ಸಿನಿಮಾ

ವಿಶ್ವಾದ್ಯಂತ 3 ಸಾವಿರ ಥಿಯೇಟರ್‌ಗಳಲ್ಲಿ ಪೈಲ್ವಾನ್ ಹವಾ-ಚಿತ್ರಮಂದಿರದ ಎದುರು 101 ತೆಂಗಿನಕಾಯಿ ಒಡೆದ ಅಭಿಮಾನಿ…!

20

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಟಿಸಿದ ಸ್ಯಾಂಡಲ್‍ವುಡ್ ಬಹುನಿರೀಕ್ಷಿತ ‘ಪೈಲ್ವಾನ್’ ಚಿತ್ರ ಇಂದು ಅದ್ಧೂರಿಯಾಗಿ ತೆರೆಗೆ ಅಪ್ಪಳಿಸಿದೆ.

ಬೆಂಗಳೂರಿನ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಮುಂಜಾನೆ 5.30ರಿಂದ ಪ್ರದರ್ಶನ ಶುರುವಾಗಿದೆ. ಇತ್ತ ಮೆಜೆಸ್ಟಿಕ್‍ನ ಸಂತೋಷ್ ಚಿತ್ರಮಂದಿರದಲ್ಲಿ ಇದೇ ಮೊದಲ ಬಾರಿಗೆ ಬೆಳಗ್ಗೆ 7 ಗಂಟೆಗೆ ಶೋ ಆರಂಭವಾಗಿದೆ. ಸ್ವತಃ ಕಿಚ್ಚ ಸುದೀಪ್ ಅವರೇ ಚಿತ್ರಮಂದಿರಕ್ಕೆ ಆಗಮಿಸಿ ಚಿತ್ರ ವೀಕ್ಷಿಸುತ್ತಿದ್ದಾರೆ. ಇದೇ ವೇಳೆ ಅಭಿಮಾನಿಯೊಬ್ಬರು ಚಿತ್ರಮಂದಿರದ ಎದುರು 101 ತೆಂಗಿನ ಕಾಯಿಯನ್ನು ಒಡೆದಿದ್ದಾರೆ.

ಸುದೀಪ್ ಅವರ ಸಿನಿಮಾ ಇದೇ ಮೊದಲ ಬಾರಿಗೆ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಿದೆ. ಅಲ್ಲದೆ ಹೊರ ರಾಜ್ಯ ಮತ್ತು ವಿದೇಶಗಳಲ್ಲಿ ಪೈಲ್ವಾನ್ ತನ್ನ ತಾಕತ್ತನ್ನು ಪ್ರದರ್ಶಿಸುತ್ತಿದ್ದು, ಅಭಿಮಾನಿಗಳು ಚಿತ್ರವನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಪೈಲ್ವಾನ್ ಸಿನಿಮಾ 400 ಚಿತ್ರಮಂದಿರಗಳಲ್ಲಿ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ 450ಕ್ಕೂ ಹೆಚ್ಚು ಚಿತ್ರಮಂದಿರ ತಮಿಳುನಾಡಿನಲ್ಲಿ 150ಕ್ಕೂ ಹೆಚ್ಚು ಚಿತ್ರಮಂದಿರ ಹಾಗೂ ವಿಶ್ವಾದ್ಯಂತ 3000 ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆ ಆಗಿದೆ.

ಪೈಲ್ವಾನ್ ಚಿತ್ರವನ್ನು ಎಸ್. ಕೃಷ್ಣ ನಿರ್ದೇಶನ ಮಾಡಿದ್ದು, ಅವರ ಪತ್ನಿ ಸ್ವಪ್ನ ಕೃಷ್ಣ ಅವರು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಕಿಚ್ಚ ಸುದೀಪ್‍ಗೆ ನಾಯಕಿಯಾಗಿ ಆಕಾಂಕ್ಷ ಸಿಂಗ್ ನಟಿಸಿದ್ದಾರೆ. ಬಾಲಿವುಡ್ ನಟ ಸುನೀಲ್ ಶೆಟ್ಟಿ, ಕಬೀರ್ ದುಹಾನ್ ಸಿಂಗ್ ಮತ್ತು ಸುಶಾಂತ್ ಸಿಂಗ್ ನಟನೆ ಮಾಡಿರುವ ಈ ಚಿತ್ರಕ್ಕೆ ಅರ್ಜನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ಸೋಮವಾರದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ…

