ಮನರಂಜನೆ

ವಿಷ್ಣು ಹಾಡಿಗೆ ಅವಮಾನ ಮಾಡಿದ್ರ!ಹಾಗಾದ್ರೆ ದಿವಾಕರ್ ನಿವೇದಿತಾ ನಡುವೆ ನಡೆದ ವಾಗ್ವಾದ ಏನು?ತಿಳಿಯಲು ಮುಂದೆ ಓದಿ…

498

ನಿನ್ನೆಯ ಬಿಗ್‌ಬಾಸ್ ಸಂಚಿಕೆಯಲ್ಲಿ ಚರ್ಚೆಗೆ ಗ್ರಾಸವಾಗಿದ್ದೆ ನಿವೇದಿತಾ-ದಿವಾಕರ್ ಮಧ್ಯೆ ನಡೆದ ವಾಗ್ವಾದ! ಸದಸ್ಯರೆಲ್ಲ‌ ಸೇರಿ ಕೊನೆಗೂ ವಿಷ್ಣುವರ್ಧನ್ ಅವರ ಹಾಡನ್ನು ನಿರಾಕರಿಸಿ, ಟಕಿಲ,ಜಸ್ಟ್ ಲವ್ ಮತ್ತು ಪರವಶನಾದೇನು ಹಾಡಿಗೆ ಸಮ್ಮತಿ ಸೂಚಿಸಿದರು..

ಮೊದಲಿಗೆ ಕಿಚನ್ ಏರಿಯಾದಲ್ಲಿ ಶೃತಿಯವರು ಲಿಪ್ ಬಾಮ್ ಕಳಿಸಿದ್ದಕ್ಕೆ ಧನ್ಯವಾದ ಹೇಳಿದರು.
ದಿವಾಕರ್ ಅವರು ಸಕ್ಕರೆ ಖಾಲಿಯಾದ ಕಾರಣಕ್ಕೆ ಹಾಲಿಗೆ ಜಾಮೂನು ಪಾಕವನ್ನು ಸುರುವಿ ಕುಡಿದರು..

“ಸವಿ-ಸವಿ ನೆನಪು” ಚಟುವಟಿಕೆಯಲ್ಲಿ ಕ್ಯಾನ್‌ವಾಸ್ ಕುಂಚದ ಮೇಲೆ ಬಣ್ಣವನ್ನು ಬಳಸಿ ಆಟೋಗ್ರಾಫ್ ರಚಿಸುವುದಾಗಿತ್ತು.. ಎಲ್ಲ ಸದಸ್ಯರು ತಮ್ಮದೇ ಆದ ಕಲ್ಪನೆಯಲ್ಲಿ ಆಟೋಗ್ರಾಫ್ ರಚಿಸಿದರು.. ಅದರಲ್ಲಿ ಚಂದನ್ ಮತ್ತು ಜೆಕೆಯವರ ಆಟೋಗ್ರಾಫ್ ಸೃಜನಾತ್ಮಕವಾಗಿತ್ತು..


ಈ ವೇಳೆಯಲ್ಲಿ ನಿವೇದಿತಾ ಅವರು ಪೇಂಟ್ ಸುರುವಿ ಹೋಗಿದ್ದಕ್ಕೆ ಕಣ್ಣೀರು ಹಾಕಿದ್ದು ತರ್ಕಕ್ಕೆ ನಿಲುಕದ್ದು. ಈ ಹುಡುಗಿ ಇಷ್ಟೊಂದು ಸೂಕ್ಷ್ಮವಾ ಎಂಬ ಪ್ರಶ್ನೆ ಮೂಡಿದ್ದಂತೂ ನಿಜ!

“ನನ್ನ ಬಿಗ್‌ಬಾಸ್ ಮನೆ” ಚಟುವಟಿಕೆಯಲ್ಲಿ ಬಿಗ್‌ಬಾಸ್ ಕೇಳಿದ 30ಪ್ರಶ್ನೆಗಳಲ್ಲಿ ಜೆಕೆಯವರು 15, ಶೃತಿ-ದಿವಾಕರ್ 10, ಮತ್ತು ಚಂದನ್ -ನಿವೇದಿತಾ 14 ಪ್ರಶ್ನೆಗಳಿಗೆ ಸರಿಯುತ್ತರ ಕೊಟ್ಟರು.

