ಸುದ್ದಿ

ಶಿಯೋಮಿ ಕಂಪೆನಿಯಿಂದ ಅದ್ಭುತ ಸ್ಮಾರ್ಟ್​ಫೋನ್ ಬಿಡುಗಡೆ 108 MP ಕ್ಯಾಮೆರಾ, 1 TB ಸ್ಟೋರೇಜ್,12 ಜಿಬಿ RAM…!

42

ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಅಗ್ಗದ ದರ ಮತ್ತು ಉತ್ತಮ ಫೀಚರ್ಸ್​ ಮೂಲಕ ಜನಪ್ರಿಯತೆ ಗಳಿಸಿರುವ ಶಿಯೋಮಿ ಕಂಪೆನಿ ಸೆಪ್ಟೆಂಬರ್​ನಲ್ಲಿ ಮತ್ತೊಂದು ಹೊಸ ಸ್ಮಾರ್ಟ್​ಫೋನ್​ನ್ನು ಬಿಡುಗಡೆ ಮಾಡಲಿದೆ. ಶಿಯೋಮಿ ಮಿಕ್ಸ್ ಸಿರೀಸ್​ನ ಈ ನೂತನ ಸ್ಮಾರ್ಟ್‌ಫೋನ್​ಗೆ ಮಿ ಮಿಕ್ಸ್ 4 ಎಂದು ಹೆಸರಿಡಲಾಗಿದೆ. ಇವೆಲ್ಲಕ್ಕಿಂತ ಈ ಹೊಸ ಫೋನ್ ಎಲ್ಲರ ಗಮನ ಸೆಳೆಯುತ್ತಿರುವುದು ನೂತನ ಮೊಬೈಲ್​ಗೆ ನೀಡಲಾಗಿರುವ  ಕ್ಯಾಮೆರಾ.

ಹೌದು, ಮಿ ಮಿಕ್ಸ್​ 4ನಲ್ಲಿ 108 ಮೆಗಾಪಿಕ್ಸೆಲ್​ನ ಕ್ಯಾಮೆರಾ ನೀಡಲಾಗಿದೆಯಂತೆ. ಚೀನಾದ ವೆಬ್‌ಸೈಟ್ ವೀಬೊದಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಮಿಕ್ಸ್​4 ಫೋನ್‌ನಲ್ಲಿ 108 ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದ್ದು, ಕ್ವಾಡ್-ಕ್ಯಾಮೆರಾ ಸೆಟಪ್ ಇದರಲ್ಲಿರಲಿದೆ. ಅಂದರೆ 16 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್-ಆಂಗಲ್ ಲೆನ್ಸ್, 12 ಮೆಗಾಪಿಕ್ಸೆಲ್ ಸೆನ್ಸಾರ್ ಮತ್ತು 108 ಮೆಗಾಪಿಕ್ಸೆಲ್‌ಗಳ ಜೊತೆಗೆ ನಾಲ್ಕನೇ ಪೆರಿಸ್ಕೋಪ್ ಲೆನ್ಸ್ ಇರುತ್ತದೆ ಎಂದು ಹೇಳಲಾಗಿದೆ.

ವೀಬೊ ವರದಿಯಂತೆ, ನೂತನ ಸ್ಮಾರ್ಟ್​ಫೋನ್ ಮಾಹಿತಿ ಸೋರಿಕೆಯಾಗಿದ್ದು, ಮಿ ಮಿಕ್ಸ್​ 4ನಲ್ಲಿ AMOLED 2K HDR10 + ಕವರ್ಡ್ ಡಿಸ್​ಪ್ಲೇ ಇರಲಿದ್ದು , ಇದು 2K ರೆಸಲ್ಯೂಶನ್‌ನೊಂದಿಗೆ ಕಾರ್ಯಾಚರಿಸಲಿದೆ. ಇನ್ನು ಮಿ ಮಿಕ್ಸ್ ಫೋರ್ 12 ಜಿಬಿ RAM ಹೊಂದಿರಲಿದೆ ಎನ್ನಲಾಗಿದೆ. ಅಲ್ಲದೆ, ಇದರ ಸ್ಟೋರೇಜ್ ಸಾಮರ್ಥ್ಯ 1 ಟಿಬಿಗೆ ಹೆಚ್ಚಿಸಬಹುದು. ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 855+ ಚಿಪ್‌ಸೆಟ್ ಹೊಂದಿರಲಿದೆ ಎಂದು ಹೇಳಲಾಗಿದೆ.

ಹಾಗೆಯೇ ಅತ್ಯುತ್ತಮ ಬ್ಯಾಟರಿ ಬ್ಯಾಕಪ್​ಗಾಗಿ 4,500 mAh ಸಾಮರ್ಥ್ಯದ ಬ್ಯಾಟರಿ ಇದರಲ್ಲಿ ನೀಡಲಾಗುತ್ತದೆ. 30W ವೇಗದ ಚಾರ್ಜಿಂಗ್ ಸರ್ಪೋಟ್​ನೊಂದಿಗೆ ಇದನ್ನು ಚಾರ್ಜ್​ ಮಾಡಿಕೊಳ್ಳಬಹುದು. ಇದರಲ್ಲಿ, ನಿಮಗೆ ವೈರ್‌ಲೆಸ್ ಚಾರ್ಜಿಂಗ್ ಮತ್ತು ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಕೂಡ ಸಪೋರ್ಟ್ ಮಾಡುತ್ತದೆ. ಶಿಯೋಮಿಯ ನೂತನ ಸ್ಮಾರ್ಟ್​ಫೋನ್​ ಸೆಪ್ಟೆಂಬರ್‌ನಲ್ಲಿ ಚೀನಾದಲ್ಲಿ ಬಿಡುಗಡೆ ಆಗಲಿದ್ದು, ಆ ಬಳಿಕವಷ್ಟೇ ಭಾರತ ಸೇರಿದಂತೆ ಇತರೆಡೆ ಖರೀದಿಗೆ ಲಭ್ಯವಿರುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