inspirational

ವಿಶ್ವದ ಎಲ್ಲಾ ಆಗುಹೋಗುಗಳ ಜೊತೆ ಅವುಗಳ ಬಗೆಗಿನ ವಿಮರ್ಶಾತ್ಮಕ ದೃಷ್ಟಿಕೋನವನ್ನು ನೀಡುತ್ತಿದ್ದರು

527

ಒಂದು ಕಾಲದಲ್ಲಿ ಮಾಧ್ಯಮ ಎಂದರೆ ಜ್ಞಾನದ ಕಣಜ ಎಂದೇ ಕರೆಯಲಾಗುತ್ತಿತ್ತು. ವಿಶ್ವದ ಎಲ್ಲಾ ಆಗುಹೋಗುಗಳ ಜೊತೆ ಅವುಗಳ ಬಗೆಗಿನ ವಿಮರ್ಶಾತ್ಮಕ ದೃಷ್ಟಿಕೋನವನ್ನು ನೀಡುತ್ತಿದ್ದರು.

ಯಾವುದನ್ನೂ ವಿಜೃಂಭಿಸದೆ, ವಾಸ್ತವ ಎಷ್ಟೇ ಕಠೋರವಾಗಿದ್ದರೂ, ಜನರ ನಂಬಿಕೆಗೆ ವಿರುದ್ಧವಾಗಿದ್ದರೂ, ಆಡಳಿತ ಮಾಡುವವರ ಮರ್ಜಿಗೆ ಒಳಗಾಗದೆ ಸತ್ಯದ ಪರ ನಿಷ್ಠೆಯನ್ನು ಹೊಂದಿದ್ದರು. ಆಗಲೂ ಅಪರೂಪಕ್ಕೆ ಕೆಲವು ಭಟ್ಟಂಗಿಗಳು ಇದ್ದರೂ ಎಲ್ಲಿಯೂ ಸಭ್ಯತೆಯ ಎಲ್ಲೆ ಮೀರುತ್ತಿರಲಿಲ್ಲ.

ಅಕ್ಷರಗಳ ಮುಖಾಂತರ ಕ್ರಾಂತಿಯನ್ನೇ ಮಾಡಲಾಯಿತು. ಆಗಲೇ “ಖಡ್ಗಕ್ಕಿಂತ ಲೇಖನಿ ಹರಿತ ” ಎಂಬ ನಾಣ್ಣುಡಿ ನಿಜವಾಗಿ ಆಚರಣೆಯಲ್ಲಿತ್ತು.

ಕೈ ಬರಹದ ಪತ್ರಿಕೋದ್ಯಮ ಓದುಗರ ನರನಾಡಿಗಳಲ್ಲಿ ರೋಮಾಂಚನ ಉಂಟುಮಾಡುತ್ತಿತ್ತು. ಮನಸ್ಸಿಗೆ ನಾಟುತ್ತಿತ್ತು. ತದನಂತರ ಆಧುನಿಕ ಬೆಳವಣಿಗೆಯೊಂದಿಗೆ ಮುದ್ರಣವೂ, ಆಮೇಲೆ ಆಕಾಶವಾಣಿ ಸುದ್ದಿ ಮಾಧ್ಯಮಗಳು, ಟಿವಿ ಮಾಧ್ಯಮಗಳು, ಅಂತರ್ಜಾಲ ವೆಬ್ ಪೋರ್ಟಲ್ ಗಳು ಅಭಿವೃದ್ಧಿ ಹೊಂದಿದವು ಮತ್ತು ಅತ್ಯಂತ ವೇಗವಾಗಿ ಜನಸಮೂಹವನ್ನು ಆಕ್ರಮಿಸಿಕೊಂಡವು.

