ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ದೆಹಲಿ ಮಾದರಿಯಲ್ಲಿ ಸರಕಾರಿ ಶಾಲೆಗಳ ಪರಿವರ್ತನೆ-ಸಂಕಲ್ಪ :ವರ್ತೂರು ಪ್ರಕಾಶ್
ನಗರದ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ವಿಜಯ ಕರ್ನಾಟಕ ವಿದ್ಯಾರ್ಥಿ ಸಂಚಿಕೆ ಬಿಡುಗಡೆಗೊಳಿಸಿ, 12೦ ದಿನಗಳ ಕಾಲ 1೦೦೦ ಪ್ರತಿಗಳನ್ನು ವಿತರಿಸುವ ಕಾರ್ಯಕ್ಕೆ ಮಾಜಿ ಸಚಿವ ವರ್ತೂರು ಆರ್.ಪ್ರಕಾಶ್ ಶನಿವಾರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ವರ್ತೂರು ಪ್ರಕಾಶ್, ದೆಹಲಿಯಲ್ಲೂ ಸಹ ಆಮ್ ಆದ್ಮಿ ಮುಖ್ಯಮಂತ್ರಿ ಶಾಲೆಗಳನ್ನು ಅಭಿವೃದ್ಧಿಪಡಿಸಿರುವುದಕ್ಕಿಂತಲೂ ಮಾದರಿಯಾಗಿ ನಮ್ಮ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಅವರು ಸ್ವಕ್ಷೇತ್ರ ರಾಜರಾಜೇಶ್ವರಿ ನಗರದಲ್ಲಿ ಸುಮಾರು 25 ಸಾವಿರ ಮಕ್ಕಳು ವ್ಯಾಸಂಗ ಮಾಡಲು 6 ಕಡೆಗಳಲ್ಲಿ ಶಾಲೆಗಳನ್ನು ನಿರ್ಮಿಸುತ್ತಿದ್ದಾರೆ.
ನಾನೂ ಸಹ ದೆಹಲಿಯಲ್ಲಿ ಸಾಕಷ್ಟು ಶಾಲೆಗಳನ್ನು ನೋಡಿದ್ದೇನೆ, ಖಾಸಗಿ ಶಾಲೆಗಳನ್ನು ಮೀರುವಷ್ಟು ಸರಕಾರಿ ಶಾಲೆಗಳು ಪರಿವರ್ತನೆಯಾಗಿವೆ. ಅದೇ ಮಾದರಿಯಲ್ಲಿ ಕೋಲಾರದಲ್ಲಿಯೂ ಸಹ ಶಾಲೆಗಳನ್ನು ನಿರ್ಮಿಸುವ ಸಂಕಲ್ಪವನ್ನು ಮಾಡಿರುವುದಾಗಿ ತಿಳಿಸಿದರು.
ಶಿಕ್ಷಣಕ್ಕೆ ನನ್ನ ಮೊದಲ ಆದ್ಯತೆ:
ಕೇವಲ 120 ದಿನಗಳಲ್ಲಿ ನಾನು ಅಕಾರಕ್ಕೆ ಬರುತ್ತೇನೆ. ಶೇ.1೦೦ಕ್ಕೆ 1೦೦ ಕೋಲಾರ ನಗರದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸಮಗ್ರ ಅಭಿವೃದ್ಧಿಪಡಿಸುವುದು ನನ್ನ ಮೊದಲ ಆದ್ಯತೆಯಾಗಿದ್ದು, ನನ್ನ ಕನಸು ಬೇರೆ ಇದೆ ಎಂದರು.
ಸರಕಾರಿ ಶಾಲಾ-ಕಾಲೇಜುಗಳನ್ನು ಮಾದರಿಯನ್ನಾಗಿ 1೦೦ಕ್ಕೆ 1೦೦ರಷ್ಟು ಉತ್ತೀರ್ಣತೆ ನೀಡುವುದರ ಜತೆಗೆ ಶೇ.7೦ಕ್ಕಿಂತಲೂ ಹೆಚ್ಚಿನ ಅಂಕಗಳನ್ನು ಪಡೆದು ತೇರ್ಗಡೆಯಾಗುವಂತಹ ಸಂಕಲ್ಪವನ್ನು ಮಾಡುತ್ತೇವೆ. ವಿದ್ಯಾರ್ಥಿಗಳು ಕೇವಲ ಉತ್ತೀರ್ಣರಾದರೆ ಪ್ರಯೋಜನವಿಲ್ಲ. ಶೇ.7೦, 8೦, 9೦ ರಷ್ಟು ಅಂಕಗಳು ಬರಬೇಕು. ಒಳ್ಳೆಯ ದರ್ಜೆಯ ಶಿಕ್ಷಣಕ್ಕೆ ಏನು ಮಾಡಬೇಕು ಅದನ್ನು ನಾನು ಮಾಡುತ್ತೇನೆ ಎಂದರು.
