News

ವಿಜಯನಗರದಲ್ಲಿ ಭಿಕ್ಷಾಟನೆ ಜಾಲ: ಶಾಲೆ ರಜೆ ಎಂದು ಮಕ್ಕಳನ್ನೇ ಭಿಕ್ಷೆಗೆ ಇಳಿಸಿದ್ದ ತಾಯಂದಿರು
ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದು ಇತಿಹಾಸ ಬರೆದ ಆರ್‌ಸಿಬಿ – ಬೆಂಗಳೂರು
ಶಿಕ್ಷಕರಿಗೆ ಎಐ (AI) ಆಧರಿತ ಹಾಜರಾತಿ ಫಜೀತಿ;
“ಸಿದ್ದರಾಮಯ್ಯ ಸೀಕ್ರೆಟ್ ರಿವೇಂಜ್‌, ಡಿಕೆಶಿ ಮತ್ತು ರಾಹುಲ್‌ ಗಾಂಧಿಗೆ ಸೈಲೆಂಟ್ ಏಟು”
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಘೋಷಣೆ – ಡಿಕೆ ಶಿವಕುಮಾರ್ ಮುಂದಿನ ಸಿಎಂ?
ಸ್ಟೈಲ್‌ಗಾಗಿ ಕಡಿಮೆ ಬೆಲೆಯ ಸನ್‌ಗ್ಲಾಸ್ ಧರಿಸುತ್ತೀರಾ? ಹಾಗಾದರೆ ಈ ಅಪಾಯಗಳ ಬಗ್ಗೆ ತಿಳಿಯಲೇಬೇಕು!
DIGITAL ARREST SCAM : ವೃದ್ಧೆ ಆಸ್ತಿ ಮಾರಿ ಖಾತೆಯಲ್ಲಿಟ್ಟಿದ್ದ 24 ಕೋಟಿ ರೂ ಲೂಟಿ
ಭಾರತದಲ್ಲಿ ಚಿನ್ನದ ಬೇಡಿಕೆಗೆ ದೊಡ್ಡ ಹೊಡೆತ ಬಿದ್ದಿದೆ.
ಸಿಲ್ಕಿ ಮತ್ತು ಶೈನಿಂಗ್ ಕೂದಲಿಗೆ ಬೀಟ್ರೂಟ್‌ನ ಈ ಹೇರ್ ಕೇರ್ ಟಿಪ್ಸ್ ಪ್ರಯತ್ನಿಸಿ
ರಾಜ್ಯದ ಜನತೆಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಶಾಕ್
ಜ್ಯೋತಿಷ್ಯ

ಶನಿವಾರದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

337

ಇಂದು ಶನಿವಾರ,  17/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

ಮೇಷ:

ಧನಾಗಮನ ನಿಮ್ಮ ನಿರೀಕ್ಷೆಯಂತಿರುವುದಿಲ್ಲ. ಆದಷ್ಟೂ ಎರಡೆರಡು ಬಾರಿ ಚಿಂತಿಸಿ ನಿಮ್ಮ ಕೆಲಸಗಳನ್ನು ಮುಂದುವರೆಸಿ.  ಬಾಕಿಯಿರುವ ಮನೆಕೆಲಸಗಳು ನಿಮ್ಮ ಸ್ವಲ್ಪ ಸಮಯ ತೆಗೆದುಕೊಳ್ಳುತ್ತವೆ.ನಿಮ್ಮ ಬುದ್ದಿಶಕ್ತಿ ಮತ್ತು ನೀವು ಸಾಮಾಜಿಕಾರ್ಯಗಳಲ್ಲಿ ತೊಡಗಿಕೊಳ್ಳುವ ರೀತಿ,ಜನರು ನಿಮ್ಮ ಕಡೆಗೆ ಬರುವಂತೆ,ನಿಮ್ಮನ್ನು ಹೊಗಳುವಂತೆ ಮಾಡುತ್ತದೆ.ಈ ದಿನ ನೀವು ಒಂದು ವಿಶೇಷವಾದ ಜವಾಬ್ದಾರಿ ನಿಮ್ಮ ಮೇಲೆ ಬರಲಿದೆ.