ಪತ್ರಕರ್ತರೆಂದರೆ ವಿಶೇಷ ಬುದ್ಧಿಶಕ್ತಿಯ ಆಡಳಿತದ ಕಾವಲುಗಾರರು, ಸಮಾಜದ ಮಾರ್ಗದರ್ಶಕರು, ಜನಾಭಿಪ್ರಾಯ ರೂಪಿಸುವ ಚಿಂತಕರು ಎಂದೇ ಭಾವಿಸಲಾಗಿತ್ತು ಮತ್ತು ಅಪಾರ ಗೌರವವನ್ನು ನೀಡಲಾಗುತ್ತಿತ್ತು.

ಆದರೆ, ಅದೇ ಮಾತುಗಳನ್ನು ಈಗಿನ ಟಿವಿ ಮಾಧ್ಯಮಗಳ ಬಗ್ಗೆ ಹೇಳಲು ಸಾಧ್ಯವೇ ?

ಸುದ್ದಿಗಳೊಂದಿಗೆ ಪೆಟ್ರೋಲ್ ಮತ್ತು ಬೆಂಕಿ ಕಡ್ಡಿಯನ್ನು ಜೊತೆಯಲ್ಲಿಯೇ ತಂದಿರುತ್ತಾರೆ.

ಈ ಕ್ಷಣದಲ್ಲಿ ಪಾಕಿಸ್ತಾನದ ಮಾಧ್ಯಮಗಳು ಭಾರತ ಮತ್ತು ಅದರ ಪ್ರಧಾನಿಯನ್ನು ಟೀಕಿಸಲು ಬಳಸದ ಕೆಟ್ಟ ಪದವೇ ಇಲ್ಲ. ಸುಳ್ಳು ಸಹ ಇವರ ಕಾಟಕ್ಕೆ ಅವಮಾನದಿಂದ ನೇಣು ಹಾಕಿಕೊಂಡಿತು.

ಹಾಗೆಯೇ ಭಾರತ ಪತ್ರಕರ್ತರು ಸಹ ಅವರಂತೆಯೇ ವರ್ತಿಸುತ್ತಿದ್ದಾರೆ. ಸತ್ಯ ಮತ್ತು ವಾಸ್ತವದ ವಿಮರ್ಶಾತ್ಮಕ ಸುದ್ದಿಗಳನ್ನು ಮರೆತು ಜನರ ಭಾವನೆಗಳು ಮತ್ತು ಜನಪ್ರಿಯತೆಯ ಬಾಲ ಹಿಡಿದು ಸತ್ಯವನ್ನು ಸಮಾಧಿ ಮಾಡುತ್ತಿವೆ.

ಪ್ರಾಣವನ್ನು ಧೈರ್ಯವಾಗಿ ದೇಶಕ್ಕಾಗಿ ಸಮರ್ಪಿಸುತ್ತಿರುವ ಸೈನಿಕರ ತ್ಯಾಗ ಬಲಿದಾನಗಳ ಈ ಸಂಧರ್ಭದಲ್ಲಿ ಅದಕ್ಕೊಂದು ಅರ್ಥ ನೀಡಿ ಅತ್ಯಂತ ವಿವೇಚನೆಯಿಂದ ವಿಷಯಗಳನ್ನು ವಿಮರ್ಶಿಸಿ ಶಾಂತಿಯ ಸಂದೇಶಗಳನ್ನು ಎರಡೂ ಕಡೆ ಹಬ್ಬಿಸುತ್ತಾ, ಜನಾಭಿಪ್ರಾಯ ರೂಪಿಸಿ,ಆಡಳಿತಗಾರರ ಕಣ್ಣು ತೆರೆಸಿ, ಯುದ್ಧ ಮತ್ತು ಹಿಂಸೆಯ ಭೀಕರ ಪರಿಣಾಮ ಮತ್ತು ಅದರ ನಿರರ್ಥಕತೆಯ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುವುದನ್ನು ಬಿಟ್ಟು ಸಂಪೂರ್ಣ ಅದಕ್ಕೆ ವಿರುದ್ಧವಾಗಿ ಮಾಡುತ್ತಿವೆ.

