ಸರ್ಕಾರಿ ಯೋಜನೆಗಳು

ಶಾಲೆಗೆ ಹೋಗ್ತಿರುವ ವಿದ್ಯಾರ್ಥಿಗಳಿಗೆ ಒಂದು ಸಿಹಿ ಸುದ್ದಿ..!ತಿಳಿಯಲು ಈ ಲೇಖನ ಓದಿ..

258

ಮಕ್ಕಳು 18 ವರ್ಷಕ್ಕಿಂತ ಚಿಕ್ಕವರಿದ್ದರೆ, ಸರ್ಕಾರಿ ಅಥವಾ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಾರೆಂದಾದ್ರೆ ಇಲ್ಲೊಂದು ಸುವರ್ಣಾವಕಾಶವಿದೆ. ಮಕ್ಕಳಿಗೆ 1 ಲಕ್ಷದಿಂದ 10 ಸಾವಿರದವರೆಗೆ ಹಣ ಗೆಲ್ಲುವ ಅವಕಾಶವನ್ನು ಕೇಂದ್ರ ಸರ್ಕಾರ ನೀಡ್ತಿದೆ.

ಪ್ರತಿಭಾವಂತ ಹಾಗೂ ಭಿನ್ನವಾಗಿ ಯೋಚನೆ ಮಾಡುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲು ಸರ್ಕಾರ ಈ ಯೋಜನೆ ಶುರು ಮಾಡಿದೆ.ಇನ್ನೋವೇಶನ್ ಪ್ರಶಸ್ತಿಗಾಗಿ ಎಸ್ ಐ ಆರ್, ಮೂಲ ಪರಿಕಲ್ಪನೆಗಳನ್ನು ಅಥವಾ ತಾಂತ್ರಿಕ ವಿನ್ಯಾಸ ಪರಿಕಲ್ಪನೆಯನ್ನು ಮಕ್ಕಳಿಂದ ಆಹ್ವಾನಿಸಿದೆ. 2018, ಜನವರಿ 1 ಪ್ರಕಾರ 18 ವರ್ಷ ಕೆಳಗಿನ ಹಾಗೂ ಯಾವುದೇ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಅರ್ಜಿ ಸಲ್ಲಿಸಬಹುದಾಗಿದೆ.

ಮಕ್ಕಳ ಪರಿಕಲ್ಪನೆ ಹೊಸದಾಗಿರಬೇಕು. ಇತ್ತೀಚಿನ ಸಮಸ್ಯೆಗೆ ಪರಿಹಾರವಾಗಿದ್ದರೆ ಉತ್ತಮ. ಆಯ್ಕೆಯಾದ 50 ಮಕ್ಕಳಿಗೆ ತರಬೇತಿ ನೀಡಲಾಗುವುದು. ಜೊತೆಗೆ ತಮ್ಮ ಪರಿಕಲ್ಪನೆಯನ್ನು ಮಕ್ಕಳು ಎಸ್ ಐ ಆರ್ ಮುಂದಿಡಬೇಕಾಗುತ್ತದೆ. ಆಯ್ಕೆಯಾದ ಐದು ಮಕ್ಕಳಿಗೆ ಬಹುಮಾನ ಸಿಗಲಿದೆ. 1 ಲಕ್ಷ, 50 ಸಾವಿರ, 30 ಸಾವಿರ, 20 ಸಾವಿರ ಹಾಗೂ 10 ಸಾವಿರ ರೂಪಾಯಿ ನೀಡಲಾಗುವುದು.

ಶಾಲೆಯ ವಿದ್ಯಾರ್ಥಿಗಳ ಒಂದು ಗುಂಪು ಹೊಸದೊಂದು ಆವಿಷ್ಕಾರ ಮಾಡಿದ್ದರೂ ಒಬ್ಬ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಗೆ ಮಾತ್ರ ಇದ್ರಲ್ಲಿ ಪಾಲ್ಗೊಳ್ಳಲು ಅವಕಾಶವಿರುತ್ತದೆ. ಹಿಂದಿ ಅಥವಾ ಇಂಗ್ಲೀಷ್ ನಲ್ಲಿ 5000 ಶಬ್ಧಕ್ಕಿಂತ ಹೆಚ್ಚಾಗದೆ ಪ್ರಸ್ತಾವನೆ ಕಳುಹಿಸಬೇಕು. ಇದ್ರ ಜೊತೆ ಶಾಲೆ ಹೆಸರು ಹಾಗೂ ಪ್ರಿನ್ಸಿಪಾಲರ ಪ್ರಮಾಣ ಪತ್ರವಿರಬೇಕು.