ನಿಮ್ಮ ಭವಿಷ್ಯ ಪತ್ರಿಕೆಯಲ್ಲಿದೆ:
ನಿಮ್ಮ ಭವಿಷ್ಯ ಈ ಪತ್ರಿಕೆಯಲ್ಲಿ ಇದೆ. ಪಿಯುಸಿ ಬಳಿಕ ಪದವಿಗೆ ಹೋಗುತ್ತೀರಿ ಎಸ್ಸೆಸ್ಸೆಲ್ಸಿ, ಪಿಯುಸಿ ಅರ್ಹತೆಗೆ ಕೆಲವು ಉದ್ಯೋಗಗಳು ಬರುತ್ತವೆ. ಪದವಿ ಓದಲು ಸಾಧ್ಯವಾಗದವರು, ಬಡತನದಲ್ಲಿ ಇರುವವರಿಗೆ ಇದು ಅನುಕೂಲವಾಗಲಿದೆ, ಉದ್ಯೋಗ ಎಲ್ಲಿದೆ, ಯಾವ ಸಂಸ್ಥೆಯಲ್ಲಿ ಇದೆ ಎನ್ನುವುದರ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ಇದರ ಜತೆಗೆ ಮಾರ್ಗದರ್ಶನ ನೀಡಲು ಐಎಎಸ್, ಐಪಿಎಸ್ ಉತ್ತೀರ್ಣರಾದವರ ಸಂದರ್ಶನವನ್ನು ನೀಡಲಾಗುತ್ತದೆ.
ವಿದ್ಯಾರ್ಥಿಗಳು ಬೆಳಗ್ಗೆ 4 ಗಂಟೆಗೆ ಎದ್ದು ನಿತ್ಯಕರ್ಮಗಳನ್ನು ಮುಗಿಸಿ, 6 ಗಂಟೆಯವರೆಗೆ ಓದುತ್ತಿದ್ದರು. ನಂತರ ಸ್ನಾನ ಮಾಡಿ, ಸಿದ್ಧರಾಗಿ ಮುಂದಿನ ಕೆಲಸ ಕಾರ್ಯಗಳನ್ನು ಮಾಡಬೇಕು. ಮಧ್ಯಾಹ್ನ 1 ಗಂಟೆಗೆ ಊಟ ಮಾಡಬೇಕು. ರಾತ್ರಿ 7ಗಂಟೆಗೆ ಊಟ ಮಾಡಿ, ಓದಿಕೊಂಡು ೯ ಗಂಟೆಗೆ ಮಲಗಬೇಕು ಎನ್ನುವ ವಿಚಾರವು ಐಎಎಸ್ ಅಕಾರಿಯೊಬ್ಬರ ವಿದ್ಯಾರ್ಥಿ ಜೀವನದ ಬಗ್ಗೆ ಪರಿಚಯಿಸಿಕೊಂಡಾಗ ನನಗೆ ಗೊತ್ತಾಯಿತು, ನೀವು ಸಹ ನಿಷ್ಠೆಯಿಂದ ಪಾಲಿಸಿ ಐಎಎಸ್, ಐಪಿಎಸ್ ಅಕಾರಿಗಳಾಗಿ ಎಂದು ಆಶಿಸಿದರು.
ಕುಟುಂಬ ತುಪ್ಪದ ಅನ್ನ ತಿನ್ನಲಿ:
ವಾಟ್ಸ್ಆಫ್, ಟಿವಿ, ಧಾರವಾಹಿ ನೋಡುವುದರಿಂದ ಉದ್ಧಾರ ಆಗುವುದಿಲ್ಲ. ಲಕ್ಷಾಂತರ ಜನರಲ್ಲಿ ಸಾವಿರ ಮಂದಿಯೇ ಉತ್ತೀರ್ಣ ಆಗುವುದು, ಉಳಿದ 99 ಸಾವಿರ ಜನರು ಬೇಜವಾಬ್ದಾರಿ, ಅನುತ್ತೀರ್ಣರಾಗುತ್ತಾರೆ. ಕೆಲವರು ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿಗಳಲ್ಲಿ ಉತ್ತೀರ್ಣ, ಅನುತ್ತೀರ್ಣರಾಗುತ್ತಾರೆ.