ರಾಜಕಾರಣಿಗಳನ್ನು ಟೀಕಿಸುತ್ತಾ, ಶಾಂತಿ ಸೌಹಾರ್ದತೆಯ ಪ್ರತಿಪಾದಕರನ್ನು ಹೇಡಿಗಳಾಗಿ ಚಿತ್ರಿಸುತ್ತಾ, ಸಂಯಮಿಗಳನ್ನು ದೇಶದ್ರೋಹಿಗಳಂತೆ ಬಿಂಬಿಸುತ್ತಾ ಇಡೀ ಜನಾಭಿಪ್ರಾಯನ್ನು ತಮ್ಮ ನಿಯಂತ್ರಣಕ್ಕೆ ಪಡೆದುಕೊಳ್ಳತೊಡಗಿದ್ದಾರೆ.

ಇದೇ ನೋಡಿ ವಿಪರ್ಯಾಸ. ಅಭಿವ್ಯಕ್ತಿ ಸ್ವಾತಂತ್ರ್ಯ ಸ್ವೇಚ್ಚೆಯಾಗುವ ಅಪಾಯ ಎಲ್ಲರೂ ಊಹಿಸಿದ್ದರು. ಆದರೆ ಅದು ಸರ್ವಾಧಿಕಾರಿಯಾಗಿ ಇಡೀ ವ್ಯವಸ್ಥೆಯನ್ನೇ ಆಕ್ರಮಿಸಿ ಆಹುತಿ ತೆಗೆದುಕೊಳ್ಳುತ್ತದೆ ಎಂದು ಯಾರಿಗೂ ಅನಿಸಿರಲಿಲ್ಲ.

ಸತ್ಯದ ಕತ್ತು ಹಿಸುಕಿ ಅದರ ಸಮಾಧಿಯ ಮೇಲೆ ಸುಳ್ಳಿನ ಅಡಿಪಾಯ ಹಾಕಿ ಭ್ತಮಾಲೋಕದ ಅರಮನೆ ಕಟ್ಟಿ, ಅಮಾನವೀಯ ಬಣ್ಣ ಬಳಿದು ಇಡೀ ಸಮಾಜವನ್ನು ನಿಧಾನವಾಗಿ ವಿಷಪೂರಿತ ಮಾಡುತ್ತಿದೆ.

ನಿರೂಪಕರೆಂಬ ಮತಿಹೀನರು ವಿಷಯಗಳ ಆಳ ಅಗಲಗಳ ಬಗ್ಗೆ ಯಾವುದೇ ಜ್ಞಾನ ಇಲ್ಲದವರು ಬಾಯಿಗೆ ಬಂದಂತೆ ಮಾತನಾಡುತ್ತಾ, ಮಾತಿನಲ್ಲೇ ಬೀದಿ ಬದಿಯ ಕುಡುಕರಿಗಿಂತ ಕೆಟ್ಟದ್ದಾಗಿ ವರ್ತಿಸುತ್ತಾ ಸಮೂಹ ಸನ್ನಿಗೆ ಒಳಗಾಗಿದ್ದಾರೆ. ರೌಡಿಗಳು, ಕ್ರಿಮಿನಲ್ ಗಳು ಸಹ ಅಪರಾಧ ಎಸಗುವ ಮುನ್ನ ಹಲವಾರು ಬಾರಿ ಯೋಚಿಸುತ್ತಾರೆ. ಆದರೆ ಈ ಟಿವಿ ಮಾಧ್ಯಮದವರು ಯೋಚಿಸುವ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ.

ಪುರಾಣ, ಇತಿಹಾಸ, ರಾಜಕೀಯ, ಆರ್ಥಿಕ, ಸಾಮಾಜಿಕ ಮುಂತಾದ ಯಾವ ವಿಷಯಗಳನ್ನು ತಿಳಿಯದೆ ಈ ಕ್ಷಣದ ಮಾಹಿತಿಯನ್ನೇ ಸತ್ಯ ಎಂದು ಬಿಂಬಿಸುತ್ತಿದ್ದಾರೆ.

