ರಾಜಕೀಯ

ಸಿದ್ದರಾಮಯ್ಯನವರು ಜೆಡಿಎಸ್ ಬಿಟ್ಟು ಬರಲು ಕಾರಣವೇನು…?ರೆಬೆಲ್ ಶಾಸಕ ಬಾಲಕೃಷ್ಣರವರು ಕೊಟ್ಟ ಹೇಳಿಕೆ..!

137

ಜೆಡಿಎಸ್ ನ ರೆಬೆಲ್ ಶಾಸಕರಲ್ಲಿ ಗುರುತಿಸಿಕೊಂಡಿರುವ ಮಾಗಡಿ ಶಾಸಕ ಬಾಲಕೃಷ್ಣ ರವರು ಎಂದು ಮಾಜಿ ಪ್ರಧಾನಿ ದೇವೇಗೌಡ್ರು ಮತ್ತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಲಕೃಷ್ಣ ರವರನ್ನು ಕುಮಾರಸ್ವಾಮಿ ರವರು ಪಕ್ಷದ್ರೋಹಿ ಎಂದು ಎಚ್​ಡಿಕೆ ಆರೋಪವಾರಿಸಿದರು…

ಈ ಆರೋಪಕ್ಕೆ ಉತ್ತರಿಸಿದ ಬಾಲಕೃಷ್ಣ ರವರು ಜೆಡಿಎಸ್​ನಿಂದ ಹೊರಬಂದಿರೋದು ಎಲ್ಲರೂ ಜನತಾ ಪರಿವಾರದವರು. ಅವರನ್ನೆಲ್ಲಾ ಸರಿಯಾಗಿ ಗೌರವದಿಂದ ನಡೆಸಿಕೊಂಡಿದಿದ್ದರೆ ಯಾರೂ ಪಕ್ಷ ಬಿಡುತ್ತಿರಲಿಲ್ಲ, ಎಂದು ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡ ಮತ್ತು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಬಾಲಕೃಷ್ಣ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಇನ್ನು ಜೆಡಿಎಸ್ ಪಕ್ಷದ ಹಳೆ ವಿಚಾರದ ಬಗ್ಗೆ ಮಾತನಾಡಿದ ಇವರು, ಸದೃಢವಾಗಿರುವವರನ್ನು, ಪಕ್ಷ ಕಟ್ಟಿದವರನ್ನು, ಹಾಗೂ ಹೆಚ್ಚು ಮಾತನಾಡುವವರನ್ನು ಹಂತಹಂತವಾಗಿ ಹೊರಗೆ ಹಾಕಿದ್ರು. ಜನತಾದಳದ ನಾಯಕರನ್ನು ಒಟ್ಟಿಗೆ ಇಟ್ಟುಕೊಂಡಿದಿದ್ರೆ ಬೇರೆಯವರನ್ನು ಆಶ್ರಯಿಸಿ ಮುಖ್ಯಮಂತ್ರಿಯಾಗುವ ಸನ್ನಿವೇಶ ಬರುತ್ತಿರಲಿಲ್ಲ. ಸಿದ್ದರಾಮಯ್ಯ, ದೇಶಪಾಂಡೆಯಂಥ ನಾಯಕರನ್ನು ಸರಿಯಾಗಿ ನಡೆಸಿಕೊಂಡಿದ್ರೆ ಇಷ್ಟು ಹೊತ್ತಿಗಾಗಲೇ 2-3 ಬಾರಿ ಜನತಾ ದಳ ಅಧಿಕಾರಕ್ಕೆ ಬರುತ್ತಿತ್ತು. ಈ ಬಗ್ಗೆ ಕುಮಾರಸ್ವಾಮಿ ಮತ್ತು ದೇವೇಗೌಡರು ಅವರೇ ಕುಳಿತುಕೊಂಡು ಆಲೋಚನೆ ಮಾಡಲಿ ಎಂದು ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಇನ್ನು ಬಿಜೆಪಿ ಅವರ ಪರಿವರ್ತನಾ ಬಗ್ಗೆ ಮಾತನಾಡಿದ ಇವರು, ಮಾಗಡಿಯಲ್ಲಿ ನಡೆದ ಬಿಜೆಪಿ ಪರಿವರ್ತನಾ ರ್ಯಾಲಿ ಏನೂ ವಿಶೇಷತೆ ಇಲ್ಲ. ಇಲ್ಲಿ ಬಿಜೆಪಿಗೆ ಜನಬೆಂಬಲ ಇಲ್ಲ ಎಂದು ಹೇಳಿದ್ದಾರೆ.ಹೆಚ್ಚು ಎಂದರೆ ಬೆರಳಿಣಿಕೆಯ ಮತ ಬರಬಹುದು. ಆದರೆ, ಬಿಜೆಪಿ ಗೆಲ್ಲಲು ಅಸಾಧ್ಯ ಎಂದು ಶಾಸಕ ಬಾಲಕೃಷ್ಣ ತಿಳಿಸಿದ್ದಾರೆ. ಸಿ ಪಿ ಯೋಗೇಶ್ವರ್ ರವರು ಚುನಾವಣೆಯಲ್ಲಿ ಸ್ಪರ್ದಿಸಬಹುದು ಆದರೆ ಗೆಲ್ಲುವುದು ಅಸಾಧ್ಯದ ಮಾತು ಎಂದು ತಿಳಿಸಿದರು. ಇನ್ನು ಸದ್ಯದಲ್ಲೇ ನಾನು ಹಾಗು ಉಳಿದ ರೆಬೆಲ್ ಶಾಸಕರು ಎಲ್ಲರು ಕೂಡ, ಬಜೆಟ್ ಅಧಿವೇಶನ ಮುಗಿದ ಬಳಿಕ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದೇವೆ ಎಂದು ತಿಳಿಸಿದರು.