ಶ್ರದ್ಧೆ ಭಕ್ತಿಯಿಂದ ವಿದ್ಯಾಭ್ಯಾಸ ಮಾಡಿದರೆ ಇಡೀ ನಿಮ್ಮ ಕುಟುಂಬವೇ ತುಪ್ಪದ ಅನ್ನ ತಿನ್ನುತ್ತಾರೆ, ನೀವು ಬೇಜವಾಬ್ದಾರಿತನದಿಂದ ಓದಿದರೆ ಮಣ್ಣು ತಿನ್ನಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಎಲ್ಲದಕ್ಕಿಂತಲೂ ಮುಖ್ಯವಾಗಿರುವ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಕರೆ ನೀಡಿದರು.
ಸೂಕ್ತ ಬಹುಮಾನ-ಘೋಷಣೆ:
ಪತ್ರಿಕೆಗಳಲ್ಲಿ ಜಾಹಿರಾತು, ಉದ್ಯೋಗವಕಾಶ ಪ್ರತಿ ರಾಜಕೀಯ, ಆರ್ಥಿಕ ಸೇರಿದಂತೆ ಎಲ್ಲ ಕ್ಷೇತ್ರಗಳ ಬಗ್ಗೆ ಪತ್ರಿಕೆಯಲ್ಲಿ ಬರುತ್ತದೆ. ಪ್ರತಿದಿನವೂ ಪತ್ರಿಕೆ ಓದಿದ ಬಳಿಕ ಶಾಲೆಗೆ ಬರುತ್ತದೆ. ಇಲ್ಲಿ ಉಚಿತವಾಗಿ ನಾನು ನೀಡಿರುವ ಪತ್ರಿಕೆಯನ್ನು ಪ್ರತಿದಿನವೂ ನಿಮ್ಮ ಕಾಲೇಜಿಗೆ ತಲುಪಿಸಲಾಗುತ್ತದೆ ಅದನ್ನು ಪಡೆದುಕೊಂಡು ಸಂಜೆ ಮನೆಗೆ ಹೋಗಿ ಓದಬೇಕು. ನಿಮ್ಮ ಭವಿಷ್ಯವೇ ಪತ್ರಿಕೆಯಲ್ಲಿ ಅಡಗಿರುತ್ತದೆ. ೧೨೦ ದಿನಗಳ ಕಾಲ ನೀವು ಭದ್ರವಾಗಿ ಪತ್ರಿಕೆಗಳನ್ನು ಇಟ್ಟುಕೊಂಡು ಕೊನೆಯದಾಗಿ ತಂದು ತೋರಿಸಿದರೆ ಸೂಕ್ತ ಬಹುಮಾನ ನೀಡುವುದಾಗಿಯೂ ವರ್ತೂರು ಪ್ರಕಾಶ್ ಘೋಷಿಸಿದರು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇದು ಮಹಾದೇವ ಶಿವನ ಪಂಚಾಕ್ಷರಿ ಮಂತ್ರ, ಜಪಿಸಿದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.
