ಸುದ್ದಿ

ವರದಕ್ಷಿಣೆ ಬೇಡವೆಂದ ಹೇಳಿದ ವರನಿಗೆ ಸಿಕ್ಕಿತು 1 ಲಕ್ಷ ಮೌಲ್ಯದ ಸಾವಿರ ಪುಸ್ತಕ…!

105

ಕೋಲ್ಕತ್ತಾ: ವರದಕ್ಷಿಣೆಯೇ ಬೇಡ ಎಂದಿದ್ದ ವರನಿಗೆ 1 ಲಕ್ಷ ರೂಪಾಯಿ ಮೌಲ್ಯದ 1 ಸಾವಿರ ಪುಸ್ತಕಗಳನ್ನು ಮಾವ ಉಡುಗೊರೆಯಾಗಿ ನೀಡಿ ಮಗಳನ್ನು ಧಾರೆಯೆರೆದು ಕೊಟ್ಟ ವಿಶೇಷ ಮದುವೆಯೊಂದು ಕೋಲ್ಕತ್ತಾದಲ್ಲಿ ನಡೆದಿದೆ. ಕೋಲ್ಕತ್ತಾದ ಶಿಕ್ಷಕ ಸೂರ್ಯಕಾಂತ್ ಬರಿಕ್ ಅವರ ಮದುವೆಯು ಅದೇ ಊರಿನ ಪ್ರಿಯಾಂಕಾ ಬೇಜ್ ಅವರ ಜೊತೆ ಖೇಜುರಿಯ ಕಲ್ಯಾಣ ಮಂಟಪವೊಂದರಲ್ಲಿ ನೆರವೇರಬೇಕಿತ್ತು. ಈ ವೇಳೆ ಕಲ್ಯಾಣಮಂಟಪಕ್ಕೆ ಬಂದ ಅವರಿಗೆ ಬರೋಬ್ಬರಿ 1 ಲಕ್ಷ ರೂ. ಮೌಲ್ಯದ 1 ಸಾವಿರ ಪುಸ್ತಕಗಳನ್ನು ಮಾವ ಗಿಫ್ಟ್ ಮಾಡಿದ್ದಾರೆ. ವರದಕ್ಷಿಣೆ ನಿರಾಕರಿಸಿ ಎಲ್ಲರಿಗೂ ಮಾದರಿಯಾದ ವರನಿಗೆ ಈ ಉಡುಗೊರೆ ನೋಡಿ ಸಿಕ್ಕಪಟ್ಟೆ ಖುಷಿಯಾಗಿದೆ. ಈ ವಿಶೇಷ ಉಡುಗೊರೆ ವಿಚಾರ ಸದ್ಯ ಎಲ್ಲೆಡೆ ಬಾರಿ ಸದ್ದು ಮಾಡುತ್ತಿದೆ.

ನಾನು ಯಾವುದೇ ವರದಕ್ಷಿಣೆ ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೆ. ಆದರೆ ನಾನು ಕಲ್ಯಾಣ ಮಂಟಪಕ್ಕೆ ಬಂದಾಗ, ಪುಸ್ತಕಗಳ ಬೃಹತ್ ರಾಶಿಯನ್ನು ಉಡುಗೊರೆಯಾಗಿ ಕಂಡು ತುಂಬಾ ಆಶ್ಚರ್ಯವಾಯಿತು ಎಂದು ಬರಿಕ್ ಹೇಳಿದ್ದಾರೆ. ಹಾಗೆಯೇ ನನ್ನ ಪತಿಗೆ ಓದುವ ಹಂಬಲ ಹೆಚ್ಚು. ನನಗೂ ಓದುವ ಹವ್ಯಾಸವಿದೆ. ಇದನ್ನು ತಿಳಿದ ನನ್ನ ತಂದೆ ಈ ಗಿಫ್ಟ್ ಕೊಟ್ಟಿದ್ದಾರೆ ಎಂದು ವಧು ತಿಳಿಸಿದ್ದಾರೆ.

