ ಅಂಬರೀಶ್ ಕಾಂಗ್ರೆಸ್ ನಿಂದ ಮಂಡ್ಯ ಕ್ಷೇತ್ರದಲ್ಲಿ ಕಣಕ್ಕಿಳಿಯಲು ಬಯಸಿದ್ದು, ಒಂದು ವೇಳೆ ಟಿಕೆಟ್ ಸಿಗದಿದ್ದರೆ ಪಕ್ಷೇತರವಾಗಿ ಕಣಕ್ಕೆ ಇಳಿಯುವುದು ನಿಶ್ಚಿತವಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಕುಷ್ಠ ರೋಗಿಯ ಅನ್ನ, ಪಿಂಚಣಿ ಕಿತ್ತುಕೊಂಡ ಆಧಾರ್..! ಓದಿ ಈ ಮನಕಲುಕುವ ಸ್ಟೋರಿ…

    ಆಧಾರ್ ಕಾರ್ಡ್ ಎಂಬ ಸಾರ್ವತ್ರಿಕ ಗುರುತಿನ ಚೀಟಿ, ಒಂದೆಡೆ ಅಕ್ರಮ ನುಸುಳುಕೋರರನ್ನು ತಡೆಗಟ್ಟಲು, ಸರ್ಕಾರದ ಯೋಜನೆಗಳು ನೈಜ ಫಲಾನುಭವಿಗಳಿಗೆ ಸಿಗುವಂತೆ ಮಾಡಲು ಸಹಕಾರಿಯಾಗುತ್ತಿರುವ ಹೊತ್ತಲ್ಲೇ, ಇನ್ನೊಂದೆಡೆ ಹಲವು ಬಡವರ ಪಾಲಿಗೆ ಆಧಾರ್ ಕಾರ್ಡ್ ಒಂದು ಶಾಪವಾಗಿ ಪರಿಣಮಿಸಿದೆ!

  • ಆರೋಗ್ಯ

    ‘ಮುಟ್ಟಿದರೆ ಮುನಿ’ ಗಿಡ ಈ ಔಷಧೀಯ ಗುಣಗಳನ್ನು ಹೊಂದಿದೆ!

    ನಾವು ಸಣ್ಣವರಿದ್ದಾಗ ಹೊಲಗಳಲ್ಲಿ, ತೋಟಗಳಲ್ಲಿ ಬೆಳೆಯುವ ಮುಟ್ಟಿದರೆ ಮುನಿ ಗಿಡಗಳನ್ನು ಮುಟ್ಟಿ,ಮುಟ್ಟಿ ಅದು ಮುದುರಿಕೊಳ್ಳುವುದನ್ನು ನೋಡಿ ಭಯವೂ ಆಗ್ತಾಯಿತ್ತು, ಮತ್ತೆ ತುಂಬಾ ಮಜವು ಸಿಗ್ತಾ ಇತ್ತು. ಆ ಗಿಡದ ಬಗ್ಗೆ ಅಸ್ಟು ಬಿಟ್ಟರೆ ಬೇರೆ ನಮ್ಗೆ ಗೊತ್ತಿರಲಿಲ್ಲ.

  • ಜ್ಯೋತಿಷ್ಯ

    ಮಂಗಳವಾರದ ನಿಮ್ಮ ದಿನ ಭವಿಷ್ಯ ಮಂಗಳವೋ ಅಮಂಗಳವೋ ನೋಡಿ ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 ಮೇಷ(4 ಡಿಸೆಂಬರ್, 2018) ನೀವು ಏನು ಮಾಡಬೇಕೆಂದುಆಜ್ಞೆ ನೀಡಿದಲ್ಲಿ ನಿಮ್ಮ ಪ್ರೇಮಿಯ ಜೊತೆ ಗಂಭೀರ ಸಮಸ್ಯೆಗಳನ್ನು ಹೊಂದುತ್ತೀರಿ. ನೀವು ಇಂದು ಪ್ರೀತಿಮಾಡುವ ಅವಕಾಶವನ್ನುಕಳೆದುಕೊಳ್ಳದಿದ್ದಲ್ಲಿ,…

  • ಸಿನಿಮಾ

    ಎಲ್ಲಾ ಕಾಲಕ್ಕೂ ಬ್ಲಾಕ್ ಬಸ್ಟರ್ ಚಿತ್ರವಾಗಿರುವ ‘ಓಂ’ನಲ್ಲಿ ಅವಕಾಶ ಕೊಟ್ಟಿದ್ದ ಉಪೇಂದ್ರರವರನ್ನೇ, ನಟಿ ಪ್ರೇಮಾ ದ್ವೇಷ ಮಾಡಿದ್ದು ಏಕೆ ಗೊತ್ತಾ.!?

