ತಂತ್ರಜ್ಞಾನ

ಶೌಚಾಲಯಗಳ ಸ್ವಚ್ಛತೆಗೆ ರೈಲ್ವೆ ಇಲಾಖೆ 42 ಕೋಟಿ ಮೌಲ್ಯದ ಹಸುವಿನ ಬೆರಣಿ ಖರೀದಿಸ್ತಿ ಏಕೆ..?ತಿಳಿಯಲು ಇದನ್ನು ಓದಿ..

171

ಭಾರತೀಯ ರೈಲ್ವೆ ಇಲಾಖೆ ಶೌಚಾಲಯಗಳ ಸ್ವಚ್ಛತೆ ಬಗ್ಗೆ ಗಮನ ಹರಿಸಿದೆ. ಸಿಎಜಿ ನೀಡಿರುವ ವರದಿ ಪ್ರಕಾರ 25,000 ಬಯೋ ಟಾಯ್ಲೆಟ್ ಗಳು ಅಧೋಗತಿಗೆ ತಲುಪಿವೆ. ಅದನ್ನು ದುರಸ್ತಿ ಮಾಡುವುದು ರೈಲ್ವೆ ಇಲಾಖೆ ಮುಂದಿರೋ ಬಹು ದೊಡ್ಡ ಸವಾಲು.

ಇದಕ್ಕಾಗಿ ರೈಲ್ವೆ ಇಲಾಖೆ ಹಸುಗಳ ಬೆರಣಿಯನ್ನು ಬಳಸಿಕೊಳ್ಳಲಿದೆ. 42 ಕೋಟಿ ರೂಪಾಯಿ ವೆಚ್ಚ ಮಾಡಿ 3,350 ಲೋಡ್ ಹಸುವಿನ ಬೆರಣಿಯನ್ನು ಖರೀದಿ ಮಾಡಲಿದೆ. ಬೆರಣಿಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ಬಳಸಿಕೊಂಡು ಬಯೋ ಟಾಯ್ಲೆಟ್ ಗಳನ್ನು ರೀಚಾರ್ಜ್ ಮಾಡುವುದು ಇಲಾಖೆಯ ಉದ್ದೇಶ.

ಈಗಾಗ್ಲೇ ರೈಲ್ವೆ ಇಲಾಖೆ ಶೇ.44.8 ರಷ್ಟು ಟ್ರೈನ್ ಗಳಲ್ಲಿ ಬಯೋ ಟಾಯ್ಲೆಟ್ ಗಳನ್ನು ಅಳವಡಿಸಿದೆ. ಟಾಯ್ಲೆಟ್ ಸೀಟ್ ಕೆಳಭಾಗದಲ್ಲಿ ಬಯೋ ಟಾಯ್ಲೆಟ್ ಅಳವಡಿಸಲಾಗಿದೆ. ಅದು ಸಣ್ಣ ಪ್ರಮಾಣದ ಚರಂಡಿ ಸಂಸ್ಕರಣಾ ವ್ಯವಸ್ಥೆಯನ್ನು ಒಳಗೊಂಡಿದೆ.

ಕಾಂಪೋಸ್ಟ್ ಚೇಂಬರ್ ನಲ್ಲಿರೋ ಬೆರಣಿಯ ಬ್ಯಾಕ್ಟೀರಿಯಾ ಮಾನವರ ಮಲ ಮೂತ್ರಗಳನ್ನು ಜೀರ್ಣಿಸಿಕೊಂಡು, ನೀರು ಮತ್ತು ಮಿಥೇನ್ ಅನ್ನು ಹೊರಹಾಕುತ್ತದೆ. ಇದಕ್ಕಾಗಿ ಬೆರಣಿಗಳನ್ನು ಖರೀದಿ ಮಾಡಲಾಗುತ್ತಿದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • inspirational

    ರೈತರಿಂದ ನೇರವಾಗಿ ಬೆಳೆ ಖರೀದಿಗೆ ಮುಂದಾದ ಉಪೇಂದ್ರ

    Mayoon N ಕೊರೊನಾ ವೈರಸ್ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ಸಲುವಾಗಿ ಉಪೇಂದ್ರ ಅವರು ತಮ್ಮ ಉಪ್ಪಿ ಫೌಂಡೇಶನ್ ಮೂಲಕ ದೇಣಿಗೆ ಸಂಗ್ರಹಿಸುತ್ತಿದ್ದಾರೆ. ದೇಣಿಗೆ ಬಂದ ಹಣದ ಬಗ್ಗೆ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡುತ್ತಿದ್ದು, ಬಾಲನಟನೊಬ್ಬ 10 ಸಾವಿರ ಸಹಾಯ ಮಾಡಿರುವ ವಿಚಾರ ತಿಳಿಸಿದ್ದಾರೆ. ತಮ್ಮ ಸಂಭಾವನೆ ಹಣದಲ್ಲಿ ಕೊರೊನಾ ಸಂಕಷ್ಟದಲ್ಲಿರುವವರಿಗೆ ಸಹಾಯವಾಗಲಿ ಉದ್ದೇಶದಿಂದ ಬಾಲನಟ ಅನೀಶ್ ಸಾಗರ್ ದೇಣಿಗೆ ನೀಡಿದ್ದಾರೆ ಎಂದು ಉಪ್ಪಿ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿದ್ದು, ‘ಜೀವನಾನೆ ನಾಟಕ ಸ್ವಾಮಿ’ ಮತ್ತು ‘ಸಾಲುಗಾರ’…