ಈಗಾಗಲೇ ಅವರ ಬಣ್ಣ ಬಯಲಾಗಿದೆ. ಅದರೂ ಅವರು ಶಿಥಿಲವಾಗುವ ಮುನ್ನ ಮಾಡಬಹುದಾದ ಅಪಾಯಕಾರಿ ಕೆಲಸಗಳ ಪರಿಣಾಮ ಬಹಳ ಕಾಲ ಉಳಿಯುತ್ತದೆ.

ಆದ್ದರಿಂದ ಜನ ಸಾಮಾನ್ಯರಾದ ನಾವುಗಳು ವಿವೇಚನೆಯಿಂದ ತಾಳ್ಮೆಯಿಂದ ಸುದ್ದಿ ಮತ್ತು ಅದರ ಹಿನ್ನೆಲೆಯನ್ನು ಗ್ರಹಿಸಿ ನಮ್ಮ ಅಭಿಪ್ರಾಯ ರೂಪಿಸಿಕೊಳ್ಳೋಣ. ಅದರ ಆಧಾರದ ಮೇಲೆ ಚರ್ಚೆ ಮಾಡೋಣವೇ ಹೊರತು ಈ ಟಿವಿ ಮಾಧ್ಯಮಗಳ ಪ್ರಭಾವಕ್ಕೆ ಒಳಗಾಗಿ ಜಗಳವೇ ಚರ್ಚೆ ಎಂಬ ತಪ್ಪು ಕಲ್ಪನೆ ತಿರಸ್ಕರಿಸೋಣ.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ ಹೆಚ್. ಕೆ.

About the author / 

Chethan Ram

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ನಟ ಕಮಲ್ ಹಾಸನ್ ಅವರ ಮೇಲೆ ಚಪ್ಪಲಿ ತೂರಾಟ….ಧೂರು ದಾಕಲು….!

    ಮಕ್ಕಳ ನೀಧಿ ಮಯ್ಯಂ ಪಕ್ಷದ ನಾಯಕ ಕಮಲ್ ಹಾಸನ್ ಅವರ ಮೇಲೆ ಅಪರಿಚಿತರು ಚಪ್ಪಲಿ ಎಸೆದ ಘಟನೆ ಬುಧವಾರ ನಡೆದಿದೆ. ಬುಧವಾರ ಸಂಜೆ ತಮಿಳುನಾಡಿನ ತಿರುಪ್ಪರನಕುಂಡ್ರಂ ವಿಧಾನಸಭೆ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದ ಕಮಲ್ ಹಾಸನ್ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುತ್ತಿದ್ದ ಸಮಯದಲ್ಲ ಚಪ್ಪಲಿ ಎಸೆಯಲಾಗಿದ್ದು, ಅದು ಅವರಿಗೆ ತಾಕದೆ, ಜನರ ಗುಂಪಿನ ನಡುವೆ ಬಂದು ಬಿದ್ದಿದೆ.ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತರು ಮತ್ತು ಹನುಮಾನ್ ಸೇನೆಯ ಒಟ್ಟು ಹನ್ನೊಂದು ಜನರ ಮೇಲೆ ಪೊಲೀಸರಿಗೆ ದೂರು ನೀಡಲಾಗಿದೆ. ತಮಿಳುನಾಡಿನ ಅರವಕುರಿಚಿಯಲ್ಲಿ ಮೇ 19…

  • ಸಿನಿಮಾ

    ‘ಹೆಬ್ಬುಲಿ’ ಜಾಗಕ್ಕೆ ‘ಚಕ್ರವರ್ತಿ’ ಎಂಟ್ರಿ! ‘ಸಂತೋಷ್’ ಯಾರಿಗೆ?