ವೃಷಭ:-

ಕೆಲವು ಮೂಲಗಳಿಂದ ನಿಮಗೆ ಹಣದ ಆಗಮನವಾಗಲಿದೆ.ನಿಮ್ಮ ಪಿತ್ರನಿಂದಲೂ ನಿಮಗೆ ಹಣದ ಸಹಾಯವಾಗಲಿದೆ.ನಿಮಗೆ ಧೈರ್ಯವನ್ನು ಹೇಳುವ ಮತ್ತು ನಿಮ್ಮ ಜೊತೆ ಸಕಾರಾತ್ಮಕವಾಗಿ ಸ್ಪಂದಿಸುವ ಜನರೊಂದಿಗೆ ಬೆರೆಯಿರಿ.ಹಣಕಾಸು ಬರುವಿಕೆ ಉತ್ತಮವಾಗಲಿದೆ, ಹೊಸ ಕೆಲಸಕ್ಕೆ ಕೈ ಹಾಕುವ ಮುಂಚೆ ಹಲವು ಬಾರಿ ಯೋಚಿಸಿ ನಿಮಗೆ ಅವಶ್ಯವೆನಿಸಿದ ಕಾರ್ಯ ಆಯ್ಕೆಮಾಡಿಕೊಳ್ಳಿ.

ಮಿಥುನ:

ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುಂಚೆ, ನಿಮ್ಮ ಹಿರಿಯರ ಸಲಹೆಯನ್ನು ಕೇಳುವುದು ಉತ್ತಮ. ಈ ನಿಮ್ಮ ಮನಸ್ಥಿತಿ ಸಾಕಷ್ಟು ಉಲ್ಲಾಸಿತವಾಗಿರುತ್ತದೆ. ಮೇಲಧಿಕಾರಿಗಳಿಂದ ನಿಮ್ಮೆ ಕೆಲಸಕ್ಕೆ ಹೊಗಳಿಕೆ ಸಿಗಲಿದೆ. ದೇಹದಲ್ಲಿ ಉಷ್ಣಾಂಶ ಏರುಪೇರಾಗಿ ಆರೋಗ್ಯದಲ್ಲಿ ವ್ಯತ್ಯಾಸ.ನಿಮ್ಮ ವ್ಯವಹಾರದಲ್ಲಿ ಪ್ರಾಮಾಣಿಕವಾಗಿರಿ, ಇದರಿಂದ ಎಲ್ಲರೂ ನಿಮಗೆ ಸಹಾಯ ಮಾಡುತ್ತಾರೆ.ಸಕಾರಾತ್ಮಕ ಚಿಂತನೆ ಮಾಡುವುದರಿಂದ ಆರೋಗ್ಯದಲ್ಲಿ ಸುಧಾರಣೆ.

ಕಟಕ :-

ಹಣಕಾಸಿನ ಹರಿವು ತ್ತಮವಾಗಿರುತ್ತದೆ.ನಿಮ್ಮ ನೆರೆಹೊರೆಯ ಜನರೊಂದಿಗೆ ಜಗಳ ಬೇಡ,ನೀವು ಅವರೊಂದಿಗೆ ಬೆರೆಯುವುದರಿಂದ ಹೆಚ್ಚು ಗೌರವ ನಿಮ್ಮದಾಗುತ್ತದೆ.ನಿಮ್ಮ ನೆಂಟರು ನಿಮ್ಮ ಉದಾರ ಮನಸ್ಸಿನ ಲಾಭ ಪಡೆಯುವ ಸಾಧ್ಯತೆ ಇದೆ.ಇದರಲ್ಲಿ ನೀವು ಹೇಮಾರಿದರೆ ಮೋಸ ಹೋಗುವ ಸಾಧ್ಯತೆ ಇದೆ.ಆರೋಗ್ಯದಲ್ಲಿ ಅಲ್ಪ ತೊಂದರೆಉಂಟಾಗಿ ಹಣದ ಖರ್ಚಾಗುವುದು.