“ನನ್ನ ಹಾಡು ನನ್ನದು” ಉಳಿದ ಮೂರು ದಿನಗಳಲ್ಲಿ ಬೆಳಿಗ್ಗೆ ಹಾಕುವ ಮೂರು ಹಾಡನ್ನು ಸೂಚಿಸಲು ಬಿಗ್‌ಬಾಸ್ ಹೇಳಿದ್ದರು..ಆಗ ಚಂದನ್ ತಮ್ಮ ಟಕೀಲ ಸಿನಿಮಾದ ಹಾಡು ಮತ್ತು ಜೆಕೆ ತಮ್ಮ ಜಸ್ಟ್ ಲವ್ ಚಿತ್ರದ ಹಾಡಿಗೆ ಸಮ್ಮತಿ ಸೂಚಿಸಿದರು..

ನಿವೇದಿತಾ ಮೆಲೊಡಿ ಹಾಡಿಗೆ ಮತ್ತು ದಿವಾಕರ್ ವಿಷ್ಣುವರ್ಧನ್ ಅವರ ಹಾಡನ್ನು ಕೇಳಿದಾಗ ವಾಗ್ವಾದ ಶುರುವಾಯಿತು..

ನಿವೇದಿತಾ : ಮೆಲೊಡಿ ಸಾಂಗ್ ಇರಲಿ
ದಿವಾಕರ್: ಯಜಮಾನ ಮೂವಿ ನಮ್ಮ ಮನೆಯಲಿ ಸಾಂಗ್ ಇರಲಿ

ನಿವೇದಿತಾ: ವಿಷ್ಣುವರ್ಧನ್ ಅವರದ್ದೇ ಯಾವುದಾದರೂ ಮೆಲೊಡಿ ಸಾಂಗ್ ಹೇಳಿ.
ದಿ: ೩ದಿನವಾದ್ಮೇಲೆ ಮೆಲೊಡಿ ಸಾಂಗ್ ಹಾಕಿಸಿಕೊಡ್ತಿನಿ ಬಿಡು.. ಇವಾಗ ಇದು ಇರಲಿ..

ನಿವೇದಿತಾ: actually daily ಈ ಸಾಂಗ್ ಹಾಕಿ ಅಂತ ಬಿಗ್‌ಬಾಸ್ ಗೆ ಕೇಳ್ತಿದ್ದೆ.
ಜೆಕೆ: ನಂದು ಬೇಡ, ವಿಷ್ಣು ದು,ಟಕೀಲ, ಮೆಲೊಡಿ ಇರಲಿ.