ಈ ಬಗ್ಗೆ ವಧುವಿನ ಕುಟುಂಬದವರು ಮಾತನಾಡಿ, ಈ ಪುಸ್ತಕಗಳನ್ನು ಕೊಲ್ಕತ್ತಾ ಕಾಲೇಜು ರಸ್ತೆ, ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಪ್ರಕಾಶನವಾದ ಉದ್ಧೋಧನ್ ಪಬ್ಲಿಷ್ ಹೌಸ್‍ನಿಂದ ಖರೀದಿಸಿದ್ದೇವೆ. ಈ ಪುಸ್ತಕ ಸಂಗ್ರಹಣೆಯಲ್ಲಿ ರವೀಂದ್ರನಾಥ ಟ್ಯಾಗೋರ್, ಬಂಕಿಮ ಚಂದ್ರ ಚಟ್ಟೋಪಾಧ್ಯಾಯ, ಮತ್ತು ಶರತ್ ಚಂದ್ರ ಚಟ್ಟೋಪಾಧ್ಯಾಯವರ ಸಂಪೂರ್ಣ ಕೃತಿಗಳು ಇವೆ ಎಂದರು.

ವರದಕ್ಷಿಣೆ ಪಡೆಯುವುದು ಹಾಗೂ ಕೊಡುವುದು ಅಪರಾಧ ಎಂದು ತಿಳಿದಿದ್ದರೂ ಅನೇಕರು ವರದಕ್ಷಿಣೆಯಿಲ್ಲದೆ ಮದುವೆ ಆಗುವುದಿಲ್ಲ. ಇಂತಹ ಜನರ ನಡುವೆಯೂ ಸೂರ್ಯಕಾಂತ್ ಅವರ ತರಹ ವರದಕ್ಷಿಣೆ ನಿರಾಕರಿಸುವವರ ಸಂಖ್ಯೆ ಕಡಿಮೆ. ಸೂರ್ಯಕಾಂತ್ ಅವರು ಇತರರಿಗೆ ಮಾದರಿ ಎಂದು ಎಲ್ಲೆಡೆ ಪ್ರಶಂಸೆಯ ಮಾತುಗಳು ಕೇಳಿಬರುತ್ತಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸರ್ಕಾರದ ಯೋಜನೆಗಳು

    ರಾಜ್ಯ ಸರ್ಕಾರದಿಂದ ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ :ಹೊಸ ಕಾರು ಭಾಗ್ಯ ಯೋಜನೆ ..!ತಿಳಿಯಲು ಈ ಲೇಖನ ಓದಿ ..

    ರಾಜ್ಯ ಸರ್ಕಾರ 3500 ಮಂದಿ ಪರಿಶಿಷ್ಟ ಜಾತಿಯವರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕಾರು ಖರೀದಿಸಲು 3 ಲಕ್ಷ ರೂ. ವರೆಗೆ ಸಬ್ಸಿಡಿ ನೀಡಲು ನಿರ್ಧರಿಸಿದೆ. ಸಾಲ ಸೌಲಭ್ಯ ಒದಗಿಸುವ ಮೂಲಕ ಕಾರು ವಿತರಣೆ ಪ್ರಕ್ರಿಯೆ ಶುರುವಾಗಿದೆ.

  • ಜ್ಯೋತಿಷ್ಯ

    ಶುಭ ಶುಕ್ರವಾರದ ಈ ದಿನ ಈ ರಾಶಿಗಳಿಗೆ ಶುಭಯೋಗ… ನಿಮ್ಮ ರಾಶಿಯೂ ಇದೆಯಾ ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(12 ಏಪ್ರಿಲ್, 2019) ಇದು ನಿಮ್ಮ ಆರೋಗ್ಯದ ಬಗ್ಗೆ ಚಿಂತಿಸಬೇಕಾಗಿಲ್ಲ. ನಿಮ್ಮ ಸುತ್ತಲಿನ ಜನರು ನಿಮ್ಮ ಸ್ಥೈರ್ಯ ಮತ್ತು…

  • ಜ್ಯೋತಿಷ್ಯ

    ದಿನ ಭವಿಷ್ಯ ಬುಧವಾರ, ಈ ದಿನದ ರಾಶಿ ಭವಿಷ್ಯದ ಜೊತೆಗೆ ಅದೃಷ್ಟದ ಸಂಖ್ಯೆ ತಿಳಿಯಿರಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(27 ಮಾರ್ಚ್, 2019) ಬುದ್ಧಿವಂತ ಹೂಡಿಕೆಗಳು ಮಾತ್ರ ಆದಾಯಗಳನ್ನು ನೀಡುತ್ತವೆ- ಆದ್ದರಿಂದ ನೀವು ಕಷ್ಟಪಟ್ಟುಗಳಿಸಿದ ನಿಮ್ಮ ಹಣವನ್ನು…

