ಸುದ್ದಿ

‘ವಾಟ್ಸಾಪ್’:ನಿಮ್ಮ ಖಾಸಗಿ ವಿಷಯಗಳನ್ನು ಬಹಿರಂಗಪಡಿಸಬಹುದು ಎಚ್ಚರ…!

446

ವಾಟ್ಸಾಪ್ ಅತ್ಯಂತ ಜನಪ್ರಿಯ ಮೆಸೇಜಿಂಗ್ ಆ್ಯಪ್. ಜಗತ್ತಿನಾದ್ಯಂದ ಸುಮಾರು 1.5 ಬಿಲಿಯನ್ ವಾಟ್ಸಾಪ್ ಬಳಕೆದಾರರಿದ್ದಾರೆ. ವಾಟ್ಸಾಪ್ ಬಳಕೆದಾರರಿಗೆ ಶಾಕಿಂಗ್ ಸುದ್ದಿಯೊಂದಿದೆ.ನಿಮಗೆ ಮುಜುಗರ ಹುಟ್ಟಿಸುವಂತಹ ಖಾಸಗಿ ಕ್ಷಣಗಳನ್ನು ಬಹಿರಂಗಪಡಿಸಬಲ್ಲ ದೋಷವೊಂದು ವಾಟ್ಸಾಪ್ ನಲ್ಲಿ ಕಂಡು ಬಂದಿದೆ.

ಆಕಸ್ಮಿಕವಾಗಿ ಯಾವುದಾದ್ರೂ ಮೆಸೇಜ್ ಕಳಿಸಲ್ಪಟ್ಟಲ್ಲಿ ಅದನ್ನು ಅಳಿಸಿಹಾಕಲು ಡಿಲೀಟ್ ಫಾರ್ ಎವರಿವನ್ ಎಂಬ ಆಪ್ಷನ್ ಇದೆ.ಆದ್ರೆ ನೀವು ಡಿಲೀಟ್ ಮಾಡಿದ ಮೇಲೂ ಆ ಮೆಸೇಜ್ ನ ಅವಶೇಷಗಳು ಉಳಿದುಕೊಳ್ಳುತ್ತಿವೆಯಂತೆ. ಐಫೋನ್ ಹಾಗೂ ಆಂಡ್ರಾಯ್ಡ್ ಡಿವೈಸ್ ಗಳಲ್ಲಿ ಈ ಫೀಚರ್ ಕಾರ್ಯನಿರ್ವಹಿಸುವ ವಿಧಾನದಲ್ಲಿನ ವ್ಯತ್ಯಾಸವೇ ಇದಕ್ಕೆ ಕಾರಣ.

ಶಿತೇಶ್ ಸಚನ್ ಎಂಬ ಸಂಶೋಧಕ ವಾಟ್ಸಾಪ್ ನಲ್ಲಿರೋ ಈ ದೋಷವನ್ನು ಪತ್ತೆ ಮಾಡಿದ್ದಾರೆ. ಡಿಲೀಟ್ ಮಾಡಿದ ಮೇಲೂ ಮೀಡಿಯಾ ಫೈಲ್ ಗಳು ಹಾಗೇ ಉಳಿದುಕೊಳ್ಳುತ್ತವೆ ಎಂಬುದನ್ನು ಶಿತೇಶ್ ಬಹಿರಂಗಪಡಿಸಿದ್ದಾರೆ.

ಡಿಲೀಟ್ ಫಾರ್ ಎವರಿವನ್ ಅನ್ನೋದು ಮೆಸೇಜ್ ಡಿಲೀಟ್ ಮಾಡಲು ಇರುವ ಆಪ್ಷನ್. ಇದು ಮೀಡಿಯಾ ಫೈಲ್ಸ್ ಅಥವಾ ಮೆಸೇಜ್ ಅನ್ನು ಶಾಶ್ವತವಾಗಿ ಅಳಿಸಿಹಾಕುತ್ತದೆ ಎಂಬ ಗ್ಯಾರಂಟಿಯಿಲ್ಲ. ವಾಟ್ಸಾಪ್ ಮೆಸೇಜ್ ಕಾಣಿಸದಂತೆ ಡಿಲೀಟ್ ಮಾಡುವುದಷ್ಟೇ ಅದರ ಉದ್ದೇಶ  ಅಂತಾ ವಾಟ್ಸಾಪ್ ಸ್ಪಷ್ಟಪಡಿಸಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