ಉಪಯುಕ್ತ ಮಾಹಿತಿ

ವೀಳ್ಯದೆಲೆಯಾ ಬಗ್ಗೆ ನಿಮ್ಗೆ ಗೊತ್ತಿಲ್ಲದಿರೋ ಮಾಹಿತಿ…ತಿಳಿಯಲು ಈ ಲೇಖನ ಓದಿ ಮತ್ತು ಮರೆಯದೇ ಶೇರ್ ಮಾಡಿ..

751

ವೀಳ್ಯದೆಲೆ ಎಂದರೆ ನೆನಪಾಗುವುದು ತಾಂಬೂಲ. ಎಲ್ಲಾ ಶುಭ ಸಮಾರಂಭದಲ್ಲಿ ಹೆಚ್ಚು ಬಳಸುವ ಎಲೆ.ತಾಂಬೂಲದಲ್ಲಿ ಪ್ರಮುಖ ಸ್ಥಾನ ಹೊಂದಿರುವ ವೀಳ್ಯದೆಲೆಗೆ ಸದಾ ಬೇಡಿಕೆ ಇದೆ. ನಿಶ್ಚಿತಾರ್ಥ, ಮದುವೆ, ಮುಂಜಿ, ವ್ರತ ಹೀಗೆ ಏನೇ ಮಂಗಳ ಕಾರ್ಯಗಳಿದ್ದರೂ ವೀಳ್ಯದೆಲೆ ಬೇಕೇ ಬೇಕು. ಊಟದ ನಂತರ ತಾಂಬೂಲ ಹಾಕಿಕೊಳ್ಳಲಂತೂ ಈ ಎಲೆ ಅತ್ಯಗತ್ಯ.ಆದರೆ ಸಾಂಪ್ರದಾಯಕವಾಗಷ್ಟೆ ಅಲ್ಲ, ಇದರ ಔಷಧೀಯ ಗುಣಗಳು ಕೂಡ ಹಲವು.

ಆದರೆ ರಕ್ತಸ್ರಾವ, ಪಿತ್ತದಿಂದ ತಲೆ ಸುತ್ತು ಹಾಗೂ ತಿವಿದ ಗಾಯವಾಗಿದ್ದರೆ ವೀಳ್ಯದೆಲೆಯನ್ನು ಸೇವಿಸಬಾರದು. ವೀಳ್ಯೆದೆಲೆಯನ್ನು ಹೆಚ್ಚಾಗಿ ಬಳಸಿದಲ್ಲಿ ಲಿವರ್ ಬೇಗ ಕ್ರಿಯಾ ಹೀನವಾಗಬಹುದು.

ಏಳು ಬಗೆಯ ವೀಳ್ಯದೆಲೆಗಳನ್ನು ಆಯುರ್ವೇದದಲ್ಲಿ ಬಣ್ಣಿಸಲಾಗಿದೆ. ವೀಳ್ಯದೆಲೆಯಿಂದಾದ ಹೆಂಡವನ್ನು ಆಯುರ್ವೇದದಲ್ಲಿ ಕೆಲ ರೋಗಗಳಿಗೆ ಮದ್ದನ್ನಾಗಿ ಉಪಯೋಗಿಸಲು ಹೇಳಿದೆ.

  • ಗಾಯಕ್ಕೆ ವೀಳ್ಯದೆಲೆಯ ರಸದ ಜೊತೆಗೆ ನಿಂಬೆಹಣ್ಣನ್ನು ಬೆರೆಸಿ ಹಚ್ಚಿದರೆ ಗಾಯ ಬೇಗ ಗುಣವಾಗುತ್ತದೆ.
  • ವೀಳ್ಯದೆಲೆಯನ್ನು ಕಿವಿಗಳ ಮೇಲೆ ಕಟ್ಟಿದರೆ ಗ್ಯಾಸ್ಟಿಕ್‌ನಿಂದ ಉಂಟಾಗುವ ತಲೆನೋವು ಗುಣವಾಗುತ್ತದೆ.
  • ಒಂದೆರಡು ವೀಳ್ಯದೆಲೆಯನ್ನು ದಿನಕ್ಕೆ ಎರಡು -ಮೂರು ಬಾರಿ ಜಗಿದರೆ ಕಫಯುಕ್ತ ಕೆಮ್ಮು ಕಡಿಮೆಯಾಗುತ್ತದೆ.
  • ವೀಳ್ಯದೆಲೆಯನ್ನು ಸರಿಯಾಗಿ ಸ್ವಚ್ಛಗೊಳಿಸಿ ಅದನ್ನು ರುಬ್ಬಿ ಸಾವಯವ ಜೇನುತುಪ್ಪ ಬೆರೆಸಿ ಸುಟ್ಟ ಜಾಗಕ್ಕೆ ಹಚ್ಚಿಕೊಳ್ಳಿ. ಇದ್ರಿಂದ ಸುಟ್ಟ ಉರಿ ಕಡಿಮೆಯಾಗಿ ಹಿತವೆನಿಸುತ್ತದೆ.