  • ವಿಸ್ಮಯ ಜಗತ್ತು

    ತಲೆ ಇಲ್ಲದೆ ಜೀವಂತವಾಗಿ ಒಂದು ವಾರದಿಂದ ಓಡಾಡುತ್ತಿರುವ ಈ ಕೋಳಿ ವೈದ್ಯ ಲೋಕಕ್ಕೆ ಸವಾಲಾಗಿದೆ.!ತಿಳಿಯಲು ಈ ಲೇಖನ ಓದಿ…

    ಒಂದು ಕೋಳಿ ತಲೆ ತೆಗೆದ ಮೇಲೆ ಎಷ್ಟು ಕಾಲ ಬದುಕಬಹುದು..? ಈ ಪ್ರಶ್ನೆ ನಿಮ್ಮನ್ನು ಕೇಳಿದ್ರೆ, ನೀವು ಹೇಳೋದು ಒಂದೇ ನಿನ್ನಷ್ಟು ಮೂರ್ಖ ಬೇರೆ ಯಾರು ಇಲ್ಲ ಅಂತ.ನೀವು ಹಾಗೆ ಅನ್ನೋದ್ರಲ್ಲಿ ಏನೂ ಅಚ್ಚರಿಯಿಲ್ಲ ಬಿಡಿ. ಯಾಕಂದ್ರೆ ಕೋಳಿ ತಲೆ ತೆಗೆದ ಮೇಲೆ ಕೋಳಿ ಬದುಕೋಕೆ ಹೇಗೆ ಸಾಧ್ಯ ಅಲ್ವ. ಆದ್ರೆ, ನೀವೂ ಹಾಗೆ ಅನ್ಕೊಂಡಿದ್ರೆ ಅದು ಸುಳ್ಳು.ಯಾಕಂದ್ರೆ ಇಲ್ಲಿ ಕೋಳಿ ಒಂದರ ಬದುಕಿಗಾಗಿ ನಡೀತಿರುವ ಹೋರಾಟವೋ ಅಥವಾ ಪವಾಡವೋ ಗೊತ್ತಿಲ್ಲ, ತಲೆ ತೆಗೆದ ಮೇಲೇನೂ ಒಂದು…

  • ಸುದ್ದಿ

    ತಮಿಳು ಚಿತ್ರರಂಗದವರು ಈ ಹೆಸರು ಕೇಳಿದ್ರೆ ಬೆಚ್ಚಿಬೀಳುತ್ತರೆ…!ಯಾಕೆ ಗೊತ್ತ?

    ತಮಿಳು ರಾಕರ್ಸ್ ಈ ಹೆಸರನ್ನು ಕೇಳಿದರೆ ಸಾಕು ಇಡೀ ತಮಿಳು ಚಿತ್ರೋದ್ಯಮ ಬೆಚ್ಚಿ ಬೀಳುತ್ತದೆ. ಏಕೆಂದರೆ ನೂರಾರು ಕೋಟಿ ರೂಪಾಯಿ ಸುರಿದು ವರ್ಷಗಟ್ಟಲೆ ಸಿನಿಮಾ ಮಾಡಿ ಬಿಡುಗಡೆಯಾದ ದಿನವೇ ಮಧ್ಯಾಹ್ನದ ವೇಳೆಗೆ ಆ ಚಿತ್ರವನ್ನು ಮೊಬೈಲ್ ನಲ್ಲಿ ಲಭ್ಯವಾಗುವಂತೆ ಮಾಡುತ್ತಿದ್ದಾರೆ ಈ ತಮಿಳು ರಾಕರ್ಸ್.ಅಂದರೆ ಇವರ ದಂಧೆಯೇ ಹೊಸ ಹೊಸ ಚಿತ್ರಗಳನ್ನು ಪೈರಸಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುವುದಾಗಿದೆ. ಈ ತಮಿಳು ರಾಕರ್ಸ್ ಕೇವಲ ತಮಿಳು ಚಿತ್ರೋದ್ಯಮಕ್ಕಷ್ಟೇ ಅಲ್ಲ ಕನ್ನಡ, ತೆಲುಗು, ಮಲಯಾಳಂ ಸೇರಿದಂತೆ ಇತರೆ…