ನಿವೇದಿತಾ:no problem ಯಾವುದಾದರೂ ಹಾಕೊಳ್ಳಿ!
ಚಂ: ಟಕೀಲ ಬೇಡ, ಫೀನಾಲೆಗೆ ಹಾಕೋಣ..
ದಿ: ಇವಳ್ದೆ ಹಾಕಿ, ನಂದು ಮನೆಗೆ ಹೋಗಿ ಕೇಳ್ಕೊತೀನಿ.
ನಿವೇದಿತಾ: ಇಷ್ಟೊತ್ತು ನೀವು ಹೇಳಾಯ್ತಲ್ವಾ!(ಇಲ್ಲಿಂದ ಶುರುವಾಯ್ತು)
ದಿ: ನೀ ಮುನಿಸ್ಕೊತಿಯಲ್ಲ..
ನೀ: ನೀನೇ ಮುನಿಸ್ಕೊಂಡು ರೇಗಾಡ್ತಿದೀಯಾ!
ದಿ: ನೀನು ಮಾತಾಡೋಕೆ ಬಿಟ್ರೆ ಮಾತಾಡಿಬಿಡ್ತಿಯಾ!
ನೀ: ಏನು ಹೇಳಿದ್ದು.
ದಿ: ಇಂತದ್ದು ಮಾತಾಡೋಕೆ ಬಿಟ್ರೆ ಮಾತಾಡ್ತಿಯಾ..
ನೀ: ಸುಮ್ನೆ ರೇಗಾಡ್ತಾರೆ.. ಒಂದು ಒಳ್ಳೆಯದು ಹೇಳ್ತಿದ್ರೆ!
ದಿ: ಸುಮ್ನೆ ತಲೆ ತಿಂತಾಳೆ!
ನೀ: ನೀವ್ಯಾಕೆ ತಲೆ ಕೊಡ್ತಿರಿ ನನಗೆ ತಿನ್ನೋಕೆ
ದಿ: ಮೆಂಟಲ್ ತರ ಆಡಬಾರದು.
ನೀ: ಯಾರ್ ಮೆಂಟಲ್ ಯಾರ್ ಮೆಂಟಲ್, ಮೆಂಟಲ್-ಗಿಂಟಲ್ ಅಂತೆಲ್ಲ ಹೇಳಬಾರ್ದು ಚಂದನ್
ದಿ: ಹೇಳು ಮಗ ಚಂದನ್ ಸಾಂಗ್ ಅವಳದ್ದೆ
ನೀ: ಯಾರು ಹೇಳ್ತಾರೆ ಅವರೇ ಮೆಂಟಲ್ ಆಗಿರ್ತಾರೆ.
ದಿ: ಏನ್ ಕಂಯ್ಯಾ ಕಂಯ್ಯಾ ಅಂತೀಯಾ
ನೀ: ಕಂಯ್ಯಾ ಕಂಯ್ಯಾ ಮಾಡಿಸ್ತಿರೋದು ಯಾರು..
ಬೇಗ ಹೇಳಿ
ಚಂ: ಜೆಕೆ ಲೈನ್ ಹಾಡ್ಬೇಕಂತೆ ಬನ್ನಿ, ನೀವಿ ನೀನು ಬಾ
ನೀ: ನಾನು ಬರಲ್ಲ
ಚಂ: ಏ!
ನೀ: ಎದ್ದು ಬರುತ್ತಾ, ತಲೆ ತಿಂತಾರೆ ಅಂತ ಯಾಕೆ ಕೊಡ್ಬೇಕು.
ದಿ: ಏನಾದರೂ ಹೊಸದು ಹೇಳು, ಹೇಳಿದ್ದೆ ಹೇಳ್ತಿಯಲ್ಲ.
ನೀ: ಚಂದನ್ ಗೆ ಹೊಡೆಯುತ್ತಿದ್ದಾಗ
ದಿ: ಸಿಟ್ಟು ಬಂದು ಹೊಡೆಯೋದಂತೆ..
ನೀ: ಚಂದನ್ ನಕ್ಕಿದ್ದಕ್ಕೆ ಹೊಡೆದಿದ್ದು, ನಿಮ್ಮ ಮೇಲಿನ ಸಿಟ್ಟಿಗೆ ಹೊಡೆದಿಲ್ಲ..
ದಿ: ಬೊರ್ ಹೊಡೆಯುತ್ತೆ ಜನರಿಗೆ.
ನೀ: ವಾಯಲಿನ್ ತರ ಕುಯ್ತಾರೆ.. ವಿಶ್ ಹೇರ್ ಬಂತು.
ಯಾರ ಸಾಂಗ್ ಕೂಡ ಪ್ಲೆ ಮಾಡ್ಬೇಡಿ. ನನ್ನ ಸಾಂಗ್ ಪ್ಲೆ ಮಾಡಿ..
ದಿ: ಹೊಟ್ಟೆ ಉರಿ
ನೀ: ನಾನು ನಿಮ್ಮ ಸಾಂಗ್ ಹಾಕ್ಬೇಡ ಅಂದ್ನಾ? ವಿಶ್ ಮಾಡೋಕೆ ಬಿಟ್ಟಿಲ್ಲ ಅಂದ್ರೆ ಕರ್ಸ್ ಆಗುತ್ತೆ..
ದಿ: ಡಬ್ಬ ಎಲ್ಲ‌ ಹೇಳ್ಬೇಡ, ನೀನು ಡವ್ ರಾಣಿ,ದಡ್ಡಿಯಂತೂ ಅಲ್ಲ,ಬುದ್ಧಿವಂತೆ.
ನೀ: ಚಂದನ್ ಕೈಯಿಂದ ಬಿಡಿಸಿಕೊಂಡು ಅಳ್ತಾ ಬೆಡ್‌ರೂಮ್ ಏರಿಯಾಗೆ ಹೋಗಿ ಅಲ್ಲಿಂದ ಕ್ಯಾಪ್ಟನ್ ರೂಮಿಗೆ ಹೋಗ್ತಾರೆ..


ಅಲ್ಲಿ ಚಂದನ್ ಅವರು ಸಮಾಧಾನ ಮಾಡಿ ಸಮಸ್ಯೆಯನ್ನು ಬಗೆಹರಿಸ್ತಾರೆ..
ಅಂತೂ-ಇಂತೂ ವಿಷ್ಣುವರ್ಧನ್ ಹಾಡು ಕ್ಯಾನ್ಸಲ್ ಆಗೋಯ್ತು..ಇಲ್ಲಿ ಯಾರ ತಪ್ಪಿದೆ ನೀವೆ  ನಿರ್ಧರಿಸಿ..