 ಸಿಂಹ:

ಪ್ರಭಾವಿ ಎನಿಸಿರುವ ವ್ಯಕ್ತಿಗಳು ನಿಮ್ಮನ್ನು ಸಂಪರ್ಕಿಸುತ್ತಾರೆ.ನೀವು ಅನಗತ್ಯ ವಿಚಾರಗಳನ್ನು ಮಾತನಾಡುವುದು ಬೇಡ,ಏಕೆಂದರೆ ನಿಮ್ಮ ಅನಗತ್ಯ ಮಾತುಗಳಿಗೆ,ಕೆಲಸಕ್ಕೆ ಬಾರದ ಮಾತುಗಳನ್ನು ಸೇರಿಸಿ ನಿಮ್ಮ ಮೇಲೆ ಅಪನಂಬಿಕೆ ಬರುವಂತೆ ಮಾಡುತ್ತಾರೆ.ದೊಡ್ಡವರೊಂದಿಗೆ ಮತ್ತು ನಿಮ್ಮ ನೆಂಟರೊಂದಿಗೆ ಬೇಡವಾದ ವಾದ ಮಾಡಿ ಕೆಟ್ಟವರಾಗಬೇಡಿ.ಬೇರೆಯವರ ಮೇಲೆ ನಿಮ್ಮ ಪ್ರಭಾವ ಬೀರಲು ಹಣದ ಪೋಲು ಮಾಡಬೇಡಿ.

ಕನ್ಯಾ :-

ನಿಮ್ಮ ಮಾತಿನ ಮೇಲೆ ಎಚ್ಚರ ಇರಲಿ.ನಿಮ್ಮ ತಮಾಷೆ ಮಾತುಗಳು ಸಹ ಗಂಡ ಹೆಂಡತಿಯಲ್ಲಿ ಜಗಳವಾಗುವಂತೆ ಮಾಡಲಿದೆ.ಹಾಗಾಗಿ ಹಲವು ಬಾರಿ ಯೋಚಿಸಿ ಮಾತನಾಡಿ.ಹಣದ ಹರಿವು ಬರಲಿದೆ.ನಿಮ್ಮ ಹಿರಿಯರ ಆರೋಗ್ಯದ ಬಗ್ಗೆ ಎಚ್ಚರವಿರಲಿ.ಈರಾಶಿಯಲ್ಲಿ ಬರುವ ಮಹಿಳೆಯರಿಗೆ,ಆದಾಯ ಬರಲಿದ್ದು,ಚಿನ್ನವನ್ನು ಕೊಳ್ಳುವ ಯೋಗವಿದೆ.

ತುಲಾ:

ಆಸ್ತಿ ಖರೀದಿಸಲು ಯೋಜನೆಗಳನ್ನು ಮಾಡುತ್ತೀರಿ. ನಿಮ್ಮ ಕಾರ್ಯ ಕ್ಷೇತ್ರದಲ್ಲಿ  ಮುಖ್ಯ ಬೆಳವಣಿಗೆಯಾಗುತ್ತಿದ್ದು, ಇದರಿಂದ ನೀವು ಮತ್ತು ನಿಮ್ಮ ಇಡೀ ಕುಟುಂಬಕ್ಕೆ ಸಂತೋಷ ತರುತ್ತದೆ. ಸಂಗಾತಿಗೆ ಸ್ಥಿರಾಸ್ತಿ ಒದಗಿ ಬರುವ ಸಾಧ್ಯತೆ. ನಿಮ್ಮ ಹಠಮಾರಿತನ ಬಿಟ್ಟುಬಿಡಿ. ಈ ಸ್ವಭಾವ ಜನರ ಬಳಿ ನಿಷ್ಠುರವಾಗುವ ಸಾಧ್ಯತೆ. ವಿದೇಶದಲ್ಲಿ ವ್ಯಾಪಾರ ಮಾಡುವವರಿಗೆ ಅವರ ವ್ಯಾಪಾರದಲ್ಲಿ ಸಾಕಷ್ಠು ಪ್ರಗತಿಯಾಗುತ್ತದೆ.