ಹೆಚ್ಚಿನ ಮಾಹಿತಿಗೆ  ಭೇಟಿ ನೀಡಿ:-www.csir.res.in ಅರ್ಜಿ ಸಲ್ಲಿಸಲು ಮಾರ್ಚ್ 31ರವರೆಗೆ ಅವಕಾಶವಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ‘ಮಜಾ’ಕ್ಕಾಗಿ ಶೈನ್ ಶೆಟ್ಟಿಯನ್ನು ಬಳಸಿಕೊಳ್ಳುತ್ತಿದ್ದಾರೆಯೇ ಚೈತ್ರ ಕೊಟ್ಟೂರು.. ಹೀಗೆಲ್ಲ ಮಾಡ್ತಿರೋದು ಯಾಕೆ ಗೊತ್ತಾ?

    ಪಾಸಿಟೀವೋ, ನೆಗೆಟಿವೋ.. ಒಟ್ನಲ್ಲಿ ಪ್ರಚಾರ ಸಿಕ್ಕರೆ ಸಾಕು ಅಂತ ಕೆಲ ಸಿನಿಮಾ ತಂಡವರು ಏನೇನೋ ಪ್ಲಾನ್ ಮಾಡ್ತಾರೆ. ನೆಗೆಟಿವ್ ಪಬ್ಲಿಸಿಟಿ ಆದರೂ ಪರ್ವಾಗಿಲ್ಲ, ಒಟ್ನಲ್ಲಿ ಹೆಚ್ಚು ಜನರನ್ನು ತಲುಪಲು ಗಾಂಧಿನಗರದ ಕೆಲ ಮಂದಿ ಸರ್ಕಸ್ ಮಾಡುವುದು ನಿಮಗೆಲ್ಲ ಗೊತ್ತೇ ಇದೆ. ಸೇಮ್ ಟು ಸೇಮ್ ಇದೇ ಸ್ಟ್ರಾಟೆಜಿಯನ್ನ ನಟಿ ಮತ್ತು ಬರಹಗಾರ್ತಿ ಚೈತ್ರ ಕೊಟ್ಟೂರು ‘ಬಿಗ್ ಬಾಸ್’ ಮನೆಯಲ್ಲಿ ಅಪ್ಲೈ ಮಾಡುತ್ತಿರುವ ಹಾಗಿದೆ. ‘ಬಿಗ್ ಬಾಸ್’ ಮನೆಯಲ್ಲಿ ಮೂರು ಹೊತ್ತು ಸುಮ್ಮನೆ ಇದ್ದರೆ, ಕ್ಯಾಮರಾಗಳು ಕೂಡ ಝೂಮ್…

  • ರಾಜಕೀಯ

    ಮುಂದಿನ ಬಾರಿಯ ಎಲೆಕ್ಷನ್ ನಲ್ಲೂ ಮೋದಿದೆ ಹವಾ…..! ಹೇಗಂತ ತಿಳಿಯಲು ಈ ಲೇಖನ ಓದಿ…

    ಟೈಮ್ಸ್ ನೌ ಮತ್ತು ವಿಎಂಆರ್ ನಡೆಸಿದ ಮತದಾರರ ಅಭಿಪ್ರಾಯ ಸಮೀಕ್ಷೆಯಲ್ಲಿ ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿಯೂ ಭಾರತೀಯ ಜನತಾ ಪಕ್ಷ ಜಯಭೇರಿ ಬಾರಿಸುವ ಮೂಲಕ 6ನೇ ಬಾರಿಗೆ ಅಧಿಕಾರದ ಗದ್ದುಗೆ ಏರಿ ದಾಖಲೆ ನಿರ್ಮಿಸಲಿದೆ ಎಂದು ತಿಳಿಸಿದೆ.

