ಉಪಯುಕ್ತ ಮಾಹಿತಿ

ಸಾಗರದ ಪಾಲಾಗಲಿದೆಯೇ ಮಂಗಳೂರು, ಮುಂಬೈ..!ತಿಳಿಯಲು ಈ ಲೇಖನ ಓದಿ ..

391

ಮಂಗಳೂರು ಹಾಗೂ ಮುಂಬೈಗೆ ಭಾರೀ ಅಪಾಯವೊಂದು ಕಾದಿದೆ. ಸಮುದ್ರ ತೀರಕ್ಕೆ ಎರಡೂ ನಗರಗಳು ಹತ್ತಿರದಲ್ಲಿರುವುದರಿಂದ ಅಪಾಯದ ಅಂಚಿನಲ್ಲಿದೆ. ಅಂಟಾರ್ಕಿಟಿಕಾದಲ್ಲಿ ಹಿಮ ಕರುಗುತ್ತಿರುವುದರಿಂದ ಸಮುದ್ರ ಮಟ್ಟ ದಿನೇ ದಿನೇ ಹೆಚ್ಚಾಗುತ್ತಿದ್ದು ಸಮುದ್ರದ ಅಕ್ಕಪಕ್ಕ ಇರುವ ನಗರಗಳಿಗೆ ಅಪಾಯ ಕಾದಿದೆ ಎಂದು ನಾಸಾ ಹೊರ ತಂದಿರುವ ಡೇಟಾ ಪ್ರಕಾರ ನ್ಯೂಯಾರ್ಕ್ ಪತ್ರಿಕೆ ವರದಿ ಮಾಡಿದೆ.

ಜಾಗತಿಕ ತಾಪಮಾನ ಏರಿಕೆಯ ಪರಿಣಾಮ ದಿಂದಾಗಿ ಮೊದಲು ಮುಳುಗುವ ನಗರಗಳನ್ನು ಪತ್ತೆಹಚ್ಚುವುದಕ್ಕಾಗಿಯೇ ನಾಸಾ ಗ್ರೇಡಿಯಂಟ್‌ ಫಿಂಗರ್‌ಪ್ರಿಂಟ್‌ ಮ್ಯಾಪಿಂಗ್‌ (ಜಿಎಫ್ಎಂ) ಎಂಬ ಸಾಧನ ರೂಪಿಸಿದೆ. ಇದರಲ್ಲಿ ಜಗತ್ತಿನ ಪ್ರತಿ ಯೊಬ್ಬರು ತಮ್ಮ ತಮ್ಮ ನಗರಗಳ ಮುಳುಗಡೆ ಸ್ಥಿತಿ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಇದನ್ನು ಸಂಶೋಧಿಸಿದ ತಂಡದಲ್ಲಿ ಭಾರತದ ವಿಜ್ಞಾನಿ ಡಾ| ಸುರೇಂದ್ರ ಅಧಿಕಾರಿ ಅವರೂ ಇದ್ದು, ನಗರಗಳಿಗೆ ಇರುವ ಅಪಾಯದ ಬಗ್ಗೆ ಸ್ವತಃ ಅವರೇ ಎಚ್ಚರಿಕೆ ನೀಡಿದ್ದಾರೆ.

ನಾಸಾ ವಿಜ್ಞಾನಿಗಳು ಜಿಎಫ್ಎಂ ಎನ್ನುವ ಹೊಸ ಉಪಕರಣವನ್ನು ಕಂಡು ಹಿಡಿದಿದ್ದು, ಈ ಉಪಕರಣ ಹೆಚ್ಚಾಗುತ್ತಿರುವ ಸಮುದ್ರ ಮಟ್ಟವನ್ನು ಪತ್ತೆ ಹಚ್ಚಿದೆ. ಹಿಮ ಕರುಗುತ್ತಿರುವುದರಿಂದ ಸಮುದ್ರ ಮಟ್ಟ ಏರಿಕೆ ಎಲ್ಲಾ ಕಡೆ ಒಂದೇ ರೀತಿಯಾಗಿಲ್ಲ. ಆಯಾ ಪ್ರದೇಶಕ್ಕೆ ಅನುಗುಣವಾಗಿ ಸಮುದ್ರ ಮಟ್ಟ ಹೆಚ್ಚಾಗುತ್ತದೆ. ಮಂಗಳೂರಿನಲ್ಲಿ ಸಮುದ್ರ ಮಟ್ಟ 1.598 ಎಂಎಂ ಇದ್ದರೆ ಮುಂಬೈನಲ್ಲಿ 1.526 ಎಂಎಂ ಇದೆ. ಹಿಮ ಕರುಗುವುದು ಹೀಗೆ ಮುಂದುವರೆದರೆ ಮಂಗಳೂರು ಹಾಗೂ ಮುಂಬೈಗೆ ಅಪಾಯ ಕಾದಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