ಉಪಯುಕ್ತ ಮಾಹಿತಿ

ಸಾಮಾನ್ಯವಾಗಿ ಬಾಳೆ ಬಾಳೆಹಣ್ಣಿನ ಬಗ್ಗೆ ಎಲ್ಲರಿಗೂ ಗೊತ್ತು..ಆದರೆ ಬಾಳೆ ಸಿಪ್ಪೆಯ ಉಪಯೋಗಗಳ ಬಗ್ಗೆ ಗೊತ್ತಾ..?

602

ನಾವು ಸಾಮಾನ್ಯವಾಗಿ ಬಾಳೆ ಹಣ್ಣನ್ನು ತಿಂದು ಸಿಪ್ಪೆಯನ್ನು ಬಿಸಾಕುತ್ತೆವೆ.ಆದರೆ ಬಾಳೆಹಣ್ಣಿನ ಸಿಪ್ಪೆಯಿಂದ ಆಗೋ ಉಪಯೋಗ ತಿಳಿದುಕೊಂಡರೆ ನೀವು ಸಿಪ್ಪೆಯನ್ನು ಎಸೆಯುವುದಿರಲಿ ಅದನ್ನೇ ಕಾಪಾಡಿಕೊಳ್ಳುತ್ತಿರ..ಹೇಗೆ ಉಪಯೋಗ ಅನ್ನೋ ಕುತೂಹಲವೇ ಇದನ್ನು ಓದಿ

1.ಮುಖದ ಮೇಲಿನ ಗುಳ್ಳೆಗೆ ನಾರುಹುಣ್ಣಿಗೆ:-

 

ನಿಮ್ಮ ಮುಖದ ಮೇಲೆ ಮೊಡವೆ ಕಲೆಗಳು,ಸಿಬ್ಬಿನ ಕಲೆಗಳು ನಾರು ಹುಣ್ಣು ಆಗಿದ್ದು ನಿಮ್ಮ ಮುಖದ ಚಂದವನ್ನು ಕಡಿಮೆ ಮಾಡಿಸಿವೆಯೇ ಚಿಂತೆ ಬೇಡ
ನೀವು ಮಾಡಬೇಕಾಗಿರೋದು ಇಷ್ಟೇ ಬಾಳೆಹಣ್ಣಿನ ಸಿಪ್ಪೆಯಿಂದ ಪೂರ್ತಿ ಮುಖವನ್ನು ಮಸಾಜ್ ರೀತಿಯಲ್ಲಿ ಮಾಡುತ್ತಾ ಬನ್ನಿ ಹೀಗೆ 2  ವಾರಗಳ ಕಾಲ ಮಾಡಿ ಆಮೇಲೆ ಬದಲಾವಣೆ ನೋಡಿ.

2.ಬೂಟ್ ಪಾಲಿಷ್:-

 

ಎಲ್ಲೋ ಹೊರಟಿರುತ್ತೀರ.. ಬೂಟ್ ಪಾಲಿಷ್ ಇರೋದಿಲ್ಲ ಆಗ ಉಪಯೋಗಕ್ಕೆ ಬರುತ್ತೆ ನೋಡಿ ಬಾಳೆಹಣ್ಣಿನ ಸಿಪ್ಪೆ.ಅದರಿಂದ ಒಮ್ಮೆ ಶೂ ತುಂಬಾ ಉಜ್ಜಿಕೊಳ್ಳಿ ನಂತರ ಬಟ್ಟೆಯಿಂದ ಸ್ವಚ್ಛಗೊಳಿಸಿ ಪಾಲಿಷ್ ನಿಂದ ಮಾಡಿದಕ್ಕಿಂತ ಚನ್ನಾಗಿ ನಿಮ್ಮ ಶೂ ಹೊಳೆಯುತ್ತದೆ.

3.ಹಲ್ಲನ್ನು ಬಿಳಿಯಾಗಿಸಲು:-

ನೀವು ದಿನಾ ಹಲ್ಲುಜ್ಜುತ್ತಿರಾ ಅಲ್ವಾ.. ಆದರೆ ಕೆಲವೊಮ್ಮೆ ಹಲ್ಲು ಹಳದಿ ಇರುತ್ತದೆ.ಇದಕ್ಕೆ ಸುಲಭವಾದ ಪರಿಹಾರವಿದೆ.ಬಾಳೆಹಣ್ಣಿನ ಸಿಪ್ಪೆಯನ್ನು ಹಲ್ಲಿನ ಮೇಲೆ ಉಜ್ಜಿ ಹೀಗೆ 2 ವಾರ ಮಾಡಿ.ಮತ್ತೊಮ್ಮೆ ನಿಮ್ಮ ಹಲ್ಲು ಹಳದಿಯಾಗದು.

4.ಬಾಳೆಹಣ್ಣಿನ ಸಿಪ್ಪೆ ಜೂಸ್:-

ಸಾಮಾನ್ಯವಾಗಿ ಹಣ್ಣುಗಳ ಜ್ಯೂಸ್ ಮಾಡಿ ಕುಡಿದಿರುತ್ತೀರ  ಆದರೆ ಬಾಳೆಹಣ್ಣಿನ  ಸಿಪ್ಪೆಯ ಜ್ಯೂಸ್ ಗೊತ್ತಾ..? ಅತೀ ಸುಲಭ
ಬಾಳೆಹಣ್ಣಿನ ಸಿಪ್ಪೆ,ಬಿಸಿನೀರು ಬೆರೆಸಿ ಮಿಕ್ಸಿ ಮಾಡಿ ಕುಡಿಯಿರಿ.ಬಾಳೆಹಣ್ಣಿನ ಸಿಪ್ಪೆಯಲ್ಲಿ ದೇಹಕ್ಕೆ ಬೇಕಾದ ನಾರಿನ ಅಂಶ ಹೆಚ್ಚಿರುತ್ತದೆ ಅದು ದೊರೆಯುತ್ತದೆ. ಬಾಳೆಹಣ್ಣಿನ ಸಿಪ್ಪೆಯ ಜ್ಯೂಸ್ ದಿನನಿತ್ಯ ಸೇವಿಸುವುದರಿಂದ ಮೂಳೆಗಳಿಗೂ ಶಕ್ತಿ ದೊರೆಯುತ್ತದೆ.

5.ನೋವು ಉಪಶಮನಕ್ಕೆ ಸಹಾಯಕ:-

ನಿಮ್ಮ ದೇಹದ ಒಳಗೆ ಹಾಗೂ ಹೊರಗೆ ಯಾವ ಭಾಗದಲ್ಲಾದರೂ ನೋವು ಇರಲಿ ಬಾಳೆಹಣ್ಣಿನ ಸಿಪ್ಪೆಯನ್ನು ತೆಗೆದುಕೊಂಡು ನೋವಾದ ಭಾಗಕ್ಕೆ ಉಜ್ಜಿಕೊಳ್ಳಿ.ಕ್ಷಣಮಾತ್ರದಲ್ಲಿ ನೋವಿನ ಉಪಶಮನವಾಗುವುದು

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