  • ಸುದ್ದಿ

    ‘ಗೂಗಲ್ ಪೇ’ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ!..ನೀವು ಬಳಸುತ್ತಿದ್ದಿರಾ ಅಗಾದರೆ ಇದನ್ನು ಓದಿ…

    ಭಾರತದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿರುವ ಡಿಜಿಟಲ್ ವಾಲೆಟ್ ಮತ್ತು ಜನಪ್ರಿಯ ಆನ್‌ಲೈನ್ ಪಾವತಿ ವ್ಯವಸ್ಥೆ ‘ಗೂಗಲ್ ಪೇ’ ಅಪ್ಲಿಕೇಶನ್‌ಗೆ ಇದೀಗ ಬಯೋಮೆಟ್ರಿಕ್ ಭದ್ರತೆಯನ್ನು ಪರಿಚಯಿಸಲಾಗಿದೆ. ಆಂಡ್ರಾಯ್ಡ್ 10 ನೊಂದಿಗೆ ಗೂಗಲ್ ಪರಿಚಯಿಸಿದ ಬಯೋಮೆಟ್ರಿಕ್ ಭದ್ರತೆ ವೈಶಿಷ್ಟ್ಯವನ್ನು ಗೂಗಲ್ ಪೇ ಅಪ್ಲಿಕೇಶನ್‌ನ ಇತ್ತೀಚಿನ 2.100 ಆವೃತ್ತಿಯಲ್ಲಿ ತರಲಾಗಿದ್ದು, ಇದು ಫಿಂಗರ್‌ಪ್ರಿಂಟ್ ಮತ್ತು ಮುಖ ಗುರುತಿಸುವಿಕೆ ವೈಶಿಷ್ಟ್ಯವನ್ನು ಬಳಸಿಕೊಂಡು ಬಳಕೆದಾರರು ತಮ್ಮ ಆನ್‌ಲೈನ್ ವಹಿವಾಟುಗಳನ್ನು ರಕ್ಷಿಸಲು ಅನುವು ಮಾಡಿಕೊಡಲಿದೆ. ಗೂಗಲ್ ಪೇ ಅಪ್ಲಿಕೇಶನ್‌ ಬಳಕೆದಾರರು ಈ ಹಿಂದೆ ತಮ್ಮ ವಹಿವಾಟುಗಳನ್ನು ಭದ್ರಪಡಿಸಿಕೊಳ್ಳಲು…

  • ಸಿನಿಮಾ

    ಅಂಬರೀಶ್ ರವರ ಅಂತಿಮ ದರ್ಶನ ಪಡೆಯಲು ದರ್ಶನ್ ತುಂಬಾ ಲೇಟಾಗಿ ಬಂದಿದ್ದೇಕೆ ಗೊತ್ತಾ?ಏನೆಲ್ಲಾ ಕಷ್ಟಗಳನ್ನು ನಿವಾರಿಸಿಕೊಂಡು ಬಂದು ದರ್ಶನ ಪಡೆದಿದ್ದಾರೆ ಗೊತ್ತಾ ಚಾಲೆಂಜಿಂಗ್ ಸ್ಟಾರ್!