ವೃಶ್ಚಿಕ :-

ನೀವೂ ತಮಾಷೆಯಾಗಿ ಮಾತನಾಡಿದ್ರು,ಕಷ್ಟಕ್ಕೆ ಬೀಳುವ ಸಾಧ್ಯತ ಇದೆ.ನಿಮ್ಮ ಯೋಜನೆಗಳು ಕೊನೆ ಕ್ಷಣದಲ್ಲಿ ಬದಲಾಗಲಿವೆ.ನಿಮ್ಮ ಮಾತಿನಿಂದ ಎಲ್ಲರನ್ನೂ ಗೆದ್ದರೂ ಅದೇ ಸಮಸ್ಯಯನ್ನು ತರಬಹುದು.ನಿಮ್ಮ ಪರಾಕ್ರಮದಿಂದ ಬೇರೆಯವರ ಸಹಾಯಕ್ಕೆ ಹೋಗುತ್ತೀರಿ.ಈ ದಿನ ನಿಮ್ಮ ವೈವಾಹಿಕ ಜೀವನ ಉತ್ತಮವಾಗಿರುತ್ತದೆ.

ಧನಸ್ಸು:

ಕಚೇರಿಯಲ್ಲಿ ಹೊಸ ಜವಾಬ್ದಾರಿ ಲಭಿಸಲಿದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಮಕ್ಕಳು ಮತ್ತು ಅಣ್ಣ ತಮ್ಮಂದಿರ ನಡುವೆ ಸಂಭಂದ ಹೆಚ್ಚಲಿದೆ. ಕೆಲವರಿಗೆ ಪ್ರಯಾಣದ ಗಡಿಬಿಡಿ ಮತ್ತು ಒತ್ತಡದಿಂದ ಕೂಡಿರುತ್ತವೆ,ಆದರೆ ಆರ್ಥಿಕವಾಗಿ ಲಾಭದಾಯಕವಾಗಿರುತ್ತವೆ.ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ. ಪ್ರಯಾಣಮಾಡುವಾಗ ಎಚ್ಚರಿಕೆ ಅಗತ್ಯ.

ಮಕರ :-

ವಿರಸ ಮೂಡಿದ್ದ ದಾಂಪತ್ಯದಲ್ಲಿ ತಣ್ಣನೆ ಗಾಳಿ ಬೀಸಲು ಶುರುವಾಗಲಿದೆ.ಆರ್ಥಿಕ ಸ್ಥಿತಿ ಸಾಧಾರಣವಾಗಿರುತ್ತದೆ. ವಿದ್ಯಾರ್ಥಿಗಳಿಗೆ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಹಿರಿಯರ ಸಹಾಯದಿಂದ ಅಧಿಕಾರದಲ್ಲಿ ಅಭಿವೃದ್ಧಿ.ಭಗವಂತನ ಕೃಪೆಯಿಂದ ಎಲ್ಲಾ ಒಳ್ಳೆಯದಾಗಲಿದೆ.ನಿಮ್ಮ ಪ್ರಯಾಣದ ವೆಳಾಪಟ್ಟಿ ಕೊನೆಗಳಿಗೆಯಲ್ಲಿ ಬದಲಾವಣೆಯಾಗಲಿದೆ.

ಕುಂಭ:-

ಗುರುಹಿರಿಯರ ಆಶೀರ್ವಾದ ಪಡೆಯಿರಿ. ಇದರಿಂದ ಒಳಿತಾಗುವುದು. ಹಣಕಾಸು ಸ್ಥಿತಿ ಉತ್ತಮವಾಗಿರುತ್ತದೆ. ಸಾಲ ತೆಗೆದುಕೊಂಡಿದ್ದವರಿಗೆ ಎಲ್ಲವನ್ನೂ ತೀರಿಸುವ ಅವಕಾಶ ಒದಗುತ್ತದೆ. ನಿಮ್ಮ ಸಂಗಾತಿಯ ಕುಟುಂಬದ ಸದಸ್ಯರ ಅಡ್ಡಿಯ, ಕಾರಣ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಉಂಟಾಗುವುದು. ವ್ಯಾಪಾರದಲ್ಲಿ ಎಂದಿನಂತೆ ಲಾಭ ಬರುತ್ತವೆ.