    ‘ಓಂ’ ಚಿತ್ರ ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆದ ಚಿತ್ರವಾಗಿದೆ. ಶಿವರಾಜ್ ಕುಮಾರ್ ಅಭಿನಯದ ಉಪೇಂದ್ರ ನಿರ್ದೇಶನದ ಈ ಚಿತ್ರದಲ್ಲಿ ಪ್ರೇಮಾ ಅಭಿನಯಿಸಿದ್ದಾರೆ. ಶಿವಣ್ಣ ಜೊತೆಗೆ ‘ಸವ್ಯಸಾಚಿ’ ಚಿತ್ರದಲ್ಲಿ ಅಭಿನಯಿಸಿದ್ದ ಪ್ರೇಮಾ ‘ಓಂ’ ಚಿತ್ರದಲ್ಲಿ ನಾಯಕಿಯಾಗಿದ್ದಾರೆ. ಆದರೆ, ಈ ಚಿತ್ರದ ಚಿತ್ರೀಕರಣದ ವೇಳೆ ಉಪೇಂದ್ರ ಮೇಲೆ ಅವರು ಕೋಪ ಮಾಡಿಕೊಂಡಿದ್ದರು. ‘ವೀಕೆಂಡ್ ವಿತ್ ರಮೇಶ್’ ಶೋನಲ್ಲಿ ಉಪೇಂದ್ರ ಮೇಲೆ ಮುನಿಸಿಕೊಂಡಿದ್ದ ಕಾರಣವನ್ನು ಪ್ರೇಮಾ ಹೇಳಿದ್ದಾರೆ. ಮೊದಲ ಸಿನಿಮಾ ಮುಗಿದ ಬಳಿಕ ‘ಓಂ’ ಚಿತ್ರಕ್ಕೆ ಆಯ್ಕೆಯಾದೆ. ಉಪೇಂದ್ರ ಅವರಿಗೆ ಹೆಣ್ಣು ಮಕ್ಕಳ…

  • ಆರೋಗ್ಯ

    ಈ ಜ್ಯೂಸ್‌ ಅನ್ನು ಕುಡಿದರೆ ಸಾಕು ಕೆಮ್ಮು ಮಂಗಮಾಯ! ಈ ಉಪಯುಕ್ತ ಮಾಹಿತಿ ನೋಡಿ.

    ಈಗ ಚಳಿಗಾಲ. ಅಂದರೆ ಸಣ್ಣ ಪುಟ್ಟ ಕಾಯಿಲೆಗಳಿಗೆ ಆಹ್ವಾನ ಕೊಡುವ ಕಾಲ. ನೀವು ಬೇಡ ಎಂದರೂ ಅವುಗಳು ಮಾತ್ರ ನಿಮ್ಮನ್ನು ಬಿಡುವುದಿಲ್ಲ. ವರ್ಷ ಪೂರ್ತಿ ಈ ಸಮಯಕ್ಕಾಗಿಯೇ ಹೊಂಚು ಹಾಕಿ ಕಾದು ಕುಳಿತಿರುತ್ತವೆ. ಅಕ್ಟೋಬರ್, ನವೆಂಬರ್ ತಿಂಗಳು ಪ್ರಾರಂಭವಾಗುತ್ತಿದ್ದ ಹಾಗೆ ಮೈಯಲ್ಲಿ ಬೆವರು ಕಡಿಮೆಯಾಗಿ ಮೂಗಿನಲ್ಲಿ ಶೀತ ದ್ರವ ಹರಿಯಲು ಪ್ರಾರಂಭವಾಗುತ್ತದೆ. ಇದನ್ನು ಹಾಗೇ ಬಿಟ್ಟರೆ ಒಂದರ ಹಿಂದೆ ಒಂದು ಕೊಂಡಿಯಂತೆ ಶೀತ, ಕೆಮ್ಮು, ಜ್ವರ ಹೀಗೆ ಒಂದೊಂದಾಗಿ ಬಂದು ಅಂಟಿಕೊಳ್ಳುತ್ತವೆ. ಅಷ್ಟು ದಿನಗಳವರೆಗೆ ಬೆಳಗ್ಗೆ ಎದ್ದು…