ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಗಂಡನ ಅತಿಯಾದ ಪ್ರೀತಿಯನ್ನು ತನಗೆ ಭರಿಸಲಾಗದ ಕಾರಣ ವಿಚ್ಛೇದನ ಕೋರಿರುವ ಯುಎಇ ಮಹಿಳೆಯೊಬ್ಬಳು ಶರಿಯಾ ಕೋರ್ಟ್ ಮೆಟ್ಟಿಲೇರಿದ್ದಾಳೆ.
“ನನ್ನ ಗಂಡ ನನ್ನೊಂದಿಗೆ ಎಂದೂ ಜಗಳವಾಡಿಲ್ಲ, ಎಂದೂ ಕೂಗಾಡಿಲ್ಲ. ಆತನ ಅತಿಯಾದ ಪ್ರೀತಿಯಿಂದ ಹೃದಯ ತುಂಬಿ ಬಂದಿದೆ. ಆತ ಮನೆ ಸ್ವಚ್ಛಗೊಳಿಸುವಾಗಲೂ ಸಹಾಯ ಮಾಡುತ್ತಾನೆ. ಅಲ್ಲದೇ ಅಡುಗೆಯನ್ನೂ ಮಾಡಿ ಹಾಕುವ ಆತ ನನ್ನೊಂದಿಗೆ ಎಂದಿಗೂ ವಾದ ಮಾಡಿಲ್ಲ.
ವಿಪರೀತ ರೊಮ್ಯಾಂಟಿಕ್ ಆದ ಆತ ಸದಾ ನಾನು ಏನೇ ಮಾಡಿದರೂ ಮನ್ನಿಸಿ ಸಾಕಷ್ಟು ಉಡುಗೊರೆಗಳನ್ನು ಕೊಟ್ಟಿದ್ದಾನೆ. ಒಂದೇ ಒಂದು ದಿನ ಆತನೊಂದಿಗೆ ಜಗಳವಾಡಲು ಯತ್ನಿಸಿದ್ದೇನೆ.
ಆದರೆ ಅದು ಸಾಧ್ಯವಾಗಿಲ್ಲ,” ಎಂದು ಹೇಳಿಕೊಂಡಿರುವ ಮಹಾತಾಯಿಯ ಕಾರಣಗಳನ್ನು ಕೇಳಿ ಖುದ್ದು ನ್ಯಾಯಾಧೀಶರೇ ಬೆರಗಾಗಿದ್ದಾರೆ.
ಇದೇ ವೇಳೆ ವಿಚ್ಛೇದನದ ಪ್ರಕರಣ ಹಿಂಪಡೆಯಲು ಆಕೆ ಪತಿ ನ್ಯಾಯಾಲಯದಲ್ಲಿ ಪ್ರಾರ್ಥಿಸಿದ್ದಾನೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಬ್ರಿಟಿಷ್ ಪಾರ್ಲಿಮೆಂಟ್ ಗೌರವಿಸಲು ನಿರ್ಧರಿಸಿದೆ. ಈ ಮೂಲಕ ಬ್ರಿಟಿಷ್ ಪಾರ್ಲಿಮೆಂಟ್ನಿಂದ ಸನ್ಮಾನಿಸಲ್ಪಡುವ ಮೊದಲ ದಕ್ಷಿಣ ಭಾರತದ ನಟ ಎನ್ನುವ ಹೆಗ್ಗಳಿಕೆಗೆ ದರ್ಶನ್ ಪಾತ್ರರಾಗಿದ್ದಾರೆ.
