ಸುದ್ದಿ

ಸಾಲು ಸಾಲು ರಜೆ – 11 ದಿನ ಬ್ಯಾಂಕ್ ಬಾಗಿಲು ಬಂದ್ : ಬ್ಯಾಂಕ್ ಗ್ರಾಹಕರಿಗೊಂದು ಮುಖ್ಯ ಮಾಹಿತಿ….!

70

ಅಕ್ಟೋಬರ್ ನಲ್ಲಿ ಹಬ್ಬದ ಕಾರಣ ರಜೆ ಇರುವುದರಿಂದ ಬ್ಯಾಂಕ್ ವಹಿವಾಟುಗಳಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಅಕ್ಟೋಬರ್ ತಿಂಗಳಿನಲ್ಲಿ ಬ್ಯಾಂಕ್ ಗಳಿಗೆ ಬರೋಬ್ಬರಿ 11 ದಿನ ರಜೆ ಇದೆ. ದಸರಾ ನಂತರ ದೀಪಾವಳಿ ಇರುವುದರಿಂದ ಬ್ಯಾಂಕ್ 11 ದಿನ ಕೆಲಸ ಮಾಡುವುದಿಲ್ಲ.

ಆರ್.ಬಿ.ಐ. ವತಿಯಿಂದ ಬ್ಯಾಂಕ್ ರಜಾ ದಿನದ ಪಟ್ಟಿ ಬಿಡುಗಡೆ ಮಾಡಲಾಗಿದೆ. ಅಕ್ಟೋಬರ್ 2 ರಂದು ಗಾಂಧಿ ಜಯಂತಿ. ಅಕ್ಟೋಬರ್ 6 ಭಾನುವಾರ. ಅಕ್ಟೋಬರ್ 7 ನವಮಿ. ಅಕ್ಟೋಬರ್ 8 ರಂದು ದಶಮಿ. ಹಾಗಾಗಿ 3 ದಿನ ಬ್ಯಾಂಕ್ ಬಾಗಿಲು ಮುಚ್ಚಲಿದೆ.

ಇನ್ನು ಅಕ್ಟೋಬರ್ 12 ಎರಡನೇ ಶನಿವಾರ. ಹಾಗಾಗಿ ರಜೆ. ಅಕ್ಟೋಬರ್ 13 ಭಾನುವಾರ. ಅಕ್ಟೋಬರ್ 20 ಮತ್ತೆ ಭಾನುವಾರ. ನಾಲ್ಕನೇ ಶನಿವಾರ ಹಾಗೂ ಭಾನುವಾರ ಅಕ್ಟೋಬರ್ 26 ಮತ್ತು 27ಕ್ಕೆ ಬಂದಿದೆ. ಹಾಗಾಗಿ ಮತ್ತೆರಡು ದಿನ ಬ್ಯಾಂಕ್ ರಜೆ.

ಅದೇ ದಿನ ದೀಪಾವಳಿ ಬಂದಿರುವ ಕಾರಣ ಅದಕ್ಕೆ ವಿಶೇಷ ರಜೆಯಿಲ್ಲ. ಆದರೆ, ಕೆಲವು ರಾಜ್ಯಗಳಲ್ಲಿ ಗೋವರ್ದನ ಪೂಜೆಗೆಂದು ಅಕ್ಟೋಬರ್ 28 ರಂದು ರಜೆ ಇದೆ. ಅಕ್ಟೋಬರ್ 29 ರಂದು ಬಲಿಪಾಡ್ಯಮಿ ಇರುವ ಕಾರಣ ಕೆಲ ರಾಜ್ಯಗಳ ಬ್ಯಾಂಕ್ ಬಂದ್ ಆಗಿರಲಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