  • ಸುದ್ದಿ

    ತನ್ನ ಪ್ರೊಫೆಸರ್ ಮದುವೆಗೆ ಹೋದ ಇಂಜಿನಿಯರಿಂಗ್ ವಿದ್ಯಾರ್ಥಿ ಸ್ಟೇಜ್ ಮೇಲೆ ಮಾಡಿದ್ದೇನು. ಶಾಕ್ ಆದ ಹೆಣ್ಣು.

    ಸಮಯ ಮತ್ತು ಸಂದರ್ಭದ ಅರಿವಿಲ್ಲದೆ ನಾವು ಮಾಡುವ ಕೆಲವು ಕೆಲಸಗಳು ಕೆಲವೊಮ್ಮೆ ನಗೆಪಾಟಲಿಗೆ ದಾರಿಮಾಡಿ ಕೊಡುತ್ತದೆ. ಇಂತಹದ್ದೇ ಒಂದು ಕೆಲಸವನ್ನ ಇಂಜಿನಿಯರಿಂಗ್ ಓದುತ್ತಿದ್ದ ಒಬ್ಬ ವಿದ್ಯಾರ್ಥಿ ಮಾಡಿದ್ದಾನೆ ಮತ್ತು ಈತ ಮಾಡಿದ ಕೆಲಸಕ್ಕೆ ಒಂದು ಕ್ಷಣ ಎಲ್ಲರೂ ಬೆರಗಾಗಿದ್ದಾರೆ. ಇನ್ನು ಇದೂ ದೊಡ್ಡ ಸುದ್ದಿ ಅಲ್ಲದೆ ಇರಬಹುದು ಆದರೆ ಇದು ವಿಭಿನ್ನ ಅನ್ನುವ ಕಾರಣಕ್ಕೆ ನಾವು ನಿಮಗೆ ಹೇಳುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಇಂಜಿನಿಯರಿಂಗ್ ವಿದ್ಯಾರ್ಥಿ ಮಾಡಿದ ಕೆಲಸದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ…

  • ಸಿನಿಮಾ

    ರಾಜಮೌಳಿ ಮುಂದಿನ ಚಿತ್ರದಲ್ಲಿ ಕನ್ನಡದ ನಾಯಕ ನಟ! ಯಾರು ಗೊತ್ತೇ???

    ಸಾವಿರಾರು ಕೋಟಿ ಹಣ ಗಳಿಕೆಯ ಜೊತೆ ವಿಶ್ವದಾದ್ಯಂತ ಅದ್ಭುತ ಯಶಸ್ಸು ಗಳಿಸಿದ ಬಾಹುಬಲಿ-2 ಚಿತ್ರದ ನಿರ್ದೆಶಕ ಎಸ್.ಎಸ್.ರಾಜಮೌಳಿ ತಮ್ಮ ಮುಂದಿನ ಚಿತ್ರಕ್ಕೆ ಸ್ಯಾಂಡಲ್’ವುಡ್ ಪವರ್ ಸ್ಟಾರ್ ಪುನೀತ್ ರಾಜ್’ಕುಮಾರ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಎಲ್ಲಡೆ ಹರಿದಾಡುತ್ತಿದೆ.

  • ಆಧ್ಯಾತ್ಮ

    ಹಿಂದೂಗಳಿಗೆ ನಾಗರ ಪಂಚಮಿ ಹಬ್ಬ ಏಕೆ ತುಂಬಾ ಮಹತ್ವ ಗೊತ್ತಾ?ರೋಚಕವಾಗಿದೆ ಈ ಹಬ್ಬದ ವೈಶಿಷ್ಟ್ಯಗಳು…

    ನಾಡಿನೆಲ್ಲೆಡೆ ನಾಗರ ಪಂಚಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಆದರೆ ಬಹಳಷ್ಟು ಜನರು ನಾಗರ ಪಂಚಮಿಯ ಮಹತ್ವವನ್ನು ತಿಳಿಯದೆಯೇ ಅದನ್ನು ಆಚರಿಸುತ್ತಿರುತ್ತಾರೆ. ಈ ನಾಗ ದೇವತೆಯ ಆಚರಣೆಯ, ಪೂಜೆಯ ಮತ್ತು ನೈವೇಧ್ಯಗಳ ಹಿಂದೆ ಕೆಲವೊಂದು ಪುರಾಣ ಕತೆಗಳು ಮತ್ತು ಸತ್ಯಾಂಶಗಳು ಇವೆ.