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಚಕ್ರವರ್ತಿ’ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಚಿತ್ರಮಂದಿರಕ್ಕೆ ಅಪ್ಪಳಿಸಲು ತಯಾರಾಗಿದೆ. ಈಗಾಗಲೇ ರಿಲೀಸ್ ಡೇಟ್ ಅನೌನ್ಸ್ ಮಾಡಿರುವ ‘ಚಕ್ರವರ್ತಿ’ ಅಭಿಮಾನಿಗಳಲ್ಲಿ ಈಗೊಂದು ಗೊಂದಲ ಕಾಡುತ್ತಿದೆ.[‘ಬಾಹುಬಲಿ’ ಮೀರಿಸಿದ ದರ್ಶನ್ ‘ಚಕ್ರವರ್ತಿ’] ಗಾಂಧಿನಗರದಲ್ಲಿ ‘ಚಕ್ರವರ್ತಿ’ ಚಿತ್ರಕ್ಕೆ ಯಾವುದು ಪ್ರಮುಖ ಚಿತ್ರಮಂದಿರವೆಂಬುದು ಈಗ ಪ್ರಶ್ನೆಯಾಗಿದೆ. ಸದ್ಯ, ದರ್ಶನ್ ಸಿನಿಮಾಗಳ ನೆಚ್ಚಿನ ಚಿತ್ರಮಂದಿರಗಳಲ್ಲಿ ಸುದೀಪ್ ಅಭಿನಯದ ‘ಹೆಬ್ಬುಲಿ’ ಮತ್ತು ಪುನೀತ್ ರಾಜ್ ಕುಮಾರ್ ಅಭಿನಯದ ‘ರಾಜಕುಮಾರ’ ಪ್ರದರ್ಶನವಾಗುತ್ತಿದೆ. ಹೀಗಿರುವಾಗ ‘ಚಕ್ರವರ್ತಿ’ಯ ಎಂಟ್ರಿ ಎಲ್ಲಿ ಎಂಬುದು ಕುತೂಹಲ…

  • ಸುದ್ದಿ

    ನಡೆದಾಡುವ ದೇವರ ಆರೋಗ್ಯ ಗಂಭೀರ!ಚಿಕಿತ್ಸೆ ಫಲಕಾರಿ ಆಗತ್ತೋ ಇಲ್ವೋ ಎಂದ ಡಾ. ಪರಮೇಶ್?

    ಸಿದ್ದಗಂಗಾ ಶ್ರೀಗಳ ಆರೋಗ್ಯ ಗಂಭೀರವಾಗಿದ್ದು, ಹಳೆ ಮಠದಲ್ಲೇ ಶ್ರೀಗಳಿಗೆ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ಶ್ರೀಗಳ ಆಪ್ತ ವೈದ್ಯ ಡಾ.ಪರಮೇಶ್ ಹೇಳಿದ್ದಾರೆ. ಶ್ರೀಗಳ ಆರೋಗ್ಯದ ಕುರಿತಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ 2 ಗಂಟೆಗಳಲ್ಲಿ ಶ್ರೀಗಳ ಆರೋಗ್ಯದ ಬಗ್ಗೆ ಅಪ್‍ಡೇಟ್ಸ್ ಕೊಡುತ್ತೇವೆ. ಭಾನುವಾರ ರಾತ್ರಿಯಿಂದ ಶ್ರೀಗಳ ಬಿಪಿ ಹಾಗೂ ಶ್ವಾಸಕೋಶದಲ್ಲಿ ಏರುಪೇರುಗಳಾಗುತ್ತಿವೆ. ಹೀಗಾಗಿ ನಮ್ಮ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದ್ದೇವೆ. ಇದರಲ್ಲಿ ಎಷ್ಟು ಪ್ರಮಾಣದಲ್ಲಿ ಸಕ್ಸಸ್ ಆಗುತ್ತೇವೆ ಅಂತ ಹೇಳಲು ಸಾಧ್ಯವಿಲ್ಲ. ಯಾಕಂದ್ರೆ ಸ್ವಲ್ಪ ಗಂಭೀರ ಸ್ಥಿತಿಯಲ್ಲೇ…