ಮೀನ:-

ಮಾನಸಿಕ ನೆಮ್ಮದಿ ದೊರೆಯಲಿದೆ. ಹೊಸ ವ್ಯವಹಾರಗಳು ನಿಮ್ಮ ವ್ಯಕ್ತಿತ್ವವನ್ನು ಎತ್ತರದ ಶ್ರೇಣಿಗೆ ಒಯ್ಯುತ್ತವೆ. ಈ ದಿನ ನೀವು ಮನರಂಜನೆಯಲ್ಲಿ ಕಳೆಯಲಿದ್ದೀರಿ.ಬುದ್ಧಿವಂತಿಕೆಯಿಂದ ವ್ಯವಹಾರ ಮಾಡುವಿರಿ. ಕೆಲಸದ ಸ್ಥಳದಲ್ಲಿ ತಲೆ ತಿನ್ನುವ ಜನರು ಬಂದು ನಿಮ್ಮ ಆತ್ಮವಿಶ್ವಾಸಕ್ಕೆ ಧಕ್ಕೆ ತರುವವರು.ನಿಮ್ಮ ಹೆಂಡತಿಯೊಂದಿಗೆ ಸಂಬಂದ ಉತ್ತಮಗೊಳ್ಳುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಬಡ ಮಕ್ಕಳಿಗಾಗಿ ಶಾಲೆ ಆರಂಭಿಸಿದ ಸನ್ನಿ ಲಿಯೋನ್….!

    ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಅವರು ತಮ್ಮ ಪತಿ ಡೇನಿಯಲ್ ವೆಬರ್ ಜೊತೆ ಸೇರಿ ಚಿಕ್ಕ ಮಕ್ಕಳಿಗಾಗಿ ಶಾಲೆಯನ್ನು ಆರಂಭಿಸಿದ್ದಾರೆ. ಮಕ್ಕಳಿಗೆ ದೈಹಿಕ ಹಾಗೂ ಬೌದ್ಧಿಕ ವಿಕಾಸಕ್ಕೆ ಕಲ್ಪಿಸುವುದು ನಮ್ಮ ಉದ್ದೇಶ. ಮಕ್ಕಳು ಕೇವಲ ಪಠ್ಯಪುಸ್ತಕಕ್ಕೆ ಮಾತ್ರ ಸೀಮಿತವಾಗಿರಬಾರದು. ಅವರು ಪ್ರಪಂಚದಲ್ಲಿ ನಡೆಯುತ್ತಿರುವ ಪ್ರತಿಯೊಂದು ವಿಷಯದ ಬಗ್ಗೆ ತಿಳಿದುಕೊಂಡಿರಬೇಕು. ಮಕ್ಕಳು ಮಜಾ ಮಾಡಬೇಕು ಎಂಬುದು ನನ್ನ ಉದ್ದೇಶ ಎಂದು ಸನ್ನಿ ಲಿಯೋನ್ ಹೇಳಿದ್ದಾರೆ. ಸನ್ನಿ ಲಿಯೋನ್ ಅವರಿಗೆ ಮಕ್ಕಳೆಂದರೆ ತುಂಬಾನೇ ಇಷ್ಟ. ಅವರು ಮೂರು ಮಕ್ಕಳ ತಾಯಿ…

  • ವಿಚಿತ್ರ ಆದರೂ ಸತ್ಯ

    ಈ ರಾಜ್ಯದಲ್ಲಿ ‘ಹೆಂಡ್ತಿ ಹೊಡಿತಾಳೆಂದು ದೂರು’ ನೀಡಿರುವ ಪ್ರಕರ್ಣಗಳೆ ಜಾಸ್ತಿ..!ತಿಳಿಯಲು ಈ ಲೇಖನ ಓದಿ..