  • ವೀಳ್ಯದೆಲೆ ರಸಕ್ಕೆ, ತುಳಸಿ ಎಲೆಯ ರಸ, 1 ಚಮಚ ಜೇನುತುಪ್ಪ ಸೇರಿಸಿ ಸೇವಿಸಿದರೆ ನೆಗಡಿ ವಾಸಿ.
  • 5 ವೀಳ್ಯದೆಲೆಯನ್ನು ತೆಗೆದುಕೊಳ್ಳಿ. ಅದನ್ನು ಸ್ವಚ್ಛವಾಗಿ ತೊಳೆಯಿರಿ. ನಂತ್ರ ವೀಳ್ಯದೆಲೆಯನ್ನು ರುಬ್ಬಿ ಒಂದು ಟೀ ಚಮಚ ಜೇನು ತುಪ್ಪವನ್ನು ಬೆರೆಸಿ ಫೇಸ್ ಪ್ಯಾಕ್ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ. ವಾರದಲ್ಲಿ ಎರಡು ಬಾರಿಯಂತೆ 2 ತಿಂಗಳು ಮಾಡಿ. ಒಣಗಿದ ಚರ್ಮ ಮೃದುವಾಗಿ ಚರ್ಮ ಕಾಂತಿ ಪಡೆಯುತ್ತದೆ.
  • ಮೊಡವೆಯನ್ನು ವೀಳ್ಯದೆಲೆ ದೂರ ಮಾಡುತ್ತದೆ. ವೀಳ್ಯದೆಲೆಯನ್ನು ನೀರಿಗೆ ಹಾಕಿ ಕುದಿಸಿ. ನೀರಿನ ಬಣ್ಣ ಬದಲಾದ ತಕ್ಷಣ ಗ್ಯಾಸ್ ಬಂದ್ ಮಾಡಿ. ಈ ನೀರಿನಲ್ಲಿ ಮುಖ ತೊಳೆಯುವುದರಿಂದ ಮೊಡವೆ ಕಡಿಮೆಯಾಗುತ್ತದೆ.

  • ವೀಳ್ಯದೆಲೆ ಬೇರನ್ನು ಜಗಿದರೆ ಸ್ವರವು ಮೃದುವಾಗುತ್ತದೆ.
  • ಮೊಡವೆಯನ್ನು ವೀಳ್ಯದೆಲೆ ದೂರ ಮಾಡುತ್ತದೆ. ವೀಳ್ಯದೆಲೆಯನ್ನು ನೀರಿಗೆ ಹಾಕಿ ಕುದಿಸಿ. ನೀರಿನ ಬಣ್ಣ ಬದಲಾದ ತಕ್ಷಣ ಗ್ಯಾಸ್ ಬಂದ್ ಮಾಡಿ. ಈ ನೀರಿನಲ್ಲಿ ಮುಖ ತೊಳೆಯುವುದರಿಂದ ಮೊಡವೆ ಕಡಿಮೆಯಾಗುತ್ತದೆ.
  • ಮೂರ್ನಾಲ್ಕು ಮಿಲಿ ವೀಳ್ಯದೆಲೆಯ ರಸವನ್ನು 1 ಚಮಚ ಜೇನು ತುಪ್ಪದ ಜತೆ ಸೇವಿಸಿದರೆ ಒಣ ಕೆಮ್ಮು ಕಮ್ಮಿಯಾಗುತ್ತದೆ.
  • ಕೆಮ್ಮು ಹಾಗೂ ಕಫದ ಸಮಸ್ಯೆಗೆ 1 ವೀಳ್ಯದೆಲೆಯಲ್ಲಿ ಒಂದೆರಡು ಹರಳು ಉಪ್ಪು ಹಾಗೂ ಒಂದೆರಡು ಕರಿಮೆಣಸನ್ನು ಸೇರಿಸಿ ಸೇವಿಸಬೇಕು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