ಕೃಪೆ:ಉದಯ

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ಹಲವು ಸಮಸ್ಯೆಗಳಿಗೆ ರಾಮಭಾಣ ಖರಬೂಜ ಹಣ್ಣು. ಈ ಹಣ್ಣಿನ

    ಈ ಕೆಳಕಂಡ ಸಮಸ್ಯೆಯಿಂದ ಬಳಲುತ್ತಿರುವವರು ಕರಬೂಜ ಸೇವನೆ ಮಾಡುವುದು ಉತ್ತಮ. ಕರಬೂಜ ಹಲವು ಸಮಸ್ಯೆಗಳಿಗೆ ನಿವಾರಣಾ ಗುಣ ಹೊಂದಿದೆ. ನಾವು ಇದರ ಸೇವನೆಯನ್ನು ಮಾಡುವುದು ಉತ್ತಮ ಇದರಿಂದ ದೇಹಕ್ಕೆ ಹಲವು ಲಾಭಗಳು ಲಭಿಸಲಿವೆ. ಕರಬೂಜದಲ್ಲಿ ಪಿಟೋಕೆಮಿಕಲ್ಸ್ ಎನ್ನುವ ಪದಾರ್ಥ ಇದೆ. ಈ ಪದಾರ್ಥಕ್ಕೆ ಉರಿಯೂತದ ವಿರುದ್ಧ ಹೊರಡುವ ಹೂನವಿದೆ. ಇದನ್ನ ತಿನ್ನುವುದರಿಂದ ಮೊಣಕೈ, ಮೊಣಕಾಲು ದೇಹದಲ್ಲಿರೋ ಸಂದಿಗಳಲ್ಲಿ ಬರುವ ನೋವು ಕಡಿಮೆಯಾಗುತ್ತದೆ. ಕರಬೂಜ ಹಣ್ಣು ತಿನ್ನುವುದರಿಂದ ಸಂದಿವಾತ ಬರುವುದನ್ನ ಸಹ ತಡೆಯಬಹುದು. ಕರಬೂಜದಲ್ಲಿ ರೋಗ ನೀರೋದಕ ಶಕ್ತಿ…

  • ದೇವರು

    ರಾಮ ಹನುಮಂತನ ವಿರುದ್ಧವೇ ಯುದ್ಧ ಮಾಡಿದ್ದು ಯಾಕೆ ಗೊತ್ತಾ, ಹನುಮನ ಮೇಲೆ ಬ್ರಮ್ಮಾಸ್ತ್ರ ಪ್ರಯೋಗಿಸಿದ್ದು ಯಾಕೆ ಗೊತ್ತಾ.!

    ನಾವೆಲ್ಲ ತಿಳಿದಂತೆ ರಾಮನ ಸದ್ಭಕ್ತ ಆಂಜನೇಯ. ರಾಮನ ನೆರಳಿನಂತೆ ಆತನನ್ನು ಸದಾ ಹಿಂಬಾಲಿಸುವ ವ್ಯಕ್ತಿ ಹನುಮಂತ. ರಾಮನ ಪರಿಚಯವಾದಂದಿನಿಂದ ಇಂದಿನವರೆಗೂ ಕಲ್ಪದಲ್ಲಿ ನೆಲೆಸಿದ್ದು ಸದಾ ರಾಮ ಸ್ಮರಣೆಯಲ್ಲಿ ನಿರತ ನಮ್ಮ ಹನುಮಣ್ಣ. ವಜಕಾಯಿಯೆಂದು ಕ್ಯಾತಿ ಪಡೆದು ಶತಯೋಜನ ವಿಸ್ತೀರ್ಣದ ಸಾಗರವನ್ನೇ ಹಾರಿ ಲಂಕೆಯನ್ನು ತಲ್ಪಿದ ಏಕಮೇವಾದ್ವಿತೀಯ ಸಾಹಸಿ ಈ ಗುಣವಂತ. ರಮನನ್ನು ನೆನೆಸದೇ ತೊಟ್ಟು ನೀರನ್ನೂ ಸೇವಿಸದ ಅನನ್ಯ ಭಾವದ ಶ್ರದ್ಧಾಳು ಈ ಭಗವಂತ. ಬಯಸದೇ ಮುಂದಿನ ಕಲ್ಪದಲ್ಲಿ ಬ್ರಹ್ಮಪದವನ್ನು ಪಡೆದ ಅಸೀಮ ಸಾಧಕ ಈ ಮಹಾನ್…

  • ಆಧ್ಯಾತ್ಮ

    ಕುಳ್ಳಿ ಹುಡುಗಿ ಹೆಂಡತಿಯಾಗಿ ಸಿಕ್ಕರೆ ಎಷ್ಟು ಅದೃಷ್ಟ ಗೊತ್ತಾ? ನೋಡಿ!