    ಇಂದು ಸೋಮವಾರ, 12/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಖರ್ಚುವೆಚ್ಚಗಳಿದ್ದರೂ ಧನಾಗಮನ ಉತ್ತಮ. ಆರೋಗ್ಯದಲ್ಲಿ ಸ್ಥಿರತೆ ಕಂಡುಬರುವುದು. ತುಸು ಅನಾರೋಗ್ಯ ಕಾಡುವ ಸ್ಥಿತಿ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭ . ವೃಷಭ:- ದೂರ ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ. ಶತ್ರುಗಳಿಂದ ಭೀತಿಯ ವಾತಾವರಣ ಸೃಷ್ಟಿ. ಹಣವನ್ನು ಒಯ್ಯುವಾಗ ಎಚ್ಚರಿಕೆಯಿಂದ ಇರಿ.ಅಧಿಕಾರಿಗಳ ಕೆಂಗಣ್ಣಿಗೆ ಗುರಿ. ಕೋರ್ಟು ಕಚೇರಿಯ ಕೆಲಸಗಳಲ್ಲಿ ನಿಮ್ಮ ಪರವಾಗಿ ತೀರ್ಪು . ಮಿಥುನ:– ದೂರ ಸಂಚಾರದಲ್ಲಿ ಜಾಗ್ರತೆ.ತಾಯಿಯವರ ಆರೋಗ್ಯದಲ್ಲಿ ವ್ಯತ್ಯಯ. ಯೋಗ್ಯ ವಯಸ್ಕರಿಗೆ ಕಂಕಣಬಲ.ಯಂತ್ರೋಪಕರಣಗಳಿಂದ ಆದಾಯ….

  • ಆರೋಗ್ಯ

    ಆರೋಗ್ಯದ ಮೇಲೆ ಹುರುಳಿ ಟೀ, ಹುರುಳಿ ಟೀ ಇಂದ ಏನೆಲ್ಲಾ ಲಾಭವಿದೆ ಗೊತ್ತಾ.

    ಹುರುಳಿ ಟೀ ಮಾಡುವ ವಿಧಾನ! ಸಾಮಾನ್ಯವಾಗಿ ಹುರುಳಿ ಕಾಳಿನ ಸಾರು, ಪಲ್ಯಾ, ಚಟ್ನಿ ರುಚಿ ಹೇಗಿರುತ್ತೆ ಅಂತ ಸವಿದು ತಿಳಿದಿರುತ್ತೀರಾ. ಆದರೆ ಹುರುಳಿ ಕಾಳಿನಿಂದ ಟೀ ಕೂಡ ಮಾಡುವ ವಿಚಾರ ಕೆಲವರಿಗೆ ಗೊತ್ತಿರಲ್ಲ. ಅಷ್ಟೇ ಅಲ್ಲದೆ ಈ ವಿಶೇಷ ಹುರುಳಿ ಟೀ ಹರ್ಬಲ್ ಟೀ ರೀತಿಯೇ ಆರೋಗ್ಯಕರವಾಗಿದ್ದು, ಹುರುಳಿ ಕಾಳು ಅಥವಾ ಹುರುಳಿ ಎಲೆಯಿಂದಲೂ ಟೀ ತಯಾರಿಸಿ ಸವಿಯಬಹುದಾಗಿದೆ. ಹುರುಳಿ ಟೀ ಸೇವನೆ ಮಾಡುವುದರಿಂದ ಅನೇಕ ಆರೋಗ್ಯಕರ ಲಾಭವಿದೆ. ಇದು ಮದುಮೇಹ ನಿಯಂತ್ರಿಸುತ್ತದೆ, ತೂಕ ಇಳಿಸುತ್ತದೆ, ಕಿಡ್ನಿ…

  • ಸುದ್ದಿ

    ಮದುವೆಯಾದ ಒಂದೇ ದಿನಕ್ಕೆ ಪತಿಯೊಬ್ಬ ತನ್ನ ಪತ್ನಿಯನ್ನು ರೈಲಿನಿಂದ ತಳ್ಳಿ ತಾನೂ ಹಾರಿದ…ಕಾರಣ ?

    ಮದುವೆಯಾಗಿ ಒಂದೇ ದಿನಕ್ಕೆ ಪತಿಯೊಬ್ಬ ತನ್ನ ಪತ್ನಿಯನ್ನು ವೇಗವಾಗಿ ಚಲಿಸುತ್ತಿದ್ದ ರೈಲಿನಿಂದ ತಳ್ಳಿ ತಾನೂ ಹಾರಿದ ಘಟನೆ ಅಸ್ಸಾಂನ ಟೆನ್ಸುಕಿಯದ ರೈಲಿನಲ್ಲಿ ನಡೆದಿದೆ.ಈ ಘಟನೆ ಮಂಗಳವಾರ ನಡೆದಿದ್ದು, ತನ್ನ 18 ವರ್ಷದ ಪತ್ನಿ ಬೇಬಿಯನ್ನು ಚಲಿಸುತ್ತಿರುವ ರೈಲಿನಿಂದ ತಳ್ಳಿ ನಂತರ ಪತಿ ಹಿರಾನು ಕೂಡ ಹಾರಿದ್ದಾನೆ. ಆದರೆ ಈ ಘಟನೆಯಲ್ಲಿ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಫತೇಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೈಲ್ವೆ ಹಳಿಗಳ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ದಂಪತಿಯನ್ನು ಪೊಲೀಸರು ಹತ್ತಿರದ ಜಿಲ್ಲಾ ಆಸ್ಪತ್ರೆಯ ತುರ್ತು…

  • ಆರೋಗ್ಯ

    ಪ್ರತಿದಿನ ಅರಿಶಿನವನ್ನು ಬಳಸುವುದರಿಂದ ಏನಾಗುತ್ತೆ ಗೊತ್ತಾ.!