ಸಿದ್ದರಾಮಯ್ಯ ರವರು ಪಕ್ಷದಿಂದ ಹೊರಬಂದಿದ್ದು ಇದೇ ಕಾರಣಕ್ಕೆ…

ಈಗೆ ಕುಮಾರಸ್ವಾಮಿ ಹಾಗು ದೇವೇಗೌಡ ವಿರುದ್ಧ ಆಕ್ರೋಶವ್ಯಕ್ತ ಪಡಿಸಿರುವ ಬಾಲಕೃಷ್ಣ ರವರು, ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಕೂಡ ಇದೇ ಕಾರಣಕ್ಕೆ, ನಮ್ಮಂತೆಯೇ ಪಕ್ಷದಿಂದ ಹೊರಬಂದಿರುವುದು ಎಂದು ತಿಳಿಸಿದ್ದಾರೆ. ಇಂದು ಏನಾದರು ಅವರು ಪಕ್ಷದಲ್ಲಿದ್ದಿದ್ದರೆ, ಇಂದು ಪಕ್ಷ ಇನ್ನು ಬೆಳೆಯುತಿತ್ತು. ಮೊದಲು ನಾಯಕರನ್ನು ಹೇಗೆ ನಡೆಸುಕೊಳ್ಳಬೇಕೆಂದು ಕುಮಾರಸ್ವಾಮಿ ಹಾಗು ದೇವೇಗೌಡ್ರು ಅರಿಯಲಿ ಎಂದು ತಮ್ಮೆಲ್ಲ ಆಕ್ರೋಶವನ್ನು ವ್ಯಥಾ ಪಡಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಮೊಬೈಲ್ ನಂಬರ್ ಬದಲಿಸುವ ಮುನ್ನ ಹೆಚ್ಚರ!..ಈ ಸುದ್ದಿ ತಿಳಿದರೆ ನಡುಕ ಹುಟ್ಟಿಸುತ್ತಿದೆ!

    ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ನಿಮ್ಮ ಮೊಬೈಲ್ ನಂಬರ್ ಅನ್ನು ಬದಲಾಯಿಸುವ ಮುನ್ನ ಈ ಲೇಖನವನ್ನು ಓದಲೇಬೇಕು. ಏಕೆಂದರೆ, ಬ್ಯಾಂಕ್ ಖಾತೆಗೆ ಲಿಂಕ್ ಆಗಿದ್ದ ಮೊಬೈಲ್ ನಂಬರ್ ಅನ್ನು ಬದಲಾಯಿಸಿದ ವ್ಯಕ್ತಿಯೋರ್ವರು ತಮ್ಮದೇ ತಪ್ಪಿನಿಂದ ಹಣ ಕಳೆದುಕೊಂಡಿರುವ ಘಟನೆ ನಡೆದಿದೆ. ಕೊಡಗು ಜಿಲ್ಲೆ ಕುಶಾಲನಗರ ಮೂಲದ ದುಬೈ ನಿವಾಸಿ ಅಶ್ರಫ್ ಎಂಬುವವರು ತನ್ನ ಬ್ಯಾಂಕ್ ಖಾತೆ ಮತ್ತು ಪೇಟಿಎಂ ವ್ಯಾಲೆಟ್​ಗೆ ಲಿಂಕ್ ಮಾಡಿದ್ದ ಮೊಬೈಲ್ ನಂಬರನ್ನು ಇತ್ತೀಚೆಗೆ ಸ್ಥಗಿತ ಮಾಡಿ ಹಣ ಕಳೆದುಕೊಂಡಿದ್ದಾರೆ. ಹೌದು, ಅಶ್ರಫ್ ಅವರು…

  • ಹಣ ಕಾಸು

    10 ರೂಪಾಯಿ ನಾಣ್ಯವನ್ನು ಹೊಂದಿರುವವರಿಗೆ ಇಲ್ಲಿದೆ ಗುಡ್ ನ್ಯೂಸ್..!ತಿಳಿಯಲು ಈ ಲೇಖನ ಓದಿ..

    10 ರೂಪಾಯಿ ನಾಣ್ಯವನ್ನು ರದ್ದು ಮಾಡಿರದಿದ್ದರೂ, ಅನೇಕ ಕಡೆಗಳಲ್ಲಿ ವರ್ತಕರು, ಜನ ಸಾಮಾನ್ಯರು ಇವುಗಳನ್ನು ಸ್ವೀಕರಿಸಲು ಹಿಂದೇಟು ಹಾಕ್ತಾರೆ.ಇವೇ ಮೊದಲಾದ ಕಾರಣಗಳಿಂದಾಗಿ ಬ್ಯಾಂಕ್ ಗಳಲ್ಲಿ ನಾಣ್ಯ ಮೇಳ ನಡೆಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ.) ವಾಣಿಜ್ಯ ಬ್ಯಾಂಕ್ ಗಳಿಗೆ ಸೂಚನೆ ನೀಡಿದೆ.

  • ಸುದ್ದಿ

    ನಗರಕ್ಕೆ ಬಂದಿದೆ ಲೂಸಿಯಾ ಮಾತ್ರೆ! ಟೆಕ್ಕಿ ಮತ್ತು ಸ್ಟುಡೆಂಟ್​​ಗಳೇ ಇವರ ಟಾರ್ಗೆಟ್​​!!

    ಸ್ಯಾಂಡಲವುಡ್​ನಲ್ಲಿ ಹೊಸತನದಿಂದ ಗೆದ್ದಿದ್ದ ಚಿತ್ರ ಲೂಸಿಯಾ ಎಲ್ಲರ ಗಮನವನ್ನು ಸೆಳೆದಿದ್ದದ್ದು ಆ ಚಿತ್ರದಲ್ಲಿ ಹೀರೋ ಸತೀಶ್ ತೆಗೆದುಕೊಳ್ಳುತ್ತಿದ್ದ ಮಾತ್ರೆಯಿಂದ. ಇದೀಗಾ ಅಂತಹದ್ದೇ ಮಾತ್ರೆ ಬೆಂಗಳೂರಿಗೆ ಕಾಲಿಟ್ಟಿದ್ದು, ಟೆಕ್ಕಿ ಮತ್ತು ಕಾಲೇಜ್ ಸ್ಟೂಡೆಂಟ್‌ಗಳನ್ನು ಗಮನದಲ್ಲಿಟ್ಟುಕೊಂಡು ಈ ಗುಳಿಗೆ ಮಾರಾಟ ನಡೆಯುತ್ತಿದೆ ಎನ್ನಲಾಗಿದೆ. ಎಂತಹ ಮನುಷ್ಯನಾದರೂ ಕನಿಷ್ಠ 8-10 ಗಂಟೆಗಳ ಕಾಲ ಅಮಲಿನಲ್ಲಿ ಇಡಬಹುದಾದ ಈ ಮಾತ್ರೆ ಮಾದಕ ವಸ್ತುಗಳನ್ನು ಮೀರಿಸುವಷ್ಟು ಶಕ್ತಿ ಹೊಂದಿದೆ. ವಿದೇಶದಿಂದ ಬರುವ ಈ ಟ್ಯಾಬ್ಲೆಟ್ ಮೂಲ ಬರ್ಮಾ. ಒಂದು ಟ್ಯಾಬ್ಲೆಟ್‌ನ ಬೆಲೆ 1000 ರೂಪಾಯಿ….