    ಹುಡುಗಿ ತುಂಬಾ ಕುಳ್ಳಿ ಅನ್ನುವ ಮಾತುಗಳನ್ನ ನಾವು ಪ್ರತಿದಿನ ಕೇಳುತ್ತಲೇ ಇರುತ್ತೇವೆ, ಹುಡುಗಿ ಕುಳ್ಳಗಿರುವುದು ಅವರ ವೀಕ್ನೆಸ್ಸ್ ಅಲ್ಲ ಅವರ ಪ್ಲಸ್ ಪಾಯಿಂಟ್ ಅನ್ನುವುದು ಇನ್ನು ಕೆಲವರಿಗೆ ತಿಳಿದಿಲ್ಲ. ಇನ್ನು ಹೆಚ್ಚಿನ ಹುಡುಗರು ಹುಡುಗಿ ಕುಳ್ಳಿ ಅನ್ನುವ ಕಾರಣಕ್ಕೆ ಅವರನ್ನ ಮದುವೆ ಮಾಡಿಕೊಳ್ಳಲು ನಿರಾಕರಣೆ ಮಾಡುತ್ತಾರೆ, ಆದರೆ ಅದೂ ದೊಡ್ಡ ತಪ್ಪು ಸ್ನೇಹಿತರೆ. ಇನ್ನು ಉದ್ದ ಇರುವ ಹುಡುಗಿಯರಿಗಿಂತ ಕುಳ್ಳಗಿರುವ ಹುಡುಗಿಯರ ತುಂಬಾ ವಾಸಿ ಅನ್ನುವುದು ಪರಿಣಿತರ ಅಭಿಪ್ರಾಯವಾಗಿದೆ.  ಇನ್ನು ಕುಳ್ಳಗಿರುವ ಹುಡುಗಿಯರ ವಯಸ್ಸನ್ನ ಅಂದಾಜು ಮಾಡುವುದು…

  • ಉಪಯುಕ್ತ ಮಾಹಿತಿ

    ಮಲಗುವ ರೀತಿ ನೋಡಿ ನಿಮ್ಮ ಗುಣಗಳನ್ನು ತಿಳಿಯಬಹುದು..!ಹೇಗೆ ಗೊತ್ತಾ..?

    ನಿದ್ರಾಭಂಗಿಗಳೂ ನಮ್ಮ ಗುಣಗಳನ್ನು ಹೇಳಬಲ್ಲವು. ಇಂಗ್ಲೆಂಡಿನ ಸ್ಲೀಪ್ ಅಡ್ವೈಸರಿ ಸರ್ವಿಸ್, ಸರ್ವೆ ಮೂಲಕ ಒಟ್ಟಾರೆ 6 ಸಾಮಾನ್ಯ ನಿದ್ರಾಭಂಗಿಗಳನ್ನು ಗುರುತಿಸಿದೆ. ಅದರಂತೆ ಅವರವರ ವ್ಯಕ್ತಿತ್ವಗಳನ್ನೂ ಸ್ಟಡಿ ಮಾಡುತ್ತಾ ಹೋಗಿದೆ. ಒಬ್ಬ ವ್ಯಕ್ತಿ 55 ನಿಮಿಷಕ್ಕೂ ಅಧಿಕ ಕಾಲ ಒಂದೇ ಭಂಗಿಯಲ್ಲಿ ಮಲಗಿದರೆ, ಅದು ಅವರ ನಿದ್ರಾಭಂಗಿ ಎನಿಸಿಕೊಳ್ಳುತ್ತದೆ. 1.ಮಗುಚಿ ಮಲಗುವುದು:- ದೇಹವನ್ನು ಕೆಳಮುಖವಾಗಿಸಿ ಮಲಗುವವರು ಶುದ್ಧ ಸೋಮಾರಿಗಳು, ರಸಿಕತನವುಳ್ಳವರು, ಮತ್ತೊಬ್ಬರಿಗೆ ಮೋಸ ಮಾಡುವವರೂ ಆಗಿರುತ್ತಾರೆ. ಇವರನ್ನು ಜಾಸ್ತಿ ನಂಬಬಾರದಂತೆ. ತೀರಾ ಸಿಟ್ಟು, ಅತಿಯಾದ ನಾಚಿಕೆ ಇವರ ಸ್ವಭಾವ….