    ವೈವಾಹಿಕ ಹಿಂಸೆ, ಕೌಟುಂಬಿಕ ಕಲಹ ಪ್ರಕರಣಗಳಲ್ಲಿ ಮಹಿಳೆಯರಿಂದ ಹೆಚ್ಚಿನ ದೂರು ದಾಖಲಾಗುವುದು ಸಾಮಾನ್ಯ ಸಂಗತಿ. ಆದರೆ, ಉತ್ತರ ಪ್ರದೇಶದಲ್ಲಿ 6500 ಕ್ಕೂ ಅಧಿಕ ಮಂದಿ ತಮ್ಮ ಪತ್ನಿ ಹೊಡಿತಾಳೆ ಎಂದು ಯು.ಪಿ. -100 ಗೆ ಕರೆ ಮಾಡಿದ್ದಾರೆ.

  • ಜೀವನಶೈಲಿ, ಜ್ಯೋತಿಷ್ಯ

    ಊಟದ ನಂತರ ಹೀಗೆ ಮಾಡಿದರೆ ದಾರಿದ್ಯ ಆವರಿಸಿ ಒಂದು ಹೊತ್ತು ಊಟಕ್ಕೂ ಕಷ್ಟ ಪಡುವಂತಹ ಸ್ಥಿತಿ ಬರುತ್ತದೆ..!

    ನಮ್ಮ ಹಿಂದೂ ಧರ್ಮದಲ್ಲಿ ಎಲ್ಲಾ ಶಾಸ್ತ್ರ ಸಂಪ್ರದಾಯಗಳ ಹಿಂದಿಯು ಒಂದು ವೈಜ್ಞಾನಿಕ ಕಾರಣ ಅಥವಾ ಒಂದು ಮಹತ್ತರವಾದ ಉದ್ದೇಶ ಇರುತ್ತದೆ.  ಹಾಗೆಯೇ ನಾವು ಊಟ ಮಾಡುವುದಕ್ಕೂ ಒಂದಷ್ಟು ವಿಧಿ-ವಿಧಾನ  ಪದ್ಧತಿಗಳಿವೆ. ನಮ್ಮ ಸಂಪ್ರದಾಯದಲ್ಲಿ ನೆಲದ ಮೇಲೆ ಕುಳಿತು ಊಟ ಮಾಡುವುದು ರೂಢಿ. ಊಟಕ್ಕಾಗಿ ಬಾಳೆ ಎಲೆ ಇಲ್ಲವೇ ಬೆಳ್ಳಿಯ ಅಥವಾ ಚಿನ್ನದ ತಟ್ಟೆಯನ್ನು ಬಳಸುತ್ತಾರೆ. ಇದರ ಹಿಂದೆಲ್ಲ ಒಂದು ಮಹತ್ವವಿದೆ. ಹಾಗೆಯೇ, ನಾವು ಊಟ ಮಾಡಿದ ಬಳಿಕ ಕೆಲವೊಂದು ತಪ್ಪುಗಳನ್ನು ಮಾಡ ಬಾರದು. ಹೀಗೆ ಮಾಡಿದಲ್ಲಿ ನಮಗೆ ಕೆಡುಕು…