  • ಜ್ಯೋತಿಷ್ಯ

    ದಿನ ಭವಿಷ್ಯ ಸೋಮವಾರ, ಈ ದಿನದ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ತಿಳಿಯಿರಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(11 ಫೆಬ್ರವರಿ, 2019) ನಿಮ್ಮ ಆತ್ಮವಿಶ್ವಾಸಭರಿತ ನಿರೀಕ್ಷೆಗಳು ನಿಮ್ಮ ಭರವಸೆಗಳು ಮತ್ತು ಆಸೆಗಳನ್ನು ಸಾಕ್ಷಾತ್ಕಾರಗೊಳಿಸಲು ಸಹಾಯ ಮಾಡುತ್ತವೆ….

  • ವಿಶೇಷ ಲೇಖನ

    ಒಂದೇ ಒಂದು ಮೋದಿಯ ಫೋನ್ ಕಾಲ್’ಗೆ ಈ ದೇಶದ ಅಧ್ಯಕ್ಷ ಯೆಮನ್ ಮೇಲಿನ ಯುದ್ದ ನಿಲ್ಲಿಸಿದ..!

    ನರೇಂದ್ರ ಮೋದಿ ಭಾರತದ ನಾಯಕರಾದ ನಂತರ ಬೇರೆ ದೇಶಗಳು ಭಾರತವನ್ನು ನೋಡುವ ರೀತಿ ಈಗ ಬದಲಾಗಿದೆ. ಭಾರತವನ್ನು ತಿರುಕರ ದೇಶ, ಹಾವಾಡಿಗರ ದೇಶ ಎಂದೆಲ್ಲಾ ಹೀಯಾಳಿಸುತ್ತಿದ್ದ ಕಾಲವೊಂದಿತ್ತು. ಆದ್ರೆ ಈಗ ಹಾಗಿಲ್ಲ. ಏಕೆಂದ್ರೆ ಹಿಗಂತೂ ಭಾರತ ಅಭಿವೃದ್ದಿಯತ್ತ ವೇಗವಾಗಿ ದಾಪುಗಾಲಿಡುತ್ತಿದೆ. ಭಾರತದ ನಾಯಕನ ಮಾತಿಗೆ ಬೇರೆ ದೇಶಗಳು ಕೇಳುವ ಹಾಗಿದೆ.

  • ಸುದ್ದಿ

    ದಂಡ ಪಾವತಿಸಿದವರಿಗೆ ಉಚಿತವಾಗಿ ಹೆಲ್ಮೆಟ್ ವಿತರಿಸಿ ಪ್ರೋತ್ಸಾಹಿಸಿದ ಪೊಲೀಸ್…!

    ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಜಾರಿಗೆ ತಂದಾಗಿನಿಂದಲೂ ಸಂಚಾರ ನಿಯಮ ಉಲ್ಲಂಘನೆಗೆ ಮಾಡಿದವರಿಗೆ ದಂಡ ವಿಧಿಸುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ಕೆಲ ದಂಡದ ಮೊತ್ತ 80 ಸಾವಿರ ರೂ. ತಲುಪಿದ್ದು ಇದೆ. ಮೋಟಾರು ವಾಹನ ಕಾಯಿದೆ (ತಿದ್ದುಪಡಿ) 2019, ಜಾರಿಗೆ ಬಂದ ದಿನದಿಂದಲೂ ದೇಶಾದ್ಯಂತ ಸಂಚಾರ ಶಿಸ್ತು ಪಾಲನೆ ಮಾಡದ ಸವಾರರಿಗೆ ಭಾರೀ ಮೊತ್ತದ ದಂಡ ಪೀಕಿಸುತ್ತಿರುವ ಸುದ್ದಿಗಳೇ ಎಲ್ಲೆಲ್ಲೂ. ಇವುಗಳ ನಡುವೆ ಒಡಿಶಾ ರಾಜಧಾನಿ ಭುವನೇಶ್ವರದ…