    ರೆಬೆಲ್ ಸ್ಟಾರ್ ಅಂಬರೀಶ್ ಅವರ ನಿಧನ ಸುದ್ದಿ ಕೇಳಿ ವಿದೇಶದಲ್ಲಿ ಶೂಟಿಂಗ್ ಮಾಡುತ್ತಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಚಿತ್ರೀಕರಣವನ್ನು ನಿಲ್ಲಿಸಿ ಬಹಳ ಅಡೆ ತಡೆಗಳನ್ನು ದಾಟಿ ಬೆಂಗಳೂರಿಗೆ ಬಂದಿದ್ದಾರೆ. ಅಂಬರೀಶ್ ಅವರ ನಿಧನದ ಸುದ್ದಿ ಕೇಳಿ ದರ್ಶನ್ ಅವರು ತಮ್ಮ ಟ್ವಿಟ್ಟರಿನಲ್ಲಿ ,”ಅಂಬಿ ಅಪ್ಪಾಜಿಯನ್ನು ಕಳೆದುಕೊಂಡಿರುವದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಸ್ವೀಡನ್ ಅಲ್ಲಿ ನಡೆಯುತ್ತಿದ್ದ ಯಜಮಾನ ಶೂಟಿಂಗ್ ರದ್ದುಗೊಳಿಸಿ ಇಡೀ ತಂಡ ಆದಷ್ಟೂ ಬೇಗ ಬೆಂಗಳೂರಿಗೆ ವಾಪಸಾಗುತ್ತಿದ್ದೇವೆ” ಎಂದು ಟ್ವೀಟ್ ಮಾಡಿದ್ದರು. ಬಹುಶಃ ದರ್ಶನ್ ಅವರು ಭಯ ಪಡುವ…

  • ದೇಶ-ವಿದೇಶ

    ಇದು ಪ್ರಪಂಚದ ಮೊದಲ ಅರಣ್ಯ ನಗರ!ಎಲ್ಲಿದೆ ಗೊತ್ತಾ?ಈ ಲೇಖನಿ ಓದಿ …

    ಚೀನಾ ದೇಶವು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ. ಅದರಲ್ಲೂ ಅಭಿವೃದ್ಧಿ ಮತ್ತು ಸಾಹಸ ವಿಷಯದಲ್ಲಿ ಚೀನಾದವರು ಬೇರೆ ದೇಶಗಳಿಗಿಂತ ಭಿನ್ನ.ಏಕೆಂದರೆ ಏನಾದರೂ ಹೊಸತೊಂದು ಜಗತ್ತಿಗೆ ತೋರಿಸುತ್ತಾ ಬಂದಿದ್ದಾರೆ. ಈಗ ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಅರಣ್ಯ ನಗರ ನಿರ್ಮಾಣ ಮಾಡುವ ಹೊಸ ಸಾಹಸಕ್ಕೆ ಚೀನಾ ಮುಂದಾಗಿದೆ.

  • ಆರೋಗ್ಯ, ಉಪಯುಕ್ತ ಮಾಹಿತಿ

    ಪ್ರತೀ ದಿನ ಒಂದು ಬಾಳೆಹಣ್ಣು ತಿಂದರೆ ಏನಾಗುತ್ತೆ ಗೊತ್ತಾ..?

    ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಫಿಟ್ನೆಸ್ ಗೆ ಮಹತ್ವ ನೀಡ್ತಾರೆ. ಆರೋಗ್ಯವಾಗಿರಲು ಪ್ರಯತ್ನಿಸ್ತಾರೆ. ಆದ್ರೆ ಸಮಯದ ಅಭಾವ ಹಾಗೂ ಕೆಲಸದ ಒತ್ತಡದಿಂದಾಗಿ ಪ್ರತಿದಿನ ವ್ಯಾಯಾಮ, ಆಹಾರ ಪದ್ಧತಿಯನ್ನು ಅನುಸರಿಸುವುದು ಕಷ್ಟ. ದೇಹ ಫಿಟ್ ಆಗಿರಲು ಅನೇಕರು ಹಣ್ಣುಗಳನ್ನು ತಿನ್ನುತ್ತಾರೆ. ಇದು ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಮಹಿಳೆಯರಿಗೆ ತಮ್ಮ ಆರೋಗ್ಯದ ಬಗ್ಗೆ ಗಮನ ನೀಡಲು ಸಮಯ ಸಿಗುವುದಿಲ್ಲ. ಕೆಲಸ, ಮಕ್ಕಳು, ಅಡುಗೆಯಲ್ಲಿ ಬ್ಯುಸಿಯಾಗಿರುವ ಅವರು ಆರೋಗ್ಯದ ಬಗ್ಗೆ ಲಕ್ಷ್ಯ ನೀಡುವುದಿಲ್ಲ. ಇಂತ ಮಹಿಳೆಯರು ದಿನಕ್ಕೊಂದರಂತೆ ಬಾಳೆ ಹಣ್ಣು ತಿಂದರೆ…