  • ಆರೋಗ್ಯ

    ನೆಲ್ಲಿಕಾಯಿಯಲ್ಲಿರುವ ಔಷದಿ ಗುಣಗಳ ಬಗ್ಗೆ ..! ತಿಳಿಯಲು ಈ ಲೇಖನ ಓದಿ…

    ನೆಲ್ಲಿಕಾಯಿ ಹೆಸರು ಕೇಳಿದ ಕೂಡಲೆ ನಿಮ್ಮ ಬಾಯಲ್ಲಿ ನೀರೂರಲು ಆರಂಭವಾಗದಿದ್ದರೆ ನಿಮ್ಮ ನಾಲಿಗೆಯಲ್ಲಿರುವ ಸ್ವಾದ ಗ್ರಂಥಿಗಳು ಸತ್ತಿವೆ ಎಂದೇ ಅರ್ಥ. ಉಪ್ಪು ಖಾರ ಮಿಶ್ರಣವನ್ನು ಹಚ್ಚಿ ಚುರಕ್ ಅಂತ ಕಚ್ಚಿದಾಗ ಲಾವಾರಸದ ಬುಗ್ಗೆಯುಕ್ಕಿಸುವ ಮತ್ತು ಹಲ್ಲನ್ನು ಚುಳ್ ಎನ್ನಿಸುವ ನಾಡಿನ ನೆಲ್ಲಿಕಾಯಿ ಒಂದು ಬಗೆಯದಾದರೆ. ಔಷಧೀಯ ಗುಣಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡಿರುವ ಒಗರು ಒಗರು ಬೆಟ್ಟದ ನೆಲ್ಲಿಕಾಯಿ ಮಹಿಮೆ ಹೇಳಬೇಕೆಂದರೆ ಒಂದು ಥೀಸಸ್ ಬರೆಯಬೇಕಾಗುತ್ತದೆ. ಶತಮಾನಗಳಿಂದ ಬಳಸಿಕೊಂಡು ಬರಲಾಗುತ್ತಿರುವ, ಆಯುರ್ವೇದದಲ್ಲಿ ಪ್ರಧಾನ ಗಿಡ ಮೂಲಿಕೆಯಾಗಿರುವ ಬೆಟ್ಟದ ನೆಲ್ಲಿಕಾಯಿ ಅಥವಾ…

  • ಜ್ಯೋತಿಷ್ಯ

    ಧರ್ಮಸ್ಥಳ ಮಂಜುನಾಥಸ್ವಾಮಿಯನ್ನು ನೆನೆಯುತ್ತಾ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(15 ಏಪ್ರಿಲ್, 2019) ನಿಯಮಿತ ತೊಂದರೆ ನಿಮಗೆ ಕೆಲವು ಸಮಸ್ಯೆಗಳನ್ನು ಉಂಟುಮಾಡಬಹುದು. ನಿಮ್ಮ ನರಮಂಡಲದ ಕಾರ್ಯವೆಸಗುತ್ತಿರಲು ಸಂಪೂರ್ಣ ವಿಶ್ರಾಂತಿ…

  • ಸಿನಿಮಾ

    ವೈರಲ್ ಆಯ್ತು ರಾತ್ರೋ ರಾತ್ರಿ ಸ್ಟಾರ್ ಆದ ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ಕಿಸ್ಸಿಂಗ್ ವಿಡಿಯೋ..!

    ಕಣ್ಸನ್ನೆ ಮೂಲಕ ರಾತ್ರೋರಾತ್ರಿ ನ್ಯಾಷನಲ್ ಸ್ಟಾರ್ ಆದ ಮಲಯಾಳಂ ನಟಿ ಪ್ರಿಯಾ ವಾರಿಯರ್ ಅವರ ಲಿಪ್ ಲಾಕ್ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪ್ರಿಯಾ ತಮ್ಮ ಮುಂಬರುವ ‘ಒರು ಅಡಾರ್ ಲವ್’ ಚಿತ್ರದಲ್ಲಿ ನಟ ರೋಶನ್ ಅಬ್ದುಲ್ ರಹೂಫ್ ಅವರಿಗೆ ಕಣ್ಣು ಹೊಡೆದ ವಿಡಿಯೋ ವೈರಲ್ ಆಗಿತ್ತು. ಈಗ ಇದೇ ಚಿತ್ರದ ಪ್ರೋಮೋವೊಂದು ಬಿಡುಗಡೆ ಆಗಿದೆ.ಈ ಪ್ರೋಮೋದಲ್ಲಿ ರೋಶನ್ ಹಾಗೂ ಪ್ರಿಯಾ ಲಿಪ್ ಲಾಕ್ ಮಾಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ. ವೈರಲ್…