    ನೀವು ರಾತ್ರಿಯಲ್ಲಿ ನಿದ್ರಾಹೀನತೆ ಸಮಸ್ಯೆ ಹೊಂದಿದ್ದರೆ, ಅರಿಶಿನ ಹಾಲು ನಿಮ್ಮ ನಿದ್ರೆಗೆ ಸಹಾಯಕವಾಗಬಹುದು. ರಾತ್ರಿ ಊಟದ ನಂತರ ಮಲಗುವ ಮುನ್ನ ಅರ್ಧ ಲೋಟ ಹಾಲನ್ನು ಅರಿಶಿನೊಂದಿಗೆ ಕುಡಿಯಿರಿ ಮತ್ತು ನಂತರ ನೀವು ರಾತ್ರಿಯಲ್ಲಿ ಹೇಗೆ ಮಲಗುತ್ತೀರಿ ಎಂಬುದನ್ನು ನೋಡಿ. ಅರಿಶಿನದ ಬಳಕೆ ದೇಹವನ್ನು ಹೊಳೆಯುವಂತೆ ಮಾಡುತ್ತದೆ. ಬೆಳಿಗ್ಗೆ ಒಂದು ಲೋಟ ಹಾಲಿನೊಂದಿಗೆ ಅರ್ಧ ಟೀ ಚಮಚ ಅರಿಶಿನ ಮಿಶ್ರಣ ಮಾಡಿ ಕುಡಿಯುವುದರಿಂದ ದೇಹವು ಹೊಳಪನ್ನು ಹೊಂದುತ್ತದೆ. ಈ ರೀತಿ ಪ್ರತಿದಿನ ಅರಿಶಿನ ಸೇವನೆಯೊಂದಿಗೆ ದೇಹದಲ್ಲಿ ಹೆಚ್ಚುವರಿ ಕೊಬ್ಬಿನ…

  • ಜ್ಯೋತಿಷ್ಯ

    ಶಿವರಾತ್ರಿಯೆಂದು ಈ ರಾಶಿಗಳು ಇರುವವರು ಹೀಗೆ ರುದ್ರಾಭಿಷೇಕ ಮಾಡಿದ್ರೆ ಹೆಚ್ಚು ಫಲ..!ಹೇಗೆಂದು ತಿಳಿಯಲು ಈ ಲೇಖನ ಓದಿ…

    ಮಹಾಶಿವರಾತ್ರಿ ದಿನದಂದು ಮಾಡುವ ರುದ್ರಾಭಿಷೇಕಕ್ಕೆ ಬಹಳ ಮಹತ್ವ ಇದೆ.ಅವರವರ ರಾಶಿಗಳಿಗೆ ತಕ್ಕಂತೆ ಮಾಡಿದ್ರೆ ಹೆಚ್ಚು ಪುಣ್ಯ ಪ್ರಾಪ್ತಿಯಾಗುತ್ತೆ ಎಂದು ಹೇಳಲಾಗಿದೆ.

  • ಆರೋಗ್ಯ

    ‘ಸೀತಾಫಲ’ದಲ್ಲಿರುವ ಆರೋಗ್ಯಕಾರಿ ಗುಣಗಳ ಬಗ್ಗೆ ನಿಮಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ …

    ಸೀತಾಫಲ… ಈ ಕಾಲದಲ್ಲಿ ನಮಗೆ ಲಭಿಸುವ ಹಣ್ಣುಗಳಲ್ಲಿ ಇದೂ ಒಂದು. ಇದರಲ್ಲಿ ವಿಟಮಿನ್ ಎ, ಮೆಗ್ನಿಷಿಯಮ್, ಪೊಟ್ಯಾಷಿಯಂ, ಫೈಬರ್, ವಿಟಮಿನ್ ಬಿ6, ಕ್ಯಾಲ್ಸಿಯಂ,ವಿಟಮಿನ್ ಸಿ, ಐರನ್‌ನಂತಹ ಅತ್ಯಂತ ಮುಖ್ಯವಾದ ಪೋಷಕಗಳು ಅದೆಷ್ಟೋ ಇವೆ.