ಶಬರಿಮಲೆ ಸನ್ನಿಧಾನಕ್ಕೆ ಮಹಿಳೆಯರು ಪ್ರವೇಶಿಸಿದ್ದು, ಇದರಿಂದ ಒಳ್ಳೆದಾಯ್ತಲ್ಲ, ಹಠ ತೊಟ್ಟವರಿಗೆ ಸಮಾಧಾನ ಆಯ್ತಲ್ಲವೇ ಎಂದು ಪರೋಕ್ಷವಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅಸಮಾಧಾನವನ್ನು ಹೊರಹಾಕಿದ್ದಾರೆ. ಕ್ಷೇತ್ರದ ಆಚಾರ, ಸಂಪ್ರದಾಯ ಪಾಲಿಸುವುದು ಮುಖ್ಯ. ಬ್ರಹ್ಮಚರ್ಯ, ಸಂಯಮ ಸಾಧಿಸಿ ವ್ರತಾಚರಣೆ ಮಾಡಿ ಕ್ಷೇತ್ರಕ್ಕೆ ತೆರಳುತ್ತಾರೆ. ಈಗೆಲ್ಲ ಬೆಳಗ್ಗೆ ಮಾಲೆ ಹಾಕಿ ಮಧ್ಯಾಹ್ನ ಸನ್ನಿಧಾನಕ್ಕೆ ಹೋಗುವ ಆಚಾರ ಇದೆ. ಹೀಗಾಗಿ ಇಂತಹ ಅಪಚಾರಗಳಾಗುತ್ತಿದೆಎಂದು ಡಾ. ವೀರೇಂದ್ರ ಹೆಗ್ಗಡೆ ಬೇಸರ ವ್ಯಕ್ತಪಡಿಸಿದ್ದಾರೆ. ಮಹಿಳೆಯರಾದ ಬಿಂದು ಮತ್ತು ಕನಕ ಮಧ್ಯರಾತ್ರಿ ಬೆಟ್ಟವನ್ನು ಹತ್ತಿ ಬುಧವಾರ…
ಅಭಿವೃದ್ಧಿ ಚರ್ಚೆಗೆ ಸಿದ್ಧ ಎಂಬ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೇಳಿಕೆಗೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ. ಜಿಲ್ಲೆಯಲ್ಲಿಂದು ಮಗ ನಿಖಿಲ್ ಪರ ಪ್ರಚಾರ ಮಾಡಿದ ಕುಮಾರಸ್ವಾಮಿ, ಯಾವ ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡುತ್ತಾರೆ. ನನ್ನ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನ ಜೊತೆ ಚರ್ಚೆ ಮಾಡುವುದಕ್ಕೂ ಅವರ ಕೈಯಲ್ಲಿ ಶಕ್ತಿಯಿಲ್ಲ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ. ಮಂಡ್ಯ ಜಿಲ್ಲೆಗೆ ದೇವೇಗೌಡ ಕುಟುಂಬ ಕೊಟ್ಟಿರುವ ಕೊಡುಗೆ, ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತಾರೋ ಅಥವಾ ಇನ್ನು ಯಾರ…
ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಚಿಕ್ಕಬಳ್ಳಾಪುರದಲ್ಲಿ ಇದೇ ತಿಂಗಳು 07ಕ್ಕೆ ಬೃಹತ್ ಉದ್ಯೋಗ ಮೇಳ ಅಯೋಜಿಸಲಾಗುತ್ತಿದೆ.
ದೇಹದಲ್ಲಿ ಪ್ರೊಟೀನ್ ಮತ್ತು ಪೋಷಕಾಂಶದ ಕೊರತೆಯಿದ್ದರೆ ಎತ್ತರ ಬೆಳೆಯುವುದು ಕಷ್ಟ. ಎತ್ತರವಾಗಬೇಕೆಂದು ಎಷ್ಟೋ ಪ್ರಯತ್ನ ಮಾಡಿದ್ದರೂ ಅದು ಫಲ ಕೊಟ್ಟಿರುವುದಿಲ್ಲ.
ಯಾರದ್ದೋ ಎದುರಿಗೆ ನಿಂತು ಅವರಷ್ಟು ಉದ್ದ ಇರಬೇಕಿತ್ತು ಅಂದು ಕೊಳ್ಳುತ್ತೀರ. ಅದು ಅಸಾಧ್ಯ ಅನ್ನುವ ಸಂಗತಿ ಕೂಡ ಗೊತ್ತೇ ಇದೆ. ಆದರೂ ಮನಸ್ಸು ಸಮಾಧಾನಗೊಳ್ಳುವುದಿಲ್ಲ.
ರಂಗಭೂಮಿ, ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದ ಖ್ಯಾತ ನಟ ೪೮ ವರ್ಷದ ಅನಿಲ್ ಕುಮಾರ್ ವಿಧಿವಶರಾಗಿದ್ದಾರೆ. ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಅವರು ನಗರದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ. ಹೆಗ್ಗೋಡಿನ ನೀನಾಸಂನಲ್ಲಿ ಅನಿಲ್ಕುಮಾರ್ ತರಬೇತಿ ಪಡೆದಿದ್ದರು. ಆಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅನಿಲ್ ಅವರ ಸಹಪಾಠಿಯಾಗಿದ್ದರು. ಮೂಡಲ ಮನೆ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ಅನಿಲ್ ಅವರು, ಅನೇಕ ಸೀರಿಯಲ್, ರಂಗಭೂಮಿ ಹಾಗೂ ಸಿನಿಮಾದಲ್ಲಿ ನಟಿಸಿದ್ದಾರೆ. ಅನಿಲ್ ಕುಮಾರ್ ಅವರು…