  • Animals

    ಕೋಲಾರದಲ್ಲಿಆನೆಗಳ ಆರೈಕೆ ಕೇಂದ್ರ ಸ್ಥಾಪನೆ!

    ಕೋಲಾರ: ಕೋಲಾರ ತಾಲೂಕಿನ ಖಾಜಿಕಲ್ಲಹಳ್ಳಿ ಗ್ರಾಮದ ಬಳಿಯ ಮಾಲೂರು ಅರಣ್ಯ ವಲಯದಲ್ಲಿ ಸುಮಾರು 20 ಎಕರೆ ಪ್ರದೇಶದಲ್ಲಿ WRRC (Wildlife Rescue and Rehabilitation Centre) ಅವರು ಆನೆಗಳ ಆರೈಕೆ ಕೇಂದ್ರವನ್ನು ಸ್ಥಾಪನೆ ಮಾಡಿದ್ದಾರೆ. ಈ ಕೇಂದ್ರದಲ್ಲಿ ದುರ್ಗಾ, ಅನೀಶಾ, ಗೌರಿ ಹಾಗೂ ಜಾನುಮಣಿ ಎಂಬ ನಾಲ್ಕು ಹೆಣ್ಣಾನೆಗಳಿವೆ. ಬೆಂಗಳೂರಿನಿಂದ ದುರ್ಗಾ, ತಮಿಳುನಾಡಿನ ತೂತುಕುಡಿಯಿಂದ ಅನಿಶಾ, ನಂಜನಗೂಡಿನಿಂದ ಗೌರಿ ಹಾಗೂ ಗೋವಾದಿಂದ ಜಾನುಮಣಿ ಎಂಬ ಆನೆಗಳನ್ನು ಇಲ್ಲಿಗೆ ತಂದು ಆರೈಕೆ ಮಾಡಲಾಗುತ್ತಿದೆ. ಸದ್ಯ ನಾಲ್ಕು ಆನೆಗಳಿದ್ದು, ಮುಂದಿನ…

  • ಸುದ್ದಿ

    ಬಾಲಿವುಡ್​ಗೆ ಸೈ ಕನ್ನಡಕ್ಕೆ ಜೈ: ಈ ಬಾರಿಯ ಬಿಗ್ ಬಾಸ್​ನಲ್ಲಿ ಕಾಣಿಸಿಕೊಳ್ಳಲಿದ್ದಾರಾ ಸಲ್ಮಾನ್ ಖಾನ್‌?

    ‘ಬಿಗ್‌ಬಾಸ್‌’ ರಿಯಾಲಿಟಿ ಶೋನಲ್ಲಿ ಒಂದಷ್ಟು ಜನ ಸ್ಪರ್ಧಿಗಳಾಗಿ ಎಂಟ್ರಿ ನೀಡಿದರೆ, ಮತ್ತೊಂದಿಷ್ಟು ಜನ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ನೀಡುತ್ತಾರೆ. ಜತೆಗೆ ಸಿನಿಮಾ ಪ್ರಮೋಷನ್‌ಗಾಗಿ ಅನೇಕರು ಬಿಗ್‌ಬಾಸ್‌ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಬಾಲಿವುಡ್‌ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಕೂಡ ಬೆಂಗಳೂರಿನ ಬಿಡದಿಯಲ್ಲಿರುವ ಬಿಗ್‌ಬಾಸ್ ಮನೆಗೆ ಕಾಲಿಟ್ಟರೆ ಅಚ್ಚರಿ ಇಲ್ಲ! ಇಂಥದ್ದೊಂದು ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಆದರೆ, ಇತ್ತೀಚಿಗಷ್ಟೇ ನಡೆದ ‘ಬಿಗ್‌ಬಾಸ್’ ಪ್ರೆಸ್‌ಮೀಟ್‌ನಲ್ಲಿ ಸಲ್ಮಾನ್‌ ಆಗಮನದ ಬಗ್ಗೆ ಸುದೀಪ್‌ ಕ್ಲಾರಿಟಿ ನೀಡಿದ್ದಾರೆ. ‘ನಾವಿಬ್ಬರು ಒಂದೇ ದಿನ ಬಿಗ್‌ಬಾಸ್‌ನ ಬೇರೆ…