  • ಸುದ್ದಿ

    ತಾಯಿಯ ಮೇಲಿನ ಪ್ರೀತಿಗಾಗಿ ಸ್ವಂತ ಅಣ್ಣನನ್ನು ಕೊಂದ ತಮ್ಮ..ಕಾರಣ?

    ತುಮಕೂರು, ಜು. 27- ಬಾಣಂತನಕ್ಕೆ ಹೋಗಿದ್ದ ಪತ್ನಿಯನ್ನು ಮನೆಗೆ ಕರೆಸದ ತಾಯಿ ಜತೆ ಜಗಳವಾಡಿ ಪದೇ ಪದೇ ಅವರ ಮೇಲೆ ಹಲ್ಲೆ ನಡೆಸುತ್ತಿದ್ದ ಅಣ್ಣನ ವರ್ತನೆಯಿಂದ ಕುಪಿತಗೊಂಡ ತಮ್ಮ ರಾತ್ರಿ ಅಣ್ಣನ ಕುತ್ತಿಗೆಗೆ ಚಾಕುವಿನಿಂದ ಬಲವಾಗಿ ಇರಿದು ಕೊಲೆ ಮಾಡಿರುವ ಧಾರುಣ ಘಟನೆ ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ರಾಮಗೊಂಡನಹಳ್ಳಿಯ ಮಹೇಶ್ (35) ಕೊಲೆಯಾದ ದುರ್ದೈವಿಯಾಗಿದ್ದು, ಆರೋಪಿ ತಮ್ಮ ಅಂಜನಮೂರ್ತಿ ಪೊಲೀಸರ ಅತಿಥಿಯಾಗಿದ್ದಾನೆ. ಚಿಕ್ಕಹನುಮಯ್ಯ-ಗಂಗಮ್ಮ ದಂಪತಿಯ ಮೊದಲ ಮಗನಾದ ಮಹೇಶ್ ನಿಗೆ ಮದುವೆಯಾಗಿದ್ದು ಬಾಣಂತನಕ್ಕೆಂದು ಪತ್ನಿ ತನ್ನ…

  • ಸಿನಿಮಾ

    ರೆಬೆಲ್ ಸ್ಟಾರ್ ಅಂಬಿ ಅಂತ್ಯಕ್ರಿಯೆಗೆ, ರಮ್ಯ ಬಾರದೆ ಇರಲು ಕಾರಣವೇ ಇದು!

    ಶನಿವಾರದಂದು ವಿಧಿವಶರಾದ ಕನ್ನಡ ಚಿತ್ರರಂಗದ ಖ್ಯಾತ ನಟ ಅಂಬರೀಶ್ ಅವರ ಅಂತ್ಯಕ್ರಿಯೆ, ಸೋಮವಾರದಂದು ಅಪಾರ ಸಂಖ್ಯೆಯ ಅಭಿಮಾನಿಗಳು ಹಾಗೂ ಗಣ್ಯರ ಸಮ್ಮುಖದಲ್ಲಿ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿದೆ.ಅಂಬರೀಶ್ ನಿಧನದ ಸಂದರ್ಭದಲ್ಲಿ ಸಂತಾಪ ಕೋರಿ ಟ್ವೀಟ್ ಮಾಡಿದ್ದ ನಟಿ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಮಾಜಿ ಸಂಸದೆ ರಮ್ಯಾ, ಅಂತ್ಯಕ್ರಿಯೆಗೆ ಬಾರದಿರುವುದು ಅಂಬರೀಶ್ ಅಭಿಮಾನಿಗಳನ್ನು ಕೆರಳಿಸಿತ್ತು. ಅಂಬರೀಶ್ ಸಾವಿಗೀಡಾದ ಸುದ್ದಿ ತಿಳಿದಾಗಿನಿಂದಲೂ ಇಡೀ ಕನ್ನಡ ಚಿತ್ರೋದ್ಯಮ ಮಾತ್ರವಲ್ಲದೆ ಹಲವು ಭಾಷೆಗಳ ಚಿತ್ರರಂಗದ ಖ್ಯಾತನಾಮರು, ಅಂತಿಮ ದರ್ಶನದಿಂದ ಅಂತ್ಯಸಂಸ್ಕಾರದವರೆಗೆ ಹಾಜರಾಗಿದ್ದರೂ ರಮ್ಯಾ…