ನಿಮ್ಮ ಮನೆಗೆ ಧಿಡೀರ್ ಅಂತ ಅತಿಥಿಗಳು ಬಂದರೆ ಇಲ್ಲಿದೆ ನೋಡಿ ಬಿಸಿ ಬಿಸಿ ತುಪ್ಪಾನ್ನ ಮಾಡುವ ವಿಧಾನ
‘ರಾಧಾರಮಣ’ ಧಾರಾವಾಹಿಯಲ್ಲಿ ಸಿತಾರಾ ದೇವಿ ಆಗಿ ಅಭಿನಯಿಸುತ್ತಿದ್ದ ಸುಜಾತ ನಿಜ ಜೀವನದಲ್ಲಿ ‘ವಿಲನ್’ಅಲ್ಲ. ಆಕೆ ಅನ್ನಪೂರ್ಣೇಶ್ವರಿ ಅಂತೆಲ್ಲಾ ‘ಅಗ್ನಿಸಾಕ್ಷಿ’ ಚಂದ್ರಿಕಾ ಖ್ಯಾತಿಯ ಪ್ರಿಯಾಂಕಾ ಹಾಡಿ ಹೊಗಳುತ್ತಿದ್ದರು. ಯಾಕಂದ್ರೆ, ಅಡುಗೆ ಮನೆಯ ನೇತೃತ್ವ ವಹಿಸಿಕೊಂಡಿದ್ದ ಸುಜಾತಾ ರುಚಿರುಚಿಯಾಗಿ ಮಾಡುತ್ತಿದ್ದ ಅಡುಗೆ ಪ್ರಿಯಾಂಕಾಗೆ ಇಷ್ಟ ಆಗಿತ್ತು. ಮೊದಲವಾರ ಸುಜಾತ ಜೊತೆ ಕ್ಲೋಸ್ ಆಗಿದ್ದವರು ಪ್ರಿಯಾಂಕಾ. ಇದೀಗ ಅದೇ ಪ್ರಿಯಾಂಕಾ ಎರಡನೇ ವಾರದ ನಾಮಿನೇಷನ್ ನಲ್ಲಿ ಸುಜಾತಾರನ್ನ ಟಾರ್ಗೆಟ್ ಮಾಡಿದ್ದಾರೆ.ಅವಶ್ಯಕತೆ ಇಲ್ಲದೇ ಇದ್ದರೂ ಸುಜಾತಾ ಕೂಗಾಡಿದ್ರಂತೆ. ಇದನ್ನೇ ನೆಪ ಮಾಡಿಕೊಂಡು ಸುಜಾತಾ…
ನೀವು ಅವಿವಾಹಿತರೇ, ಮದುವೆಯಾಗಬೇಕು ಎಂದಿದ್ದೀರಾ? ಹಾಗಿದ್ದರೆ ನಿಮಗೆ ಸೂಕ್ತ ಎನ್ನಿಸುವ ಜೀವನ ಸಂಗಾತಿಯನ್ನು ಇನ್ನು ಮುಂದೆ ವಾಟ್ಸಾಪ್ ಮೂಲಕ ಆಯ್ಕೆ ಮಾಡಿಕೊಳ್ಳಬಹುದು ಎನ್ನುತ್ತಿದೆ ಮುಂಬಯಿ ನಗರದ ಅಂಧಶ್ರದ್ಧ ನಿರ್ಮೂಲನಾ ಸಮಿತಿ.
ಮಾಲೂರಿನ ‘ಯಶವಂತಪುರ’ ಗ್ರಾಮ ರಾಜ್ಯದ ಮೊದಲ ಡಿಜಿಟಲ್ ವಿಲೇಜ್’ ಆಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಹಯೋಗದಲ್ಲಿ ರೂಪಿಸಿರುವ ರಾಜ್ಯದ ಮೊದಲ ಡಿಜಿಟಲ್ ವಿಲೇಜ್’ ಇದನ್ನು ಮಾಲೂರಿನ ಶಾಸಕ ಎಸ್.ಮಂಜುನಾಥ್ ಗೌಡ ಉದ್ಘಾಟನೆ ಮಾಡುವ ಮೂಲಕ ಲೋಕಾರ್ಪಣೆ ಮಾಡಿದರು.
ಚುನಾವಣೆಗೂ ಮುನ್ನವೇ ಹಿರಿಯೂರು ನಗರಸಭೆಯಲ್ಲಿ ಜೆಡಿಎಸ್ ಖಾತೆ ತೆರೆದಿದ್ದು, ಜೆಡಿಎಸ್ ಅಭ್ಯರ್ಥಿ ನಗರಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಏಳನೇ ವಾರ್ಡಿನ ಪಾಂಡುರಂಗ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೇ 29 ರಂದು ನಗರಸಭೆ ಚುನಾವಣೆ ನಡೆಯಬೇಕಿತ್ತು. ಈ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಪಾಂಡುರಂಗ ಅವರು ನಾಮಪತ್ರ ಸಲ್ಲಿಸಿದ್ದರು. ಇವರ ಪ್ರತಿಸ್ಪರ್ಧಿಯಾಗಿ ಪಕ್ಷೇತರ ಅಭ್ಯರ್ಥಿ ಈರಲಿಂಗೇಗೌಡ ನಾಮಪತ್ರ ಸಲ್ಲಿಸಿದ್ದರು. ಇಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾವಾಗಿತ್ತು. ಈರಲಿಂಗೆಗೌಡ ಚುನಾವಣೆಯಲ್ಲಿ ನನಗೆ ಸ್ಪರ್ಧಿಸಲು ಇಷ್ಟವಿಲ್ಲ ಎಂದು ಹೇಳಿ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ….