ದೇಶ-ವಿದೇಶ

ವೃದ್ಧ ತಂದೆ ತಾಯಿಗಳನ್ನು ವೃದ್ಧಾಶ್ರಮಗಳಲ್ಲಿ ಸೇರಿಸುವ ಮಕ್ಕಳಿಗೆ ಕಾದಿದೆ ಮಾರಿ ಹಬ್ಬ!ಮೋದಿ ಸರ್ಕಾರ ತರಲಿದೆ ಹೊಸ ಕಾನೂನು?

409

ಈಗಿನ ಕಾಲದಲ್ಲಿ ಮಕ್ಕಳಿಗೆ ತಮ್ಮನ್ನು ಸಾಕಿ ಬೆಳೆಸಿದ ತಂದೆ ತಾಯಿಗಳನ್ನು ಸಾಕುವುದೇ ದೊಡ್ಡ ಕಷ್ಟವೆನಿಸಿದೆ.ಹಾಗಾಗಿ ತಮ್ಮ ವೃದ್ಧ ತಂದೆ ತಾಯಿಗಳನ್ನು ವೃದ್ಧಾಶ್ರಮಗಳಲ್ಲಿ ಸೇರಿಸುವುವರೇ ಹೆಚ್ಚು. ಆದರೆ ಇನ್ನು ಮುಂದೆ ಹಾಗೆ ಮಾಡುವ ಆಗಿಲ್ಲ.

 

ಮೋದಿ ಸರ್ಕಾರದಿಂದ ಬರಲಿದೆ ಹೊಸ ಕಾನೂನು :-

ಏಕೆಂದರೆ ನರೇಂದ್ರ ಮೋದಿ ಸಾರಥ್ಯದ ಕೇಂದ್ರ ಸರ್ಕಾರವು, ವೃದ್ಧ ಪೋಷಕರನ್ನು ತೊರೆಯುವ ಮಕ್ಕಳ ವಿರುದ್ಧ ಛಾಟಿ ಬೀಸಲು ನಿರ್ಧರಿಸಿದ್ದು, ಆಶ್ರಮಕ್ಕೆ ತೆರಳುವ ಪೋಷಕರಿಗೆ ಮಾಸಿಕ 30 ಸಾವಿರ ರು.ಹಣವನ್ನು ನೀಡಬೇಕು  ಎನ್ನುವ ಹೊಸ ಕಾನೂನು ರಚನೆ ಮಾಡಲು ಸರ್ಕಾರ ಮುಂದಾಗಿದೆ.

 

ಹಿರಿಯ ನಾಗರಿಕರ ನೆರವಿಗೆ ಬರಲಿದೆ ಕೇಂದ್ರ ಸರ್ಕಾರ :-

ಮಕ್ಕಳಿಂದ ನಿರ್ಲಕ್ಷಿತರಾಗಿ ವೃದ್ಧಾಶ್ರಮಗಳಲ್ಲಿರುವ ಹಿರಿಯ ನಾಗರಿಕರ ನೆರವಿಗೆ ಕೇಂದ್ರ ಸರ್ಕಾರ ಧಾವಿಸಲಿದ್ದು, ಮಕ್ಕಳಿಂದ ಬೇರ್ಪಟ್ಟು ವೃದ್ಧಾಶ್ರಮಗಳಲ್ಲಿರುವ ಹಿರಿಯ ನಾಗರಿಕರು ಅಥವಾ ತಂದೆ-ತಾಯಂದಿರಿಗೆ ಮಕ್ಕಳು /  ಸಂಬಂಧಿಕರು ನೀಡುವ ಮಾಸಾಶನವನ್ನು ಈಗಿನ 10 ಸಾವಿರ ರು.ನಿಂದ 25 ಸಾವಿರ ರು. ಅಥವಾ 30 ಸಾವಿರ ರು.ಗೆ ಹೆಚ್ಚಿಸಲು ಶಾಸನ ತಿದ್ದುಪಡಿಗೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ.

ಮುಂಚೆ ಈ ಕಾನೂನು ಇರಲಿಲ್ವ?

ಪಾಲಕರು ಮತ್ತು ಹಿರಿಯ ನಾಗರಿಕರ ಮಾಸಾಶನ ಕಾಯ್ದೆ-2007 ಈಗಾಗಲೇ ಜಾರಿಯಲ್ಲಿದ್ದು, ಅದರಂತೆ ಹಿರಿಯ ನಾಗರಿಕರು (60 ವರ್ಷ ಮೇಲ್ಪಟ್ಟವರು) ಹಾಗೂ ಪಾಲಕರು (ಯಾವುದೇ ವಯಸ್ಸಿನ ನಿರ್ಬಂಧ ಇಲ್ಲ)  ವೃದ್ಧಾಶ್ರಮಗಳಲ್ಲಿ ಇದ್ದರೆ ಅವರಿಗೆ ಅವರ ಮಕ್ಕಳು ಮಾಸಿಕ 10 ಸಾವಿರ ರು. ನೀಡಬೇಕು ಎಂಬ ನಿಯಮವಿದೆ.

ಆದರೆ ಈ ಹಣ ಪಾಲಕರಿಗೆ ಸಾಲುತ್ತಿಲ್ಲ. ಮೇಲಾಗಿ ಹಲವಾರು ಮಕ್ಕಳಿಗೆ ಹೆಚ್ಚಿನ ಮೊತ್ತ ನೀಡುವ ಶಕ್ತಿ ಇದ್ದರೂ  ಕಾನೂನಿನ ನೆಪ ಹೇಳಿ ನೀಡುತ್ತಿಲ್ಲ ಎಂಬ ಆರೋಪಗಳು ಕೂಡ ಕೇಳಿಬರುತ್ತಿವೆ.

ಕಾನೂನು ಪಾಲನೆ ಮಾಡ್ದೆ ಇದ್ದಲ್ಲಿ ಏನಾಗುತ್ತೆ?

ಅಂತೆಯೇ ಮಕ್ಕಳು ಪೋಷಕರಿಗೆ ಹಣ ನೀಡದೇ ಹೋದರೆ  3 ತಿಂಗಳು ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ ಎಂದೂ ಕೂಡ ಅವರು ತಿಳಿಸಿದ್ದಾರೆ. ಭಾರತದಲ್ಲಿ 11 ಕೋಟಿಗೂ ಅಧಿಕ ವೃದ್ಧ ಮತ್ತು  ಹಿರಿಯ ನಾಗರಿಕರು ಇದ್ದು, ಈ  ಪೈಕಿ ಬಹುತೇಕ ಮಂದಿ ಮಕ್ಕಳಿಂದ ಬೇರ್ಪಟ್ಟಿದ್ದಾರೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