  • ದೇಶ-ವಿದೇಶ

    ಉತ್ತರ ಪ್ರದೇಶದಲ್ಲಿ ತಲೆ ಎತ್ತಲಿದೆ, ಮೋದಿಯ ಅತೀ ಎತ್ತರವಾದ ಪ್ರತಿಮೆ ಮತ್ತು ಮಂದಿರ..!ಹೇಗಿದೆ ಗೊತ್ತಾ ಪ್ರತಿಮೆ?ತಿಳಿಯಲು ಮುಂದೆ ಓದಿ…

    ಪ್ರಧಾನಿ ನರೆಂದ್ರ ಮೋದಿಯವರ 1೦೦ ಅಡಿ ಎತ್ತರದ ಪ್ರತಿಮೆ ಮತ್ತು 3೦ ಕೋಟಿ ರೂಪಾಯಿ ವೆಚ್ಚದ ಮಂದಿರ ನಿರ್ಮಿಸಲು ಉತ್ತರ ಪ್ರದೇಶದ ಮೀರತ್‌ನಲ್ಲಿ ನಿವೃತ್ತ ಅಧಿಕಾರಿಯೋರ್ವರು ಮುಂದಾಗಿದ್ದಾರೆ.

  • ರಾಜಕೀಯ

    ಬಿಜೆಪಿ 2023 ಚುನಾವಣಾ ಪ್ರಣಾಳಿಕೆಯಲ್ಲಿ ಏನಿದೆ?

    ಯುಗಾದಿ, ಗಣೇಶ ಚತುರ್ಥಿ, ದೀಪಾವಳಿಗೆ ಉಚಿತ ಗ್ಯಾಸ್, ಅರ್ಧ ಲೀ. ಉಚಿತ ನಂದಿನಿ ಹಾಲು: ಬಿಜೆಪಿಯಿಂದ ಪ್ರಣಾಳಿಕೆ ರಿಲೀಸ್ !!! ಬಿಪಿಎಲ್ (BPL) ಕುಟುಂಬಗಳಿಗೆ ಪ್ರತಿವರ್ಷ ಯುಗಾದಿ, ಗಣೇಶ ಚತುರ್ಥಿ ಮತ್ತು ದೀಪಾವಳಿಗೆ ತಲಾ ಒಂದರಂತೆ 3 ಅಡುಗೆ ಅನಿಲದ ಸಿಲಿಂಡರ್‌ಗಳನ್ನು ಉಚಿತವಾಗಿ ವಿತರಿಸುತ್ತೇವೆ ಎಂದು ಬಿಜೆಪಿ (BJP) ತನ್ನ ಚುನಾವಣಾ (Election) ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ. ರಾಜ್ಯದ ವಿಧಾನ ಸಭೆಗೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ…

  • ಉಪಯುಕ್ತ ಮಾಹಿತಿ, ಸೌಂದರ್ಯ

    ನಿಮ್ಮ ಸೌಂದರ್ಯ ಮತ್ತು ಆರೋಗ್ಯಕ್ಕಾಗಿ ಲೋಳೆಸರ(ಅಲೋವೇರ)ದ ಈ 15 ಅದ್ಭುತ ಪ್ರಯೋಜನಗಳು.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

    ಲೋಳೆಸರ, ಇದು ಅಲೋವೇರ ಎಂದು ಕರೆಯುವ ಈ ಗಿಡದ ಮೂಲ ಸ್ಥಳ ಆಫ಼್ರಿಕಾ ಖಂಡ. ಅಲೋ ವೆರಾ ಎಂಬುದು ಅನ್ನಿಯ ಕುಲದ ಸಸ್ಯ ಜಾತಿಯಾಗಿದೆ.ಇದು ಪ್ರಪಂಚದಾದ್ಯಂತ ಉಷ್ಣವಲಯದ ಹವಾಮಾನಗಳಲ್ಲಿ ಕಾಡು ಬೆಳೆಯುತ್ತದೆ